AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆಶ್ಚರ್ಯ.. ಬರೋಬ್ಬರಿ 10 ಕೋಳಿ ಮೊಟ್ಟೆಗಳನ್ನು ಬಾಯಿಂದ ಹೊರ ಹಾಕುತ್ತಿದೆ ನಾಗರಹಾವು! ವಿಡಿಯೋ ನೋಡಿ

ಸರಿಸುಮಾರು ರಾತ್ರಿ 9 ಗಂಟೆಯ ಸಮಯದಲ್ಲಿ ಪವನ್​ ನಿವಾಸಕ್ಕೆ ಹಾವು ಪ್ರವೇಶಿಸಿದೆ. ದೈತ್ಯಾಕಾರದ ಹಾವು, ಕೋಳಿಗಳಿಗೆ ಯಾವುದೇ ಹಾನಿ ಮಾಡಿಲ್ಲ. 10 ಮೊಟ್ಟೆಗಳನ್ನು ತಿಂದು ಜೀವ ಉಳಿಸಿಕೊಳ್ಳಲು ಪರದಾಡುತ್ತಿತ್ತು.

Viral Video: ಆಶ್ಚರ್ಯ.. ಬರೋಬ್ಬರಿ 10 ಕೋಳಿ ಮೊಟ್ಟೆಗಳನ್ನು ಬಾಯಿಂದ ಹೊರ ಹಾಕುತ್ತಿದೆ ನಾಗರಹಾವು! ವಿಡಿಯೋ ನೋಡಿ
ಬರೋಬ್ಬರಿ 10 ಕೋಳಿ ಮೊಟ್ಟೆಗಳನ್ನು ಬಾಯಿಂದ ಹೊರ ಹಾಕುತ್ತಿದೆ ನಾಗರಹಾವು!
TV9 Web
| Edited By: |

Updated on: Jun 30, 2021 | 1:55 PM

Share

ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ 10 ಕೋಳಿ ಮೊಟ್ಟೆಗಳನ್ನು ನಾಗರ ಹಾವು ನುಂಗಿದೆ. ಇಂತಹ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಭಯಂಕರ ದೃಶ್ಯ ಸೆರೆಯಾಗಿದ್ದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. 6 ಅಡಿ ಉದ್ದದ ಹಾವು ಮೊಟ್ಟೆಯನ್ನು ಬಾಯಿಯಿಂದ ಹೊರಹಾಕುತ್ತಿರುವ ದೃಶ್ಯ ನೋಡಿದ ನೆಟ್ಟಿಗರು ಧಂಗಾಗಿದ್ದಾರೆ. ಭಯಾನಕವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಹಾರಾಷ್ಟ್ರದ ಕೊಸಾಂಬಿ ಗ್ರಾಮದ ಪವನ್​ ಎನ್ನುವವರ ಮನೆಯಲ್ಲಿ ಕೋಳಿ ಸಾಕಣಿಕೆ ಮಾಡುತ್ತಾರೆ. ಕೋಳಿ ಸಾಕಾಣಿಕ ಕೇಂದ್ರಕ್ಕೆ ಹಾವು ಸದ್ದಿಲ್ಲದೆ ಬಂದು ಮೊಟ್ಟೆಗಳನ್ನು ನುಂಗಿದೆ. ಕೋಳಿಗಳೆಲ್ಲಾ ಹಾವನ್ನು ಕಂಡು ಕೂಗಲು ಪ್ರಾರಂಭಿಸಿವೆ. ಬಳಿಕ ಎಚ್ಚರಗೊಂಡ ಮನೆಯ ಮಾಲೀಕ ಬಂದು ನೋಡುವಷ್ಟರಲ್ಲಿ, ಹಾವು ಮೊಟ್ಟೆಗಳನ್ನು ನುಂಗಿ ಒದ್ದಾಡುತ್ತಾ ಇತ್ತು. ಈ ದೃಶ್ಯ ನೋಡಿ ಭಯಗೊಂಡ ಅವರು, ಬಳಿಕವೇ ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ. ಹಾವಾಡಿಗ ಹಾವನ್ನು ಹಿಡಿದ ತಕ್ಷಣ ಒಂದಾದ ಮೇಲೊಂದು ಮೊಟ್ಟೆಗಳು ಹಾವಿನ ಬಾಯಿಂದ ಹೊರಬಿದ್ದಿದೆ.

ಸರಿಸುಮಾರು ರಾತ್ರಿ 9 ಗಂಟೆಯ ಸಮಯದಲ್ಲಿ ಪವನ್​ ನಿವಾಸಕ್ಕೆ ಹಾವು ಪ್ರವೇಶಿಸಿದೆ. ದೈತ್ಯಾಕಾರದ ಹಾವು, ಕೋಳಿಗಳಿಗೆ ಯಾವುದೇ ಹಾನಿ ಮಾಡಿಲ್ಲ. 10 ಮೊಟ್ಟೆಗಳನ್ನು ತಿಂದು ಜೀವ ಉಳಿಸಿಕೊಳ್ಳಲು ಪರದಾಡುತ್ತಿತ್ತು. ನಂತರ ಒಂದಾದ ಮೇಲೊಂದು ಮೊಟ್ಟೆಗಳನ್ನು ಹೊರಹಾಕಿದೆ. ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದು ಹಾವಾಡಿಗ ಮಾಹಿತಿ ಹಂಚಿಕೊಂಡಿದ್ದಾರೆ.

ಕೋಳಿ ಮೊಟ್ಟೆಗಳನ್ನು ಹೊರಹಾಕುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಯಾನಕವಾಗಿ ಈ ದೃಶ್ಯ ಎಂದು ಓರ್ವರು ಕಾಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು, ಹಾವು ನೋಡಿದರೆ ಖಂಡಿತವಾಗಿಯೂ ಭಯವಾಗುವುದಂತೂ ಸತ್ಯ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Snake bite: ಹಾವು ಕಚ್ಚಿ ಸಾವು, ನಾಲ್ಕು ಆಸ್ಪತ್ರೆಗಳಿಗೆ ಸುತ್ತಾಡುವ ವೇಳೆಗೆ ಅಸುನೀಗಿದ ಬಾಲಕ, ಮಧ್ಯೆ ಕೊರೊನಾ ಕಾಟ

Viral Video: ಜೂ-ಕೀಪರ್​ ಮೇಲೆ ಆಕ್ರಮಣ ಮಾಡಿದೆ ದಢೂತಿ ಹಾವು! ಭಯಾನಕ ದೃಶ್ಯ ವೈರಲ್​

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
ಎ ಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದವರು ಅಂದರ್!
ಎ ಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದವರು ಅಂದರ್!
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ