Viral Video: ಜೂ-ಕೀಪರ್​ ಮೇಲೆ ಆಕ್ರಮಣ ಮಾಡಿದೆ ದಢೂತಿ ಹಾವು! ಭಯಾನಕ ದೃಶ್ಯ ವೈರಲ್​

ವಿಡಿಯೋ ನೋಡಲು ಭಯಾನಕವಾಗಿದೆ ತುಂಬಾ ಅಪಾಯಕಾರಿ ಎಂದು ಇನ್ನೋರ್ವರು ಹೇಳಿದ್ದಾರೆ. ನನಗೆ ಸಾಧ್ಯವಿಲ್ಲಪ್ಪ.. ನೀವೂ ನಿಜವಾಗಿಯೂ ಈ ಪ್ರಾಣಿಗಳ ಕೆಲಸ ಮಾಡಲು ಇಷ್ಟಪಡುತ್ತಿದ್ದೀರಿ ಎಂದು ಮತ್ತೋರ್ವರು ಹೇಳಿದ್ದಾರೆ.

Viral Video: ಜೂ-ಕೀಪರ್​ ಮೇಲೆ ಆಕ್ರಮಣ ಮಾಡಿದೆ ದಢೂತಿ ಹಾವು! ಭಯಾನಕ ದೃಶ್ಯ ವೈರಲ್​
ಜೂ-ಕೀಪರ್​ ಮೇಲೆ ಆಕ್ರಮಣ ಮಾಡಿದೆ ದಢೂತಿ ಹಾವು!

ಹಾವು ಎಂಬ ಹೆಸರು ಕೇಳಿದಾಕ್ಷಣವೇ ಗಡಗಡ ನಡುಗುತ್ತೇವೆ. ಅದರಲ್ಲಿಯೂ ಹಾವು ಎದುರು ಕಂಡರಂತೂ ಒಂದೇ ಕ್ಷಣಕ್ಕೆ ಎದೆಬಡಿತವೇ ನಿಂತು ಹೋಗುವಷ್ಟು ಭಯವಾಗುತ್ತದೆ. ಹಾವು ಹಿಡಿಯುವ ಕಲೆ ಸಾಹಸವೇ ಸರಿ! ಹಾವಿನ ಪ್ರತಿ ಕ್ಷಣದ ಸಂಚಲನವನ್ನು ಗಮನಿಸಿ ಹಾವನ್ನು ಪಳಗಿಸಬೇಕು. ಅಷ್ಟೊಂದು ಹಾವು ಹಿಡಿದು ಅಭ್ಯಾಸಗಳಿದ್ದರೂ ಸಹ ಕೆಲವು ಬಾರಿ ಭಯಾನಕ ಸನ್ನಿವೇಶಗಳು ನಡೆದುಹೋಗುತ್ತದೆ. ಅಂತಹುದೇ ಒಂದು ಹಾವಿನ ಭಯಾನಕ ದೃಶ್ಯವನ್ನು ಸರಿಸೃಪ ಮೃಗಾಲಯದ ಸಂಸ್ಥಾಪಕ ಜೇ ಬ್ರೂವರ್ ತನ್ನ ಇನ್​ಸ್ಟಾಗ್ರಾಮ್​ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಹಾವುಗಳೊಂದಿಗೆ ಅನೇಕರು ಮಾತನಾಡುವುದನ್ನು ನೋಡಿರುತ್ತೇವೆ. ಅತ್ಯಂತ ಸಲಹೆಯಿಂದ ಅವುಗಳ ಪಾಲನೆ ಪೋಷಣೆಯನ್ನು ಮಾಡುತ್ತ ಮೃಗಾಲಯದಲ್ಲಿ ಸಂಗ್ರಹಿಸಿಡಲಾಗುತ್ತದೆ. ಸಿಟ್ಟಿಗೆದ್ದ ಹಾವು ಜೂ-ಕೀಪರ್​ ಮೇಲೆ ಆಕ್ರಮಣ ಮಾಡುತ್ತದೆ. ಒಂದೇ ಕ್ಷಣಕ್ಕೆ ಅವರು ಭಯಗೊಳ್ಳುತ್ತಾರೆ. ನಂತರ ಸಹಜವಾಗಿ ಪ್ರತಿಕ್ರಿಯೆ ನೀಡುತ್ತಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

 

View this post on Instagram

 

A post shared by Jay Brewer (@jayprehistoricpets)

ಜೇ ಬ್ರೂವರ್​ ಸಾಕುಪ್ರಾಣಿಗಳ ಅದೆಷ್ಟೋ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾವಿನ ಪಕ್ಕದಲ್ಲಿ ನಿಂತು ಅವುಗಳ ಮೊಟ್ಟೆಯನ್ನು ಮುಟ್ಟಲು ಪ್ರಯತ್ನಿಸುತ್ತಾರೆ. ಹಾವು ಸುಮ್ಮನೆ ತನ್ನ ಮುಖವನ್ನು ಪಕ್ಕಕ್ಕೆ ಇರಿಸಿಕೊಂಡಿರುತ್ತದೆ. ಇದ್ದಕ್ಕಿದ್ದಂತೆಯೇ ಒಂದೇ ಕ್ಷಣ ಜೂ-ಕೀಪರ್​ ಮುಖದ ಮೇಲೆ ಆಕ್ರಮಣ ಮಾಡುತ್ತದೆ.

ಸುಮಾರು 21 ಗಂಟೆಗಳ ಹಿಂದೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಸುಮಾರು 99,000ಕ್ಕೂ ಹೆಚ್ಚು ಲೈಕ್ಸ್​ಗಳು ಹಾಗೂ ಹಲವಾರು ಕಾಮೆಂಟ್ಸ್​ಗಳನ್ನು ಪಡೆದುಕೊಂಡಿದೆ. ಜೂ-ಕೀಪರ್​ ಧೈರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ನೀವು ತುಂಬಾ ಧೈರ್ಯಶಾಲಿ ಎಂದು ಓರ್ವರು ಕಾಮೆಂಟ್​ ವಿಭಾಗದಲ್ಲಿ ಬರೆದಿದ್ದಾರೆ. ಇದಕ್ಕೆ ಉತ್ತರಿಸಿದ ಬ್ರೂವರ್​, ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ ಅಷ್ಟೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೋರ್ವರು, ಧೈರ್ಯವನ್ನು ಯಾವಾಗಲೂ ಪ್ರೀತಿಸಿ! ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋ ನೋಡಲು ಭಯಾನಕವಾಗಿದೆ ತುಂಬಾ ಅಪಾಯಕಾರಿ ಎಂದು ಇನ್ನೋರ್ವರು ಹೇಳಿದ್ದಾರೆ. ನನಗೆ ಸಾಧ್ಯವಿಲ್ಲಪ್ಪ.. ನೀವೂ ನಿಜವಾಗಿಯೂ ಈ ಪ್ರಾಣಿಗಳ ಕೆಲಸ ಮಾಡಲು ಇಷ್ಟಪಡುತ್ತಿದ್ದೀರಿ ಎಂದು ಮತ್ತೋರ್ವರು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಬ್ರೂವರ್​, ನಾನು ನನ್ನ ಕೆಲಸವನ್ನು ಪ್ರೀತಿಸುತ್ತೇನೆ ಜತೆಗೆ ನನ್ನ ಕನಸಿನೊಡನೆ ಜೀವಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Snake bite: ಹಾವು ಕಚ್ಚಿ ಸಾವು, ನಾಲ್ಕು ಆಸ್ಪತ್ರೆಗಳಿಗೆ ಸುತ್ತಾಡುವ ವೇಳೆಗೆ ಅಸುನೀಗಿದ ಬಾಲಕ, ಮಧ್ಯೆ ಕೊರೊನಾ ಕಾಟ

Viral Video: ರಸ್ತೆ ಮಧ್ಯೆ ಹಾವು ಮುಂಗುಸಿ ನಡುವೆ ಭರ್ಜರಿ ಫೈಟ್​! ಈ ಸೆಣಸಾಟದಲ್ಲಿ ಗೆದ್ದಿದ್ಯಾರು?