Viral Video: ಯುವತಿಯೊಂದಿಗೆ ಶಾಸ್ತ್ರೀಯ ಸಂಗೀತಕ್ಕೆ ಸ್ಟೆಪ್​ ಹಾಕಿದ ಶ್ವಾನ! ಕ್ಯೂಟ್​ ವಿಡಿಯೋ ನೀವೂ ನೋಡಿ

ಈ ವಿಡಿಯೋದಲ್ಲಿ ಗಮನಿಸುವಂತೆ ಯುವತಿ ಶಾಸ್ತ್ರೀಯ ಸಂಗೀತಕ್ಕೆ ಅಭಿನಯ ಮಾಡುತ್ತಾ ನೃತ್ಯ ಮಾಡುತ್ತಿದ್ದಾರೆ. ಹಿಂದೆ ನಿಂತ ಶ್ವಾನ ಕೂಡಾ ಅವರಂತೆಯೇ ನಕಲಿಸುತ್ತಿದೆ.

Viral Video: ಯುವತಿಯೊಂದಿಗೆ ಶಾಸ್ತ್ರೀಯ ಸಂಗೀತಕ್ಕೆ ಸ್ಟೆಪ್​ ಹಾಕಿದ ಶ್ವಾನ! ಕ್ಯೂಟ್​ ವಿಡಿಯೋ ನೀವೂ ನೋಡಿ
ಯುವತಿಯೊಂದಿಗೆ ಶಾಸ್ತ್ರೀಯ ಸಂಗೀತಕ್ಕೆ ಸ್ಟೆಪ್​ ಹಾಕಿದ ಶ್ವಾನ!
Follow us
TV9 Web
| Updated By: shruti hegde

Updated on: Jun 30, 2021 | 11:56 AM

ಸಾಕು ಪ್ರಾಣಿಗಳಷ್ಟು ಶುದ್ಧ ಪ್ರೀತಿ- ಸ್ನೇಹ ಇನ್ನೆಲ್ಲೂ ಸಿಗದು. ನಾವು ಅವರಿಗೆ ತೋರಿಸಿದಷ್ಟಕ್ಕೂ ಹೆಚ್ಚು ಪ್ರೀತಿಯನ್ನು ಅವು ನಮಗೆ ನೀಡುತ್ತವೆ. ಮನೆಯ ಮಾಲೀಕ ಹೇಳಿದ ಮಾತನ್ನು ಕೇಳುತ್ತಾ, ಪ್ರತಿ ಕ್ಷಣದಲ್ಲಿಯೂ ಮನೆಯವರ ಹಿತವನ್ನು ಬಯಸುತ್ತಾ ಇರುವ ಒಂದೇ ಒಂದು ಸ್ನೇಹ ಜೀವಿ ಅದು ಶ್ವಾನ. ಕರ್ತವ್ಯಕ್ಕೆ ಬದ್ಧವಾಗಿ ಕೆಲಸ ನಿರ್ವಹಿಸುತ್ತದೆ. ಇಲ್ಲೊಂದು ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಯುವತಿ ಸುಂದರವಾಗಿ ಅಭಿನಯದ ಮೂಲಕ ನೃತ್ಯ ಮಾಡುತ್ತಿದ್ದಂತೆಯೇ ಅವರು ಸಾಕಿದ ಪ್ರೀತಿಯ ಶ್ವಾನವೂ ಸಹ ಅವರಂತೆಯೇ ನೃತ್ಯ ಮಾಡುತ್ತಿದೆ.

ಈ ಹಿಂದೆ ಮನೆಯಲ್ಲಿ ಹೇಳಿಕೊಟ್ಟ ಪಾಠವನ್ನು ನಾಯಿ ಹೇಳುವುದು, ಯೋಗಾಸನ ಮಾಡುವುದು ಜತೆಗೆ ಊಟ ಮಾಡುವ ಮೊದಲು ಮಂತ್ರ ಪಠಿಸುವ ಅದೆಷ್ಟೋ ವಿಡಿಯೋಗಳನ್ನು ನೋಡಿದ್ದೇವೆ. ಮನುಷ್ಯರು ಹೇಳಿಕೊಟ್ಟಂತೆ ಚಾಚೂ ತಪ್ಪದೇ ನಾಯಿ ಕೆಲಸ ಮಾಡುತ್ತದೆ. ಪ್ರೀತಿ-ವಿಶ್ವಾಸದಿಂದ ಮನೆಯ ಕಾವಲು ಕಾಯುತ್ತದೆ.

ಈ ವಿಡಿಯೋದಲ್ಲಿ ಗಮನಿಸುವಂತೆ ಯುವತಿ ಶಾಸ್ತ್ರೀಯ ಸಂಗೀತಕ್ಕೆ ಅಭಿನಯ ಮಾಡುತ್ತಾ ನೃತ್ಯ ಮಾಡುತ್ತಿದ್ದಾರೆ. ಹಿಂದೆ ನಿಂತ ಶ್ವಾನ ಕೂಡಾ ಅವರಂತೆಯೇ ನಕಲಿಸುತ್ತಿದೆ. ಅದೂ ಕೂಡೂ ನೃತ್ಯ ಮಾಡುತ್ತಿದೆ. ಈ ಕ್ಯೂಟ್​ ವಿಡಿಯೋ ನೋಡಿದ ನೆಟ್ಟಿಗರು ವಾವ್.. ಎಂದು ಪ್ರತಿಕ್ರಿಯಿಸಿದ್ದಾರೆ. ಯುವತಿಯು ನಿಜವಾಗಿಯೂ ಸುಂದರವಾಗಿ ಸ್ಟೆಪ್​ ಹಾಕುತ್ತಿದ್ದಾರೆ. ಶಾಸ್ತ್ರೀಯವಾಗಿ ನೃತ್ಯ ಮಾಡುತ್ತಿದ್ದಾರೆ. ಅವರಂತೆಯೇ ನೃತ್ಯ ಮಾಡುವುದಕ್ಕೆ ನಿಜವಾಗಿಯೂ ಪರಿಶ್ರಮ ಬೇಕು. ಜತೆಗೆ ಅಭ್ಯಾಸ ಬೇಕು . ಅಂಗಳದಲ್ಲಿ ಕಂಬಕ್ಕೆ ಕಟ್ಟಿ ಹಾಕಿದ ಸಾಕು ನಾಯಿ ಅವರಂತೆಯೇ ನೃತ್ಯ ಮಾಡುತ್ತಿರುವುದು ಜನರ ಮನ ಗೆದ್ದಿದೆ.

ಸಂಗೀತವನ್ನು ಕೇಳುತ್ತಿದ್ದಂತೆಯೇ ನಾಯಿಗೆ ತುಂಬಾ ಸಂತೋಷವಾಗಿದೆ. ತನ್ನ ಮುಂದಿನ ಎರಡೂ ಕಾಲುಗಳನ್ನು ಮೇಲಕ್ಕೆತ್ತಿ ನೃತ್ಯ ಮಾಡಲು ಆರಂಭಿಸಿದೆ. ಜತೆಗೆ ಯುವತಿ ನೃತ್ಯ ಮಾಡುವುದನ್ನು ಪ್ರೋತ್ಸಾಹಿಸುತ್ತಿದೆ. ಇದನ್ನು ನೋಡಿದ ಯುವತಿ ಕೊನೆಯಲ್ಲಿ ನಾಯಿಯನ್ನು ಪ್ರೀತಿಯಿಂದ ಮುದ್ದಾಡಿದ್ದಾಳೆ.

30 ಸೆಕೆಂಡುಗಳ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ನಾಯಿಯ ಅಭಿವ್ಯಕ್ತಿ ಮತ್ತು ಯುವತಿಯ ನೃತ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. 3 ಲಕ್ಷಕ್ಕೂ ಹಚ್ಚು ಜನರು ವಿಡಿಯೋ ನೋಡಿದ್ದಾರೆ. ಫೇಸ್​ಬುಕ್​ನಲ್ಲಿ 6,000ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ:

Viral Video: ಕಲಿಯುಗದಲ್ಲೂ ನಡೆಯಿತು ಸೀತಾಸ್ವಯಂವರ; ಬಿಲ್ಲು ಎತ್ತಿ ಮದುಮಗಳನ್ನು ವರಿಸಿದ ಹುಡುಗ! ವಿಡಿಯೋ ನೋಡಿ

Viral Video: ಸೀರೆಯುಟ್ಟು ಪ್ರೇಯಸಿಯ ಮನೆಗೆ ಹೋದ ಭೂಪ; ಹಿಗ್ಗಾಮುಗ್ಗಾ ಥಳಿಸಿ ವಾಪಾಸ್ಸು ಕಳಿಸಿದ ಹುಡುಗಿ ಮನೆಯವರು