Viral Video: ಸೀರೆಯುಟ್ಟು ಪ್ರೇಯಸಿಯ ಮನೆಗೆ ಹೋದ ಭೂಪ; ಹಿಗ್ಗಾಮುಗ್ಗಾ ಥಳಿಸಿ ವಾಪಾಸ್ಸು ಕಳಿಸಿದ ಹುಡುಗಿ ಮನೆಯವರು

ತಾನು ವೇಷ ಮರೆಸಿಕೊಂಡು ಹೋದರೆ ಯಾರಿಗೂ ಗುರುತು ಸಿಗುವುದಿಲ್ಲ ಎಂದು ಭಾವಿಸಿದ ಪುಣ್ಯಾತ್ಮ ಕೆಂಪು ಸೀರೆಯುಟ್ಟುಕೊಂಡು ಹೋಗಿ ರೆಡ್​ಹ್ಯಾಂಡ್​ ಆಗಿ ಸಿಕ್ಕುಹಾಕಿಕೊಂಡ ಕತೆ ಈಗ ಎಲ್ಲರ ಮೊಬೈಲಿನಲ್ಲೂ ಹರಿದಾಡಿ ಅಪ್ಪಿತಪ್ಪಿ ಅಂತಹ ಯೋಚನೆ ಮಾಡಿದ್ದವರೂ ಮತ್ತೊಮ್ಮೆ ಮೈ ಕೈ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ.

Viral Video: ಸೀರೆಯುಟ್ಟು ಪ್ರೇಯಸಿಯ ಮನೆಗೆ ಹೋದ ಭೂಪ; ಹಿಗ್ಗಾಮುಗ್ಗಾ ಥಳಿಸಿ ವಾಪಾಸ್ಸು ಕಳಿಸಿದ ಹುಡುಗಿ ಮನೆಯವರು
ಸೀರೆಯುಟ್ಟು ಸಿಕ್ಕಿಬಿದ್ದ ಭೂಪ
Follow us
TV9 Web
| Updated By: Skanda

Updated on: Jun 29, 2021 | 2:37 PM

ಪ್ರೀತಿಸಿದವರನ್ನು ನೋಡಲೆಂದು ಕಾಡು, ಮೇಡುಗಳನ್ನು ಹತ್ತಿಳಿದು, ಯುದ್ಧ ಮಾಡಿ, ಜೀವವನ್ನೇ ಪಣಕ್ಕಿಟ್ಟು, ಸಾಹಸ ಮೆರೆದು ಹೋದ ಪುಣ್ಯಾತ್ಮರ ಕತೆಗಳಿಗೆ ನಮ್ಮಲ್ಲಿ ಬರವಿಲ್ಲ. ಹಿಂದೆಲ್ಲಾ ಎಷ್ಟೋ ರಾಜರು, ರಾಜ್ಯರ ನಡುವೆ ಒಂದು ಪ್ರೀತಿಗಾಗಿ ಘನಘೋರ ಯುದ್ಧವೇ ನಡೆದು ಹೋಗಿದೆ. ಊರವರನ್ನೆಲ್ಲಾ ಹೆದರಿಸಿಟ್ಟುಕೊಂಡವರು ಕೂಡಾ ಪ್ರೀತಿಗಾಗಿ ವೇಷ ಮರೆಸಿಕೊಂಡು ಕದ್ದುಮುಚ್ಚಿ ಹೋದ ಕತೆಗಳೂ ಸಾಕಷ್ಟಿವೆ. ಅವೆಲ್ಲಾ ಹಿಂದಿನ ಕಾಲದ್ದಾಯ್ತು, ಈಗ್ಯಾರು ಹಾಗೆಲ್ಲಾ ಮಾಡ್ತಾರೆ? ಈಗೇನಿದ್ರೂ ಆನ್​ಲೈನಲ್ಲೇ ಪ್ರೀತಿ, ಪ್ರೇಮ, ಪ್ರಣಯ ಎಂದು ಹೇಳಲಿಕ್ಕೆ ಹೊರಟಿದ್ದರೆ ಒಂದು ಕ್ಷಣ ಈ ಘಟನೆಯನ್ನು ನೋಡಿ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿ ಅಯ್ಯೋ ಪ್ರೀತಿಯ ಅವಸ್ಥೆಯೇ ಎಂದು ಎಲ್ಲರೂ ನಗುವಂತೆ ಮಾಡಿದ ಈ ಘಟನೆಯ ಇನ್ನೊಂದು ಮಜಲನ್ನು ಇಲ್ಲಿ ತಿಳಿದುಕೊಳ್ಳಿ.

ಅಂದಹಾಗೆ, ಎರಡು ಮೂರು ವಾರಗಳಷ್ಟು ಹಿಂದಿನ ಈ ವಿಡಿಯೋ ಉತ್ತರಪ್ರದೇಶ ರಾಜ್ಯದಲ್ಲಿ ನಡೆದ ಘಟನೆಯದ್ದಾಗಿದೆ. ಪ್ರಿಯತಮೆಯನ್ನು ನೋಡಲೆಂದು ಆಕೆಯ ಮನೆಗೆ ಸೀರೆಯುಟ್ಟು ಮಾರುವೇಷದಲ್ಲಿ ಹೋದ ಭೂಪನನ್ನು ಹುಡುಗಿ ಕುಟುಂಬಸ್ಥರು ಗುರುತಿಸಿ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ತಾನು ವೇಷ ಮರೆಸಿಕೊಂಡು ಹೋದರೆ ಯಾರಿಗೂ ಗುರುತು ಸಿಗುವುದಿಲ್ಲ ಎಂದು ಭಾವಿಸಿದ ಪುಣ್ಯಾತ್ಮ ಕೆಂಪು ಸೀರೆಯುಟ್ಟುಕೊಂಡು ಹೋಗಿ ರೆಡ್​ಹ್ಯಾಂಡ್​ ಆಗಿ ಸಿಕ್ಕುಹಾಕಿಕೊಂಡ ಕತೆ ಈಗ ಎಲ್ಲರ ಮೊಬೈಲಿನಲ್ಲೂ ಹರಿದಾಡಿ ಅಪ್ಪಿತಪ್ಪಿ ಅಂತಹ ಯೋಚನೆ ಮಾಡಿದ್ದವರೂ ಮತ್ತೊಮ್ಮೆ ಮೈ ಕೈ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ.

ಈ ಘಟನೆ ಉತ್ತರಪ್ರದೇಶದ ಭಡೋಹಿ ಎಂಬಲ್ಲಿ ನಡೆದಿದ್ದು, ವಿಡಿಯೋದಲ್ಲಿ ಕಾಣುವಂತೆ ಯುವಕ ತನ್ನ ಪ್ರೇಯಸಿಯ ಮನೆಗೆ ಕೆಂಪು ಸೀರೆಯುಟ್ಟು, ವಿಗ್​ ತೊಟ್ಟು, ಮುಖಕ್ಕೆ ಮೇಕಪ್​ ಬಳಿದುಕೊಂಡು ಮಹಿಳೆಯಂತೆಯೇ ಅಲಂಕಾರ ಮಾಡಿಕೊಂಡು ಬಂದಿದ್ದಾನೆ. ಆದರೆ, ಆತನ ದುರಾದೃಷ್ಟಕ್ಕೆ ಅವನ ಹಾವಭಾವ, ವೇಷಭೂಷಣವನ್ನು ನೋಡಿದ ಸಂಬಂಧಿಗಳು ತಕ್ಷಣವೇ ಗುರುತು ಹಿಡಿದುಬಿಟ್ಟಿದ್ದಾರೆ. ಕೆಲ ವರದಿಗಳ ಪ್ರಕಾರ ಅಂದು ಆ ಯುವತಿಗೆ ಬೇರೆಯವನೊಂದಿಗೆ ಮದುವೆ ಆಗುವುದಿತ್ತಂತೆ. ಹೀಗಾಗಿ ಏನಾದರೂ ಮಾಡಿ ಅವಳನ್ನು ಕರೆದೊಯ್ಯಬೇಕು ಎಂದು ಈತ ತೆರಳಿದ್ದಾನೆ.

ಮದುವೆಯ ಸಮಾರಂಭ ಸಾಗುತ್ತಿರಬೇಕಾದರೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಸೀರೆಯುಟ್ಟ ಪ್ರಿಯಕರ ಅಲ್ಲಿ ಹಾಜರಾಗಿದ್ದಾನೆ. ಆದರೆ, ಹುಡುಗಿ ಕಡೆಯವರು ಅವನನ್ನು ಗುರುತಿಸಿ ಎರಡೇಟು ಬಿಗಿದು ಮುಖಕ್ಕೆ ಮುಚ್ಚಿಕೊಂಡಿದ್ದ ಸೀರೆ ತೆಗೆದು, ವಿಗ್​ ಕಳಚಿ ಎಲ್ಲರೆದುರು ಅವನ ವೇಷವನ್ನು ಬಟಾಬಯಲು ಮಾಡಿದ್ದಾರೆ. ಇನ್ನೇನು ಪೊಲೀಸರನ್ನು ಕರೆಯಿಸಬೇಕು ಎನ್ನುವಷ್ಟರಲ್ಲಿ ಆತ ತನ್ನ ಮತ್ತಿಬ್ಬರು ಸ್ನೇಹಿತರೊಟ್ಟಿಗೆ ಸೇರಿ ಪರಾರಿಯಾಗಿದ್ದಾನಂತೆ. ಅದೇನೇ ಆದರೂ ಸದ್ಯ ಈ ವಿಡಿಯೋ ಮಾತ್ರ ಎಲ್ಲೆಡೆ ವೈರಲ್​ ಆಗಿದ್ದು, ಆತನ ಅವಸ್ಥೆಯನ್ನು ನೋಡಿ ತಲೆ ಚಚ್ಚಿಕೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: ಸೀರೆಯುಟ್ಟು ಸಖತ್​ ಆಗಿ ಹಾಡಿಗೆ ಹೆಜ್ಜೆ ಹಾಕಿದ ನಟಿ: ಸಾಮಾಜಿಕ ಜಾಲತಾಣಗಳಲ್ಲಿ ಈಕೆಯದ್ದೇ ಹವಾ 

ಸಿಇಓ ಜತೆ ಆನ್​ಲೈನ್​ ಮೀಟಿಂಗ್​ ನಡೆಸುವಾಗ ಪೇಚಿಗೆ ಸಿಲುಕಿದ ಮಹಿಳಾ ಉದ್ಯೋಗಿ; ವೈರಲ್ ಆಯ್ತು ವಿಡಿಯೋ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ