AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಫೋಟೊದಲ್ಲಿ ನೀಲಿ ಬಣ್ಣದ ಫ್ರಾಕ್​ ತೊಟ್ಟ ಹುಡುಗಿ ಇಂದು ಎಲ್ಲರ ಮನಕದಿಯುತ್ತಿರುವ ಜನಪ್ರಿಯ ನಟಿ; ಯಾರೆಂದು ಊಹಿಸಬಲ್ಲಿರಾ?

ಸೋಫಾ ಮೇಲೆ ಕಾಲ ಮೇಲೆ ಕಾಲ ಹಾಕಿ ಬ್ಲೂ ಕಲರ್​ ಡ್ರೆಸ್​ ತೊಟ್ಟು ಕುಳಿತಿರುವ ಇವರು ಇಂದು ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಜನ-ಮನ ಗೆದ್ದಿದ್ದಾರೆ. ಯಾರಿವರು.. ಊಹಿಸಬಲ್ಲಿರಾ?

ಈ ಫೋಟೊದಲ್ಲಿ ನೀಲಿ ಬಣ್ಣದ ಫ್ರಾಕ್​ ತೊಟ್ಟ ಹುಡುಗಿ ಇಂದು ಎಲ್ಲರ ಮನಕದಿಯುತ್ತಿರುವ ಜನಪ್ರಿಯ ನಟಿ; ಯಾರೆಂದು ಊಹಿಸಬಲ್ಲಿರಾ?
ಯಾರಿವರು?
TV9 Web
| Edited By: |

Updated on:Jun 29, 2021 | 6:39 PM

Share

ಸ್ಟಾರ್ ನಟಿಯರ ಚಿಕ್ಕ ವಯಸ್ಸಿನ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಅದರಲ್ಲಿಯೂ ಸಖತ್​ ಆಗಿ ಆ್ಯಕ್ಟಿಂಗ್​​ ಮಾಡುತ್ತಾ ಜನಪ್ರಿಯತೆ ಪಡೆದುಕೊಂಡ ಸಿನಿಮಾ ಹಿರೋಯಿನ್​ಗಳ​ ಚಿಕ್ಕ ವಯಸ್ಸಿನ ಫೋಟೋಗಳಿಗೆ ಭಾರೀ ಡಿಮ್ಯಾಂಡ್. ಆದರೆ, ಈಗ ತೆರೆಮೇಲೆ ಮಿಂಚುವ ನಟಿಮಣಿಯರು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದರು ಎಂದು ಗುರುತಿಸಲು ಸಾಧ್ಯವಾಗದು. ಇದೀಗ ಇಲ್ಲೊಂದು ಫೋಟೋ ನೆಟ್ಟಿಗರ ಮನ ಸೆಳೆಯುತ್ತಿದೆ. ಈ ಫೋಟೋದಲ್ಲಿ ಇರುವ ನಟಿ ಯಾರಿರಬಹುದು? ಎಂದು ತುಂಬಾ ತಲೆಕೆಡಿಸಿಕೊಂಡಿದ್ದಾರೆ. ನೀವು ಈ ಫೋಟೋ ನೋಡಿ ಈ ಕ್ಯೂಟ್​ ಹುಡುಗಿ ಯಾರಿರಬಹುದು ಎಂದು ಗೆಸ್​ ಮಾಡಿ.

ಸೋಫಾ ಮೇಲೆ ಕಾಲ ಮೇಲೆ ಕಾಲ ಹಾಕಿ ಬ್ಲೂ ಕಲರ್​ ಡ್ರೆಸ್​ ತೊಟ್ಟು ಕುಳಿತಿರುವ ಇವರು ಇಂದು ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಜನ-ಮನ ಗೆದ್ದಿದ್ದಾರೆ. ಸೌಂದರ್ಯದ ಜತೆಗೆ ತಮ್ಮ ಅಭಿನಯದ ಮೂಲಕ ಖ್ಯಾತ ನಟಿ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ಈಗಲೂ ಕೂಡಾ ಸಿನಿಮಾ ಕ್ಷೇತ್ರದಲ್ಲಿ ಫುಲ್​ ಬ್ಯುಸಿಯಾಗಿರುವ ಬೆಡಗಿ ಇವರು.ಇಷ್ಟೆಲ್ಲಾ ಹೇಳಿದ ನಂತರವೂ ಫೋಟೋದಲ್ಲಿರುವ ಕ್ಯೂಟ್​ ಬೆಡಗಿ ಯಾರೆಂದು ತಿಳಿಯಲಿಲ್ಲವೇ?

ಇವರೇ ಟಾಲಿವುಡ್​ ನಟಿ ಸಾಯಿ ಪಲ್ಲವಿ. ತಮ್ಮ ಅದ್ಭುತ ನಟನೆಯ ಮೂಲಕ ಜನಮನ ಗೆದ್ದ ನಟಿ ಸಾಯಿ ಪಲ್ಲವಿ. ಸಖತ್ತಾಗಿ ನೃತ್ಯ ಮಾಡುತ್ತಾ ನ್ಯಾಚುರಲ್​ ಬ್ಯೂಟಿಗೆ ಅಪಾರ ಅಭಿಮಾನ ಬಳಗವೇ ಇದೆ. ಒಂದಾದ ಮೇಲೊಂದು ಸಿನಿಮಾಗಳಲ್ಲಿ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ ಖ್ಯಾತ ನಟಿ ಸಾಯಿ ಪಲ್ಲವಿ. ಸದ್ಯ ಇವರು ನಟಿಸಿರುವ ವಿರಾಟಪರ್ವಂ, ಲವ್​ ಸ್ಟೋರಿ ಸಿನಿಮಾಗಳು ತೆರೆಕಾಣಲು ಸಿದ್ಧವಾಗಿವೆ.

actress sai pallavi

ಸಾಯಿ ಪಲ್ಲವಿ

ಮೆಹಂದಿ ಹಾಕಿಕೊಂಡು ಮದುವೆ ಸಂಭ್ರಮಕ್ಕೆ ಸಜ್ಜಾದ ಸಾಯಿ ಪಲ್ಲವಿ; ಫೋಟೋ ವೈರಲ್​

ಈ ಹಿಂದೆ ಲಾಕ್​ಡೌನ್​ ಸಮಯದಲ್ಲಿ ನಟಿ ಸಾಯಿ ಪಲ್ಲವಿ ಅವರು ಕ್ಯಾಂಡಿಡ್​ ಗ್ರೂಪ್​ ಫೋಟೋಗಳನ್ನು ಹಂಚಿಕೊಂಡಿದ್ದರು. ‘ಮದುವೆ ಸ್ಕ್ವಾಡ್​’ ಎಂದು ಕ್ಯಾಪ್ಷನ್​ ನೀಡುವ ಮೂಲಕ ಫೋಟೋ ಹಂಚಿಕೊಂಡಿದ್ದರು. ಬಳಿಕ ಮೆಹಂದಿ ಸಂಭ್ರಮದ ಕ್ಷಣಗಳ ಫೋಟೋವನ್ನು ಅವರು ಶೇರ್​ ಮಾಡಿಕೊಂಡಿದ್ದರು. ಮೆಹಂದಿ ಹಾಕಿಸಿಕೊಂಡ ಕೈಗಳ ಜತೆಗೆ ಸುಂದರವಾದ ಫೋಟೋ ಕ್ಲಿಕ್ಕಿಸಿಕೊಂಡಿರುವುದು ನೆಟ್ಟಿಗರ ಮನ ಗೆದ್ದಿತ್ತು.

ಇದನ್ನೂ ಓದಿ: 

Sai Pallavi: ಮೆಹಂದಿ ಹಾಕಿಕೊಂಡು ಮದುವೆ ಸಂಭ್ರಮಕ್ಕೆ ಸಜ್ಜಾದ ಸಾಯಿ ಪಲ್ಲವಿ; ಫೋಟೋ ವೈರಲ್​

Published On - 12:19 pm, Tue, 29 June 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ