AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸೀರೆ ಉಟ್ಟು ಸ್ಕೇಟಿಂಗ್ ಮಾಡುತ್ತಾರೆ 46 ವರ್ಷದ ಈ ಮಹಿಳೆ! ವಿಡಿಯೋ‌ ನೋಡಿ

ತಾನು ಮಕ್ಕಳೊಂದಿಗೆ ಈ ಸ್ಕೇಟಿಂಗ್ ಕಲಿಕೆ‌ ಆರಂಭಿಸಿದೆ. ಸ್ಕೇಟಿಂಗ್ ಮಾಡಿದೆ. ಧನಾತ್ಮಕ ಭಾವ ಹಂಚಲು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಕೂಡ ಮಾಡಿದೆ. ಆದ್ದರಿಂದ ಕೆಲವೇ ತಿಂಗಳಲ್ಲಿ 12.7k ಹಿಂಬಾಲಕರು ಬಂದರು. ಆಮೇಲೆ‌ ಇದನ್ನು ಮುಂದುವರಿಸಿದ್ದೇನೆ ಎಂದು ಆಕೆ ಮಾತನಾಡಿದ್ದಾರೆ.

Viral Video: ಸೀರೆ ಉಟ್ಟು ಸ್ಕೇಟಿಂಗ್ ಮಾಡುತ್ತಾರೆ 46 ವರ್ಷದ ಈ ಮಹಿಳೆ! ವಿಡಿಯೋ‌ ನೋಡಿ
ಸ್ಕೇಟಿಂಗ್
Follow us
TV9 Web
| Updated By: ganapathi bhat

Updated on: Jun 28, 2021 | 6:33 PM

ಮಹಿಳೆಯರು ಏನು ಸಾಧನೆ ಮಾಡುತ್ತಾರೆ ಎಂಬಲ್ಲಿಂದ ಮಹಿಳೆಯರು ಅವಕಾಶ ಸಿಕ್ಕರೆ ಎಂತಹ ಕೆಲಸವನ್ನೂ ಮಾಡಬಲ್ಲರು. ಅವರು ಗಂಡಸರಿಗಿಂತ ಯಾವುದರಲ್ಲೂ ಕಡಿಮೆ ಅಲ್ಲ ಎಂಬುದು ಹಲವು ಬಾರಿ ಸಾಬೀತಾಗಿದೆ. ಅಂಥದ್ದೇ ವಿಶೇಷ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಮಹಿಳೆಯೊಬ್ಬಳು ಸಬಲೆ ಎಂದು ತೋರಿಸುತ್ತಿದೆ. ಸಾಧನೆಗೆ ಹೆಣ್ಣು ಗಂಡು ಎಂಬುದು ಅಡ್ಡಿಯಾಗದು ಎಂದೂ ಒತ್ತಿ ಹೇಳಿದಂತೆ ಕಂಡಿದೆ.

ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಅಂತೀರಾ? 46 ವರ್ಷದ ಮಹಿಳೆಯೊಬ್ಬರು ಸ್ಕೇಟಿಂಗ್ ಮಾಡಿದ್ದಾರೆ. ‌ಅದೂ ಸೀರೆ ಉಟ್ಟುಕೊಂಡು ವಿಶೇಷ ಸ್ಕೇಟಿಂಗ್ ಪ್ರದರ್ಶನ ತೋರಿದ್ದಾರೆ. ಆಂಟಿ ಸ್ಕೇಟ್ಸ್ ಎಂಬ ಇನ್‌ಸ್ಟಾಗ್ರಾಂ ಖಾತೆಯನ್ನು ಹೊಂದಿರುವ ಇವರು ಸೀರೆ ಉಟ್ಟು ಸ್ಕೇಟಿಂಗ್ ಮಾಡುವ ವಿಡಿಯೋವನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲಿ ಈಗ ಹಂಚಿಕೊಂಡ ವಿಡಿಯೋ ಇನ್ನೂ ವಿಶೇಷವಾಗಿದೆ.

ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವಂತೆ, ಆಂಟಿ 46 ವರ್ಷದವರು ಹಾಗೂ ಸೀರೆ ಉಟ್ಟು ಸ್ಕೇಟ್ ಮಾಡುತ್ತಾರೆ. ಹರ್ಷ ಮತ್ತು ಧನಾತ್ಮಕ ಭಾವ ಹಂಚಲು ಈ ವಯಸ್ಸು ದೊಡ್ಡದಾಗಿಲ್ಲ ಎಂಬ ಅರ್ಥದ ಸಾಲುಗಳಿದೆ. ಅವರ ವಿಡಿಯೋಗಳು ಎಂಥವರಿಗೂ ಸ್ಫೂರ್ತಿ ತುಂಬಬಲ್ಲವಾಗಿದೆ.

ವಿಡಿಯೋದಲ್ಲಿ ಅವರು ನೇರಳೆ ಬಣ್ಣದ ಸೀರೆ ತೊಟ್ಟುಕೊಂಡಿದ್ದಾರೆ. ಹೆಲ್ಮೆಟ್ ಹಾಗೂ ಸ್ಕೇಟಿಂಗ್ ವೀಲ್ ತೊಟ್ಟುಕೊಂಡು ಸಂಭ್ರಮದಿಂದಲೇ‌ ಸ್ಕೇಟಿಂಗ್ ಮಾಡುತ್ತಾರೆ. ಸಾವಿರಾರು ಜನರು ಅವರ ವಿಡಿಯೋ ಲೈಕ್ ಮಾಡಿದ್ದಾರೆ. ಅವರ ಕೌಶಲ್ಯ ನೋಡಿ‌ ಜನರು ಬೆರಗುಗೊಂಡಿದ್ದಾರೆ. ಪ್ರಶಂಸೆಯ ಸುರಿಮಳೆಯನ್ನೇ ಸುರಿದಿದ್ದಾರೆ. ಇದೊಂದು ಸ್ಫೂರ್ತಿ ಸೆಲೆ, ಕೂಲ್ ವಿಡಿಯೋ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

View this post on Instagram

A post shared by Aunty Skates (@auntyskates)

ತಾನು ಮಕ್ಕಳೊಂದಿಗೆ ಈ ಸ್ಕೇಟಿಂಗ್ ಕಲಿಕೆ‌ ಆರಂಭಿಸಿದೆ. ಸ್ಕೇಟಿಂಗ್ ಮಾಡಿದೆ. ಧನಾತ್ಮಕ ಭಾವ ಹಂಚಲು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಕೂಡ ಮಾಡಿದೆ. ಆದ್ದರಿಂದ ಕೆಲವೇ ತಿಂಗಳಲ್ಲಿ 12.7k ಹಿಂಬಾಲಕರು ಬಂದರು. ಆಮೇಲೆ‌ ಇದನ್ನು ಮುಂದುವರಿಸಿದ್ದೇನೆ ಎಂದು ಆಕೆ ಮಾತನಾಡಿದ್ದಾರೆ.

ಇದನ್ನೂ ಓದಿ: Viral Video: ಫುಟ್‌ಬಾಲ್‌ ಒದ್ದಂತೆ ಸೇರು ಅಕ್ಕಿಯನ್ನು ಒದ್ದ ವಧು! ವಿಡಿಯೋ ನೋಡಿದ್ರೆ ನೀವೂ ನಗೋದು ಗ್ಯಾರಂಟಿ

Viral Video: ಹಾರ ಹಾಕುವಾಗ ತನ್ನನ್ನು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು; ತಿರುಗಿ ಆತ ಹೊಡೆದ್ದು ಯಾರಿಗೆ?..ವಿಚಿತ್ರ ಇದು

ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್