AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಫುಟ್‌ಬಾಲ್‌ ಒದ್ದಂತೆ ಸೇರು ಅಕ್ಕಿಯನ್ನು ಒದ್ದ ವಧು! ವಿಡಿಯೋ ನೋಡಿದ್ರೆ ನೀವೂ ನಗೋದು ಗ್ಯಾರಂಟಿ

ವಧು ಸೀರೆ ಎತ್ತಿ ಹಿಡಿದು ಫುಟ್​ಬಾಲ್​ ಒದ್ದಷ್ಟೇ ವೇಗದಲ್ಲಿ ಸೇರನ್ನು ಕಾಲಿನಿಂದ ಜಾಡಿಸಿ ಒದ್ದೇ ಬಿಡುತ್ತಾಳೆ. ಅವಳ ರಿಯಾಕ್ಷನ್ ನೋಡಿದ ನೆಟ್ಟಿಗರು ತಮಾಷೆ ಮಾಡಿದ್ದಾರೆ.

Viral Video: ಫುಟ್‌ಬಾಲ್‌ ಒದ್ದಂತೆ ಸೇರು ಅಕ್ಕಿಯನ್ನು ಒದ್ದ ವಧು! ವಿಡಿಯೋ ನೋಡಿದ್ರೆ ನೀವೂ ನಗೋದು ಗ್ಯಾರಂಟಿ
ಫುಟ್‌ಬಾಲ್‌ ಒದ್ದಂತೆ ಸೇರು ಅಕ್ಕಿಯನ್ನು ಒದ್ದ ವಧು!
TV9 Web
| Edited By: |

Updated on: Jun 28, 2021 | 3:08 PM

Share

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ತಮಾಷೆಯ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲಿಯೂ ಹೆಚ್ಚಾಗಿ ಮದುವೆಯ ಸಂದರ್ಭದಲ್ಲಿ ನಡೆಯುವ ತಮಾಷೆಯ ವಿಡಿಯೋಗಳು ಹೆಚ್ಚು ಇಷ್ಟವಾಗುತ್ತವೆ. ಕೆಲವರ ನಡುವಳಿಕೆ, ಮನೋಭಾವದ ನಡತೆ ಕೆಲವು ಹಾಸ್ಯಕ್ಕೆ ಕಾರಣವಾಗುತ್ತವೆ. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಧುವಿನ ರಿಯಾಕ್ಷನ್​ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಈಗತಾನೇ ವರ ಮಧುವಿಗೆ ತಾಳಿ ಕಟ್ಟಿದ್ದಾನೆ. ವಿವಾಹದ ಆಚರಣೆಗಳೆಲ್ಲ ಸುಸೂತ್ರವಾಗಿ ನಡೆದಿದೆ. ಇದೀಗ ವಧು ವರನ ಮನೆಗೆ ಪ್ರವೇಶ ಮಾಡುವುದಷ್ಟೇ ಬಾಕಿ. ಎಲ್ಲಾ ತಯಾರಿಗಳು ಸಿದ್ಧವಾಗಿದೆ. ಮನೆ ಬಾಗಿಲ ಪಟ್ಟಿಯ ಮೇಲೆ ಸೇರು ಅಕ್ಕಿಯನ್ನು, ಬೆಲ್ಲದ ಅಚ್ಚನ್ನು ಇಡಲಾಗಿದೆ. ವಧು ಇನ್ನೇನು ಸೇರು ಒದ್ದು ಒಳಗೆ ಬರಬೇಕಿದೆ. ವಧು ಸೀರೆ ಎತ್ತಿ ಹಿಡಿದು ಫುಟ್​ಬಾಲ್​ ಒದ್ದಷ್ಟೇ ವೇಗದಲ್ಲಿ ಸೇರನ್ನು ಕಾಲಿನಿಂದ ಜಾಡಿಸಿ ಒದ್ದೇ ಬಿಡುತ್ತಾಳೆ. ಅವಳ ರಿಯಾಕ್ಷನ್ ನೋಡಿದ ನೆಟ್ಟಿಗರು ತಮಾಷೆ ಮಾಡಿದ್ದಾರೆ.

ವದುವೆಯಲ್ಲಿ ವಧು ಗೃಹ ಪ್ರವೇಶ ಮಾಡುವುದು ಒಂದು ಸಂಪ್ರದಾಯ ಬದ್ಧ ಶಾಸ್ತ್ರ. ಮನೆಗೆ ಈಗತಾನೇ ಪ್ರವೇಶಿಸುವ ವಧುವು ಮನೆಗೆ ಒಳ್ಳೆಯ ಹೆಸರು ತಂದು ಕೊಡಬೇಕೆಂಬ ಉದ್ದೇಶದಿಂದಲೂ ಈ ಶಾಸ್ತ್ರವನ್ನು ಮಾಡುತ್ತಾರೆ. ಅಕ್ಕಿ ಮನೆ ತುಂಬ ಹರಡಿದರೆ ಮನೆಯಲ್ಲಿ ಖುಷಿ ಸಂತೋಷವೂ ಇರುತ್ತದೆ. ಮನೆ ತುಂಬ ಶಾಂತಿ ನೆಮ್ಮದಿಯೂ ನೆಲೆಯೂರುತ್ತದೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ.

ವಿಡಿಯೋದಲ್ಲಿ ಗಮನಿಸುವಂತೆ ವರ ಮತ್ತು ವಧು ಇಬ್ಬರೂ ಬಾಗಿಲ ಮುಂದೆ ನಿಂತಿದ್ದಾರೆ. ಸಕಲ ಸಿದ್ಧತೆಗಳೂ ಸರಿಯಾಗಿವೆ. ಇನ್ನೇನು ವಧು ಸೇರು ಒದೆಯುವುದೊಂದೇ ಬಾಕಿ. ಸೀರೆಯನ್ನು ಮೇಲಕ್ಕೆತ್ತಿ ಹಿಡಿದು ಬಲಗಾಲಿನಿಂದ ಸೇರನ್ನು ಜಾಡಿಸಿ ಒದ್ದೇ ಬಿಡ್ತಾಳೆ ವಧು. ನಗುತ್ತಲೇ ಬಲಗಾಲಿಟ್ಟು ಮನೆಯನ್ನು ಪ್ರವೇಶಿಸುತ್ತಾಳೆ. ವಿಡಿಯೋ ನೋಡಿದ ನೆಟ್ಟಿಗರು ಫುಟ್​ಬಾಲ್​ ಒದ್ದಂತೆ ಜಾಡಿಸಿ ಒದ್ದೆ ಬಿಟ್ಲು. ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಮನೆ ತುಂಬಾ ಅಕ್ಕಿ ಹರಡಿದರೆ ಸುಖ, ಶಾಂತಿ, ನೆಮ್ಮದಿ ಮನೆಯಲ್ಲಿ ರಾರಾಜಿಸಬಹುದು ಎಂದು ಅಂದುಕೊಂಡಿರಬೇಕು ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ:

Viral Video: ಹಾರ ಹಾಕುವಾಗ ತನ್ನನ್ನು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು; ತಿರುಗಿ ಆತ ಹೊಡೆದ್ದು ಯಾರಿಗೆ?..ವಿಚಿತ್ರ ಇದು

Viral Video: ಸೀರೆಯುಟ್ಟು ಸ್ಟೈಲಾಗಿ ಸೊಂಟ ಬಳುಕಿಸುತ್ತಿರುವ ಮಹಿಳೆ ನೋಡಿ ನೆಟ್ಟಿಗರು ಫಿದಾ!

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ