ಕೊವಿಡ್ ವ್ಯಾಕ್ಸಿನೇಶನ್​ ಜಾಗೃತಿ ಮೂಡಿಸಲು ಹೊಸ ಪ್ರಯತ್ನ; ಕಲೆಗಾರನ ಕರಾಮತ್ತಿಗೆ ಪ್ರಶಂಸೆ

ಫೋಟೋವನ್ನು ಹಂಚಿಕೊಳ್ಳಲಾಗುತ್ತಿದ್ದಂತೆಯೇ 400ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋದ ಪ್ರಯಾಣಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರೆತಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕೊವಿಡ್ ವ್ಯಾಕ್ಸಿನೇಶನ್​ ಜಾಗೃತಿ ಮೂಡಿಸಲು ಹೊಸ ಪ್ರಯತ್ನ; ಕಲೆಗಾರನ ಕರಾಮತ್ತಿಗೆ ಪ್ರಶಂಸೆ
ಕೊವಿಡ್ ವ್ಯಾಕ್ಸಿನೇಶನ್​ ಜಾಗೃತಿ ಮೂಡಿಸಲು ಹೊಸ ಪ್ರಯತ್ನ
Follow us
TV9 Web
| Updated By: shruti hegde

Updated on: Jun 28, 2021 | 1:03 PM

ಕೊವಿಡ್ ವ್ಯಾಕ್ಸಿನೇಶನ್​ ಕುರಿತಾಗಿ ಕೆಲವರು ಭಯಗೊಂಡಿದ್ದಾರೆ. ಹೀಗಾಗಿ ವ್ಯಾಕ್ಸಿನ್​ ಪಡೆಯಲು ಹಿಂಜರಿಯುತ್ತಿದ್ದಾರೆ. ಈ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸಲು ಅದೆಷ್ಟೋ ಪ್ರಯತ್ನಗಳು ನಡೆಯುತ್ತಿವೆ. ಇದೀಗ ಆಟೋ ರಿಕ್ಷಾದ ವಿಭಿನ್ನ ವಿನ್ಯಾಸ ವೈರಲ್​ ಆಗಿದೆ. ವ್ಯಾಕ್ಸಿನ್​ ಪ್ರಾಮುಖ್ಯತೆಯ ಕುರಿತಾಗಿ ತಿಳಿಹೇಳುವ ಉದ್ದೇಶದಿಂದ ಕಲಾವಿದ ಆಟೋ ರಿಕ್ಷಾವನ್ನು ಸುಂದರವಾಗಿ ವಿನ್ಯಾಸಗೊಳಿಸಿದ್ದಾರೆ. ಕೊರೊನಾ ವೈರಸ್​ ಹರಡುವಿಕೆಯ ಸಂದರ್ಭದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿನ್ಯಾಸಗೊಳಿಸಿದ ಕಲೆಗಾರನಿಗೆ ನೆಟ್ಟಿಗರು ಮೆಚ್ಚುಗೆ ಹೊರಹಾಕಿದ್ದಾರೆ.

ಚೆನ್ನೈ ಮೂಲದ ಗೌತಮ್​ ಹೆಸರಿನ ಕಲೆಗಾರ ವ್ಯಾಕ್ಸಿನ್​ ವಿನ್ಯಾಸದಿಂದ ಆಟೋ ರಿಕ್ಷಾವನ್ನು ವಿಭಿನ್ನ ಶೈಲಿಯಲ್ಲಿ ರೆಡಿ ಮಾಡಿದ್ದಾರೆ. ತುಂಬಾ ಜನರು ವ್ಯಾಕ್ಸಿನ್​ ಕುರಿತಾಗಿ ಭಯ ಹೊಂದಿದ್ದಾರೆ. ಆದರೆ ಅವರು ವ್ಯಾಕ್ಸಿನ್​ ಪ್ರಾಮುಖ್ಯತೆಯನ್ನು ತಿಳಿಯಬೇಕಿದೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಪೋಸ್ಟ್​ನಲ್ಲಿ ಗಮನಿಸುವಂತೆ, ಆಟೋ ರಿಕ್ಷಾವನ್ನು ತಿಳಿನೀಲಿ ಬಣ್ಣದಲ್ಲಿ ಪೇಂಟಿಂಗ್​ ಮಾಡಲಾಗಿದೆ. ಆಟೋದ ಮೇಲೆ ಕೊರೊನಾ ವ್ಯಾಕ್ಸಿನ್​ ನೀಡುವ ಸಿರಿಂಜ್​​ಗಳ ಅಳವಡಿಕೆ ಮಾಡಲಾಗಿದೆ. ಬಣ್ಣದ ಪೇಪರ್​, ಬಾಟಲ್​ಗಳನ್ನು ಬಳಸಿ ಆಟೋರಿಕ್ಷಾವನ್ನು ವಿನ್ಯಾಸಗೊಳಿಸಲಾಗಿದೆ.

ಫೋಟೋವನ್ನು ಹಂಚಿಕೊಳ್ಳಲಾಗುತ್ತಿದ್ದಂತೆಯೇ 400ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋದ ಪ್ರಯಾಣಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರೆತಿವೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Coronavirus cases in India: ದೇಶದಲ್ಲಿ 50,040 ಹೊಸ ಕೊವಿಡ್ ಪ್ರಕರಣ ಪತ್ತೆ, 1258 ಮಂದಿ ಸಾವು

ಬೆಂಗಳೂರಿಗರ ಅನುಕೂಲಕ್ಕಾಗಿ ಜನಸಂಪರ್ಕ ದಿನ: ಸಿಲಿಕಾನ್​ ಸಿಟಿ ಖಾಕಿ ಪಡೆಯ ಹೊಸ ಪ್ರಯತ್ನ