Viral Video: ಕಲಿಯುಗದಲ್ಲೂ ನಡೆಯಿತು ಸೀತಾಸ್ವಯಂವರ; ಬಿಲ್ಲು ಎತ್ತಿ ಮದುಮಗಳನ್ನು ವರಿಸಿದ ಹುಡುಗ! ವಿಡಿಯೋ ನೋಡಿ

ಮದುಮಗಳು ಮೊದಲು, ವಿವಾಹ ವೇದಿಕೆಯಲ್ಲಿ ಎರಡೂ ಕೈಜೋಡಿಸಿ ಶಿವನನ್ನು ಪ್ರಾರ್ಥನೆ ಮಾಡಿದ್ದಾಳೆ. ಬಳಿಕ, ಹುಡುಗ ಬಿಲ್ಲು ಎತ್ತಿ ಮುರಿದಿದ್ದಾನೆ.‌ ಧನಸ್ಸು ಎತ್ತಿ ಹುಡುಗಿಯನ್ನು ಮದುವೆಯಾಗಿದ್ದಾನೆ.‌

Viral Video: ಕಲಿಯುಗದಲ್ಲೂ ನಡೆಯಿತು ಸೀತಾಸ್ವಯಂವರ; ಬಿಲ್ಲು ಎತ್ತಿ ಮದುಮಗಳನ್ನು ವರಿಸಿದ ಹುಡುಗ! ವಿಡಿಯೋ ನೋಡಿ
ಕಲಿಯುಗದಲ್ಲೂ ಸೀತಾಸ್ವಯಂವರ
Follow us
TV9 Web
| Updated By: ganapathi bhat

Updated on: Jun 29, 2021 | 7:31 PM

ಮದುವೆ ಸಮಾರಂಭ ಬಹಳ ವಿಜೃಂಭಣೆಯಿಂದ, ವಿಶೇಷವಾಗಿ ನಡೆಸಬೇಕು ಎಂಬುದು ಬಹುತೇಕ ಹೆತ್ತವರ ಮತ್ತು ಮದುಮಕ್ಕಳ ಕನಸು ಆಗಿರುತ್ತದೆ. ಎಲ್ಲೂ ಆಗದಂತಹ ರೀತಿಯಲ್ಲಿ ನಾವು ಮದುವೆ ಕಾರ್ಯಕ್ರಮ ಮಾಡಬೇಕು ಎಂದು ಆಸೆ ಇರುತ್ತದೆ. ಇತ್ತೀಚೆಗಂತೂ ಒಂದಿಲ್ಲೊಂದು ವಿಶೇಷ ಅಂಶಗಳನ್ನು ನಾವು ಬಹುತೇಕ ಮದುವೆಗಳಲ್ಲಿ ಕಾಣುತ್ತೇವೆ. ಅಂತಹುದೇ ಒಂದು ಘಟನೆ ಇಲ್ಲಿ ತಿಳಿದುಬಂದಿದೆ.

ಸೀತಾಸ್ವಯಂವರ ಹೋಲಿಕೆಯ ಘಟನೆಯೊಂದು ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ. ಕಲಿಯುಗದಲ್ಲಿ ತ್ರೇತಾಯುಗದಲ್ಲಿ‌ ನಡೆದಂತಹ ಘಟನೆ ನಡೆದಿದೆ. ಮದುಮಗ ಬಿಲ್ಲು ಎತ್ತಿ ಮದುವೆಯಾಗಿದ್ದಾರೆ. ಸರನ್ ಜಿಲ್ಲೆಯ ಸೋನ್‌ಪುರ್ ಬ್ಲಾಕ್‌ನ ಸಬಲ್‌ಪುರ್ ಈಸ್ಟ್ ವಿಭಾಗದಲ್ಲಿ ಈ ರೀತಿ ಮದುವೆ ನಡೆದಿದೆ.

ಮದುಮಗಳು ಮೊದಲು, ವಿವಾಹ ವೇದಿಕೆಯಲ್ಲಿ ಎರಡೂ ಕೈಜೋಡಿಸಿ ಶಿವನನ್ನು ಪ್ರಾರ್ಥನೆ ಮಾಡಿದ್ದಾಳೆ. ಬಳಿಕ, ಹುಡುಗ ಬಿಲ್ಲು ಎತ್ತಿ ಮುರಿದಿದ್ದಾನೆ.‌ ಧನಸ್ಸು ಎತ್ತಿ ಹುಡುಗಿಯನ್ನು ಮದುವೆಯಾಗಿದ್ದಾನೆ.‌ ಈ ಸಂದರ್ಭವನ್ನು ನೆರೆದ ಜನರೆಲ್ಲಾ ಸಂಭ್ರಮಿಸಿದ್ದಾರೆ. ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ವಿಶೇಷ ಎಂದರೆ ಈ ಸ್ವಯಂವರ ಕಾರ್ಯಕ್ರಮದಲ್ಲಿ ಇತರ ಸ್ಪರ್ಧಿಗಳೂ ಇದ್ದರು. ಆದರೆ, ವರ ಯಾರು ಎಂಬುದು ಮೊದಲೇ ನಿಗದಿಯಾಗಿತ್ತು.

ಸೀತಾಸ್ವಯಂವರ ರಾಮಾಯಣದ ಪ್ರಮುಖ ಭಾಗವಾಗಿದೆ. ಅದರಂತೆ ಈ ವಿವಾಹ ಕಾರ್ಯಕ್ರಮವನ್ನು ನಡೆಸಲಾಗಿದೆ. ರಾಮಾಯಣದಲ್ಲಿ ಸೀತೆಯ ವಿವಾಹಕ್ಕೆ ಸ್ವಯಂವರ ಸಮಾರಂಭವನ್ನು ಆಕೆಯ ತಂದೆ ಜನಕ ಮಹಾರಾಜ ಆಯೋಜಿಸುತ್ತಾನೆ. ಅದರಲ್ಲಿ ವರನು ಧನಸ್ಸು ಎತ್ತಿ ಹುಡುಗಿಯನ್ನು ವರಿಸಬೇಕಿರುತ್ತದೆ.

ರಾಮಾಯಣದ ಆ ಕಾರ್ಯಕ್ರಮಕ್ಕೆ ರಾವಣನೂ ಬಂದಿರುತ್ತಾನೆ. ಆದರೆ, ಧನಸ್ಸು ಬಹಳ ಭಾರವಾಗಿ ಇದ್ದದ್ದರಿಂದ ಯಾರಿಗೂ ಅದನ್ನು ಎತ್ತಲು ಆಗಿರುವುದಿಲ್ಲ. ಬಂದ ಎಲ್ಲಾ ರಾಜ ಮಹಾರಾಜರೂ ಬಿಲ್ಲು ಹೆದೆ ಏರಿಸಲು ಆಗದೆ ಇದ್ದಾಗ ರಾಮ‌ ಆ ಕಾರ್ಯ ಸಾಧನೆ ಮಾಡುತ್ತಾನೆ. ಹೀಗೆ ರಾಮ, ಸೀತೆಯನ್ನು ವರಿಸುತ್ತಾನೆ.

ಈ ಕಾರ್ಯಕ್ರಮದಲ್ಲೂ ಅದರಂತೆ ಮಾಡಲಾಗಿದೆ. ಮದುವೆ ಹುಡುಗಿ ವೇದಿಕೆಗೆ ಬರುತ್ತಿದ್ದಂತೆ ಆಕೆಯ ಮೇಲೆ ಹೂಮಳೆ ಸುರಿಸಲಾಗಿದೆ. ಉಳಿದಂತೆ ಮದುವೆ ಸಂಪ್ರದಾಯಗಳನ್ನೂ ಮಾಡಲಾಗಿದೆ. ಕೊರೊನಾ ಕಾಲದಲ್ಲೂ ಇಂತಹ ವಿಶೇಷ ಮದುವೆಯೊಂದು ಸುದ್ದಿಯಾಗಿದೆ. ಆದರೆ, ವಿವಾಹ ಸಮಾರಂಭದಲ್ಲಿ ಯಾರೂ ಕೊವಿಡ್ ನಿಯಮ ಪಾಲಿಸಿಲ್ಲ ಎಂಬುದು ವಿಷಾದನೀಯ ವಿಚಾರವಾಗಿದೆ.

ಇದನ್ನೂ ಓದಿ: ಕೈಗಳಿಲ್ಲದ ಯುವಕ ಕಾಲಿನಲ್ಲಿಯೇ ಕೇರಂ ಆಟ ಆಡ್ತಾರೆ! ನೆಟ್ಟಿಗರ ಹೃದಯ ಗೆದ್ದ ವಿಡಿಯೋ ವೈರಲ್

ಸಿಇಓ ಜತೆ ಆನ್​ಲೈನ್​ ಮೀಟಿಂಗ್​ ನಡೆಸುವಾಗ ಪೇಚಿಗೆ ಸಿಲುಕಿದ ಮಹಿಳಾ ಉದ್ಯೋಗಿ; ವೈರಲ್ ಆಯ್ತು ವಿಡಿಯೋ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್