Viral video: ಪ್ರವಾಹದ ಮಧ್ಯೆ ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ; ’ರೊಮ್ಯಾಂಟಿಕ್ ಕಪಲ್’ ಎಂದ ನೆಟ್ಟಿಗರು
ಭಾರೀ ಮಳೆಯಿಂದಾಗಿ ಕಿಶನ್ಗಂಜ್ ಜಿಲ್ಲೆಯ ಕಂಕೈ ನದಿ ನದಿ ತುಂಬಿ ಹರಿಯುತ್ತಿದೆ. ಈಗತಾನೆ ಮದುವೆಯಾದ ಜೋಡಿ ಮನೆಗೆ ಹಿಂತಿರುಗುವಾಗ ದೋಣಿಯ ಸಹಾಯ ಬಳಸಿಕೊಂಡಿದ್ದಾರೆ. ಆದರೆ ದಡ ಸೇರಲು ಇನ್ನೇನು ಸ್ವಲ್ಪ ದೂರ ಇರುವಾಗಲೇ ದೋಣಿ ಸಿಲುಕಿಕೊಂಡಿದೆ.
ಮಳೆಯ ಆರ್ಭಟ ಜೋರಾಗಿಯೇ ಇದೆ. ಅದೆಷ್ಟೋ ಜನರು ಅತಿಯಾದ ಮಳೆಯಿಂದಾದ ಪ್ರವಾಹಕ್ಕೆ ಸಿಲುಕಿದ್ದಾರೆ. ಇನ್ನೆಷ್ಟೋ ಜನರ ಮನೆಗಳು ಕುಸಿದು ಬಿದ್ದಿವೆ. ಮಳೆಯ ಆರ್ಭಟದಿಂದಾದ ಅವಘಡಗಳು ಒಂದಲ್ಲ.. ಎರಡಲ್ಲ. ಪ್ರಕೃತಿ ವಿಕೋಪದ ಮಧ್ಯೆ ಜನರು ನಲುಗಿ ಹೋಗಿದ್ದಾರೆ. ಈ ನಡುವೆಯೇ ಈಗ ತಾನೆ ಮದುವೆಯಾದ ನವಜೋಡಿಗಳು ಮನೆಗೆ ಹಿಂತಿರುಗುವಾಗ ತುಂಬಿ ಹರಿಯುತ್ತಿರುವ ನದಿಯಿಂದ ದಾಟುವುದಕ್ಕೆ ಕಷ್ಪಡುವಂತಹ ಪರಿಸ್ಥಿತಿ ಎದುರಾಗಿದೆ. ಅದು ಹೇಗೋ ಕಷ್ಟಪಟ್ಟು ನವಜೋಡಿಗಳು ಸುರಕ್ಷಿತವಾಗಿ ನದಿದಾಟಿ ಮನೆ ತಲುಪಿದ್ದಾರೆ. ಮಧುವಿನ ರಕ್ಷಣೆಗಾಗಿ ವರ ತನ್ನ ಹೆಗಲ ಮೇಲೆ ಸಂಗಾತಿಯನ್ನು ಹೊತ್ತುಕೊಂಡು ನದಿ ದಾಟುತ್ತಿರುವ ವಿಡಿಯೋ ಇದೀಗ ಭಾರೀ ಸುದ್ದಿಯಲ್ಲಿದೆ.
ಭಾರೀ ಮಳೆಯಿಂದಾಗಿ ಕಿಶನ್ಗಂಜ್ ಜಿಲ್ಲೆಯ ಕಂಕೈ ನದಿ ನದಿ ತುಂಬಿ ಹರಿಯುತ್ತಿದೆ. ಈಗತಾನೆ ಮದುವೆಯಾದ ಜೋಡಿ ಮನೆಗೆ ಹಿಂತಿರುಗುವಾಗ ದೋಣಿಯ ಸಹಾಯ ಬಳಸಿಕೊಂಡಿದ್ದಾರೆ. ಆದರೆ ದಡ ಸೇರಲು ಇನ್ನೇನು ಸ್ವಲ್ಪ ದೂರ ಇರುವಾಗಲೇ ದೋಣಿ ಸಿಲುಕಿಕೊಂಡಿದೆ. ಮದುವೆಯ ಉಡುಗೆಯಲ್ಲೇ ಇದ್ದ ವರನು ವಧುವನ್ನು ಹೆಗಲ ಮೇಲೆ ಹೊತ್ತು ದಡ ತಲುಪಿಸಿದ್ದಾರೆ. ಜತೆಯಲ್ಲಿದ್ದ ಕುಟುಂಬ ಅವರನ್ನು ಪ್ರೋತ್ಸಾಗಿಸಿದೆ.
ವರ ಶಿವ ಕುಮಾರ್ ವಿವಾಹದ ಮೆರವಣಿಗೆಯೊಂದಿಗೆ ಮನೆಗೆ ಹಿಂತಿರುಗುತ್ತಿದ್ದರು. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ‘ರೊಮ್ಯಾಂಟಿಕ್ ಕಪಲ್’ ಎಂದು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು, ಜನರಿಗೆ ಓಡಾಡಲು ಸೇತುವೆಯ ಅವಶ್ಯಕತೆ ಇದೆ ಎಂದು ಹೇಳಿದರು. ಜೋರಾಗಿ ಮಳೆ ಸುರಿದು ಪ್ರವಾಹದ ಪರಿಣಾಮ ವರ ತನ್ನ ಸಂಗಾತಿಯನ್ನು ಹೆಗಲ ಮೇಲೆ ಹೊತ್ತು ನದಿ ದಾಟಿದ್ದಾನೆ ಎಂದು ವಿಡಿಯೋ ನೋಡಿದ ನೆಟ್ಟಿಗರು ಈ ನವ ಜೋಡಿಗಳನ್ನು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಸೀರೆಯುಟ್ಟು ಪ್ರೇಯಸಿಯ ಮನೆಗೆ ಹೋದ ಭೂಪ; ಹಿಗ್ಗಾಮುಗ್ಗಾ ಥಳಿಸಿ ವಾಪಾಸ್ಸು ಕಳಿಸಿದ ಹುಡುಗಿ ಮನೆಯವರು