AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ ಕಳಿಸಿದ ಆಷಾಢ ಮಾಸದ ಉಡುಗೊರೆ ನೋಡಿ ಸಿಕ್ಕಾಪಟೆ ಕಂಗಾಲಾದ ಮಗಳು; ಭರ್ಜರಿ ಸುದ್ದಿಯಲ್ಲಿದೆ ಈ ಗಿಫ್ಟ್​

ಬಟ್ಟುಲಾ ಬಲರಾಮ ಕೃಷ್ಣ ತಮ್ಮ ಪುತ್ರಿ ಪ್ರತ್ಯುಷಾಳನ್ನು ಇತ್ತೀಚೆಗಷ್ಟೇ ಯಾಣಂನ ಉದ್ಯಮಿಯೊಬ್ಬರ ಮಗ ಪವನ್​ ಕುಮಾರ್​ಗೆ ಮದುವೆ ಮಾಡಿಕೊಟ್ಟಿದ್ದಾರೆ. ಈ ಜೋಡಿ ತಮ್ಮ ಮೊದಲ ಆಷಾಢ ಮಾಸ ಆಚರಣೆಯಲ್ಲಿದ್ದಾರೆ. ಏನಾದರೂ ವಿಶೇಷವಾಗಿ ಮಾಡಬೇಕು ಎಂದು ಹೊರಟ ಬಲರಾಮ ಕೃಷ್ಣ ಒಂದು ಟ್ರಕ್​ ತುಂಬ ಉಡುಗೊರೆ ಹೊರೆಸಿ ಕಳಿಸಿದ್ದಾರೆ.

ಅಪ್ಪ ಕಳಿಸಿದ ಆಷಾಢ ಮಾಸದ ಉಡುಗೊರೆ ನೋಡಿ ಸಿಕ್ಕಾಪಟೆ ಕಂಗಾಲಾದ ಮಗಳು; ಭರ್ಜರಿ ಸುದ್ದಿಯಲ್ಲಿದೆ ಈ ಗಿಫ್ಟ್​
ಮಗಳಿಗೆ ವಿಶಿಷ್ಟವಾಗಿ ಉಡುಗೊರೆ ಕಳಿಸಿದ ತಂದೆ-ತಾಯಿ
TV9 Web
| Updated By: Lakshmi Hegde|

Updated on: Jul 20, 2021 | 4:15 PM

Share

ಮಗಳು ಮದುವೆಯಾಗಿ ಪತಿಯ ಮನೆಗೆ ಹೋಗುವ ದಿನ ಆಕೆಗೆ ತವರು ಮನೆಯಲ್ಲಿ ಉಡುಗೋರೆ ನೀಡುವುದು ಸಾಮಾನ್ಯ. ಮದುವೆಗೆಂದು ಮಾಡಿಸುವ ಬೆಳ್ಳಿ-ಬಂಗಾರದ ಹೊರತಾಗಿಯೂ ತಂದೆ ಆಕೆಗೆ ಅಗತ್ಯವಿರುವ ವಸ್ತುಗಳನ್ನು ಉಡುಗೋರೆ ರೂಪದಲ್ಲಿ ನೀಡುತ್ತಾನೆ. ಹಾಗೇ, ಆಂಧ್ರಪ್ರದೇಶದ ಈ ವ್ಯಕ್ತಿಯ ಮಗಳಿಗೆ ಇತ್ತೀಚೆಗಷ್ಟೇ ವಿವಾಹವಾಗಿತ್ತು. ಅವರೀಗ ತಮ್ಮ ಮಗಳ ಮನೆಗೆ ಭರ್ಜರಿ ಉಡುಗೋರೆಗಳನ್ನು ಕಳಿಸಿದ್ದಾರೆ. ಅದರಲ್ಲೇನು ವಿಶೇಷ ಅಂತ ಕೇಳ್ಬೇಡಿ..ಮುಂದಿ ಓದಿ.

ಆಂಧ್ರಪ್ರದೇಶದ ಈ ವ್ಯಕ್ತಿಯ ಹೆಸರು ಬಟ್ಟುಲಾ ಬಲರಾಮಕೃಷ್ಣ. ರಾಜಮಂಡ್ರಿಯ ಪ್ರಮುಖ ಉದ್ಯಮಿಗಳಲ್ಲಿ ಇವರೂ ಒಬ್ಬರು. ಇತ್ತೀಚೆಗಷ್ಟೇ ಮದುವೆಯಾಗಿ ಹೋಗಿರುವ ತಮ್ಮ ಮಗಳ ಮನೆಗೆ ಇವರು ಬರೋಬ್ಬರಿ 100 ಕೆಜಿ ಮೀನು, 100 ಕೆಜಿ ತರಕಾರಿ, 250 ಕೆಜಿ ಸೀಗಡಿ, 250 ಕೆಜಿ ಕಿರಾಣಿ ಸಾಮಗ್ರಿಗಳು, 250 ಜಾರ್​ಗಳಷ್ಟು ಉಪ್ಪಿನಕಾಯಿ, 50 ಚಿಕನ್​, 10 ಕುರಿಗಳು ಮತ್ತು 250 ಕೆಜಿ ಸಿಹಿತಿಂಡಿಗಳನ್ನು ಕಳಿಸಿದ್ದಾರೆ. ಅಂದಹಾಗೆ ಇವರ ಮಗಳ ಮನೆ ಇರುವುದು ಪುದುಚೇರಿಯ ಯಾನಂನಲ್ಲಿ. ಉಡುಗೊರೆ ಕಳಿಸಿದ್ದು ಸಹಜವಾಗಿ ಕಂಡರೂ ಅದರ ಪ್ರಮಾಣ ಮಾತ್ರ ತೀರ ಅಸಹಜ ಅನ್ನಿಸುತ್ತಿದೆ.. ಹಾಗೇ ಸಾಮಾಜಿಕ ಜಾಲತಾಣಗಳಲ್ಲೂ ಸಿಕ್ಕಾಪಟೆ ಸುದ್ದಿಯಾಗುತ್ತಿದೆ. ಸದ್ಯ ನಡೆಯುತ್ತಿರುವ ಆಷಾಢ ಮಾಸ ತೆಲುಗು ಸಂಪ್ರದಾಯದಲ್ಲಿ ತುಂಬ ಶ್ರೇಷ್ಠವಾದ ತಿಂಗಳು. ಅದರಲ್ಲೂ ಹೊಸದಾಗಿ ಮದುವೆಯಾದ ಜೋಡಿಗೆ ಅತ್ಯಂತ ಮಹತ್ವದ ಮಾಸವಾಗಿದೆ. ಈ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಅವರ ತಂದೆ-ತಾಯಿ ಉಡುಗೊರೆ ಕೊಡಲೇಬೇಕು. ಇದೀಗ ಉದ್ಯಮಿ ಕೊಟ್ಟಿರುವ ಗಿಫ್ಟ್ ಭರ್ಜರಿ ಸುದ್ದಿಯಾಗಿದೆ.

ಬಟ್ಟುಲಾ ಬಲರಾಮ ಕೃಷ್ಣ ತಮ್ಮ ಪುತ್ರಿ ಪ್ರತ್ಯುಷಾಳನ್ನು ಇತ್ತೀಚೆಗಷ್ಟೇ ಯಾಣಂನ ಉದ್ಯಮಿಯೊಬ್ಬರ ಮಗ ಪವನ್​ ಕುಮಾರ್​ಗೆ ಮದುವೆ ಮಾಡಿಕೊಟ್ಟಿದ್ದಾರೆ. ಈ ಜೋಡಿ ತಮ್ಮ ಮೊದಲ ಆಷಾಢ ಮಾಸ ಆಚರಣೆಯಲ್ಲಿದ್ದಾರೆ. ಏನಾದರೂ ವಿಶೇಷವಾಗಿ ಮಾಡಬೇಕು ಎಂದು ಹೊರಟ ಬಲರಾಮ ಕೃಷ್ಣ ಒಂದು ಟ್ರಕ್​ ತುಂಬ ಉಡುಗೊರೆ ಹೊರೆಸಿ ಕಳಿಸಿದ್ದಾರೆ. ಅದನ್ನು ನೋಡಿ ಪ್ರತ್ಯುಷಾಳ ಮನೆಯಲ್ಲಿ ಪ್ರತಿಯೊಬ್ಬರೂ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಸಿಎಂ ಕುರ್ಚಿಗಾಗಿ ಗಣಿ ಸಚಿವ ಮುರುಗೇಶ್​ ನಿರಾಣಿಯಿಂದ ದೊಡ್ಡ ಲಾಬಿ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ

A Father gifts to newlywed daughter 1000kg fish 250kg sweets In Andra Pradesh

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ