Indian Railways: ರಾಜಧಾನಿ ಎಕ್ಸ್​ಪ್ರೆಸ್​ ರೈಲಲ್ಲಿ ತೇಜಸ್ ಮಾದರಿ ಸ್ಮಾರ್ಟ್​ ಸ್ಲೀಪರ್​ ಬೋಗಿಗಳು; ರೈಲ್ವೆ ಇಲಾಖೆಯ ಹೊಸ ಪ್ರಯೋಗ

Indian Railways Smart Coaches: ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಸುಮಿತ್​ ಠಾಕೂರ್​ ಮಾಹಿತಿ ನೀಡಿದ್ದು, ತೇಜಸ್​ ಸ್ಮಾರ್ಟ್ ಕೋಚ್​ಗಳ ಬಳಕೆಯ ಮೂಲಕ ಭಾರತೀಯ ರೈಲ್ವೆ, ತಡೆಗಟ್ಟುವಿಕೆ ನಿರ್ವಹಣೆ ಬದಲು ಮುನ್ಸೂಚಕ ನಿರ್ವಹಣೆಯ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ ಎಂದಿದ್ದಾರೆ.

Indian Railways: ರಾಜಧಾನಿ ಎಕ್ಸ್​ಪ್ರೆಸ್​ ರೈಲಲ್ಲಿ ತೇಜಸ್ ಮಾದರಿ ಸ್ಮಾರ್ಟ್​ ಸ್ಲೀಪರ್​ ಬೋಗಿಗಳು; ರೈಲ್ವೆ ಇಲಾಖೆಯ ಹೊಸ ಪ್ರಯೋಗ
ರಾಜಧಾನಿ ಎಕ್ಸ್​​ಪ್ರೆಸ್​ನಲ್ಲಿ ತೇಜಸ್ ಮಾದರಿ ಸ್ಲೀಪಿಂಗ್ ಕೋಚ್​ಗಳು
Follow us
TV9 Web
| Updated By: Lakshmi Hegde

Updated on:Jul 20, 2021 | 5:05 PM

ರೈಲು ಪ್ರಯಾಣವನ್ನು ಇನ್ನಷ್ಟು ಆರಾಮದಾಯಕಗೊಳಿಸುವ ಪ್ರಯತ್ನವಾಗಿ ಪಶ್ಚಿಮ ವಲಯ ರೈಲ್ವೆ (Western Railway) ಹೊಸದಾಗಿ ನವೀಕರಿಸಿದ ತೇಜಸ್ ಮಾದರಿಯ ಸ್ಲೀಪರ್ ಕೋಚ್ ರೇಕ್ಸ್​ನ್ನು ಪರಿಚಯಿಸಿದೆ. ಈ ತೇಜಸ್​ ಮಾದರಿಯ ಸ್ಮಾರ್ಟ್​ ಸ್ಲೀಪರ್​ ಕೋಚ್​​​ನ್ನು ಸದ್ಯ ಮುಂಬೈ-ದೆಹಲಿ ರಾಜಧಾನಿ ಎಕ್ಸ್​ಪ್ರೆಸ್ ರೈಲಿನಲ್ಲಿ ಪರಿಚಯಿಸಲಾಗಿದ್ದು, ಸೋಮವಾರ (ಜು.19) ಇದು ತನ್ನ ಮೊದಲ ಸಂಚಾರ ಮಾಡಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.

ಈ ಬಗ್ಗೆ ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಸುಮಿತ್​ ಠಾಕೂರ್​ ಮಾಹಿತಿ ನೀಡಿದ್ದು, ತೇಜಸ್​ ಸ್ಮಾರ್ಟ್ ಕೋಚ್​ಗಳ ಬಳಕೆಯ ಮೂಲಕ ಭಾರತೀಯ ರೈಲ್ವೆ, ತಡೆಗಟ್ಟುವಿಕೆ ನಿರ್ವಹಣೆ ಬದಲು ಮುನ್ಸೂಚಕ ನಿರ್ವಹಣೆಯ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ಆಧುನಿಕ ತೇಜಸ್​ ಮಾದರಿ ಸ್ಲೀಪರ್​ ಕೋಚ್​ಗಳು ದೂರದ ಪ್ರಯಾಣಕ್ಕೆ ತುಂಬ ಅನುಕೂಲ ಆಗಲಿವೆ. ಪ್ರಯಾಣಿಕರು ಇನ್ನಷ್ಟು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ. ಹಾಗೇ ಈ ತೇಜಸ್ ಮಾದರಿ ಸ್ಲೀಪರ್​ ಬೋಗಿಗಳನ್ನು ಆಧುನಿಕ ಕೋಚ್​ ಫ್ಯಾಕ್ಟರಿ (MCF)ಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಇನ್ನು ರಾಜಧಾನಿ ಎಕ್ಸ್​ಪ್ರೆಸ್​ನ ಎರಡು ರೇಕ್ಸ್​ಗಳಲ್ಲಿ ತೇಜಸ್​ ಮಾದರಿ ಸ್ಲೀಪರ್​ ಬೋಗಿಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರಿಗೆ ಇಂಟಲಿಜೆಂಟ್​ ಸೆನ್ಸಾರ್​ ಆಧರಿತ, ವಿಶ್ವ ದರ್ಜೆಯ ವ್ಯವಸ್ಥೆ ನೀಡುವ ಉದ್ದೇಶದಿಂದ ಈ ಹೆಜ್ಜೆ ಇಡಲಾಗಿದೆ. ಇನ್ನು ಪ್ರಯಾಣಿಕರ ಸುರಕ್ಷತೆ, ಆರಾಮವನ್ನೂ ಗಮನದಲ್ಲಿಟ್ಟುಕೊಂಡು ತೇಜಸ್​ ಮಾದರಿ ಸ್ಲೀಪರ್ ಬೋಗಿಗಳನ್ನು ಪರಿಚಯಿಸಿದ್ದಾರೆ ರೈಲ್ವೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ದುಡ್ಡು ಕೊಟ್ಟರೆ ಎಸ್​ಎಸ್​ಎಲ್​ಸಿ ಪಾಸ್ ಮಾಡಲಾಗುತ್ತೆ ಎಂಬ ಸುಳ್ಳು ಸುದ್ದಿಯನ್ನು ನಂಬಬೇಡಿ; ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ

Published On - 5:03 pm, Tue, 20 July 21

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ