ಉತ್ತರ ಪ್ರದೇಶ ಚುನಾವಣೆಯಲ್ಲಿ ಬ್ರಾಹ್ಮಣರ ಬೆಂಬಲ ಪಡೆಯಲು ರಾಜಕೀಯ ಪಕ್ಷಗಳಿಂದ ಓಲೈಕೆ ಶುರು

Uttar Pradesh: 2007 ರಲ್ಲಿ ಬ್ರಾಹ್ಮಣರ ಬೆಂಬಲದೊಂದಿಗೆ ರಾಜ್ಯದಲ್ಲಿ ಸರ್ಕಾರವನ್ನು ರಚಿಸಿದ ಬಿಎಸ್ಪಿ, ಪಕ್ಷದ ಮೊದಲ ಬ್ರಾಹ್ಮಣ ಸಭೆಯ ವ್ಯವಸ್ಥೆಗಳ ಮೇಲ್ವಿಚಾರಣೆಗೆ ನಕುಲ್ ದುಬೆ ಅವರನ್ನು ಅಯೋಧ್ಯೆಗೆ ಕಳುಹಿಸಿದೆ. ಅಯೋಧ್ಯೆಯ ಆಯ್ಕೆಯ ಬಗ್ಗೆ ಕೇಳಿದಾಗ "ರಾಮ... ಎಲ್ಲರಿಗೂ ಸೇರಿದ್ದು" ಎಂದು ದುಬೆ ಉತ್ತರಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಬ್ರಾಹ್ಮಣರ ಬೆಂಬಲ ಪಡೆಯಲು ರಾಜಕೀಯ ಪಕ್ಷಗಳಿಂದ ಓಲೈಕೆ ಶುರು
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 20, 2021 | 6:24 PM

ಲಖನೌ: ಜುಲೈ 23 ರಿಂದ ಬಹುಜನ ಸಮಾಜ ಪಕ್ಷದ (BSP) ಮುಖ್ಯಸ್ಥೆ ಮಾಯಾವತಿ ಸರಣಿಯಾಗಿ ಬ್ರಾಹ್ಮಣರ ಸಭೆ ನಡೆಸುವುದಾಗಿ ಘೋಷಿಸಿದ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ 2022 ರ ಚುನಾವಣೆಗೆ ಮುನ್ನ ಬ್ರಾಹ್ಮಣ ಸಮುದಾಯದ ಓಲೈಕೆಗೆ ರಾಜಕೀಯ ಪಕ್ಷಗಳ ಪೈಪೋಟಿ ಶುರುವಾಗಿದೆ. ಚುನಾವಣೆಗೆ ಸಿದ್ದವಾಗಿರುವ ರಾಜ್ಯದಲ್ಲಿ ಇತರ ಪಕ್ಷಗಳು ಒಟ್ಟು ಜನಸಂಖ್ಯೆಯ ಸುಮಾರು ಶೇ 11ರಷ್ಟಿರುವ ಬ್ರಾಹ್ಮಣರ ಮೇಲಿನ ದೌರ್ಜನ್ಯವನ್ನು ಎತ್ತಿ ತೋರಿಸಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಮುದಾಯದ ಮುಖಂಡರು ಇದಕ್ಕಾಗಿ ಕೈಗೊಂಡ ಉಪಕ್ರಮಗಳ ಬಗ್ಗೆ ಮಾತನಾಡುವ ಮೂಲಕ ಇದನ್ನು ಎದುರಿಸಲು ಪ್ರಯತ್ನಿಸಿದೆ.

2007 ರಲ್ಲಿ ಬ್ರಾಹ್ಮಣರ ಬೆಂಬಲದೊಂದಿಗೆ ರಾಜ್ಯದಲ್ಲಿ ಸರ್ಕಾರವನ್ನು ರಚಿಸಿದ ಬಿಎಸ್ಪಿ, ಪಕ್ಷದ ಮೊದಲ ಬ್ರಾಹ್ಮಣ ಸಭೆಯ ವ್ಯವಸ್ಥೆಗಳ ಮೇಲ್ವಿಚಾರಣೆಗೆ ನಕುಲ್ ದುಬೆ ಅವರನ್ನು ಅಯೋಧ್ಯೆಗೆ ಕಳುಹಿಸಿದೆ. ಅಯೋಧ್ಯೆಯ ಆಯ್ಕೆಯ ಬಗ್ಗೆ ಕೇಳಿದಾಗ “ರಾಮ… ಎಲ್ಲರಿಗೂ ಸೇರಿದ್ದು” ಎಂದು ದುಬೆ ಉತ್ತರಿಸಿದ್ದಾರೆ. ನೆಲಸಮ ಮಾಡಿದ ಬಾಬರಿ ಮಸೀದಿಯ ಜಾಗದಲ್ಲಿ ನಿರ್ಮಾಣವಾಗುತ್ತಿರುವ ರಾಮ ದೇಗುಲಗದಲ್ಲಿ ಮೊದಲ ಬ್ರಾಹ್ಮಣ ಸಭೆ ನಡೆಯಲಿದೆ.

ಉತ್ತರ ಪ್ರದೇಶಕ್ಕೆ ಬ್ರಾಹ್ಮಣ ಮುಖ್ಯಮಂತ್ರಿಗಳನ್ನು ನೀಡಿರುವುದು ಅವರ ಪಕ್ಷ ಮಾತ್ರ ಎಂದು ಕಾಂಗ್ರೆಸ್ ಮುಖಂಡ ಆರಾಧನಾ ಮಿಶ್ರಾ ಹೇಳಿದ್ದಾರೆ. ಯಾವುದೇ ರಾಜಕೀಯ ಪಕ್ಷವು ಬ್ರಾಹ್ಮಣನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುತ್ತದೆಯೇ ಎಂದು ಅವರು ಕೇಳಿದ್ದಾರೆ.

ಸಮಾಜವಾದಿ ಪಕ್ಷದ (SP) ನಾಯಕ ಅಭಿಷೇಕ್ ಮಿಶ್ರಾ ಅವರ ಬೆಂಬಲದೊಂದಿಗೆ ಭಗವಾನ್ ಪರಶುರಾಮ್ ಟ್ರಸ್ಟ್, ಉತ್ತರ ಪ್ರದೇಶದ ಪ್ರತಿ ಜಿಲ್ಲೆಯಲ್ಲೂ ಪರುಶುರಾಮ ದೇವಾಲಯಗಳ ನಿರ್ಮಾಣವನ್ನು ಪ್ರಾರಂಭಿಸಿದೆ. ಪರಶುರಾಮ ಎಂಬ ಬ್ರಾಹ್ಮಣ ಸಂತನು ವಿಷ್ಣುವಿನ ಅವತಾರ ಎಂದು ನಂಬಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಳೆದ ವರ್ಷ ಪರಶುರಾಮನನ್ನು ಬ್ರಾಹ್ಮಣ ಎಂದು ಬಿಂಬಿಸಲು ಪ್ರತಿಪಕ್ಷಗಳು ಮಾಡಿದ ತಂತ್ರವನ್ನು ಟೀಕಿಸಿದರು, “ರಾಮ್ ಮತ್ತು ಪರಶುರಾಮ್ ಇಬ್ಬರೂ ವಿಷ್ಣುವಿನ ಅವತಾರಗಳು” ಎಂದು ಹೇಳಿದ್ದಾರೆ.

ಕೆಲವು ದೇವಾಲಯಗಳು ಈಗಾಗಲೇ ನಿರ್ಮಾಣವಾಗಿವೆ. ಅಲ್ಲಿ ಪುರೋಹಿತರು ವಿಧಿವಿಧಾನಗಳನ್ನು ನಡೆಸುತ್ತಿದ್ದಾರೆ ಎಂದು ಅಭಿಷೇಕ್ ಮಿಶ್ರಾ ಹೇಳಿದರು. “ಎಲ್ಲಾ ಜಿಲ್ಲೆಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದ ನಂತರ, ನಾವು ಪರಶುರಾಮನ 108 ಅಡಿ ಪ್ರತಿಮೆಯನ್ನು ನಿರ್ಮಿಸಲು ಯೋಜಿಸಿದ್ದೇವೆ.” 1993 ರಲ್ಲಿ ಎಸ್‌ಪಿ ಸರ್ಕಾರವು ಪರಶುರಾಮ ಅವರ ಜನ್ಮದಿನದಂದು ರಜಾದಿನವನ್ನು ಘೋಷಿಸಿತು ಎಂದು ಅವರು ಹೇಳಿದರು. ಬಿಜೆಪಿ ನಾಯಕ ಸುನೀಲ್ ಭಾರಲಾ ಅವರು ತಮ್ಮ ರಾಷ್ಟ್ರೀಯ ಪರ್ಶುರಾಮ್ ಪರಿಷತ್ ಆಶ್ರಯದಲ್ಲಿ ಬ್ರಾಹ್ಮಣರ ಸಭೆ ನಡೆಯಲಿದೆ ಎಂದು ಘೋಷಿಸಿದ್ದಾರೆ.

ಕ್ಷತ್ರಿಯರಾದ ಆದಿತ್ಯನಾಥ ಅವರು ಚುನಾವಣೆಯಲ್ಲಿ ಬಿಜೆಪಿಯನ್ನು ಮುನ್ನಡೆಸಲಿದ್ದಾರೆ. ಇತರ ಹಿಂದುಳಿದ ವರ್ಗದ (ಒಬಿಸಿ) ನಾಯಕರಾದ ಅಖಿಲೇಶ್ ಯಾದವ್ ಅವರು ಎಸ್‌ಪಿ ಮುಖವಾಗಿದ್ದು ಮಾಯಾವತಿ, ದಲಿತ, ಬಿಎಸ್‌ಪಿ ಮುಖವಾಗಿದ್ದಾರೆ.

ಕ್ಷತ್ರಿಯರು ಜನಸಂಖ್ಯೆಯ ಸುಮಾರುಶೇ 9 ರಷ್ಟಿದ್ದರೆ, ಒಬಿಸಿಗಳು ಶೇ 50ರಷ್ಟಿದ್ದಾರೆ. ದಲಿತರು ಮತ್ತು ಮುಸ್ಲಿಮರು ರಾಜ್ಯದ ಜನಸಂಖ್ಯೆಯ ಶೇ 20 ಮತ್ತು ಶೇ 19 ರಷ್ಟಿದ್ದಾರೆ.

2017 ರ ಚುನಾವಣೆಯಲ್ಲಿ ಎಸ್‌ಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಮೊದಲು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಎಂಬ ಬ್ರಾಹ್ಮಣ ಸಮುದಾಯದ ರಾಜಕಾರಣಿನ್ನು ಕಾಂಗ್ರೆಸ್ ಆರಂಭದಲ್ಲಿ ಪರಿಚಯಿಸಿತ್ತು. ಜಾತಿ ರಾಜಕಾರಣವನ್ನು ಕಾಂಗ್ರೆಸ್ ನಂಬುವುದಿಲ್ಲ ಎಂದು ಆರಾಧನಾ ಮಿಶ್ರಾ ಹೇಳುತ್ತಾರೆ. “ಇದು ನಮ್ಮ ಡಿಎನ್‌ಎಯಲ್ಲಿಲ್ಲ, ಆದರೆ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವ ರಾಜಕೀಯ ಪಕ್ಷವು ಬ್ರಾಹ್ಮಣ ಮುಖ್ಯಮಂತ್ರಿಗಳಿಗೆ ನೀಡಿದೆ ಎಂದು ತಿಳಿಯಲು ನಾವು ಬಯಸುತ್ತೇವೆ ಎಂದಿದ್ದಾರೆ ಅವರು.

ಬ್ರಾಹ್ಮಣರಾಗಿದ್ದ ದಿವಂಗತ ಎನ್‌ಡಿ ತಿವಾರಿ, 1989 ರಲ್ಲಿ ಉತ್ತರ ಪ್ರದೇಶದ ಕೊನೆಯ ಕಾಂಗ್ರೆಸ್ ಸರ್ಕಾರದ ಮುಖ್ಯಸ್ಥರಾಗಿದ್ದರು. ಬಿಎಸ್ಪಿ ಅಧಿಕಾರಕ್ಕೇರಿದರೆ ಭಗವಾನ್ ಪರಶುರಾಮ್ ಹೆಸರಿನಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸುವುದಾಗಿ ಮಾಯಾವತಿ ಕಳೆದ ವರ್ಷ ಘೋಷಿಸಿದ್ದರು.

ಕಳೆದ ವರ್ಷ ಪಕ್ಷಕ್ಕೆ ಅಮಾನತುಗೊಂಡಿದ್ದ ಏಳು ಬಿಎಸ್ಪಿ ಶಾಸಕರಲ್ಲಿ ಒಬ್ಬರಾದ ಅಸ್ಲಂ ರೈನಿ ಮಾಯಾವತಿಯ ತಂತ್ರವನ್ನು ಪ್ರಶ್ನಿಸಿದರು. “ಬ್ರಜೇಶ್ ಪಾಠಕ್ ಅವರಂತಹ ಬ್ರಾಹ್ಮಣ ನಾಯಕರು ಮಾಯಾವತಿಯೊಂದಿಗೆ ಇದ್ದ ಸಮಯವಿತ್ತು. ಈಗ, ಎಸ್‌ಪಿಯನ್ನು ಬೆಂಬಲಿಸುತ್ತಿರುವ ಬ್ರಾಹ್ಮಣರ ಬೆಂಬಲ ಅವರಿಗೆ ಇಲ್ಲ ”ಎಂದು ರೈನಿ ಹೇಳಿದ್ದಾರೆ.

ರಾಜ್ಯ ಸರ್ಕಾರದ ಒಂಬತ್ತು ಬ್ರಾಹ್ಮಣ ಮಂತ್ರಿಗಳಲ್ಲಿ ಒಬ್ಬರಾದ ಪಾಠಕ್, 2004 ರಲ್ಲಿ ಸ್ಥಾಪನೆಯಾದ ಬಿಎಸ್ಪಿಯ ಬ್ರಾಹ್ಮಣ ಸಭೆಯ ಮೊದಲ ಕನ್ವೀನರ್ ಆಗಿದ್ದರು.

2017 ರಲ್ಲಿ, 403 ಸದಸ್ಯರ ಸದನದಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಾಗ, 58 ಬ್ರಾಹ್ಮಣ ಶಾಸಕರು ಪಕ್ಷದ ಟಿಕೆಟ್‌ನಲ್ಲಿ ಗೆದ್ದರು. ವಿಧಾನಸಭೆಯಲ್ಲಿ ಎಸ್‌ಪಿ (47), ಬಿಎಸ್‌ಪಿ (19), ಮತ್ತು ಕಾಂಗ್ರೆಸ್ (ಏಳು) ಸ್ಥಾನ ಗೆದ್ದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳಿನಲ್ಲಿ ತಮ್ಮ ಸಚಿವರ ಪರಿಷತ್ತಿನಲ್ಲಿ ಉತ್ತರ ಪ್ರದೇಶದ ಅಜಯ್ ಕುಮಾರ್ ಮಿಶ್ರಾ ಎಂಬ ಬ್ರಾಹ್ಮಣರನ್ನು ಸೇರಿಸಿಕೊಂಡರು. ಆದಿತ್ಯನಾಥ ಕೂಡ ಬ್ರಾಹ್ಮಣ ಜಿತಿನ್ ಪ್ರಸಾದ ಅವರನ್ನು ತಮ್ಮ ಸಚಿವಾಲಯಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆಯಿದೆ.

ಆದಿತ್ಯನಾಥ ಅಧಿಕಾರವಧಿಯಲ್ಲಿ ಬ್ರಾಹ್ಮಣರ ಮೇಲಿನ ದೌರ್ಜನ್ಯವನ್ನು ಎತ್ತಿ ಹಿಡಿಯಲು 2020 ರಲ್ಲಿ ಪ್ರಸಾದ ಬ್ರಾಹ್ಮಣ ಚೆಟ್ನಾ ಪರಿಷತ್ ಅನ್ನು ಮಾಡಿತು. ಅಂದಿನಿಂದ ಅವರು ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.

ಬಿಜೆಪಿ ಶಾಸಕರಾದ ಉಮೇಶ್ ದ್ವಿವೇದಿ ಅವರು ಬ್ರಾಹ್ಮಣರಿಗಾಗಿ ಹಲವಾರು ಕ್ರಮಗಳನ್ನು ಪರಿಚಯಿಸಲು ಯೋಜಿಸಿದ್ದಾರೆ ಎಂದು ಹೇಳಿದರು. “ಬಡ ಬ್ರಾಹ್ಮಣ ಕುಟುಂಬಗಳ ಮಕ್ಕಳ ಶಿಕ್ಷಣ ಶಿಕ್ಷಣ, ಸಮುದಾಯದ ಸದಸ್ಯರು ಅವರ ವಿರುದ್ಧ ದಾಖಲಾದ ಪ್ರಕರಣಗಳ ವಿರುದ್ಧ ಹೋರಾಡಲು ಸಹಾಯ ಮಾಡಿ” ಎಂದು ಅವರು ಹೇಳಿದರು. ದ್ವಿವೇದಿ ಅವರ ಅಖಿಲ್ ಭಾರತೀಯ ಬ್ರಹ್ಮೋಥನ್ ಮಹಾಸಭಾ ಉಪಕ್ರಮಗಳನ್ನು ಬೆಂಬಲಿಸಲಿದ್ದಾರೆ.

ಬಿಜೆಪಿ ಸಂಸತ್ ಸದಸ್ಯ ಹರೀಶ್ ದ್ವಿವೇದಿ ಮಾಯಾವತಿ ಅವರು ಬ್ರಾಹ್ಮಣರನ್ನು ತಲುಪಲು ಮಾಡಿದ ನಿರರ್ಥಕ ಪ್ರಯತ್ನ ಎಂದು ಕರೆದರು. “ಬ್ರಾಹ್ಮಣರು ಬಿಜೆಪಿಯೊಂದಿಗಿದ್ದಾರೆ ಮತ್ತು 2022 (ಚುನಾವಣೆಗಳು) ಅದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ.” ಎಂದಿದ್ದಾರೆ.

ರಾಜಕೀಯ ವೀಕ್ಷಕ ಇರ್ಷಾದ್ ಇಲ್ಮಿ ಅವರು ಮೇಲ್ಜಾತಿಯವರಲ್ಲಿ, ಬ್ರಾಹ್ಮಣರು ಎಲ್ಲಾ ಪಕ್ಷಗಳಿಗೂ ಮೊದಲ ಆದ್ಯತೆಯಾಗಿ ಕಾಣುತ್ತಾರೆ. ಸಮುದಾಯವು ಸಾಕಷ್ಟು ಟಿಕೆಟ್ ಪಡೆದರೆ ನನಗೆ ಅಚ್ಚರಿಯೇನಾಗಲ್ಲ ಎಂದಿದ್ದಾರೆ.

ಇದನ್ನೂ ಓದಿ: Fact Check: ಅನಾಥ ಬಾಲಕಿಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಸಹಾಯ ಹಸ್ತ, ವೈರಲ್ ಚಿತ್ರದ ಸತ್ಯಾಸತ್ಯತೆ ಏನು?

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ