ಕರ್ನಾಟಕ ರಾಜಕಾರಣದಲ್ಲೂ ಪೆಗಾಸಸ್ ನೆರಳು; ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಕೆಡವಲು ಸಿದ್ದರಾಮಯ್ಯ, ಡಾ ಪರಮೇಶ್ವರ್ ಫೋನ್ ಕದ್ದಾಲಿಕೆ ಆರೋಪ

Pegasus Israel Software: ಚುನಾಯಿತ ಸರ್ಕಾರಗಳನ್ನು ಕೆಡವಲು ಗೂಡಚಾರಿಕೆ ಮಾಡಿರುವುದು ಈಗ ಬಟಾಬಯಲಾಗಿದೆ. ಸರ್ಕಾರದಿಂದ ಸಂವಿಧಾನದ ಕಗ್ಗೊಲೆ ನಡೆದಿದೆ. ಕರ್ನಾಟಕ, ಮಧ್ಯಪ್ರದೇಶ, ಗೋವಾ, ಅರುಣಾಚಲಪ್ರದೇಶ ರಾಜ್ಯಗಳಲ್ಲಿ ಪೆಗಾಸಸ್ ಸಾಫ್ಟ್​ವೇರ್ ಮೂಲಕ ಸರ್ಕಾರಗಳನ್ನು ಕೆಡವಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕರ್ನಾಟಕ ರಾಜಕಾರಣದಲ್ಲೂ ಪೆಗಾಸಸ್ ನೆರಳು; ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಕೆಡವಲು ಸಿದ್ದರಾಮಯ್ಯ, ಡಾ ಪರಮೇಶ್ವರ್ ಫೋನ್ ಕದ್ದಾಲಿಕೆ ಆರೋಪ
ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
TV9kannada Web Team

| Edited By: guruganesh bhat

Jul 20, 2021 | 7:00 PM

ದೆಹಲಿ: ಇಸ್ರೇಲ್​ ಗೂಡಾಚಾರಿಕೆ ಸಾಫ್ಟ್​​​ವೇರ್ ಪೆಗಾಸಸ್ ಮೂಲಕ ನಡೆಸಿದ ಕದ್ದಾಲಿಕೆ ಆರೋಪಗಳು ಕರ್ನಾಟಕ ರಾಜಕಾರಣದ ಅಂಗಳಕ್ಕೂ ಧುಮುಕಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಕೆಡವಲು ಪೆಗಾಸಸ್ ಗೂಡಚರ್ಯೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಇಸ್ರೇಲಿ ಗೂಡಾಚಾರಿಕೆ ಸಾಫ್ಟವೇರ್ (Pegasus Israel Software) ಪೆಗಾಸಸ್ ಮೂಲಕ ಅಂದಿನ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರ ಫೋನ್ ಕದ್ದಾಲಿಕೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿ ಇಂತಹ ನೀಚ ಕೃತ್ಯಕ್ಕೆ ಇಳಿಯುವ ಮೂಲಕ ಅದೊಂದು ರಾಜಕೀಯ ಪಕ್ಷವಾಗಿರದೇ, ವಿಧ್ವಂಸಕ ಕೃತ್ಯವೆಸಗುವ ಸಂಘಟನೆ ಎಂದು ಸಾಬೀತು ಮಾಡಿದೆ ಎಂದು ಕಾಂಗ್ರೆಸ್ ಮಹತ್ತರ ಆರೋಪಗೈದಿದೆ.

ಈ ಕುರಿತು ಕೆಲವು ಆಂಗ್ಲ ಮಾಧ್ಯಮ ಸಂಸ್ಥೆಗಳು ಮಾಡಿರುವ ವರದಿಯನ್ನು ಆಧಾರವಾಗಿಟ್ಟುಕೊಂಡು ಆರೋಪ ಮಾಡಿರುವ ಕಾಂಗ್ರೆಸ್, 2019ರಲ್ಲಿ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವುವಲ್ಲಿ ಪೆಗಾಸಸ್ ತಂತ್ರಾಂಶದ ಬಳಕೆ ಮಾಡಿರುವ ಸಾಧ್ಯತೆ ಇದೆ ಎಂದು ವರದಿ ಮಾಡಲಾಗಿದೆ. ಈ ಕುರಿತು ಕಾಂಗ್ರೆಸ್ ಅತ್ಯಂತ ಗಂಭೀರ ಆರೋಪವನ್ನು ಬಿಜೆಪಿ ಮೇಲೆ ಮಾಡಿದೆ.

ಚುನಾಯಿತ ಸರ್ಕಾರಗಳನ್ನು ಕೆಡವಲು ಗೂಡಚಾರಿಕೆ ಮಾಡಿರುವುದು ಈಗ ಬಟಾಬಯಲಾಗಿದೆ. ಪ್ರಧಾನಿ ಮೋದಿ,  ಗೃಹ ಸಚಿವ ಅಮಿತ್​ ಶಾ ನೇತೃತ್ವದಲ್ಲೇ ಈ ಗೂಡಚಾರಿಕೆ ನಡೆದಿದೆ. ಪ್ರಧಾನಿ ಮೋದಿ ಸರ್ಕಾರ ದೇಶದ್ರೋಹದ ಕೃತ್ಯವೆಸಗಿದೆ. ಸರ್ಕಾರದಿಂದ ಸಂವಿಧಾನದ ಕಗ್ಗೊಲೆ ನಡೆದಿದೆ. ಕರ್ನಾಟಕ, ಮಧ್ಯಪ್ರದೇಶ, ಗೋವಾ, ಅರುಣಾಚಲಪ್ರದೇಶ ರಾಜ್ಯಗಳಲ್ಲಿ ಪೆಗಾಸಸ್ ಸಾಫ್ಟ್​ವೇರ್ ಮೂಲಕ ಸರ್ಕಾರಗಳನ್ನು ಕೆಡವಿದ್ದಾರೆ ಎಂದು ಆರೋಪಿಸಿದರು.

ದೆಹಲಿಯ ಎಐಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅಧೀರ್ ರಂಜನ್ ಚೌಧರಿ, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್​ ಸುರ್ಜೇವಾಲ, ಕರ್ನಾಟಕದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ​ ಸುದ್ದಿಗೋಷ್ಠಿ ನಡೆಸಿ ಆರೋಪ ಹೊರಿಸಿದರು.

ಇದನ್ನೂ ಓದಿ: 

ಸಿಎಂ ಯಡಿಯೂರಪ್ಪ ಪರ ಪೇಜಾವರ ಶ್ರೀಗಳ ಬ್ಯಾಟಿಂಗ್; ಯಡಿಯೂರಪ್ಪರ ತಂಟೆಗೆ ಬರದಂತೆ ವಿವಿಧ ಮಠಾಧೀಶರಿಂದಲೂ ಎಚ್ಚರಿಕೆ

Parliament Monsoon Session 2021: ಮುಂಗಾರು ಅಧಿವೇಶನದಲ್ಲಿ ಪೆಗಾಸಸ್; ಬಗ್ಗೆ ವಿಪಕ್ಷಗಳ ಗದ್ದಲ, ಉಭಯ ಸದನಗಳ ಕಲಾಪ ಮುಂದೂಡಿಕೆ

(Congress accused Pegasus is also a shadow of Karnataka politics Siddaramaiah Dr Parameshwar alleges phone tampering of Congress JDS 2019 alliance GGD)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada