Fact Check: ಅನಾಥ ಬಾಲಕಿಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಸಹಾಯ ಹಸ್ತ, ವೈರಲ್ ಚಿತ್ರದ ಸತ್ಯಾಸತ್ಯತೆ ಏನು?

Uttar Pradesh CM Yogi Adityanath: ವೈರಲ್ ಚಿತ್ರದ ಒಕ್ಕಣೆ ಹೀಗಿದೆ 'ನಿನ್ನೆ ಕಾಶಿಗೆ ಭೇಟಿ ನೀಡಿದಾಗ ಯೋಗಿಯವರು ಮಗು ಅಳುತ್ತಿರುವುದನ್ನು ನೋಡಿದ್ದಾರೆ. ಅವರು ಮಗುವಿಗೆ ಬಳಿಗೆ ಹೋಗಿ ಕಾರಣ ಕೇಳಿದಾಗ ಪೋಷಕರು ನಿಧನರಾಗಿದ್ದಾರೆ ಎಂದು ಮಗು ಹೇಳಿತ್ತು.

Fact Check: ಅನಾಥ ಬಾಲಕಿಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಸಹಾಯ ಹಸ್ತ, ವೈರಲ್ ಚಿತ್ರದ ಸತ್ಯಾಸತ್ಯತೆ ಏನು?
ಮಗುವಿನ ಜತೆ ಯೋಗಿ ಆದಿತ್ಯನಾಥ (ವೈರಲ್ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 12, 2021 | 5:33 PM

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಗುವಿನೊಂದಿಗೆ ಸಂವಹನ ನಡೆಸುತ್ತಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅನಾಥರಾಗಿದ್ದ ಮಗುವಿಗೆ ಬೆಂಬಲ ನೀಡುವುದಾಗಿ ಯುಪಿ ಸಿಎಂ ಭರವಸೆ ನೀಡಿದ್ದಾರೆ ಎಂಬ ಶೀರ್ಷಿಕೆ ಈ ಚಿತ್ರಕ್ಕೆ ನೀಡಲಾಗಿದೆ. ಆದರೆ ಯೋಗಿ ಆದಿತ್ಯನಾಥ ಅವರು 2019 ರಲ್ಲಿ ಗೋರಖ್‌ಪುರದಲ್ಲಿ ವಾಂಟಂಗಿಯಾ ಸಮುದಾಯದ ಸದಸ್ಯರೊಂದಿಗೆ ದೀಪಾವಳಿಯನ್ನು ಆಚರಿಸಿದಾಗ ತೆಗೆದ ಚಿತ್ರ ಇದಾಗಿದೆ ಎಂದು ಬೂಮ್ ಲೈವ್ ಫ್ಯಾಕ್ಟ್ ಚೆಕ್ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡುವ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಜುಲೈ 5 ರಂದು ನಗರಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಯೋಜನೆಗಳನ್ನು ಪರಿಶೀಲಿಸಿದ್ದರು.ಇದರ ಬೆನ್ನಲ್ಲೇ ಈ ಚಿತ್ರ ವೈರಲ್ ಆಗಿದೆ. ವೈರಲ್ ಚಿತ್ರದ ಒಕ್ಕಣೆ ಹೀಗಿದೆ ‘ನಿನ್ನೆ ಕಾಶಿಗೆ ಭೇಟಿ ನೀಡಿದಾಗ ಯೋಗಿಯವರು ಮಗು ಅಳುತ್ತಿರುವುದನ್ನು ನೋಡಿದ್ದಾರೆ. ಅವರು ಮಗುವಿಗೆ ಬಳಿಗೆ ಹೋಗಿ ಕಾರಣ ಕೇಳಿದಾಗ ಪೋಷಕರು ನಿಧನರಾಗಿದ್ದಾರೆ ಎಂದು ಮಗು ಹೇಳಿತ್ತು . ನಾನು ಮಾಮಾ ಜತೆ ವಾಸಿಸುತ್ತಿದ್ದೆ, ನಿನ್ನೆ ಅವರು ಕೂಡ ತೀರಿ ಹೋದರು ಎಂದು ಮಗು ಹೇಳಿದಾಗ ಯೋಗಿ ಬೇಟಾ ಇವತ್ತಿನಿಂದ ನಾನೇ ನಿನ್ನ ಮಾಮಾ ಎಂದರು. ಆಮೇಲೆ ಮಗು ಕೆಲಸ ಪಡೆಯುವವರೆಗೂ ಆಕೆಯ ಆಹಾರ ಮತ್ತು ಶಿಕ್ಷಣದ ಖರ್ಚನ್ನು ಸಿಎಂ ನಿಧಿಯಿಂದ ನೋಡಿಕೊಳ್ಳುವಂತೆ ಜಿಲ್ಲಾ ಮೆಜಿಸ್ಟ್ರೇಟ್ ಗೆ ಆದೇಶಿಸಿದರು. ಫೇಸ್​ಬುಕ್​ನಲ್ಲಿಯೂ ಈ ಫೋಟೊ ವೈರಲ್ ಆಗಿದೆ.

ಫ್ಯಾಕ್ಟ್ ಚೆಕ್ ಈ ವೈರಲ್ ಇಮೇಜ್​ನ್ನು ಗೂಗಲ್ ಇಮೇಜ್​ನಲ್ಲಿ ರಿವರ್ಸ್ ಸರ್ಚ್ ಮಾಡಿದಾಗ ಲೈವ್ ಹಿಂದೂಸ್ತಾನ್ ನಲ್ಲಿ 2019 ಅಕ್ಟೋಬರ್27ರಂದು ಪ್ರಕಟವಾದ ವರದಿಯಲ್ಲಿ ಈ ಚಿತ್ರ ಬಳಕೆ ಆಗಿದೆ. ಉತ್ತರಪ್ರದೇಶದ ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ವಂಟಂಗಿಯಾ ಸಮುದಾಯದ ಸದಸ್ಯರೊಂದಿಗೆ ದೀಪಾವಳಿ ಆಚರಿಸಲು ಮುಖ್ಯಮಂತ್ರಿ ಗೋರಖ್‌ಪುರಕ್ಕೆ ಆಗಮಿಸಿದ್ದರು ಎಂದು ಲೈವ್ ಹಿಂದೂಸ್ತಾನ್ ವರದಿ ತಿಳಿಸಿದೆ.

ಯೋಗಿ ಆದಿತ್ಯನಾಥ ಅನೇಕ ವರ್ಷಗಳಿಂದ ವಂಟಂಗಿಯಾಗಳೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದಾರೆ ಎಂದು ಉಲ್ಲೇಖಿಸಿರುವ ಹಲವಾರು ಇತರ ವರದಿಗಳನ್ನು ಬೂಮ್ ಕಂಡುಹಿಡಿದಿದೆ. 2019 ರಲ್ಲಿ ಪಂಜಾಬ್ ಕೇಸರಿಯಲ್ಲಿ ಪ್ರಕಟವಾದ ವರದಿಯಲ್ಲಿಯೂ ಇದೇ ಚಿತ್ರವಿದೆ.

ವೈರಲ್ ಚಿತ್ರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿಯೊಂದಿಗೆ ಕಂಡ ಯಾರು ಎಂಬುದು ಪತ್ತೆಯಾಗಿಲ್ಲ.ಆದರೆ ಈ ಫೋಟೋವನ್ನು ಒಳಗೊಂಡಿರುವ 2019 ರ ಯಾವುದೇ ಸುದ್ದಿ ವರದಿಗಳಲ್ಲಿ ಮಗು ಅನಾಥ ಅಥವಾ ಮುಖ್ಯಮಂತ್ರಿ ಮಗುವಿಗೆ ಆರ್ಥಿಕವಾಗಿ ಸಹಾಯ ಮಾಡುವುದಾಗಿ ಹೇಳಿರುವ ಬಗ್ಗೆ ಯಾವುದೇ ವಿವರಗಳಿಲ್ಲ.

ಇದನ್ನೂ ಓದಿ: Fact Check: ಟೋಕಿಯೊ ಒಲಿಂಪಿಕ್ ಸ್ವಯಂಸೇವಕರಿಗೆ ನೀಡುವ ಪದಕದಲ್ಲಿ ದೇವನಾಗರಿ ಲಿಪಿಯಲ್ಲಿ ಸ್ವಯಂಸೇವಕ್ ಎಂದು ಕೆತ್ತಲಾಗಿದೆಯೇ?

(Fact Check Uttar Pradesh CM Yogi Adityanath seen interacting with a child is viral With False Narrative)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್