Fact Check: ಟೋಕಿಯೊ ಒಲಿಂಪಿಕ್ ಸ್ವಯಂಸೇವಕರಿಗೆ ನೀಡುವ ಪದಕದಲ್ಲಿ ದೇವನಾಗರಿ ಲಿಪಿಯಲ್ಲಿ ‘ಸ್ವಯಂಸೇವಕ್’ ಎಂದು ಕೆತ್ತಲಾಗಿದೆಯೇ?

Medal inscribed with Swayamsevak: ಪದಕದಲ್ಲಿ ದೇವನಾಗರಿ ಲಿಪಿಯಲ್ಲಿ “स्वंयसेवक” (ಸ್ವಯಂ ಸೇವಕ) ಸೇರಿದಂತೆ 'ಸ್ವಯಂಸೇವಕ' ಎಂಬ ಪದವನ್ನು ಹಲವಾರು ಭಾಷೆಗಳಲ್ಲಿ ಕೆತ್ತಲಾಗಿದೆ. ಅಂದಹಾಗೆ ಈ ಪದಕ ಯಾವುದು? ಇಲ್ಲಿದೆ ಫ್ಯಾಕ್ಟ್​​ಚೆಕ್.

Fact Check: ಟೋಕಿಯೊ ಒಲಿಂಪಿಕ್ ಸ್ವಯಂಸೇವಕರಿಗೆ ನೀಡುವ ಪದಕದಲ್ಲಿ ದೇವನಾಗರಿ ಲಿಪಿಯಲ್ಲಿ 'ಸ್ವಯಂಸೇವಕ್' ಎಂದು ಕೆತ್ತಲಾಗಿದೆಯೇ?
ಫ್ಯಾಕ್ಟ್​​ಚೆಕ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 30, 2021 | 6:48 PM

ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವಯಂಸೇವಕರಿಗೆ ನೀಡುವ ಪದಕ (medal) ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಪದಕದ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ.ಈ ಪದಕದಲ್ಲಿ ದೇವನಾಗರಿ ಲಿಪಿಯಲ್ಲಿ “स्वंयसेवक” (ಸ್ವಯಂ ಸೇವಕ) ಸೇರಿದಂತೆ ‘ಸ್ವಯಂಸೇವಕ’ ಎಂಬ ಪದವನ್ನು ಹಲವಾರು ಭಾಷೆಗಳಲ್ಲಿ ಕೆತ್ತಲಾಗಿದೆ. ಬಿಜೆಪಿ ಸದಸ್ಯೆ ಸುರೇಂದ್ರ ಪೂನಿಯಾ ಈ ಬಗ್ಗೆ ಟ್ವೀಟ್ ಮಾಡಿದ್ದು ಹಲವಾರು ಮಂದಿ ಇದನ್ನು ರೀಟ್ವೀಟ್ ಮಾಡಿದ್ದಾರೆ.

ಇದೇ ಫೋಟೊವನ್ನು ಹಲವಾರು ನೆಟ್ಟಿಗರು ಟ್ವಿಟರ್ ಮತ್ತು ಫೇಸ್​​ಬುಕ್​ನಲ್ಲಿ ಶೇರ್ ಮಾಡಿದ್ದಾರೆ.

ಫ್ಯಾಕ್ಟ್​​ಚೆಕ್

ಈ ಪದಕದ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್​​ಚೆಕ್ ಮಾಡಿದ್ದು ಈ ಕೆಳಗಿನ ವಿಷಯಗಳನ್ನು ಕಂಡುಕೊಂಡಿದೆ. ಒಲಿಂಪಿಕ್ಸ್ ಅಧಿಕೃತ ವೆಬ್ ಸೈಟ್ ನ FAQ ಪುಟದಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ವಯಂಸೇವಕರಿಗೆ ಹೇಗೆ ಪ್ರಶಸ್ತಿ ನೀಡಲಾಗುತ್ತದೆ ಮತ್ತು ಕೆಲವು ವಿಷಯಗಳನ್ನು ಹೇಗೆ ನೀಡಲಾಗುತ್ತದೆ ಎಂಬುದರ ಬಗ್ಗೆ ವಿವರಿಸಲಾಗಿದೆ.

1. 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವಯಂಸೇವಕರಿಗೆ ಸ್ಥಳಕ್ಕೆ ದಿನನಿತ್ಯದ ಪ್ರಯಾಣಕ್ಕಾಗಿ 1000 / – ಯೆನ್ ಮೌಲ್ಯದ ಪೂರ್ವ-ಪಾವತಿಸಿದ ಟ್ರಾವೆಲ್ ಕಾರ್ಡ್ ನೀಡಲಾಗುವುದು.

2. ಎಲ್ಲಾ ಸ್ವಯಂಸೇವಕರು ತಮಗೆ ಅಗತ್ಯವಿರುವ ಯಾವುದೇ ವಸತಿ ಸೌಕರ್ಯಗಳನ್ನು ವ್ಯವಸ್ಥೆಗೊಳಿಸಲು ಮತ್ತು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

3. ಸ್ವಯಂಸೇವಕರ ಚಟುವಟಿಕೆ ಪೂರ್ಣಗೊಂಡ ನಂತರ ಒಲಿಂಪಿಕ್ಸ್ ಸಂಘವು ಸ್ವಯಂಸೇವಕರಿಗೆ ಯಾವುದೇ ದಾಖಲೆಗಳು ಅಥವಾ ಪ್ರಮಾಣಪತ್ರಗಳನ್ನು ನೀಡುವುದಿಲ್ಲ.

4. ಒಲಿಂಪಿಕ್ಸ್ ವೆಬ್‌ಸೈಟ್ ಸ್ವಯಂಸೇವಕರಿಗೆ ಒದಗಿಸುವ ವಸ್ತುಗಳ ಪಟ್ಟಿಯನ್ನು ಸಹ ಹೊಂದಿದೆ, ಈ ಪಟ್ಟಿಯಲ್ಲಿ ಯಾವುದೇ ಪದಕವನ್ನು ನಮೂದಿಸಿಲ್ಲ.

ಒಲಿಂಪಿಕ್ FAQ

2019 ರಲ್ಲಿ ಪ್ರಕಟವಾದ ಅಸೋಸಿಯೇಟೆಡ್ ಪ್ರೆಸ್‌ನ ಲೇಖನವೊಂದರ ಪ್ರಕಾರ, ಒಲಿಂಪಿಕ್ಸ್ ಸ್ವಯಂಸೇವಕರಿಗೆ ಅವರ ಕೆಲಸಕ್ಕೆ ಸಂಬಳವಿಲ್ಲ. ಅವರು ತಮ್ಮ ಸ್ವಂತ ವಸತಿ ಮತ್ತು ಆತಿಥೇಯ ನಗರಕ್ಕೆ ಹೋಗುವ ಪ್ರಯಾಣದ ವೆಚ್ಚವನ್ನ ಪಾವತಿಸುತ್ತಾರೆ. ಅವರು ಕೆಲಸ ಮಾಡುವ ದಿನಗಳಲ್ಲಿ ಊಟ ಕೆಲವು ತರಬೇತಿ ಮತ್ತು ಸಮವಸ್ತ್ರವನ್ನು ಪಡೆಯುತ್ತಾರೆ . ಟೋಕಿಯ ನಗರದ ವಿಶಾಲವಾದ ರೈಲು ವ್ಯವಸ್ಥೆಯಲ್ಲಿ ಪ್ರಯಾಣಿಸಲು ಅವರು ಪ್ರತಿದಿನ 1,000 ಯೆನ್‌ಗಳವರೆಗೆ ಪಡೆಯುತ್ತಾರೆ. ಟೋಕಿಯೊ ಸಂಘಟಕರು ಕೆಲವು ವಿಮೆಯನ್ನು ಒದಗಿಸುತ್ತಾರೆ. ಒಲಿಂಪಿಕ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಸುದ್ದಿ ಪ್ರಕಟಣೆಗಳಲ್ಲಿ ಎಲ್ಲಿಯೂ ಸ್ವಯಂಸೇವಕ ಪದಕದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

AP News

ಅಸೋಸಿಯೇಟೆಡ್ ಪ್ರೆಸ್​​ನಲ್ಲಿ ಪ್ರಕಟವಾದ ಸುದ್ದಿ

ಆಲ್ಟ್ ನ್ಯೂಸ್ ಚಿತ್ರವನ್ನು ಕತ್ತರಿಸಿ, ಪದಕದ ವೃತ್ತಾಕಾರದ ಭಾಗವನ್ನು ಮಾತ್ರ ಗೂಗಲ್ ರಿವರ್ಸ್ ಸರ್ಚ್ ಮಾಡಿದೆ. ‘Tokyo2020’ ಎಂಬ ಕೀವರ್ಡ್ ಕೊಟ್ಟು ಸರ್ಚ್ ಮಾಡಿದಾಗ ಈ ಚಿತ್ರ ಅಮೇರಿಕನ್ ಇ-ಕಾಮರ್ಸ್ ವೆಬ್‌ಸೈಟ್ ಇ-ಬೇನಲ್ಲಿ ಸಿಕ್ಕಿದೆ. ಅಲ್ಲಿ ಅದನ್ನು “ಪಿನ್” ಎಂದು ಗುರುತಿಸಲಾಗಿದೆ. ಇದನ್ನು ಅಮೆರಿಕನ್ ಡಾಲರ್ 1.50 ಕ್ಕೆ ಮಾರಾಟ ಮಾಡಲಾಗುತ್ತಿದೆ, ಇದು ಅಂದಾಜು 111 ರೂ.

E Bay Pin

E bay ನಲ್ಲಿ ಪಿನ್

ಪಿನ್‌ನ ಚಿತ್ರವನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಅಧ್ಯಕ್ಷ ಡಾ.ನಾರಿಂದರ್ ಧ್ರುವ್ ಬಾತ್ರಾ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡು ನಂತರ ಅಳಿಸಿದ್ದಾರೆಈ ಫೋಟೊದ ಮೂಲದ ಬಗ್ಗೆ ತನಗೆ ತಿಳಿದಿಲ್ಲ ಆದರೆ ಅದನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ ಏಕೆಂದರೆ ಅದನ್ನು ನನಗೆ ಫಾರ್ವರ್ಡ್ ಮಾಡಿದ ವ್ಯಕ್ತಿ ಜವಾಬ್ದಾರಿಯುತ ವ್ಯಕ್ತಿ ಎಂದು ಡಾ ಬಾತ್ರಾ ಹೇಳಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಟೋಕಿಯೊ ಒಲಿಂಪಿಕ್ ಪದಕದಲ್ಲಿ ‘ಸ್ವಯಂ ಸೇವಕ’ ಎಂದು ಕೆತ್ತಿರುವ ಪದಕವನ್ನು ಸ್ವಯಂಸೇವಕರಿಗೆ ನೀಡಲಾಗುತ್ತದೆ. ಭಾರತಕ್ಕೆ ‘ಹೆಮ್ಮೆಯ’ ಕ್ಷಣವೆಂದು ಹಲವಾರು ನೆಟ್ಟಿಗರು ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪಿನ್ ಹಂಚಿಕೊಂಡಿದ್ದಾರೆ. ಗಮನಿಸಿ ಬೇಕಾದ ಸಂಗತಿ ಏನೆಂದರೆ ಒಲಿಂಪಿಕ್ ಅಸೋಸಿಯೇಷನ್ ಸ್ವಯಂಸೇವಕರಿಗೆ ಪದಕಗಳನ್ನು ನೀಡುವುದಿಲ್ಲ, ವಿಜೇತರಿಗೆ ಮಾತ್ರ ಪದಕಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: Fact Check: ನೀತಾ ಅಂಬಾನಿಗೆ ನಮಸ್ಕಾರ ಮಾಡುತ್ತಿರುವ ನರೇಂದ್ರ ಮೋದಿ, ಸಾಮಾಜಿಕ ಮಾಧ್ಯಮಗಳಲ್ಲಿ ಫೇಕ್ ಫೋಟೊ ವೈರಲ್

(Fact check photo of a medal has inscribed Swayamsevak in the Devanagari script to be given to Tokyo Olympic volunteers)

Published On - 6:47 pm, Wed, 30 June 21