ಸಿಎಂ ಕುರ್ಚಿಗಾಗಿ ಗಣಿ ಸಚಿವ ಮುರುಗೇಶ್ ನಿರಾಣಿಯಿಂದ ದೊಡ್ಡ ಲಾಬಿ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ
Karnataka Politics: ಸದ್ಯದ ರಾಜಕಾರಣ ಕಲುಷಿತವಾಗಿದೆ. ಈ ಹಿಂದೆ ಸಿಡಿ ಕೋಟಾ ಎಂದು ಹೇಳಿದ್ದೆ, ಸಿಡಿ ಇರೋದು ಸತ್ಯವಿದೆ. ಇಂಥ ಸಿಡಿಗಳನ್ನು ಅನೇಕ ಮಠಾಧೀಶರು ನೋಡಲಿಲ್ಲ. ಅನೇಕ ಮಠಾಧೀಶರು ಸಂತೋಷದಿಂದ ನೋಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ ನಡೆಸಿದ್ದಾರೆ.
ವಿಜಯಪುರ: ಸಿಎಂ ಕುರ್ಚಿಗಾಗಿ ಗಣಿ ಸಚಿವ ಮುರುಗೇಶ್ (Murugesh Nirani) ನಿರಾಣಿ ದೊಡ್ಡ ಲಾಬಿ ಮಾಡುತ್ತಿದ್ದಾರೆ. ಅವರ ಬಳಿ ಸಿಕ್ಕಾಪಟ್ಟೆ ಹಣವಿದೆ. ಎಲ್ಲರನ್ನೂ ಖರೀದಿಸುತ್ತೇನೆ, ಕೇಳಿದ್ದೆಲ್ಲವನ್ನೂ ಕೊಡುತ್ತೇನೆ ಎಂದು ಅವರು ಆಮಿಷ ಒಡ್ಡುತ್ತಿದ್ದಾರೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಯತ್ನಾಳ್ (Basanagouda Patil Yatnal) ಗಂಭೀರ ಆರೋಪ ಮಾಡಿದ್ದಾರೆ.
ಈಗ ಯುವರಾಜ ಸ್ವಾಮಿ ಎಂಬ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ. ಅದೇ ಯುವರಾಜನ ಮೂಲಕ ಸಿನಿಮಾ ತಾರೆಯರನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದರು. ವಿಜಯಪುರದಲ್ಲಿ ಒಬ್ಬಳ ಜತೆ ಸಚಿವ ಮುರುಗೇಶ್ ನಿರಾಣಿ ಸಂಪರ್ಕ ಇಟ್ಟುಕೊಂಡಿದ್ದರು. ಅವಳ ಜತೆ ಗಂಟೆಗಟ್ಟಲೆ ಸಚಿವ ನಿರಾಣಿ ಮಾತನಾಡುತ್ತಿದ್ದರು. ಮೊಬೈಲ್ ಕಾಲ್ ಡಿಟೇಲ್ಸ್ ಬಗ್ಗೆ ತನಿಖೆಯಾದರೆ ಸತ್ಯಬಯಲಾಗಲಿದೆ ಎಂದ ಶಾಸಕ ಯತ್ನಾಳ್, ಪರೋಕ್ಷವಾಗಿ ಈ ಹಿಂದೆ ಕೊಲೆಯಾದ ‘ಕೈ’ ನಾಯಕಿ ರೇಷ್ಮಾ ಪಡೇಕನೂರು ಅವರ ಹೆಸರನ್ನು ಸೂಚಿಸಿದರು.
ಆಲಂ ಪಾಷಾ ಮಾಡಿರುವ ಆರೋಪದ ಕುರಿತು ತನಿಖೆಯಾಗಲಿ. ತನಿಖೆ ಮೂಲಕ ಗಣಿ ಸಚಿವ ಮುರುಗೇಶ್ ನಿರಾಣಿ ಪ್ರಾಮಾಣಿಕ, ಕ್ರಿಯಾಶೀಲ ಎಂಬುದರ ಸತ್ಯ ಗೊತ್ತಾಗಲಿದೆ. ಸದ್ಯದ ರಾಜಕಾರಣ ಕಲುಷಿತವಾಗಿದೆ. ಈ ಹಿಂದೆ ಸಿಡಿ ಕೋಟಾ ಎಂದು ಹೇಳಿದ್ದೆ, ಸಿಡಿ ಇರೋದು ಸತ್ಯವಿದೆ. ಇಂಥ ಸಿಡಿಗಳನ್ನು ಅನೇಕ ಮಠಾಧೀಶರು ನೋಡಲಿಲ್ಲ. ಅನೇಕ ಮಠಾಧೀಶರು ಸಂತೋಷದಿಂದ ನೋಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ ನಡೆಸಿದ್ದಾರೆ.
ಸಿಎಂ ಯಡಿಯೂರಪ್ಪರನ್ನು ಬೆಂಬಲಿಸಿದವರ ವೀರಶೈವ ಮಹಾಸಭಾ, ಕಾಂಗ್ರೆಸ್ ನಾಯಕರ ವಿರುದ್ಧ ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ನ ಲಿಂಗಾಯತ ನಾಯಕರು ದಿವಾಳಿಯಾಗಿದ್ದಾರೆ. ಕಾಂಗ್ರೆಸ್ನಲ್ಲಿರುವ ಲಿಂಗಾಯತ ನಾಯಕರಿಗೆ ಕಿಮ್ಮತ್ತೇ ಇಲ್ಲ. ಸಚಿವರಾಗಬೇಕಾದರೆ ಸೋನಿಯಾ, ರಾಹುಲ್ ಕಾಲಿಡೀಬೇಕು. ತಾಕತ್ತಿದ್ದರೆ ಕಾಂಗ್ರೆಸ್ನಲ್ಲಿ ಲಿಂಗಾಯತ ಸಮುದಾಯ ನಾಯಕರ ಹೆಸರು ಘೋಷಿಸಲಿ. ಬಿಎಸ್ವೈ ಮೇಲೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪಗೆ ಏಕೆ ಪ್ರೀತಿ? ಬಿಎಸ್ವೈ ಬದಲು ಮತ್ತೊಬ್ಬ ಲಿಂಗಾಯತ ನಾಯಕ ಸಿಎಂ ಮಾಡಲಿ ಎನ್ನಬಹುದಿತ್ತು. ವೀರಶೈವ ಮಹಾಸಭಾದಿಂದ ಬಿಜೆಪಿ ಹಾಳಾಗ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಎಂ ಯಡಿಯೂರಪ್ಪ ಪರ ಪೇಜಾವರ ಶ್ರೀಗಳ ಬ್ಯಾಟಿಂಗ್; ಯಡಿಯೂರಪ್ಪರ ತಂಟೆಗೆ ಬರದಂತೆ ವಿವಿಧ ಮಠಾಧೀಶರಿಂದಲೂ ಎಚ್ಚರಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ರಾಜ್ಯದ ವಿವಿಧ ಮಠಾಧೀಶರು ಬ್ಯಾಟಿಂಗ್ ಮುಂದುವರೆಸಿದ್ದಾರೆ. ಸಿಎಂ ಸ್ಥಾನದಿಂದ ಯಡಿಯೂರಪ್ಪ (CM BS Yediyurappa) ಅವರನ್ನು ತೆರವುಗೊಳಿಸುತ್ತಾರೆ ಎಂದ ಮಾತು ಬಲಗೊಳ್ಳೊತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ‘ರಾಜ್ಯದ ಈ ಪರಿಸ್ಥಿತಿಯಲ್ಲಿ (Karnataka Politics) ಸಿಎಂ ಬದಲಾವಣೆ ಮಾಡಬಾರದು. ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಪರಿಸ್ಥಿತಿ ಅನುಕೂಲಕರವಾಗಿಲ್ಲ. ನಾಯಕತ್ವ ಬದಲಾವಣೆ ಈಗ ಸೂಕ್ತವಲ್ಲ. ಇಷ್ಟು ಸಮಯ ಯಡಿಯೂರಪ್ಪ ಚೆನ್ನಾಗಿ ನಾಯಕತ್ವ ಮಾಡಿದ್ದಾರೆ. ಕೊವಿಡ್ ಸಂದರ್ಭವನ್ನು ಚೆನ್ನಾಗಿ ನಿಭಾಯಿಸಿದ್ದಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪಗೆ ಬೆಂಬಲ ವ್ಯಕ್ತಪಡಿಸಿರುವ ವಿವಿಧ ಜಿಲ್ಲೆಗಳ ಮಠಾಧೀಶರು ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಭೇಟಿ ಬಳಿಕ ಪ್ರತಿಕ್ರಿಯಿಸಿರುವ ದಿಂಗಾಲೇಶ್ವರ ಸ್ವಾಮೀಜಿ, ಸಿಎಂ ಯಡಿಯೂರಪ್ಪ ನನ್ನ ಕೈಯಲ್ಲಿ ಏನೂ ಇಲ್ಲ ಎಲ್ಲ ಹೈಕಮಾಂಡ್ ನಿರ್ಧಾರ ಎಂದರು. ಒಂದೊಮ್ಮೆ ಯಡಿಯೂರಪ್ಪರನ್ನು ಬದಲಿಸಿದರೆ ಬಿಜೆಪಿ ಸರ್ವನಾಶವಾಗಲಿದೆ. ಯಾವುದೇ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಬದಲಿಸಿದರೆ ಬಿಜೆಪಿ ನಾಯಕರು ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ನಮ್ಮ ಎಲ್ಲರ ಅಭಿಪ್ರಾಯವನ್ನು ಒಟ್ಟಿಗೆ ಹೇಳುತ್ತಿದ್ದೇವೆ. ಉಳಿದ ಅವಧಿ ಯಡಿಯೂರಪ್ಪರನ್ನು ಮುಂದುವರಿಸಬೇಕು ಬಿಜೆಪಿ ಹೈಕಮಾಂಡ್ಗೆ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು. ಯಡಿಯೂರಪ್ಪ ಕೇವಲ ಲಿಂಗಾಯತ ನಾಯಕರಲ್ಲ. ಅವರು ಅಗ್ರಗಣ್ಯ ನಾಯಕ. 2-3 ದಿನದಲ್ಲಿ 500ಕ್ಕೂ ಹೆಚ್ಚು ಮಠಾಧೀಶರು ಸೇರುತ್ತೇವೆ. ಬೆಂಗಳೂರಿನಲ್ಲೇ ಸಭೆ ಸೇರಿ ಮಠಾಧೀಶರು ನಿರ್ಣಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಈ ನಾಡು ಕಂಡಂತಹ ಶ್ರೇಷ್ಠ ನಾಯಕ; ಸಿಎಂ ಬಿ.ಎಸ್.ಯಡಿಯೂರಪ್ಪ ಪರ ವಿವಿಧ ಮಠಾಧೀಶರ ಬ್ಯಾಟಿಂಗ್
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನು ಬದಲಿಸಿದರೆ ಬಿಜೆಪಿಗೆ ದೊಡ್ಡ ಕಳಂಕ ಅಂಟಿಕೊಳ್ಳಲಿದೆ: ರಂಭಾಪುರಿ ಶ್ರೀ
(MLA Basanagouda Patil Yatnal accused Minister Murugesh Nirani make lobby for CM chair)
Published On - 4:02 pm, Tue, 20 July 21