ಈ ನಾಡು ಕಂಡಂತಹ ಶ್ರೇಷ್ಠ ನಾಯಕ; ಸಿಎಂ ಬಿ.ಎಸ್.ಯಡಿಯೂರಪ್ಪ ಪರ ವಿವಿಧ ಮಠಾಧೀಶರ ಬ್ಯಾಟಿಂಗ್

ಬಿಎಸ್​ವೈ ಜಾತಿಯಿಂದ ಲಿಂಗಾಯತರು. ಆದರೆ ಅವರು ಮಾಸ್ ಲೀಡರ್. ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಯಡಿಯೂರಪ್ಪ ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸದವರು. ಕಾಂಗ್ರೆಸ್ ನಾಯಕರು ಸಹ ಬಿಎಸ್​ವೈಗೆ ಧೈರ್ಯ ತುಂಬಿತಿದ್ದಾರೆ.

ಈ ನಾಡು ಕಂಡಂತಹ ಶ್ರೇಷ್ಠ ನಾಯಕ; ಸಿಎಂ ಬಿ.ಎಸ್.ಯಡಿಯೂರಪ್ಪ ಪರ ವಿವಿಧ ಮಠಾಧೀಶರ ಬ್ಯಾಟಿಂಗ್
ವಿವಿಧ ಮಠಾಧೀಶರಿಂದ ಸುದ್ದಿಗೋಷ್ಠಿ

ಚಿತ್ರದುರ್ಗ: ಜಿಲ್ಲೆಯ ಮುರುಘಾಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವಿಧ ಮಠಾಧೀಶರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ಬ್ಯಾಟಿಂಗ್ ಬೀಸಿದ್ದಾರೆ. ಯಡಿಯೂರಪ್ಪ ಈ ನಾಡು ಕಂಡಂತಹ ಶ್ರೇಷ್ಠ ನಾಯಕ. ನಾಲ್ಕು ಭಾರಿ ಮುಖ್ಯಮಂತ್ರಿಯಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಉತ್ಸಾಹಭರಿತವಾಗಿ ಕೆಲಸ ಮಾಡಿದ್ದಾರೆ. ಕೊರೊನಾ ಕಾಲದ ಸಂಕಷ್ಟವನ್ನ ನಿಭಾಸಿದ್ದಾರೆ. ಕೇಂದ್ರ ಸರ್ಕಾರ ಬಿಎಸ್​ವೈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಮುರುಘಾ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಬಿಎಸ್​ವೈ ಜಾತಿಯಿಂದ ಲಿಂಗಾಯತರು. ಆದರೆ ಅವರು ಮಾಸ್ ಲೀಡರ್. ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಯಡಿಯೂರಪ್ಪ ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸದವರು. ಕಾಂಗ್ರೆಸ್ ನಾಯಕರು ಸಹ ಬಿಎಸ್​ವೈಗೆ ಧೈರ್ಯ ತುಂಬಿತಿದ್ದಾರೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾದಾರ ಮಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಬೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಮಹಾಸ್ವಾಮೀಜಿ, ಶಿರಸಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅಥಣಿ ಮಠದ ಶಿವಬಸವ ಶ್ರೀಗಳು ಸೇರಿ ವಿವಿಧ ಮಠಾಧೀಶರು ಭಾಗಿಯಾಗಿದ್ದರು.

ಯಡಿಯೂರಪ್ಪಗೆ ನಾವು ಸಂಪೂರ್ಣ ಬೆಂಬಲ ಕೊಡುತ್ತಿದ್ದೇವೆ. ಸಂಪೂರ್ಣವಾಗಿ ಈ ಅವಧಿಯನ್ನ ಮುಖ್ಯಮಂತ್ರಿಗಳು ಪೂರ್ಣಗೊಳಿಸಲಿ. ಅವರು ಹಿಂದುಳಿದ ಮಠ, ಸಮುದಾಯ ಅಭಿವೃದ್ಧಿಗೆ ಎಲ್ಲಾ ಸಮುದಾಯ ಒಟ್ಟಾಗಿ ಕರೆದೊಯ್ಯುತ್ತಿದ್ದಾರೆ. ಒಂದೇ ಜಾತಿಗೆ ಸೀಮಿತ ಕಾರ್ಯ ಮಾಡಿಲ್ಲ. ಹಿಂದುಳಿದ ಮಠ, ಅಭಿವೃದ್ದಿ ನಿಗಮ ಮುಖ್ಯವಾಹಿನಿಗೆ ತರುವ ಚಿಂತನೆ ನಡೆಸುತ್ತಿದ್ದಾರೆ. ಹೀಗಾಗಿ ಬಿಎಸ್​ವೈ ಬೆನ್ನೆಲುಬಾಗಿ ಮಾತಾಡಬೇಕಾಗುತ್ತದೆ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ

ಸಚಿವ ಮುರುಗೇಶ್ ನಿರಾಣಿ ಒಬ್ಬ ಸಿಡಿ ಬಾಬಾ, ಅವರ ಬಳಿ 500 ಸಿಡಿಗಳಿವೆ; ಉದ್ಯಮಿ ಆಲಂ ಪಾಷಾ ಗಂಭೀರ ಆರೋಪ

ಕರ್ನಾಟಕ ಕಾಂಗ್ರೆಸ್​ನಲ್ಲಿ ಯಾವುದೇ ಬಿರುಕು, ಭಿನ್ನಾಭಿಪ್ರಾಯವಿಲ್ಲ; ದೆಹಲಿಯಲ್ಲಿ ಸಿದ್ದರಾಮಯ್ಯ ಹೇಳಿಕೆ

(Various pontiffs held a Press Meet on behalf of CM BS Yediyurappa in Chitradurga)