AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Udupi Murder: ಬ್ರಹ್ಮಾವರದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು; ದುಬೈನಿಂದಲೇ ಸುಪಾರಿ ಕೊಟ್ಟನಾ ಗಂಡ?

Vishala Ganiga Murder Case | ಹಂತಕರಿಗೆ ಸುಪಾರಿ ನೀಡಿದ್ದ ರಾಮಕೃಷ್ಣ ದುಬೈನಿಂದ ಬ್ರಹ್ಮಾವರಕ್ಕೆ ಬಂದಿದ್ದ ತನ್ನ ಹೆಂಡತಿಯನ್ನು ಕೊಲೆ ಮಾಡಲು ಸೂಚಿಸಿದ್ದ ಎಂಬ ಅನುಮಾನ ಪೊಲೀಸರಿಗೆ ಬಂದಿದೆ.

Udupi Murder: ಬ್ರಹ್ಮಾವರದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು; ದುಬೈನಿಂದಲೇ ಸುಪಾರಿ ಕೊಟ್ಟನಾ ಗಂಡ?
ಕೊಲೆಯಾದ ವಿಶಾಲಾ ಗಾಣಿಗ ಮತ್ತು ಆಕೆಯಿದ್ದ ಅಪಾರ್ಟ್​ಮೆಂಟ್
TV9 Web
| Edited By: |

Updated on: Jul 20, 2021 | 3:16 PM

Share

ಉಡುಪಿ: ದುಬೈನಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ತನ್ನೂರಿಗೆ ಮರಳಿದ್ದ 35 ವರ್ಷದ ವಿಶಾಲಾ ಗಾಣಿಗ (Vishala Ganiga) ಎಂಬ ಮಹಿಳೆಯನ್ನು ಕಳೆದ ವಾರ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅಪಾರ್ಟ್​ಮೆಂಟ್​ನಲ್ಲಿ ಒಂಟಿಯಾಗಿದ್ದ ವಿಶಾಲಾ ಅವರ ಕತ್ತಿಗೆ ವೈರ್​ನಿಂದ ಬಿಗಿದು ಕೊಲೆ ಮಾಡಲಾಗಿದ್ದು, ಮನೆಯಲ್ಲಿದ್ದ ಎಲ್ಲ ಆಭರಣಗಳೂ ನಾಪತ್ತೆಯಾಗಿತ್ತು. ಬ್ರಹ್ಮಾವರದ (Brahmavar) ಕುಮ್ರಗೋಡು ಎಂಬಲ್ಲಿ ಮಧ್ಯಾಹ್ನದ ಹೊತ್ತಿನಲ್ಲೇ ನಡೆದ ಈ ಕೊಲೆಗೆ ಇಡೀ ಕರಾವಳಿಯೇ ಬೆಚ್ಚಿಬಿದ್ದಿತ್ತು. ಈ ಕೊಲೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ವಿಶಾಲಾ ಗಾಣಿಗ ಅವರ ಗಂಡ ರಾಮಕೃಷ್ಣ ಗಾಣಿಗ ದುಬೈನಲ್ಲಿದ್ದುಕೊಂಡೇ ತನ್ನ ಹೆಂಡತಿಯ ಕೊಲೆಗೆ ಸುಪಾರಿ ನೀಡಿದ್ದನು ಎನ್ನಲಾಗಿದೆ.

ಹಂತಕರಿಗೆ ಸುಪಾರಿ ನೀಡಿದ್ದ ರಾಮಕೃಷ್ಣ ದುಬೈನಿಂದ ಬ್ರಹ್ಮಾವರಕ್ಕೆ ಬಂದಿದ್ದ ತನ್ನ ಹೆಂಡತಿಯನ್ನು ಕೊಲೆ ಮಾಡಲು ಸೂಚಿಸಿದ್ದ ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ದುಬೈನಲ್ಲಿರುವ ರಾಮಕೃಷ್ಣ ಗಾಣಿಗ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ವಿಶಾಲಾ ಗಾಣಿಗ ಇದ್ದ ಫ್ಲಾಟ್​ಗೆ ಬಂದಿದ್ದ ಹಂತಕರು ಆಕೆಯನ್ನು ಕೊಲೆ ಮಾಡಿ ಹೋಗಿದ್ದಾರೆ. ವಿಶಾಲಾ ಅವರ ಕೊಲೆಯಾದಾಗ ಅವರ ಮನೆಯ ಟೀಪಾಯಿ ಮೇಲೆ ಎರಡು ಟೀ ಕಪ್ ಇದ್ದುದು ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಯಾರೋ ಪರಿಚಿತರು ಮನೆಗೆ ಬಂದು, ಆಕೆಯೊಂದಿಗೆ ಮಾತುಕತೆ ನಡೆಸಿ, ನಂತರ ಕೊಲೆ ಮಾಡಿರಬಹುದು ಎನ್ನಲಾಗಿತ್ತು. ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದರೂ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ. ಆದರೆ, ಆಕೆಯ ಗಂಡನ ಮೇಲೆ ಅನುಮಾನ ಬಂದಿದ್ದರಿಂದ ಪೊಲೀಸರು ಆ ನಿಟ್ಟಿನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ಮೈಮೇಲೆ ಮತ್ತು ಮನೆಯಲ್ಲಿರುವ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋದರೆ ದರೋಡೆ ಮಾಡಿ ಕೊಲೆ ಮಾಡಿದ್ದಾರೆಂದು ಪೊಲೀಸರು ನಂಬುತ್ತಾರೆಂದು ಈ ರೀತಿ ದಾರಿ ತಪ್ಪಿಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಗಾಣಿಗ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೊಬೈಲ್ ಚಾರ್ಜಿಂಗ್ ವೈರ್ ಅನ್ನು ಕುತ್ತಿಗೆಗೆ ಬಿಗಿದು ವಿಶಾಲಾ ಅವರನ್ನು ಕೊಲೆ ಮಾಡಲಾಗಿದೆ. ಈ ಕೊಲೆ ಪ್ರಕರಣವನ್ನು ಆದಷ್ಟು ಬೇಗ ಭೇದಿಸಲು 4 ತನಿಖಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

ವಿಶಾಲಾ ಗಾಣಿಗ ಅವರಿಗೆ 7 ವರ್ಷದ ಮಗಳಿದ್ದು, ಅವರ ಗಂಡ ರಾಮಕೃಷ್ಣ ಗಾಣಿಗ ದುಬೈನಲ್ಲಿ ಉದ್ಯಮಿಯೊಬ್ಬರ ಆಪ್ತಸಹಾಯಕರಾಗಿದ್ದರು. ಶ್ರೀಮಂತ ಕುಟುಂಬದ ಹಿನ್ನೆಲೆಯ ವಿಶಾಲಾ ಗಾಣಿಗ ಕೂಡ ದುಬೈನಲ್ಲಿ ಗಂಡನ ಜೊತೆ ನೆಲೆಸಿದ್ದರು. ಕುಮ್ರಗೋಡುವಿನಲ್ಲಿ ಅವರದ್ದು ಒಂದು ಫ್ಲಾಟ್ ಕೂಡ ಇತ್ತು. ಅಪ್ಪನ ಮನೆಯ ಆಸ್ತಿ ವಿಚಾರಕ್ಕೆ ಸಂಬಂಧಿಸದಂತೆ ಕೆಲವು ದಾಖಲೆಗಳಿಗೆ ಸಹಿ ಹಾಕಬೇಕಾಗಿದ್ದರಿಂದ ಅವರನ್ನು ದುಬೈನಿಂದ ಕರೆಸಲಾಗಿತ್ತು. ಕೊಲೆಗೂ 10 ದಿನ ಮೊದಲು ದುಬೈನಿಂದ ವಾಪಾಸ್ ಬಂದಿದ್ದ ವಿಶಾಲಾ ಇನ್ನೇನು ಕೆಲವೇ ದಿನಗಳಲ್ಲಿ ದುಬೈಗೆ ವಾಪಾಸ್ ಹೊರಡಬೇಕಾಗಿತ್ತು.

ಕಳೆದ ಸೋಮವಾರ ತಮ್ಮ ಮಗಳನ್ನು ಕುಂದಾಪುರದಲ್ಲಿದ್ದ ಅಜ್ಜ-ಅಜ್ಜಿಯ ಮನೆಗೆ ಕಳುಹಿಸಿದ್ದ ವಿಶಾಲಾ ಮನೆಯಲ್ಲಿ ಒಂಟಿಯಾಗಿದ್ದರು. ಬ್ಯಾಂಕ್​ನಲ್ಲಿ ಸ್ವಲ್ಪ ಕೆಲಸ ಇದ್ದುದರಿಂದ ಮಗಳು ವಾಪಾಸ್ ಬರುವುದರೊಳಗೆ ಅದನ್ನು ಮುಗಿಸಿಕೊಳ್ಳಬೇಕೆಂದು ಆಟೋ ಮಾಡಿಸಿಕೊಂಡು ಬ್ಯಾಂಕ್​ಗೆ ಹೋಗಿದ್ದರು. ಬ್ಯಾಂಕ್​ನ ಲಾಕರ್​ನಲ್ಲಿದ್ದ ಚಿನ್ನ, ಹಣವನ್ನು ಡ್ರಾ ಮಾಡಿಕೊಂಡು ಅದೇ ಆಟೋದಲ್ಲಿ ವಾಪಾಸ್ ಫ್ಲಾಟ್​ಗೆ ಬಂದಿದ್ದರು. ಆ ವೇಳೆ ತನ್ನ ಮನೆಯವರಿಗೆ ಫೋನ್ ಮಾಡಿದ್ದ ವಿಶಾಲಾ ನಂತರ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಬ್ಯಾಂಕ್ ಕೆಲಸ ಮುಗಿದ ನಂತರ ಕುಂದಾಪುರದಲ್ಲಿರುವ ತಂದೆ-ತಾಯಿಯ ಮನೆಗೆ ಬಂದು ಮಗಳನ್ನು ಕರೆದುಕೊಂಡು ಹೋಗುವುದಾಗಿ ವಿಶಾಲಾ ಗಾಣಿಗ ಹೇಳಿದ್ದರು. ಆದರೆ, ರಾತ್ರಿಯಾದರೂ ಮಗಳು ಫೋನ್ ಮಾಡದಿದ್ದಾಗ ಆಕೆಯ ತಂದೆಗೆ ಆತಂಕವಾಗಿತ್ತು. ಅಳಿಯ ರಾಮಕೃಷ್ಣ ಗಾಣಿಗ ಅವರಿಗೆ ಫೋನ್ ಮಾಡಿದ ಅವರು ನಡೆದ ವಿಷಯವನ್ನು ತಿಳಿಸಿದ್ದರು. ಅವರು ತಕ್ಷಣ ಅಪಾರ್ಟ್​ಮೆಂಟ್​ಗೆ ಹೋಗಿ ನೋಡಿಕೊಂಡು ಬರಲು ಸೂಚಿಸಿದ್ದರು. ಹೀಗಾಗಿ, ವಿಶಾಲಾ ಅವರ ತಂದೆ ತಮ್ಮ ಮಗನೊಂದಿಗೆ ಕುಮ್ರಗೋಡಿನಲ್ಲಿರುವ ಅಪಾರ್ಟ್​ಮೆಂಟ್​ಗೆ ಬಂದಿದ್ದರು.

ರಾತ್ರಿ ಬಂದು ನೋಡಿದಾಗ ವಿಶಾಲಾ ಅವರ ಫ್ಲಾಟ್​ಗೆ ಬೀಗ ಹಾಕಲಾಗಿತ್ತು. ತಮ್ಮ ಬಳಿಯಿದ್ದ ಮತ್ತೊಂದು ಕೀಯಿಂದ ಮನೆ ಬಾಗಿಲು ತೆಗೆದು ನೋಡಿದಾಗ ವಿಶಾಲಾ ಅವರು ಹಾಲ್​ನಲ್ಲಿ ಶವವಾಗಿ ಬಿದ್ದಿದ್ದರು. ಬೆಡ್​ರೂಂನ ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ವಿಶಾಲಾ ಅವರ ಕತ್ತಿನಲ್ಲಿದ್ದ ತಾಳಿ, ಸರಗಳು, ಉಂಗುರ, ಬೀರಿನಲ್ಲಿದ್ದ ಚಿನ್ನಾಭರಣ, ಹಣವೆಲ್ಲ ನಾಪತ್ತೆಯಾಗಿತ್ತು. ಮನೆಯಿಂದ ಸುಮಾರು ಎರಡು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿವೆ. ಆಟೋದಲ್ಲಿ 2-3 ಬಾರಿ ಓಡಾಡಿದ್ದ ವಿಶಾಲಾ ಆ ಸಂದರ್ಭದಲ್ಲಿ ತಮ್ಮ ಮನೆಯವರ ಜೊತೆಗೆ ಆಸ್ತಿ ವ್ಯವಹಾರ, ಬ್ಯಾಂಕ್ ಕೆಲಸ, ದುಬೈಗೆ ವಾಪಾಸ್ ತೆರಳುವ ಬಗ್ಗೆಯೆಲ್ಲ ಮಾತನಾಡಿದ್ದಾರೆ ಎನ್ನಲಾಗಿತ್ತು. ಅದನ್ನೆಲ್ಲ ಕೇಳಿಸಿಕೊಂಡ ಆಟೋ ಚಾಲಕನ ಕೈವಾಡವೂ ಈ ಕೊಲೆಯ ಹೊಂದಿರಬಹುದು ಎಂದು ಅಂದಾಜಿಸಲಾಗಿತ್ತು. ಈಗಾಗಲೇ ಆ ಆಟೋ ಚಾಲಕನನ್ನು ಕರೆದು ವಿಚಾರಣೆ ನಡೆಸಲಾಗಿತ್ತು. ಆದರೆ, ಆತ ಆಕೆಯನ್ನು ಫ್ಲಾಟ್​ಗೆ ಬಿಟ್ಟು ವಾಪಾಸ್ ಹೋದಮೇಲೆ ಏನಾಯಿತೆಂದು ತಿಳಿದಿಲ್ಲ ಎಂದಿದ್ದ. ಇದೀಗ ದಿನದಿಂದ ದಿನಕ್ಕೆ ಈ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಗುತ್ತಿದೆ.

ಇದನ್ನೂ ಓದಿ: Udupi Murder: ಬ್ರಹ್ಮಾವರದ ಅಪಾರ್ಟ್​ಮೆಂಟ್​ನಲ್ಲಿ ಮಹಿಳೆಯ ಬರ್ಬರ ಹತ್ಯೆ; ಆಟೋದಲ್ಲಿ ಬ್ಯಾಂಕ್​ಗೆ ಹೋಗಿದ್ದೇ ತಪ್ಪಾಯ್ತ?

(Brahmavar Vishala Ganiga Murder Case Heading Towards New Twists Police Detained her Husband)

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್