Udupi Murder: ಬ್ರಹ್ಮಾವರದ ಅಪಾರ್ಟ್​ಮೆಂಟ್​ನಲ್ಲಿ ಮಹಿಳೆಯ ಬರ್ಬರ ಹತ್ಯೆ; ಆಟೋದಲ್ಲಿ ಬ್ಯಾಂಕ್​ಗೆ ಹೋಗಿದ್ದೇ ತಪ್ಪಾಯ್ತ?

Vishala Ganiga Murder Case: ಬ್ರಹ್ಮಾವರದ ಕುಮ್ರಗೋಡು ಎಂಬ ಊರಿನ ಅಪಾರ್ಟ್​ಮೆಂಟ್​ನಲ್ಲಿ ವಿಶಾಲಾ ಗಾಣಿಗ ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಅವರು ಮಗಳ ಜೊತೆ ದುಬೈನಿಂದ ಊರಿಗೆ ಬಂದಿದ್ದರು.

Udupi Murder: ಬ್ರಹ್ಮಾವರದ ಅಪಾರ್ಟ್​ಮೆಂಟ್​ನಲ್ಲಿ ಮಹಿಳೆಯ ಬರ್ಬರ ಹತ್ಯೆ; ಆಟೋದಲ್ಲಿ ಬ್ಯಾಂಕ್​ಗೆ ಹೋಗಿದ್ದೇ ತಪ್ಪಾಯ್ತ?
ಕೊಲೆಯಾದ ವಿಶಾಲಾ ಗಾಣಿಗ ಮತ್ತು ಆಕೆಯಿದ್ದ ಅಪಾರ್ಟ್​ಮೆಂಟ್
Follow us
TV9 Web
| Updated By: Digi Tech Desk

Updated on:Jul 14, 2021 | 4:34 PM

ಉಡುಪಿ: ಕೆಲವು ದಿನಗಳ ಹಿಂದಷ್ಟೇ ದುಬೈನಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ತನ್ನೂರಿಗೆ ಮರಳಿದ್ದ 35 ವರ್ಷದ ವಿಶಾಲಾ ಗಾಣಿಗ ಎಂಬ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಹತ್ಯೆ ಪ್ರಕರಣದ ತನಿಖೆಗಾಗಿ ಈಗಾಗಲೇ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅಪಾರ್ಟ್​ಮೆಂಟ್​ನಲ್ಲಿ ಒಂಟಿಯಾಗಿದ್ದ ವಿಶಾಲಾ ಅವರ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಮನೆಯಲ್ಲಿದ್ದ ಎಲ್ಲ ಆಭರಣಗಳೂ ನಾಪತ್ತೆಯಾಗಿವೆ. ಬ್ರಹ್ಮಾವರದ ಕುಮ್ರಗೋಡು ಎಂಬ ಊರಿನಲ್ಲಿ ಸೋಮವಾರ ಮಧ್ಯಾಹ್ನದ ಹೊತ್ತಿನಲ್ಲೇ ನಡೆದ ಈ ಕೊಲೆಗೆ ಇಡೀ ಕರಾವಳಿಯೇ ಬೆಚ್ಚಿಬಿದ್ದಿದೆ.

ವೈರ್ ಅನ್ನು ಕುತ್ತಿಗೆಗೆ ಬಿಗಿದು ವಿಶಾಲಾ ಅವರನ್ನು ಕೊಲೆ ಮಾಡಲಾಗಿದೆ. ಅಪಾರ್ಟ್​ಮೆಂಟ್​ನಲ್ಲಿರುವ ಫ್ಲಾಟ್​ನೊಳಗೆ ಬಂದು ಹೀಗೆ ಕೊಲೆ ಮಾಡಿರುವುದನ್ನು ನೋಡಿದರೆ ಇದರ ಹಿಂದೆ ಪರಿಚಿತರ ಕೈವಾಡವಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಉಡುಪಿ ಎಸ್​ಪಿ ಎನ್​. ವಿಷ್ಣುವರ್ಧನ್, ಶ್ರೀಮಂತ ಮಹಿಳೆಯಾಗಿದ್ದ ವಿಶಾಲಾ ಅವರನ್ನು ಹಣ ಮತ್ತು ಚಿನ್ನಕ್ಕಾಗಿ ಕೊಲೆ ಮಾಡಿರುವ ಸಾಧ್ಯತೆಗಳಿವೆ. ಈ ಕೊಲೆ ಪ್ರಕರಣವನ್ನು ಆದಷ್ಟು ಬೇಗ ಭೇದಿಸಲು 4 ತನಿಖಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

ವಿಶಾಲಾ ಗಾಣಿಗ ಅವರಿಗೆ 7 ವರ್ಷದ ಮಗಳಿದ್ದು, ಅವರ ಗಂಡ ರಾಮಕೃಷ್ಣ ಗಾಣಿಗ ದುಬೈನಲ್ಲಿ ಉದ್ಯಮಿಯೊಬ್ಬರ ಆಪ್ತಸಹಾಯಕರಾಗಿದ್ದರು. ಶ್ರೀಮಂತ ಕುಟುಂಬದ ಹಿನ್ನೆಲೆಯ ವಿಶಾಲಾ ಗಾಣಿಗ ಕೂಡ ದುಬೈನಲ್ಲಿ ಗಂಡನ ಜೊತೆ ನೆಲೆಸಿದ್ದರು. ಕುಮ್ರಗೋಡುವಿನಲ್ಲಿ ಅವರದ್ದು ಒಂದು ಫ್ಲಾಟ್ ಕೂಡ ಇತ್ತು. ಅಪ್ಪನ ಮನೆಯ ಆಸ್ತಿ ವಿಚಾರಕ್ಕೆ ಸಂಬಂಧಿಸದಂತೆ ಕೆಲವು ದಾಖಲೆಗಳಿಗೆ ಸಹಿ ಹಾಕಬೇಕಾಗಿದ್ದರಿಂದ ಅವರನ್ನು ದುಬೈನಿಂದ ಕರೆಸಲಾಗಿತ್ತು. ಕೊಲೆಗೂ 10 ದಿನ ಮೊದಲು ದುಬೈನಿಂದ ವಾಪಾಸ್ ಬಂದಿದ್ದ ವಿಶಾಲಾ ಇನ್ನೇನು ಕೆಲವೇ ದಿನಗಳಲ್ಲಿ ದುಬೈಗೆ ವಾಪಾಸ್ ಹೊರಡಬೇಕಾಗಿತ್ತು.

ಸೋಮವಾರ ತಮ್ಮ ಮಗಳನ್ನು ಕುಂದಾಪುರದಲ್ಲಿದ್ದ ಅಜ್ಜ-ಅಜ್ಜಿಯ ಮನೆಗೆ ಕಳುಹಿಸಿದ್ದ ವಿಶಾಲಾ ಮನೆಯಲ್ಲಿ ಒಂಟಿಯಾಗಿದ್ದರು. ಬ್ಯಾಂಕ್​ನಲ್ಲಿ ಸ್ವಲ್ಪ ಕೆಲಸ ಇದ್ದುದರಿಂದ ಮಗಳು ವಾಪಾಸ್ ಬರುವುದರೊಳಗೆ ಅದನ್ನು ಮುಗಿಸಿಕೊಳ್ಳಬೇಕೆಂದು ಆಟೋ ಮಾಡಿಸಿಕೊಂಡು ಬ್ಯಾಂಕ್​ಗೆ ಹೋಗಿದ್ದರು. ಬ್ಯಾಂಕ್​ನ ಲಾಕರ್​ನಲ್ಲಿದ್ದ ಚಿನ್ನ, ಹಣವನ್ನು ಡ್ರಾ ಮಾಡಿಕೊಂಡು ಅದೇ ಆಟೋದಲ್ಲಿ ವಾಪಾಸ್ ಫ್ಲಾಟ್​ಗೆ ಬಂದಿದ್ದರು. ಆ ವೇಳೆ ತನ್ನ ಮನೆಯವರಿಗೆ ಫೋನ್ ಮಾಡಿದ್ದ ವಿಶಾಲಾ ನಂತರ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.

ಬ್ಯಾಂಕ್ ಕೆಲಸ ಮುಗಿದ ನಂತರ ಕುಂದಾಪುರದಲ್ಲಿರುವ ತಂದೆ-ತಾಯಿಯ ಮನೆಗೆ ಬಂದು ಮಗಳನ್ನು ಕರೆದುಕೊಂಡು ಹೋಗುವುದಾಗಿ ವಿಶಾಲಾ ಗಾಣಿಗ ಹೇಳಿದ್ದರು. ಆದರೆ, ರಾತ್ರಿಯಾದರೂ ಮಗಳು ಫೋನ್ ಮಾಡದಿದ್ದಾಗ ಆಕೆಯ ತಂದೆಗೆ ಆತಂಕವಾಗಿತ್ತು. ಅಳಿಯ ರಾಮಕೃಷ್ಣ ಗಾಣಿಗ ಅವರಿಗೆ ಫೋನ್ ಮಾಡಿದ ಅವರು ನಡೆದ ವಿಷಯವನ್ನು ತಿಳಿಸಿದ್ದರು. ಅವರು ತಕ್ಷಣ ಅಪಾರ್ಟ್​ಮೆಂಟ್​ಗೆ ಹೋಗಿ ನೋಡಿಕೊಂಡು ಬರಲು ಸೂಚಿಸಿದ್ದರು. ಹೀಗಾಗಿ, ವಿಶಾಲಾ ಅವರ ತಂದೆ ತಮ್ಮ ಮಗನೊಂದಿಗೆ ಕುಮ್ರಗೋಡಿನಲ್ಲಿರುವ ಅಪಾರ್ಟ್​ಮೆಂಟ್​ಗೆ ಬಂದಿದ್ದರು.

ರಾತ್ರಿ ಬಂದು ನೋಡಿದಾಗ ವಿಶಾಲಾ ಅವರ ಫ್ಲಾಟ್​ಗೆ ಬೀಗ ಹಾಕಲಾಗಿತ್ತು. ತಮ್ಮ ಬಳಿಯಿದ್ದ ಮತ್ತೊಂದು ಕೀಯಿಂದ ಮನೆ ಬಾಗಿಲು ತೆಗೆದು ನೋಡಿದಾಗ ವಿಶಾಲಾ ಅವರು ಹಾಲ್​ನಲ್ಲಿ ಶವವಾಗಿ ಬಿದ್ದಿದ್ದರು. ಬೆಡ್​ರೂಂನ ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ವಿಶಾಲಾ ಅವರ ಕತ್ತಿನಲ್ಲಿದ್ದ ತಾಳಿ, ಸರಗಳು, ಉಂಗುರ, ಬೀರಿನಲ್ಲಿದ್ದ ಚಿನ್ನಾಭರಣ, ಹಣವೆಲ್ಲ ನಾಪತ್ತೆಯಾಗಿತ್ತು. ಮನೆಯಿಂದ ಸುಮಾರು ಎರಡು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿವೆ.

ಆಟೋದಲ್ಲಿ 2-3 ಬಾರಿ ಓಡಾಡಿದ್ದ ವಿಶಾಲಾ ಆ ಸಂದರ್ಭದಲ್ಲಿ ತಮ್ಮ ಮನೆಯವರ ಜೊತೆಗೆ ಆಸ್ತಿ ವ್ಯವಹಾರ, ಬ್ಯಾಂಕ್ ಕೆಲಸ, ದುಬೈಗೆ ವಾಪಾಸ್ ತೆರಳುವ ಬಗ್ಗೆಯೆಲ್ಲ ಮಾತನಾಡಿದ್ದಾರೆ ಎನ್ನಲಾಗಿದೆ. ಅದನ್ನೆಲ್ಲ ಕೇಳಿಸಿಕೊಂಡ ಆಟೋ ಚಾಲಕನ ಕೈವಾಡವೂ ಈ ಕೊಲೆಯ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಆ ಆಟೋ ಚಾಲಕನನ್ನು ಕರೆದು ವಿಚಾರಣೆ ನಡೆಸಲಾಗಿದೆ. ಆದರೆ, ಆತ ಆಕೆಯನ್ನು ಫ್ಲಾಟ್​ಗೆ ಬಿಟ್ಟು ವಾಪಾಸ್ ಹೋದಮೇಲೆ ಏನಾಯಿತೆಂದು ತಿಳಿದಿಲ್ಲ ಎಂದಿದ್ದಾನೆ.

ಬ್ಯಾಂಕ್​ ಸುತ್ತಮುತ್ತ ಹಾಗೂ ಅಪಾರ್ಟ್​ಮೆಂಟ್​ ಬಳಿ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಯಾವುದಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಾಣುತ್ತಾರಾ? ಎಂದು ಪರೀಕ್ಷಿಸಲಾಗುತ್ತಿದೆ. ಕೊಲೆ ನಡೆದ ಸ್ಥಳದಲ್ಲಿ ಕಪ್ಪು ಬಣ್ಣದ ಕೇಬಲ್ ಸಿಕ್ಕಿದ್ದು, ಅದರಿಂದಲೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆಯಿದೆ. ಒಟ್ಟಾರೆ, ಬ್ರಹ್ಮಾವರದಂತಹ ಸಣ್ಣ ಊರಿನಲ್ಲಿ ನಡೆದ ಈ ಹತ್ಯೆಯಿಂದ ಉಡುಪಿ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ: Love Failure: ಪ್ರೀತಿಸಿ ಕೈಕೊಟ್ಟ ಮಾಜಿ ಪ್ರೇಯಸಿಯನ್ನು ಕೊಲೆ ಮಾಡಿ ಭಗ್ನಪ್ರೇಮಿಯೂ ಹೆಣವಾದ!

ಇದನ್ನೂ ಓದಿ: Bengaluru Crime; ಕೆಲಸಕ್ಕೆ ಹೋಗಿ ಮನೆಗೆ ಬಂದವನಿಗೆ ಶಾಕ್, ಮಹಿಳೆ ಸಾವು.. ಕುತ್ತಿಗೆ ಸೀಳಿ ಕೊಲೆ ಶಂಕೆ

( 35 year old NRI Vishala Ganiga Found Dead in Udupi District Brahmavar Apartment)

Published On - 11:39 am, Wed, 14 July 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ