Love Failure: ಪ್ರೀತಿಸಿ ಕೈಕೊಟ್ಟ ಮಾಜಿ ಪ್ರೇಯಸಿಯನ್ನು ಕೊಲೆ ಮಾಡಿ ಭಗ್ನಪ್ರೇಮಿಯೂ ಹೆಣವಾದ!

Crime News Today: ಹೊರಗೆ ಹೋಗಿದ್ದ ಬರ್ಖಾಳ ಅಪ್ಪ-ಅಮ್ಮ ಮನೆಗೆ ಬಂದು ನೋಡಿದಾಗ ತಮ್ಮ ಮಗಳು, ಆಕೆಯ ಮಾಜಿ ಪ್ರಿಯಕರ ಹಾಗೂ ಇನ್ನಿಬ್ಬರು ಯುವತಿಯರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಶಾಕ್ ಆದರು.

Love Failure: ಪ್ರೀತಿಸಿ ಕೈಕೊಟ್ಟ ಮಾಜಿ ಪ್ರೇಯಸಿಯನ್ನು ಕೊಲೆ ಮಾಡಿ ಭಗ್ನಪ್ರೇಮಿಯೂ ಹೆಣವಾದ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 11, 2021 | 1:48 PM

ಭೂಪಾಲ್: ಭಗ್ನ ಪ್ರೇಮಿಯೊಬ್ಬ ತಾನು ಪ್ರೀತಿಸಿದ ಯುವತಿ ಬೇರೊಬ್ಬನೊಂದಿಗೆ ಓಡಾಡುತ್ತಿರುವುದನ್ನು ಕಂಡು ಕೋಪಗೊಂಡು ಆಕೆಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಆಕೆಯ ಜೊತೆಗಿದ್ದ ಇನ್ನೂ ಇಬ್ಬರನ್ನು ಹತ್ಯೆ ಮಾಡಿರುವ ಆತ ಬಳಿಕ ತನಗೂ ಶೂಟ್ ಮಾಡಿಕೊಂಡಿದ್ದಾನೆ. ಈ ರೀತಿ 6 ವರ್ಷಗಳ ಪ್ರೇಮಕತೆಯೊಂದು ದುರಂತ ಅಂತ್ಯ ಕಂಡಿದೆ. 

ಮಧ್ಯಪ್ರದೇಶದ ಬೆತೂಲ್ ಜಿಲ್ಲೆಯ 22 ವರ್ಷದ ಯುವಕ ಕಾಲೇಜಿನ ಗೆಳತಿಯೊಂದಿಗೆ ರಿಲೇಷನ್​ಶಿಪ್​ನಲ್ಲಿದ್ದ. ಆದರೆ, ಇತ್ತೀಚೆಗಷ್ಟೇ ಆಕೆಯೊಂದಿಗೆ ಬ್ರೇಕಪ್ ಆಗಿತ್ತು. ಆದರೂ ಆಕೆಯ ನೆನಪಿನಿಂದ ಹೊರಬರಲು ಆತನಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಆಕೆಯ ಮನೆಗೆ ನುಗ್ಗಿದ ಆತ ತನ್ನ ಮಾಜಿ ಪ್ರೇಯಸಿ ಸೇರಿದಂತೆ ಮೂವರನ್ನು ಶೂಟ್ ಮಾಡಿದ್ದಾನೆ. ನಂತರ ತಾನು ಸಿಕ್ಕಿಹಾಕಿಕೊಳ್ಳಬಹುದು ಎಂಬ ಭಯದಲ್ಲಿ ತನಗೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.

22 ವರ್ಷದ ಭಾನು ಠಾಕೂರ್ ತನಗಿಂತಲೂ 3 ವರ್ಷ ದೊಡ್ಡವಳಾಗಿದ್ದ ಬರ್ಖಾ ಸೋನಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಕಳೆದ 6 ವರ್ಷಗಳಿಂದ ಅವರಿಬ್ಬರೂ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಬರ್ಖಾ ಸೋನಿಗೆ ಭಾನು ಠಾಕೂರ್ ಮೇಲೆ ಆಸಕ್ತಿ ಕಡಿಮೆಯಾಗಿತ್ತು. ಇಬ್ಬರ ಮನೆಯಲ್ಲೂ ಈ ಪ್ರೀತಿಯ ವಿಷಯ ಗೊತ್ತಿತ್ತು. ಆದರೆ, ಬೇರೆ ಬೇರೆ ಜಾತಿಯವರಾದ್ದರಿಂದ ಅವರಿಬ್ಬರ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ. ಹೀಗಾಗಿ, ಆತನೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದಳು.

ಇದಾದ ಬಳಿಕ ಬರ್ಖಾಳ ಮನೆಯವರು ಭಾನು ವಿರುದ್ಧ ಪೊಲೀಸರಿಗೆ ದೂರು ನೀಡಿ, ತಮ್ಮ ಮಗಳಿಗೆ ಆತನಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದರು. ಹೀಗಾಗಿ, ಭಾನುಗೆ ಫೋನ್ ಮಾಡಿದ್ದ ಪೊಲೀಸರು ಇನ್ನುಮುಂದೆ ಬರ್ಖಾ ಸೋನಿಯ ತಂಟೆಗೆ ಹೋಗಬಾರದು ಎಂದು ಎಚ್ಚರಿಕೆ ನೀಡಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಭಾನು ಠಾಕೂರ್​ಗೆ ಆಕೆ ಬೇರೊಬ್ಬನೊಂದಿಗೆ ರಿಲೇಷನ್​ಶಿಪ್​ನಲ್ಲಿರುವುದು ಗೊತ್ತಾಗಿತ್ತು. ಹೀಗಾಗಿ, ಬರ್ಖಾ ಮೇಲಿನ ಕೋಪ ಇನ್ನೂ ಹೆಚ್ಚಾಗಿತ್ತು.

ಆಕೆಗೆ ಸರಿಯಾದ ಪಾಠ ಕಲಿಸಬೇಕೆಂದು ಆಕೆಯ ಮನೆಗೆ ಹೋದ ಭಾನು ಠಾಕೂರ್ ತನ್ನ ಮಾಜಿ ಪ್ರೇಯಸಿಯೊಂದಿಗೆ ಜಗಳವಾಡಿದ್ದ. ಇಬ್ಬರ ನಡುವೆ ಜಗಳ ತಾರಕಕ್ಕೇರಿದಾಗ ತನ್ನ ಬ್ಯಾಗ್​ನಿಂದ ಎರಡು ಪಿಸ್ತೂಲ್ ತೆಗೆದ ಭಾನು ಠಾಕೂರ್ ಆಕೆಯ ಮೇಲೆ ಗುಂಡು ಹಾರಿಸಿದ್ದ. ಅದೇ ವೇಳೆ ಆಕೆಯ ಮನೆಗೆ ಬಂದಿದ್ದ ಬರ್ಖಾಳ ಕಸಿನ್ ಹಾಗೂ ಪಕ್ಕದ ಮನೆಯವ 18 ವರ್ಷದ ಯುವತಿ ಮೇಲೂ ಭಾನು ಗುಂಡು ಹಾರಿಸಿದ್ದ. ಮೂವರೂ ಹೆಣವಾಗಿ ಬಿದ್ದಿದ್ದನ್ನು ನೋಡಿ ತಾನಿನ್ನು ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತೇನೆ ಎಂದು ಹೆದರಿದ ಭಾನು ಠಾಕೂರ್ ತನ್ನ ಹಣೆಗೆ ಶೂಟ್ ಮಾಡಿಕೊಂಡಿದ್ದಾನೆ.

ಹೊರಗೆ ಹೋಗಿದ್ದ ಬರ್ಖಾಳ ಅಪ್ಪ-ಅಮ್ಮ ಮನೆಗೆ ಬಂದು ನೋಡಿದಾಗ ತಮ್ಮ ಮಗಳು, ಆಕೆಯ ಮಾಜಿ ಪ್ರಿಯಕರ ಹಾಗೂ ಇನ್ನಿಬ್ಬರು ಯುವತಿಯರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಶಾಕ್ ಆದರು. ಅಷ್ಟರಲ್ಲಾಗಲೇ ನಾಲ್ವರ ಪ್ರಾಣಪಕ್ಷಿ ಹಾರಿಹೋಗಿತ್ತು. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Rekha Kadiresh: ರೇಖಾ ಕದಿರೇಶ್ ಕೊಲೆ ಪ್ರಕರಣದ ಆಘಾತಕಾರಿ ಮಾಹಿತಿ, ಹಂತಕರು ಒಟ್ಟು ಮೂರು ಹತ್ಯೆಗೆ ಸ್ಕೆಚ್​ ಹಾಕಿದ್ದರಂತೆ!

ಇದನ್ನೂ ಓದಿ: Crime News: ಬಾಯ್​ಫ್ರೆಂಡ್​ನನ್ನು ಕೆಲಸದಿಂದ ಕಿತ್ತೊಗೆದ ಕಂಪನಿಗೆ ಗರ್ಲ್​ಫ್ರೆಂಡ್ ಮಾಡಿದ್ದೇನು ಗೊತ್ತಾ?

Published On - 1:42 pm, Sun, 11 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ