Rekha Kadiresh: ರೇಖಾ ಕದಿರೇಶ್ ಕೊಲೆ ಪ್ರಕರಣದ ಆಘಾತಕಾರಿ ಮಾಹಿತಿ, ಹಂತಕರು ಒಟ್ಟು ಮೂರು ಹತ್ಯೆಗೆ ಸ್ಕೆಚ್​ ಹಾಕಿದ್ದರಂತೆ!

ಕದಿರೇಶ್ನನ್ನು ಕೊಂದವರನ್ನು ಕೊಲೆ ಮಾಡಬೇಕು ಸಹಾಯ ಮಾಡು ಎಂದು ಮೊದಲು ಪೀಟರ್, ರೇಖಾಳನ್ನೆ ಕೇಳಿದ್ದ. ಅಣ್ಣ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಬೇಕು ಸಹಾಯ ಮಾಡಿ ಎಂದು ರೇಖಾರನ್ನು ಬೇಡಿಕೊಂಡಿದ್ದ. ಅದ್ರೆ ಇದಕ್ಕೆ ರೇಖಾ ತಾನು ಯಾವುದೆ ಸಹಕಾರ ಕೊಡಲ್ಲಾ ಎಂದಿದ್ರು.

Rekha Kadiresh: ರೇಖಾ ಕದಿರೇಶ್ ಕೊಲೆ ಪ್ರಕರಣದ ಆಘಾತಕಾರಿ ಮಾಹಿತಿ, ಹಂತಕರು ಒಟ್ಟು ಮೂರು ಹತ್ಯೆಗೆ ಸ್ಕೆಚ್​ ಹಾಕಿದ್ದರಂತೆ!
ರೇಖಾ ಕದಿರೇಶ್ ದಂಪತಿ
Follow us
TV9 Web
| Updated By: ಆಯೇಷಾ ಬಾನು

Updated on:Jul 01, 2021 | 12:40 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ರೋಚಕ ಮಾಹಿತಿಯೊಂದು ಬಯಲಾಗಿದೆ. ಪೀಟರ್ ಅಂಡ್ ಟೀಮ್ ಮಾಡಿದ್ದು ಒಂದು ಕೊಲೆ. ಆದ್ರೆ ಮಾಡಬೇಕು ಎಂದುಕೊಂಡಿದ್ದು ಮೂರು ಕೊಲೆ ಎಂಬುವುದು ತಿಳಿದು ಬಂದಿದೆ. ಅಸಲಿಗೆ ಹಂತಕರ ಗುರಿ ರೇಖಾ ಆಗಿರಲೇ ಇಲ್ಲವಂತೆ.

ಕದಿರೇಶ್ ಕೊಲೆ ಮಾಡಿದವರಿಗಾಗಿ ಹೊಂಚು ಪೀಟರ್ ಕದಿರೇಶ್ನ ಪಕ್ಕ ಶಿಷ್ಯನಾಗಿದ್ದ. ಹೀಗಾಗಿ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಮೂರು ಜನರನ್ನು ಕೊಲೆ ಮಾಡಲು ಪೀಟರ್ ತೀರ್ಮಾನಿಸಿದ್ದ. ಕದಿರೇಶ್ ಹತ್ಯೆಗೆ ಕಾರಣವಾಗಿದ್ದು ಗಾರ್ಡನ್ ಶಿವ, ನವೀನ್ ಮತ್ತು ವಿನಯ್ ಎಂಬ ಮೂವರು. ಜೋಪಡಿ ರಾಜೇಂದ್ರನ ಹತ್ಯೆಗೆ ಪ್ರತಿಕಾರವಾಗಿ ಗಾರ್ಡನ್ ಶಿವನ ಅಕ್ಕನ ಮಕ್ಕಳಾದ ನವೀನ್ ಮತ್ತು ವಿನಯ್ ಸೇರಿ ಕದಿರೇಶ್ನ ಕೊಂದಿದ್ರು. ಹೀಗಾಗಿ ಕದಿರೇಶ್ ಹತ್ಯೆಗೆ ಕಾರಣರಾದವರನ್ನ ಮುಗಿಸಲು ಪೀಟರ್ ಹಲ್ಲು ಮಸೆಯುತ್ತಿದ್ದ. ಗಾರ್ಡನ್ ಶಿವ, ವಿನಯ್, ನವೀನ್ ಕೊಲೆ ಮಾಡಬೇಕು ಎಂದು ಪೀಟರ್ & ಟೀಂ ತಯಾರಿ ಮಾಡಿಕೊಳ್ಳುತ್ತಿತ್ತು.

ಕದಿರೇಶ್ನನ್ನು ಕೊಂದವರನ್ನು ಕೊಲೆ ಮಾಡಬೇಕು ಸಹಾಯ ಮಾಡು ಎಂದು ಮೊದಲು ಪೀಟರ್, ರೇಖಾಳನ್ನೆ ಕೇಳಿದ್ದ. ಅಣ್ಣ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಬೇಕು ಸಹಾಯ ಮಾಡಿ ಎಂದು ರೇಖಾರನ್ನು ಬೇಡಿಕೊಂಡಿದ್ದ. ಅದ್ರೆ ಇದಕ್ಕೆ ರೇಖಾ ತಾನು ಯಾವುದೆ ಸಹಕಾರ ಕೊಡಲ್ಲಾ ಎಂದಿದ್ರು. ರೌಡಿಸಂ ಐಡಿಯಾ ಇಲ್ಲದ ರೇಖಾ, ಪೀಟರ್ ಮನವಿಯನ್ನ ತಿರಸ್ಕರಿಸಿದ್ದರು. ಈ ವಿಚಾರಕ್ಕೆ ರೇಖಾ ಮೇಲೆ ಪೀಟರ್ಗೆ ಕೋಪವಿತ್ತು. ಇದೆ ಸಮಯದಲ್ಲಿ ಅರೂಣ್ ಕಳೆದ ನಾಲ್ಕು ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದ.

ಜೈಲಿನಿಂದ ಹೊರ ಬಂದು ಕದಿರೇಶ್ ಕೊಲೆಗೆ ರೇಖಾ ಕಾರಣ ಎಂದಿದ್ದ. ಆಕೆ ಕದಿರೇಶ್ ಕೊಲೆ ಮಾಡಲು ನವೀನ್, ವಿನಯ್ಗೆ ಸಹಾಯ ಮಾಡಿದ್ದಾಳೆ ಎಂದಿದ್ದ. ಅರೂಣ್ ಮತ್ತು ಮಾಲಾ 4 ತಿಂಗಳ ಹಿಂದೆ ಪೀಟರ್ ಅಂಡ್ ಟೀಮ್ ಜೊತೆ ಮೀಟಿಂಗ್ ಮಾಡಿದ್ದರು. ಮೀಟಿಂಗ್ನಲ್ಲಿ ಪೀಟರ್, ಗಾರ್ಡನ್ ಶಿವನ ಬಗ್ಗೆ ಹೇಳಿದ್ದ. ಅದೇ ಮೀಟಿಂಗ್ನಲ್ಲಿ ಅರೂಣ್ ರೇಖಾ ಬಗ್ಗೆ ಕೂಡ ಸ್ಕೆಚ್ ಹಾಕಿದ್ದ. ಗಾರ್ಡನ್ ಶಿವ ಮತ್ತು ವಿನಯ್ ರನ್ನ ನಂತ್ರ ಮುಗಿಸೋಣ. ಮೊದಲು ರೇಖಾಳನ್ನ ಮುಗಿಸೋಣ ಎಂದು ಮಾತನಾಡಿ ಮೀಟಿಂಗ್ ಮುಗಿಸಿದ್ರು. ಹಲವು ದಿನಗಳ ಕಾಲ ರೇಖಾಳ ದಿನಚರಿ ಅವರು ಯಾವಾಗ ಒಂಟಿಯಾಗಿರುತ್ತಾರೆ ಎಂದು ಗಮನಿಸಿದ್ರು. ಊಟ ನೀಡಿ ವಾಪಸ್ಸು ಹೋಗುವ ಸಮಯದಲ್ಲಿ ಜನರು ಕಡಿಮೆ ಇರ್ತಾರೆ ಅವಾಗ ಕೊಲೆ ಮಾಡೋದು ಎಂದು ಪ್ಲಾನ್ ಫಿಕ್ಸ್ ಮಾಡಿದ್ರು. ಈ ರೀತಿ ಮೃತ ಕದಿರೇಶ್ ಪತ್ನಿ ರೇಖಾ ಕದಿರೇಶ್ರ ಕೊಲೆ ಮಾಡಲಾಗಿದೆ. ಈ ಕೊಲೆಯ ಬಳಿಕ ನಗರದಲ್ಲಿ ಮತ್ತೆ ಮೂರು ಕೊಲೆ ನಡೆಯುವ ಸಾಧ್ಯತೆ ಇತ್ತು. ಸದ್ಯ ಪೊಲೀಸರ ತನಿಖೆಯಿಂದ ಈ ಮೂವರ ಕೊಲೆ ಬಗ್ಗೆ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: Rekha Kadiresh Murder ರೇಖಾ ನಾದಿನಿ ಮಾಲಾಳ ಹಿಸ್ಟರಿ ರೀ ಓಪನ್.. ಜೋಪಡಿ ರಾಜೇಂದ್ರ ಕೊಲೆಯಲ್ಲೂ ಈಕೆ ಆರೋಪಿ

(Rekha Kadiresh Murder Updates peter and team has planned for 3 more murders in bengaluru)

Published On - 11:57 am, Thu, 1 July 21

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ