ಅರವಿಂದ್​ ಬೆಲ್ಲದ್​ಗೆ ವಂಚಕ ಯುವರಾಜ ಸ್ವಾಮಿ ಫೋನ್ ಕಾಲ್ ಪ್ರಕರಣ: ಕೇಸ್​ನಲ್ಲಿ ಮಹತ್ತರ ಬೆಳವಣಿಗೆಗಳು, ಪೊಲೀಸರಿಗೇ ಶಾಕ್!

Arvind Bellad telephone tapping allegation: ಮುಶೀರಾಬಾದ್​​ನಲ್ಲಿ ಜಿತೇಂದ್ರ ಪ್ರಖ್ಯಾತ್​ ಮನೆಗೆ ತೆರಳಿದ್ದ ಬೆಂಗಳೂರು ಪೊಲೀಸರು ಇನ್ನೇನು ಆತನನ್ನು ಪ್ರಶ್ನೆ ಮಾಡಬೇಕು ಆ ವೇಳೆಗೆ.. ಅರವಿಂದ ಬೆಲ್ಲದ್ ರಿಂದ ಪೊಲೀಸರಿಗೆ ಪೋನ್ ಕಾಲ್ ಹೋಗಿದೆ. ಎರಡು ಬಾರಿ ಫೋನ್ ಮಾಡಿ ವಾಪಸ್ಸು ಬರುವಂತೆ ಪೊಲೀಸರಿಗೆ ಬೆಲ್ಲದ್ ಸೂಚಿಸಿದ್ದಾರೆ. ಬೆಲ್ಲದ್ ಕರೆ ಬಳಿಕ ಮಾಜಿ ಸಚಿವ ರಾಮದಾಸ್ ಸಹ ಕರೆ ಮಾಡಿ, ಜಿತೇಂದ್ರ ಪ್ರಖ್ಯಾತ್ ನಿವಾಸದಿಂದ ಹೊರ ಬರುವಂತೆ ಪೊಲೀಸರಿಗೆ ಹೇಳಿದ್ದಾರೆ. ರಾಮದಾಸ್ ಕರೆ ಬಳಿಕ ಕೇಂದ್ರ ಸಚಿವ ಸದಾನಂದ ಗೌಡ ಸಹ ಕರೆ ಮಾಡಿದ್ದಾರೆ.

ಅರವಿಂದ್​ ಬೆಲ್ಲದ್​ಗೆ ವಂಚಕ ಯುವರಾಜ ಸ್ವಾಮಿ ಫೋನ್ ಕಾಲ್ ಪ್ರಕರಣ: ಕೇಸ್​ನಲ್ಲಿ ಮಹತ್ತರ ಬೆಳವಣಿಗೆಗಳು, ಪೊಲೀಸರಿಗೇ ಶಾಕ್!
ಅರವಿಂದ ಬೆಲ್ಲದ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 01, 2021 | 12:22 PM

ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆ ರಾದ್ಧಾಂತ ತಣ್ಣಗಾಯಿತು ಅಂದುಕೊಳ್ಳುತ್ತಿರುವಾಗಲೇ ನಾಯಕತ್ವದ ಬದಲಾವಣೆಗೆ ಪಟ್ಟುಹಿಡಿದಿದ್ದ ಬಿಜೆಪಿ ಶಾಸಕ ಅರವಿಂದ್​ ಬೆಲ್ಲದ್​ ಅವರ ಟೆಲಿಫೋನ್​ ಟ್ಯಾಪಿಂಗ್​ ದೂರಿನ ಬೆನ್ನುಹತ್ತಿದ ಬೆಂಗಳೂರು ಪೊಲೀಸರು ಅನೇಕಾನೇಕ ಮಹತ್ವದ ವಿಷಯಗಳನ್ನು ಕಲೆಹಾಕಿದ್ದಾರೆ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ಶಾಸಕ ಅರವಿಂದ್​ ಬೆಲ್ಲದ್​ ಇತ್ತೀಚೆಗೆ ಕರ್ನಾಟಕ ಬಿಜೆಪಿ ಉಸ್ತುವಾರಿ ನಾಯಕ ಅರುಣ್​ ಸಿಂಗ್​ ಬೆಂಗಳೂರಿಗೆ ಬಂದಿದ್ದಾಗ ದೂರವಾಣಿ ಕದ್ದಾಲಿಕೆ ಭೂತವನ್ನು ಹೊರಬಿಟ್ಟಿದ್ದರು. ಅದೀಗ ಅಲ್ಲಾವುದ್ದೀನ್​ ಅದ್ಭುತ ದೀಪದಂತೆ ಅನೇಕ ವಿಷಯಗಳನ್ನು ಬಹಿರಂಗ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅರವಿಂದ್​ ಬೆಲ್ಲದ್ ಗೆ ಮತ್ತೊಂದು ನೋಟಿಸ್ ನೀಡಿ, ಮತ್ತಷ್ಟು ಮಾಹಿತಿ ಖಚಿತಪಡಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ​

ಟೆಲಿಫೋನ್​ ಟ್ಯಾಪಿಂಗ್​ ಆರೋಪದ ಸಮ್ಮುಖದಲ್ಲಿ ಶಾಸಕ ಬೆಲ್ಲದ್ ನೀಡಿದ್ದ ಫೋನ್ ನಂಬರ್ ಹುಡುಕಿ ಹೊರಟಿದ್ದ ಪೊಲೀಸರಿಗೆ ಶಾಕ್ ಆಗಿದೆ. ಬೆಲ್ಲದ್ ನೀಡಿದ್ದ ಪೋನ್ ನಂಬರ್ ತಡಕಾಡಿದಾಗ ಒರ್ವ ಅರ್ಚಕನಿಂದ ಕಾನ್ಫರೆನ್ಸ್ ಕಾಲ್ ಮಾಡಲಾಗಿತ್ತು ಎಂಬುದು ಪ್ರಾಥಮಿಕವಾಗಿ ಈ ಹಿಂದೆಯೇ ತಿಳಿದುಬಂದಿತ್ತು. ಅಷ್ಟಕ್ಕೂ ಫೋನ್ ಮಾಡಿದ್ದ ಮೂಲದ ವ್ಯಕ್ತಿ ಯಾರು, ಎಲ್ಲಿಯವನು ಎಂದು ತಿಳಿಯಲು ಫೋನ್ ನಂಬರ್ ಬೆನ್ನುಹತ್ತಿಹೋದ ಪೊಲೀಸರು ನಿಂತಿದ್ದು ಹೈದ್ರಾಬಾದ್ ನಲ್ಲಿ. ಅದೂ ಹೈದ್ರಾಬಾದ್ ನ ಒರ್ವ ಆರ್​ಎಸ್ಎಸ್ ಲೀಡರ್ ನಿವಾಸದಲ್ಲಿ!

ಸಂಘದಲ್ಲಿ ಸಕ್ರಯರಾಗಿರುವ ಜಿತೇಂದ್ರ ಪ್ರಖ್ಯಾತ್ ನಿವಾಸದಲ್ಲಿ ಪೊಲೀಸರು ಹೆಜ್ಜೆಯಿಟ್ಟಿದ್ದರು. ಹೈದ್ರಾಬಾದ್ ನ ಮುಶೀರಾಬಾದ್ ನಲ್ಲಿ ಜಿತೇಂದ್ರ ನಿವಾಸವಿದೆ. ಹಲವು ರಾಜಕೀಯ ನಾಯಕರಿಗೆ ಪೂಜೆ, ಹೋಮ ಹವನ ಸಹ ಮಾಡಿ ಕೊಟ್ಟಿರುವ ಪ್ರಖ್ಯಾತಿ ಈ ಜಿತೇಂದ್ರದು! ಈ ಹಿಂದೆ ಇವರು ವಿಜಯೇಂದ್ರಗೆ ಸಹ ಪೂಜೆ ಮಾಡಿ ಕೊಟ್ಟಿದ್ದಾರೆ.

ಮುಶೀರಾಬಾದ್​​ನಲ್ಲಿ ಜಿತೇಂದ್ರ ಪ್ರಖ್ಯಾತ್​ ಮನೆಗೆ ತೆರಳಿದ್ದ ಬೆಂಗಳೂರು ಪೊಲೀಸರು ಇನ್ನೇನು ಆತನನ್ನು ಪ್ರಶ್ನೆ ಮಾಡಬೇಕು ಆ ವೇಳೆಗೆ.. ಅರವಿಂದ ಬೆಲ್ಲದ್ ರಿಂದ ಪೊಲೀಸರಿಗೆ ಪೋನ್ ಕಾಲ್ ಹೋಗಿದೆ. ಎರಡು ಬಾರಿ ಫೋನ್ ಮಾಡಿ ವಾಪಸ್ಸು ಬರುವಂತೆ ಪೊಲೀಸರಿಗೆ ಬೆಲ್ಲದ್ ಸೂಚಿಸಿದ್ದಾರೆ. ಬೆಲ್ಲದ್ ಕರೆ ಬಳಿಕ ಮಾಜಿ ಸಚಿವ ರಾಮದಾಸ್ ಸಹ ಕರೆ ಮಾಡಿ, ಜಿತೇಂದ್ರ ಪ್ರಖ್ಯಾತ್ ನಿವಾಸದಿಂದ ಹೊರ ಬರುವಂತೆ ಪೊಲೀಸರಿಗೆ ಹೇಳಿದ್ದಾರೆ.

ರಾಮದಾಸ್ ಕರೆ ಬಳಿಕ ಕೇಂದ್ರ ಸಚಿವ ಸದಾನಂದ ಗೌಡ ಸಹ ಕರೆ ಮಾಡಿದ್ದಾರೆ. ಈ ಮಧ್ಯೆ, ಜಿತೇಂದ್ರ ನಿವಾಸದಲ್ಲಿ ಇದ್ದವರು ಬೆಂಗಳೂರಿನಿಂದ ಹೋಗಿದ್ದ ಪೊಲೀಸರ ಜೊತೆ ಗಲಾಟೆ ಮಾಡಿದ್ದಾರೆ. ಆರ್​ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಕರೆ ಮಾಡುವುದಾಗಿ ಕೂಗಾಡಿದ್ದಾರೆ.

ಈ ಅನಿರೀಕ್ಷಿತ ಬೆಳವಣಿಗೆಗಳ ಮಧ್ಯೆ, ಪ್ರಕರಣದ ತನಿಖಾಧಿಕಾರಿ ಎಸಿಪಿ ಯತಿರಾಜ್ ಅವರನ್ನು ಬದಲಾಯಿಸಿ ಎಸಿಪಿ ಪೃಥ್ವಿಗೆ ತನಿಖೆ ಜವಾಬ್ದಾರಿ ವಹಿಸಲಾಗಿದೆ. ಅಲ್ಲಿದ್ದವರ ಹೇಳಿಕೆ ದಾಖಲು ಮಾಡಿಕೊಂಡು ಬರುವಂತೆ ಆಗಿನ ತನಿಖಾಧಿಕಾರಿ ಎಸಿಪಿ ಯತಿರಾಜ್ ಅವರಿಗೆ ಸೂಚಿಸಲಾಗಿದೆ. ನಂತ್ರ ಕಮಿಷನರ್ ಕಮಲ್ ಪಂತ್ ಅವರಿಂದಲೂ ವಾಪಸ್ಸು ಬರುವಂತೆ ಎಸಿಪಿ ಯತಿರಾಜ್ ಅವರಿಗೆ ಮೌಖಿಕ ಸೂಚನೆ ಹೋಗಿದೆ. ಕೊನೆಗೆ ಹೇಳಿಕೆಯನ್ನೂ ದಾಖಲು ಮಾಡದೆ ಪೊಲೀಸರು ಬರಿಗೈಯಲ್ಲಿ ವಾಪಸ್ಸು ಬಂದಿದ್ದಾರೆ.

ಈ ವೇಳೆ, ನಮ್ಮ ಬಳಿಗೆ ಪೊಲೀಸರನ್ನು ಯಡಿಯೂರಪ್ಪ ಕಳಿಸಿದ್ದಾರೆ. ಅವರನ್ನ ಹಾಗೆಯೇ ಬಿಡ್ತೀವಾ.. ಯಾವ ಕಾರಣಕ್ಕೂ ಸಿಎಂ ಆಗಿ ಇರೋದಿಕ್ಕೆ ಅವರನ್ನ ಬಿಡೋದಿಲ್ಲಾ.. ಎಂದೂ ಜಿತೇಂದ್ರ ಪ್ರಖ್ಯಾತ್ ನಿವಾಸದಲ್ಲಿದ್ದವರು ಪೊಲೀಸರ ಎದುರು ಕೂಗಾಡಿದ್ದರಂತೆ!

ಇನ್ನು ಜಿತೇಂದ್ರ ಪ್ರಖ್ಯಾತ್ ಕಾಲ್ ಡೀಟೆಲ್ಸ್ ತಡಕಾಡಿದಾಗ ಇನ್ನೂ ಹಲವು ಪ್ರಮುಖರು ಸಂಪರ್ಕದಲ್ಲಿರುವುದು ಪೊಲೀಸರಿಗೆ ಗೊತ್ತಾಗಿದೆ. ರಾಷ್ಟ್ರಮಟ್ಟದ ಹಲವು ಆರ್​ಎಸ್ಎಸ್ ಮುಖಂಡರು ಮತ್ತು ಬಿಜೆಪಿ ಮುಖಂಡರ ಜೊತೆ ಪ್ರಖ್ಯಾತ್ ನಿರಂತರ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ.

ಸದ್ಯ ಬೆಲ್ಲದ್ ಟೆಲಿಫೋನ್​ ಟ್ಯಾಪಿಂಗ್​ ಪ್ರಕರಣಕ್ಕೆ ಹೈಲೆವೆಲ್ ಟಚ್ ಬಂದ ಕಾರಣ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ. ಅರವಿಂದ ಬೆಲ್ಲದ್ ಗೆ ಮತ್ತೊಂದು ನೋಟಿಸ್ ನೀಡಲು ಸಹ ಬೆಂಗಳೂರು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೊದಲ ಬಾರಿ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿದ್ದ ಪೊಲೀಸರು ತನಿಖಾ ಅಧಿಕಾರಿ ಬದಲಾದ ಬಳಿಕ ವಿಚಾರಣೆ ನಡೆಸಿಲ್ಲ. ಹಲವು ಮಾಹಿತಿಯನ್ನು ಹೆಚ್ಚುವರಿಯಾಗಿ ಪಡೆಯಬೇಕಿರೊ ಕಾರಣಕ್ಕೆ ಮತ್ತೆ ನೋಟಿಸ್ ನೀಡುವ ಸಾಧ್ಯತೆಯಿದೆ.

(bjp mla arvind bellad telephone tapping allegations case latest details from investigating bengaluru police)

ನನ್ನ ಫೋನ್​ ಟ್ಯಾಪ್ ಆಗಿರುವ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುವೆ: ಶಾಸಕ ಅರವಿಂದ್ ಬೆಲ್ಲದ್

Published On - 12:20 pm, Thu, 1 July 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್