AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 12 ವರ್ಷದ ಬಾಲಕ ಆತ್ಮಹತ್ಯೆಗೆ ಶರಣು; ಡೆತ್ ನೋಟ್​ನಲ್ಲಿ ಮತ್ತೊಬ್ಬ ಬಾಲಕ ಕಾರಣವೆಂದು ಉಲ್ಲೇಖ

ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಾಲಕನ ಆತ್ಮಹತ್ಯೆ ನೈಜ ಕಾರಣವೇನು ಎಂದು ಇನ್ನು ತಿಳಿದುಬಂದಿಲ್ಲ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಬಾಲಕನ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಬೆಂಗಳೂರಿನಲ್ಲಿ 12 ವರ್ಷದ ಬಾಲಕ ಆತ್ಮಹತ್ಯೆಗೆ ಶರಣು; ಡೆತ್ ನೋಟ್​ನಲ್ಲಿ ಮತ್ತೊಬ್ಬ ಬಾಲಕ ಕಾರಣವೆಂದು ಉಲ್ಲೇಖ
ಪ್ರಾತಿನಿಧಿಕ ಚಿತ್ರ
TV9 Web
| Edited By: sandhya thejappa|

Updated on:Jul 01, 2021 | 10:56 AM

Share

ಬೆಂಗಳೂರು: ನೇಣು ಬಿಗಿದುಕೊಂಡು 12 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೆಂಗಳೂರಿನ ರಾಜಾಜಿನಗರದ ಮನೆಯೊಂದರಲ್ಲಿ ನಡೆದಿದೆ. ನೇಣಿಗೆ ಶರಣಾದ ಬಾಲಕ ಒಂದು ಸಾಲಿನ ಡೆತ್ ನೋಟ್ ಬರೆದಿಟ್ಟಿದ್ದಾನೆ. ಡೆತ್ ನೋಟ್​ನಲ್ಲಿ ನನ್ನ ಸಾವಿಗೆ ಮತ್ತೊಬ್ಬ ಬಾಲಕ ಕಾರಣ ಎಂದು ಉಲ್ಲೇಖಿಸಿದ್ದಾನೆ. ಬಾಲಕನ ತಂದೆ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಅಮ್ಮ ಮನೆ ಕೆಲಸ ಮಾಡಿಕೊಂಡಿದ್ದರು.

ನಿನ್ನೆ ಸಂಜೆ (ಜೂನ್ 30) ಬಾಲಕನ ತಾಯಿ ಮನೆ ಕೆಲಸ ಮಾಡಿ ಮನೆಗೆ ವಾಪಸ್ಸಾಗಿದ್ದಾರೆ. ಈ ವೇಳೆ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಾಲಕನ ಆತ್ಮಹತ್ಯೆ ನೈಜ ಕಾರಣವೇನು ಎಂದು ಇನ್ನು ತಿಳಿದುಬಂದಿಲ್ಲ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಬಾಲಕನ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹಣದ ಕಿರುಕುಳ; ವ್ಯಕ್ತಿ ನೇಣಿಗೆ ಶರಣು ಹಣದ ವಿಚಾರವಾಗಿ ಕಿರುಕುಳ ನೀಡಿದ ಹಿನ್ನೆಲೆ ವ್ಯಕ್ತಿಯೋರ್ವ ನೇಣಿಗೆ ಶರಣಾಗಿದ್ದಾನೆ. ಬಾಗಲಗುಂಟೆಯಲ್ಲಿ ಗುರುಪ್ರಸಾದ್(35) ಎಂಬಾತ ಆತ್ಮಹತ್ಯೆ ಶರಣಾದ ವ್ಯಕ್ತಿ. ಪತ್ನಿ ಶಿಲ್ಪಳನ್ನ ತವರು ಮನೆಗೆ ಕಳಿಸಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಗುರುಪ್ರಸಾದ್ ಉನ್ನತಿ ಚಾರಿಟಬಲ್ ಟ್ರಸ್ಟ್ ಸೆಕ್ರೆಟರಿ. ಸಾರ್ವಜನಿಕರ ಬಳಿ ದೇಣಿಗೆ ಸಂಗ್ರಹಿಸಿ ಎನ್ಜಿಓಗೆ ಹಣ ನೀಡಿದ್ದರು. ಸಂಗ್ರಹಿಸಿ ಕೊಟ್ಟ ಹಣಕ್ಕೆ ಕಮಿಷನ್ ಕೊಡದೆ ಮೋಸ ಮಾಡಿರುವ ಅರೋಪ ಹಿನ್ನೆಲೆ ಕಿರುಕುಳಕ್ಕೆ ಬೇಸತ್ತು ಗುರುಪ್ರಸಾದ್ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಪತಿ ಆತ್ಮಹತ್ಯೆ ವಿರುದ್ಧ ಬಾಗಲಗುಂಟೆ ಪೋಲಿಸ್ ಠಾಣೆಗೆ ಪತ್ನಿ ಶಿಲ್ಪ ದೂರು ನೀಡಿದ್ದಾರೆ.

ಇದನ್ನೂ ಓದಿ

Twitter Down: ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗುತ್ತಿದೆ; ಬಳಕೆದಾರರಿಗೆ ಉಂಟಾದ ಅಡಚಣೆಯನ್ನು ಸರಿಪಡಿಸಿದ ಟ್ವಿಟರ್​

ತಾನು ಯಡಿಯೂರಪ್ಪ ಪರ ಎಂದು ಘೋಷಿಸಿದ ಬಳಿಕ ಸಚಿವ ಯೋಗೇಶ್ವರ್ ತಮ್ಮ ಪ್ರವಾಸೋದ್ಯಮ ಇಲಾಖೆ ಕಾರ್ಯಗಳಲ್ಲಿ ಇಂದು ಫುಲ್​ ಬ್ಯುಸಿ!

(Bengaluru 12 year old boy commits suicide in rajajinagar)

Published On - 10:55 am, Thu, 1 July 21

Follow Us
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ