Twitter Down: ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗುತ್ತಿದೆ; ಬಳಕೆದಾರರಿಗೆ ಉಂಟಾದ ಅಡಚಣೆಯನ್ನು ಸರಿಪಡಿಸಿದ ಟ್ವಿಟರ್
ಸಮಸ್ಯೆಯ ಮೂಲವನ್ನು ಪತ್ತೆಹಚ್ಚುವ ಕೆಲಸ ಸಾಗಿದ್ದು, ಬಳಕೆದಾರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಸಮಸ್ಯೆ ಎದುರಾದ ನಂತರವೂ ತಾಳ್ಮೆಯಿಂದ ಕಾದು ನಮಗೆ ಸಹಕರಿಸಿದ್ದಕ್ಕೆ ಧನ್ಯವಾದಗಳು ಎಂದು ಟ್ವಿಟರ್ ಟ್ವೀಟ್ ಮಾಡಿದೆ.
ಕಳೆದ ಕೆಲದಿನಗಳಿಂದ ಬೇರೆ ಬೇರೆ ಕಾರಣಗಳಿಂದ ಸುದ್ದಿಯಲ್ಲಿರುವ ಟ್ವಿಟರ್ ಇಂದು ತಾಂತ್ರಿಕ ದೋಷಗಳಿಂದಾಗಿ ಕೆಲ ಕಾಲ ಸ್ಥಗಿತಗೊಂಡಿತ್ತು. ಆದರೆ, ಇದೀಗ ದೋಷಗಳನ್ನು ಸರಿಪಡಿಸಿರುವುದಾಗಿ ತನ್ನ ಅಧಿಕೃತ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿರುವ ಟ್ವಿಟರ್, ವೆಬ್ ಮೂಲಕ ಟ್ವಿಟರ್ ಬಳಸುತ್ತಿದ್ದ ಬಳಕೆದಾರರಿಗೆ ಎದುರಾಗಿದ್ದ ಸಮಸ್ಯೆಗಳನ್ನು ಪತ್ತೆಹಚ್ಚಿ ಸರಿಮಾಡಿದ್ದೇವೆ ಎಂದು ತಿಳಿಸಿದೆ. ಇಂದು ಮುಂಜಾನೆಯಿಂದಲೇ ಕೆಲ ಭಾಗಗಳಲ್ಲಿ ಟ್ವಿಟರ್ ವೆಬ್ ಸರಿಯಾಗಿ ಕೆಲಸ ಮಾಡದ ಕಾರಣ ಬಳಕೆದಾರರು ಆ ಬಗ್ಗೆ ಮಾತನಾಡಿಕೊಳ್ಳಲಾರಂಭಿಸಿದ್ದರು.
ದೋಷ ಕಂಡುಬರುತ್ತಲೇ ತಕ್ಷಣ ಎಚ್ಚೆತ್ತುಕೊಂಡ ಟ್ವಿಟರ್ ಅದರತ್ತ ಗಮನಹರಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡಿದೆ. ಅಲ್ಲದೇ, ಸಮಸ್ಯೆಯ ಮೂಲವನ್ನು ಪತ್ತೆಹಚ್ಚುವ ಕೆಲಸ ಸಾಗಿದ್ದು, ಬಳಕೆದಾರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಸಮಸ್ಯೆ ಎದುರಾದ ನಂತರವೂ ತಾಳ್ಮೆಯಿಂದ ಕಾದು ನಮಗೆ ಸಹಕರಿಸಿದ್ದಕ್ಕೆ ಧನ್ಯವಾದಗಳು ಎಂದು ಟ್ವಿಟರ್ ಟ್ವೀಟ್ ಮಾಡಿದೆ.
Profiles’ Tweets may not be loading for some of you on web and we’re currently working on a fix. Thanks for sticking with us!
— Twitter Support (@TwitterSupport) July 1, 2021
Tweets should now be visible on profiles, but other parts of Twitter for web may not be loading for you. We’re continuing to work on getting things back to normal.
— Twitter Support (@TwitterSupport) July 1, 2021
Aaaand we’re back. Twitter for web should be working as expected. Sorry for the interruption!
— Twitter Support (@TwitterSupport) July 1, 2021
Tweets (which were not loading earlier on profiles) should now be visible on profiles, but other parts of Twitter for web may not be loading for you. We’re continuing to work on getting things back to normal: Twitter Support pic.twitter.com/aT7WnkkUqM
— ANI (@ANI) July 1, 2021
ಇಂಥದ್ದೇ ಸಮಸ್ಯೆ ಕಳೆದ ಏಪ್ರಿಲ್ ತಿಂಗಳಿನಲ್ಲೂ ಟ್ವಿಟರ್ಗೆ ಎದುರಾಗಿತ್ತು. ಅಂತೆಯೇ, ಕೆಲ ತಿಂಗಳ ಹಿಂದೆ ಫೇಸ್ಬುಕ್ ಹಾಗೂ ಅದರ ಅಂಗ ಸಂಸ್ಥೆಗಳಾದ ಇನ್ಸ್ಟಾಗ್ರಾಂ, ವಾಟ್ಸ್ಯಾಪ್ ಎಲ್ಲವೂ ಕೆಲ ಕಾಲ ಸ್ಥಗಿತಗೊಂಡು ಬಳಕೆದಾರರಿಗೆ ಅಡಚಣೆ ಉಂಟಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಟ್ವಿಟರ್ ವಿರುದ್ಧ ಪೋಕ್ಸೋ, ಐಟಿ ಕಾಯ್ದೆಯಡಿ ದೂರು ದಾಖಲಿಸಿದ ದೆಹಲಿ ಪೊಲೀಸರು; ಎನ್ಸಿಪಿಸಿಆರ್ ವರದಿ ಆಧರಿಸಿ ದೂರು
India Map Twitter: ವೆಬ್ಸೈಟ್ನಿಂದ ಭಾರತದ ತಪ್ಪು ಭೂಪಟ ತೆಗೆದು ಪ್ರಮಾದ ತಿದ್ದಿಕೊಂಡ ಟ್ವಿಟರ್