Rekha Kadiresh Murder ರೇಖಾ ನಾದಿನಿ ಮಾಲಾಳ ಹಿಸ್ಟರಿ ರೀ ಓಪನ್.. ಜೋಪಡಿ ರಾಜೇಂದ್ರ ಕೊಲೆಯಲ್ಲೂ ಈಕೆ ಆರೋಪಿ
ಮಾಲಾ ಈ ಹಿಂದೆ 2002ರಲ್ಲಿ ಜೋಪಡಿ ರಾಜೇಂದ್ರ ಕೊಲೆ ಪ್ರಕರಣದ ಆರೋಪಿಯಾಗಿದ್ದರು. ಕದಿರೇಶ್ ಜೊತೆ ಭಾಗಿಯಾಗಿ ರಾಜೇಂದ್ರ ಕೊಲೆ ಮಾಡಿಸಿದ್ದರು. ಈ ವೇಳೆ ಮಾಲಾ ವಿರುದ್ಧ ರೌಡಿಶೀಟ್ ಓಪನ್ ಆಗಿತ್ತು.
ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆಯಾದ ದಿನ ನನಗೂ ಈ ಕೊಲೆಗೂ ಯಾವ ಸಂಬಂಧವೇ ಇಲ್ಲದಂತೆ ಕಣ್ಣೀರು ಹಾಕಿದ್ದರು. ಬಳಿಕ ಪ್ರಕರಣದ ಜಾಡನ್ನು ಹಿಡಿದು ತನಿಖೆ ಶುರು ಮಾಡಿದ ಪೊಲೀಸರು ರೇಖಾಳ ಕೊಲೆಯಲ್ಲಿ ನಾದಿನಿ ಮಾಲಾಳ ಕೈವಾಡ ಇರುವುದು ಬಯಲಾಯಿತು. ಸದ್ಯ ಆರೋಪಿಯಾಗಿರುವ ಮಾಲಾಳ ಹಿಂದೆ ದೊಡ್ಡ ಹಿಸ್ಟರಿಯೇ ಅಡಗಿದೆ. ಹೀಗಾಗಿ ಹತ್ಯೆಯ ಹಿಂದೆ ಮಸಲತ್ತು ಮಾಡಿದ ಮಾಲ ಹಿಸ್ಟರಿ ರೀ ಓಪನ್ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಮಾಲಾ ಈ ಹಿಂದೆ 2002ರಲ್ಲಿ ಜೋಪಡಿ ರಾಜೇಂದ್ರ ಕೊಲೆ ಪ್ರಕರಣದ ಆರೋಪಿಯಾಗಿದ್ದರು. ಕದಿರೇಶ್ ಜೊತೆ ಭಾಗಿಯಾಗಿ ರಾಜೇಂದ್ರ ಕೊಲೆ ಮಾಡಿಸಿದ್ದರು. ಈ ವೇಳೆ ಮಾಲಾ ವಿರುದ್ಧ ರೌಡಿಶೀಟ್ ಓಪನ್ ಆಗಿತ್ತು. ಅದಾದ ಬಳಿಕ ಗಾಂಜಾ ಕೇಸ್ಗಳಲ್ಲಿ ಹೆಸರು ಬಂದಿತ್ತು. 2018ರಲ್ಲಿ ಕದಿರೇಶ್, ಪೀಟರ್ ಜೊತೆ ಮಾಲಾಳ ರೌಡಿ ಪಟ್ಟಿ ಕ್ಲೋಸ್ ಆಗಿತ್ತು. 2015ರವರೆಗೂ ಸಣ್ಣಪುಟ್ಟ ಕೇಸ್ಗಳಲ್ಲಿ ಮಾಲಾ ಭಾಗಿಯಾಗಿದ್ದರು. ಬಳಿಕ ಮನೆಯ ಬಳಿ ಸಣ್ಣದೊಂದು ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದರು. ಈಗ ಮತ್ತೆ ರೇಖಾ ಕೊಲೆ ಕೇಸ್ ಬಳಿಯ ರೌಡಿಶೀಟ್ ರೀ ಓಪನ್ ಆಗಲಿದೆ.
ಸದ್ಯ ರೇಖಾ ಕೊಲೆ ಪ್ರಕರಣದ ಇಬ್ಬರು ಆರೋಪಿಗಳು ಈಗಾಗಲೇ ರೌಡಿಶೀಟರ್ಗಳಾಗಿದ್ದಾರೆ. ಮಾಲಾಳ ಮಗ ಅರುಣ್ ಹಾಗೂ ಪುರುಷೋತ್ತಮ್ ವಿರುದ್ಧ ರೌಡಿ ಪಟ್ಟಿ ಓಪನ್ ಆಗಿವೆ. ಉಳಿದ ಐವರ ವಿರುದ್ಧ ರೌಡಿಶೀಟ್ ಓಪನ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಪೀಟರ್, ಮಾಲಾ, ಸ್ಟೀಫನ್ ಸೇರಿದಂತೆ ಅಜಯ್ ಹಾಗೂ ಸೂರ್ಯ ವಿರುದ್ಧ ರೌಡಿಪಟ್ಟಿ ಓಪನ್ ಮಾಡಲು ತಯಾರಿ ನಡೆಯುತ್ತಿದೆ.
ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣ: ರೌಡಿಶೀಟರ್ ಮನೆಗಳಿಗೆ ಹೋಗಿ ಎಚ್ಚರಿಕೆ ಕೊಟ್ಟ ಡಿಸಿಪಿ