Crime News: ಬಾಯ್​ಫ್ರೆಂಡ್​ನನ್ನು ಕೆಲಸದಿಂದ ಕಿತ್ತೊಗೆದ ಕಂಪನಿಗೆ ಗರ್ಲ್​ಫ್ರೆಂಡ್ ಮಾಡಿದ್ದೇನು ಗೊತ್ತಾ?

Gujarat Crime News: ತನ್ನ ಬಾಯ್​ಫ್ರೆಂಡ್​ನನ್ನು ಕೆಲಸದಿಂದ ತೆಗೆದುಹಾಕಿದ ಬಳಸಿದ ಬಟ್ಟೆಗಳನ್ನು ಮರುಬಳಕೆ ಮಾಡುವ ಕಂಪನಿಗೆ ಪಾಠ ಕಲಿಸಲು ಮುಂದಾದ ಪ್ರೇಯಸಿಯೊಬ್ಬಳು ಏನು ಮಾಡಿದ್ದಾಳೆ ಗೊತ್ತಾ?

Crime News: ಬಾಯ್​ಫ್ರೆಂಡ್​ನನ್ನು ಕೆಲಸದಿಂದ ಕಿತ್ತೊಗೆದ ಕಂಪನಿಗೆ ಗರ್ಲ್​ಫ್ರೆಂಡ್ ಮಾಡಿದ್ದೇನು ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 11, 2021 | 12:35 PM

ರಾಜ್​ಕೋಟ್: ಕೊರೋನಾದಿಂದ ಲಾಕ್​ಡೌನ್ ಘೋಷಣೆಯಾಗಿದ್ದರಿಂದ ದೇಶದ ಬಹುತೇಕ ಕಂಪೆನಿಗಳ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಕಳೆದೊಂದು ವರ್ಷದಿಂದ ಉಂಟಾದ ಆರ್ಥಿಕ ಕುಸಿತದಿಂದ ಸಾವಿರಾರು ಜನರು ನಿರುದ್ಯೋಗಿಗಳಾಗಿದ್ದಾರೆ. ಇದೇ ರೀತಿ ಗುಜರಾತ್​ನ (Gujarat) ಗಾಂಧಿಧಾಮದ ಬಟ್ಟೆ ಕಾರ್ಖಾನೆಯೊಂದರ (Cloth Factory) ಉದ್ಯೋಗಿಯನ್ನೂ ಕೆಲಸದಿಂದ ತೆಗೆದುಹಾಕಲಾಗಿತ್ತು. ಆದರೆ, ಇದರಿಂದ ಕೋಪಗೊಂಡ ಆತನ ಪ್ರೇಯಸಿ ಆ ಕಾರ್ಖಾನೆಗೆ ಬೆಂಕಿ (Fire) ಹಚ್ಚಲು ಪ್ರಯತ್ನಿಸಿದ್ದಾಳೆ!

ಇದೇನಿದು ವಿಚಿತ್ರ ಅಂತೀರಾ? ಇದೊಂದು ರೀತಿಯ ವಿಚಿತ್ರ ಕತೆಯೆಂಬುದು ನಿಜ. ಗುಜರಾತ್​ನ ಗಾಂಧಿಧಾಮದಲ್ಲಿರುವ ಬಳಸಿದ ಬಟ್ಟೆಗಳನ್ನು ಮರುಬಳಕೆ ಮಾಡುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ವಿನೋದ್ ಎಂಬ ಉದ್ಯೋಗಿಯನ್ನು ಇತ್ತೀಚೆಗಷ್ಟೆ ಕೆಲಸದಿಂದ ತೆಗೆದುಹಾಕಲಾಗಿತ್ತು. ಹೀಗಾಗಿ, ಆ ಫ್ಯಾಕ್ಟರಿಯ ಮಾಲೀಕರಿಗೆ ಬುದ್ಧಿ ಕಲಿಸಲು ಮುಂದಾದ ವಿನೋದ್​ನ ಪ್ರೇಯಸಿ ಮಾಯಾಬೆನ್ ಪರ್ಮಾರ್ ಎಂಬ 24 ವರ್ಷದ ಯುವತಿ ಆ ಫ್ಯಾಕ್ಟರಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾಳೆ.

ಅಷ್ಟಕ್ಕೂ ಆಗಿದ್ದೇನು?: ಜುಲೈ 5ರಂದು ಸಂಜೆ 5.30ರ ವೇಳೆಗೆ ಗಾಂಧಿಧಾಮದ ಬಳಿ ಇರುವ ಗಣೇಶ್ ನಗರ ಎಂಬಲ್ಲಿರುವ ಕನಮ್ ಇಂಟರ್​ನ್ಯಾಷನಲ್ ಪ್ರೈ. ಲಿಮಿಟೆಡ್ ಎಂಬ ಕಂಪನಿಯ ಯೂನಿಟ್​ಗೆ ಹೋದ ಮಾಯಾಬೆನ್ ಬಟ್ಟೆ ಕೊಳ್ಳುವ ರೀತಿ ವರ್ತಿಸಿದ್ದಳು. ಈಗಾಗಲೇ ಬಳಸಲ್ಪಟ್ಟ ಬಟ್ಟೆಗಳನ್ನು ರೀಸೈಕಲ್ ಮಾಡುವ ಫ್ಯಾಕ್ಟರಿ ಇದಾಗಿದ್ದು, ಅಲ್ಲಿ ಬಟ್ಟೆಗಳನ್ನು ರಾಶಿ ಹಾಕಲಾಗಿತ್ತು. ಆಗ ತನ್ನ ಬ್ಯಾಗ್​ನಲ್ಲಿದ್ದ ಲೈಟರ್ ತೆಗೆದುಕೊಂಡು ಆಕೆ ಬಟ್ಟೆಯ ರಾಶಿಗೆ ಬೆಂಕಿ ಹಚ್ಚಿದ್ದಾಳೆ.

ತಕ್ಷಣ ಇದನ್ನು ಸಿಸಿಟಿವಿಯಲ್ಲಿ ಗಮನಿಸಿದ ಫ್ಯಾಕ್ಟರಿ ಸಿಬ್ಬಂದಿ ಆ ಬೆಂಕಿಯನ್ನು ಆರಿಸಿದ್ದಾರೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಬೆಂಕಿ ಬೇರೆ ಬಟ್ಟೆಗಳಿಗೆ ಹರಡುವ ಮೊದಲೇ ಆರಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಬಳಿಕ ಮಾಯಾಬೆನ್​ಳನ್ನು ಪೊಲೀಸರಿಗೆ ಹಿಡಿದುಕೊಡಲಾಗಿದೆ.

ಯಾಕೆ ಈ ರೀತಿ ಬೆಂಕಿ ಹಚ್ಚಲು ಪ್ರಯತ್ನಿಸಿದ್ದು ಎಂದು ಆಕೆಯನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಮಾಯಾಬೆನ್​ಳ ಪ್ರೇಮಿ ಅಲ್ಲಿಯೇ ಉದ್ಯೋಗಿಯಾಗಿದ್ದ ಎಂಬುದು ಗೊತ್ತಾಗಿದೆ. ನನ್ನ ಬಾಯ್​ಫ್ರೆಂಡ್​ನನ್ನು ಕೆಲಸದಿಂದ ಕಿತ್ತುಹಾಕಿದ್ದಕ್ಕೆ ನನಗೆ ಬಹಳ ಕೋಪ ಬಂದಿತ್ತು. ಅದೇ ಕಾರಣಕ್ಕೆ ಫ್ಯಾಕ್ಟರಿಯ ಮಾಲೀಕರ ವಿರುದ್ಧ ದ್ವೇಷ ತೀರಿಸಿಕೊಳ್ಳಬೇಕೆಂದು ಬೆಂಕಿ ಹಚ್ಚಲು ಪ್ರಯತ್ನಿಸಿದೆ ಎಂದು ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಆಕೆ ಹೇಳಿದ್ದನ್ನು ಕೇಳಿ ಫ್ಯಾಕ್ಟರಿಯ ಆಡಳಿತ ಮಂಡಳಿಯವರು ಕೂಡ ಶಾಕ್ ಆಗಿದ್ದಾರೆ.

ಮಾಯಾಬೆನ್​ ವಿರುದ್ಧ ಕಂಪನಿಯ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ. ಆ ದೂರಿನ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ. ಈ ಕೃತ್ಯದ ಹಿಂದೆ ಆಕೆಯ ಬಾಯ್​ಫ್ರೆಂಡ್ ವಿನೋದ್ ಕೈವಾಡವೂ ಇದೆಯಾ? ಎಂಬುದು ಇನ್ನೂ ಗೊತ್ತಾಗಿಲ್ಲ. ಒಟ್ಟಾರೆ, ಆ ಕ್ಷಣದ ಕೋಪಕ್ಕೆ ಬುದ್ಧಿ ಕೊಟ್ಟು ಆ ಯುವತಿ ಪೊಲೀಸ್ ಠಾಣೆ ಸೇರಿದ್ದಾಳೆ.

ಇದನ್ನೂ ಓದಿ: Viral Video: ದಲಿತ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಗುಪ್ತಾಂಗಕ್ಕೆ ಥಳಿಸಿದ ಶಾಕಿಂಗ್ ವಿಡಿಯೋ ವೈರಲ್

ಇದನ್ನೂ ಓದಿ: Fire Accident in Dhaka: ಧಗಧಗನೆ ಹೊತ್ತಿ ಉರಿದ ಬಾಂಗ್ಲಾದೇಶದ ಫುಡ್ ಫ್ಯಾಕ್ಟರಿ, ಬೆಂಕಿ ದುರಂತದಲ್ಲಿ 52 ಜನ ಸಜೀವ ದಹನ

(Gujarat woman tries to set cloth factory afire after her boyfriend sacked from job)

Published On - 12:35 pm, Sun, 11 July 21

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್