ನಡುರಸ್ತೆಯಲ್ಲೇ ಬೆಂಕಿಗೆ ಆಹುತಿಯಾದ ಟೆಸ್ಲಾ ಕಾರು; 97 ಲಕ್ಷ ರೂ. ಮೌಲ್ಯದ ವಿದ್ಯುತ್​ ಚಾಲಿತ ಕಾರು ಸುಟ್ಟು ಕರಕಲು

ಸುಮಾರು 1,30,000 ಡಾಲರ್​ ಅಂದರೆ 97 ಲಕ್ಷ ರೂಪಾಯಿ ಬೆಲೆ ಬಾಳುವ ಈ ಕಾರು ಸಂಪೂರ್ಣ ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿದರೂ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ನಡುರಸ್ತೆಯಲ್ಲೇ ಬೆಂಕಿಗೆ ಆಹುತಿಯಾದ ಟೆಸ್ಲಾ ಕಾರು; 97 ಲಕ್ಷ ರೂ. ಮೌಲ್ಯದ ವಿದ್ಯುತ್​ ಚಾಲಿತ ಕಾರು ಸುಟ್ಟು ಕರಕಲು
ಬೆಂಕಿಗೆ ಆಹುತಿಯಾದ ಟೆಸ್ಲಾ
Follow us
TV9 Web
| Updated By: Skanda

Updated on: Jul 02, 2021 | 1:55 PM

ಟೆಸ್ಲಾ ಕಾರಿನ ಬಗ್ಗೆ ವಾಹನ ಪ್ರಿಯರಿಗೆ ವಿಶೇಷ ಆಸಕ್ತಿ ಇದ್ದೇ ಇರುತ್ತದೆ. ಅದರ ವೈಶಿಷ್ಟ್ಯತೆ, ಆಧುನಿಕ ಸೌಲಭ್ಯಗಳು, ವಿನ್ಯಾಸ ಎಲ್ಲವೂ ಗಮನ ಸೆಳೆಯುವಂಥದ್ದೇ. ಹೀಗಾಗಿ ಟೆಸ್ಲಾ ಸಂಸ್ಥೆಯ ಕಾರು ಕೊಳ್ಳುವುದೆಂದರೆ ಪ್ರತಿಷ್ಠೆ ಎಂದೂ ಭಾವಿಸಲಾಗುತ್ತದೆ. ತೀರಾ ದುಬಾರಿ ಬೆಲೆಯ ಟೆಸ್ಲಾ ಕಾರುಗಳಲ್ಲಿ ಹಣಕ್ಕೆ ತಕ್ಕಂತೆ ಸುರಕ್ಷತೆ, ಸೌಲಭ್ಯವೂ ಇರುತ್ತದೆ ಎನ್ನುವುದು ನಿಜ. ಆದರೆ, ಕೆಲವೊಮ್ಮೆ ಪರಿಸ್ಥಿತಿಗಳು ನಿಯಂತ್ರಣ ತಪ್ಪಿದಾಗ ಎಂತಹ ಅವಘಡ ಬೇಕಾದರೂ ಸಂಭವಿಸಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಪೆನ್ಸಿಲ್​ವೇನಿಯಾದಲ್ಲಿ ಜೂನ್​ 29ರಂದು ನಡೆದ ಘಟನೆಯೊಂದರಲ್ಲಿ ಅತ್ಯಂತ ದುಬಾರಿ ಬೆಲೆಯ ಟೆಸ್ಲಾ ಕಂಪೆನಿ ಕಾರು ನಡುರಸ್ತೆಯಲ್ಲಿಯೇ ಧಗಧಗನೆ ಹೊತ್ತಿ ಉರಿದಿದೆ. ಅದೃಷ್ಟವಶಾತ್, ಕಾರಿನಲ್ಲಿದ್ದ ಚಾಲಕ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಂಡಿದ್ದು, ಈ ಸುದ್ದಿಯೀಗ ವಾಹನ ಪ್ರಿಯರ ಬಾಯಲ್ಲಿ ಹರಿದಾಡುತ್ತಿದೆ.

ಟೆಸ್ಲಾ ಕಂಪೆನಿಯ ವಿದ್ಯುತ್​ ಚಾಲಿತ ಎಸ್​ ಪ್ಲೇಡ್ ಸೆಡಾನ್​ ಕಾರು ಪೆನ್ಸಿಲ್​ವೇನಿಯಾದ ಹೇವರ್​ಫೋರ್ಡ್​ ಬಳಿ ಇದ್ದಕ್ಕಿದ್ದಂತೆ ಬೆಂಕಿಗೆ ಆಹುತಿಯಾಗಿದೆ. ಸುಮಾರು 1,30,000 ಡಾಲರ್​ ಅಂದರೆ 97 ಲಕ್ಷ ರೂಪಾಯಿ ಬೆಲೆ ಬಾಳುವ ಈ ಕಾರು ಸಂಪೂರ್ಣ ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿದರೂ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅಗ್ನಿಶಾಮಕ ದಳದ ಮುಖ್ಯಸ್ಥ ಚಾರ್ಲ್ಸ್​ ಮೆಕ್​ ಗಾರ್ವೇ, ಟೆಸ್ಲಾ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುವಾಗ ಚಾಲಕ ಇನ್ನೂ ತನ್ನ ಸೀಟ್​ನಲ್ಲಿಯೇ ಇದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಲಾಕ್​ ತೆರೆದು ಹೊರದಾಟಲು ನೋಡಿದರೆ ಅದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಆದರೆ, ಇಡೀ ಕಾರನ್ನು ಬೆಂಕಿ ಆವರಿಸಿಕೊಂಡು, ಒಳಗೆ ಹೊಗೆ ತುಂಬಿಕೊಳ್ಳುತ್ತಿರುವಾಗ ಅದೃಷ್ಟವಶಾತ್​ ಚಾಲಕ ಹೇಗೋ ಹೊರ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್​ ಮಾಲೀಕ ತಿಳಿಸಿರುವಂತೆ, ಅವರು ಕಾರಿನಲ್ಲಿ ಚಲಿಸುತ್ತಿರುವಾಗ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಏನಾಯಿತೆಂದು ನೋಡಲು ಕಾರ್​ ನಿಲ್ಲಿಸಿ ಹೊರಗೆ ಇಳಿಯೋಣವೆಂದರೆ ಬಾಗಿಲು ಲಾಕ್​ ಆಗಿದೆ. ಆದರೆ, ಎಷ್ಟೇ ಪರದಾಡಿದರೂ ಲಾಕ್​ ತೆಗೆಯಲು ಸಾಧ್ಯವಾಗಿಲ್ಲ. ಕೊನೆಗೆ ಅನಿವಾರ್ಯವಾಗಿ ಬಲ ಪ್ರಯೋಗ ಮಾಡಿ ಕಾರಿನಿಂದ ಆಚೆ ಬಂದಿದ್ದಾರೆ.

ಈ ಬಗ್ಗೆ ಕಾರ್​ ಮಾಲೀಕರ ಪರವಾದ ವಕೀಲ ಮಾತನಾಡುತ್ತಾ, ಕಾರಿನಲ್ಲಿ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ ಅಥವಾ ಯಾರೂ ಯಾವುದೇ ರೀತಿಯ ಹಾನಿ ಮಾಡಿರಲಿಲ್ಲ. ಆದರೂ ಬೆಂಕಿ ಕಾಣಿಸಿಕೊಂಡಿದೆಯೆಂದರೆ ತಯಾರಿಕಾ ಸಂಸ್ಥೆ ಟೆಸ್ಲಾ ಈ ಬಗ್ಗೆ ಯೋಚಿಸಬೇಕು. ಇದರ ಬಗ್ಗೆ ಸೂಕ್ತ ತನಿಖೆ ನಡೆದು ವರದಿ ಸಿಗುವ ತನಕ ಆ ಸಾಲಿನ ಎಲ್ಲಾ ಮಾದರಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಬೇಕು. ಕಾರಿನ ಮಾಲೀಕ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿತ್ತಾರೋ, ಇಲ್ಲವೋ ಎಂದು ಕಾದುನೋಡಬೇಕಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಹದಗೆಟ್ಟ ರಸ್ತೆಗಿಳಿದ ಟೆಸ್ಲಾ ಕಾರಿಗೆ ಏನನ್ನಿಸಬಹುದು..? ಇಲ್ಲಿವೆ ಕಚಗುಳಿ ಇಡುವ ಮೀಮ್​ಗಳು..! 

ಎಲ್ಲೆಡೆ ಸುದ್ದಿ ಆಗುತ್ತಿದೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಟೆಸ್ಲಾ ಕಾರು; ಬೆಂಕಿ ಆರಿಸಲು 1 ಲಕ್ಷ ಲೀಟರ್​ಗೂ ಹೆಚ್ಚು ನೀರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ