WHO on Delta Variant: ಜಗತ್ತಿನಲ್ಲಿ ಪಾರುಪತ್ಯ ಸಾಧಿಸಲಿದೆ ಡೆಲ್ಟಾ ತಳಿ; ಕೊರೊನಾ ಮಾದರಿಗಳ ಪೈಕಿ ಎಲ್ಲಕ್ಕಿಂತ ತೀವ್ರವಾಗಿ ಬಾಧಿಸಲಿದೆ

ಡೆಲ್ಟಾ ಮಾದರಿಯಂತಹ ವೈರಾಣುಗಳನ್ನು ತಡೆಗಟ್ಟಬೇಕೆಂದರೆ ಮುಂಜಾಗ್ರತಾ ಕ್ರಮಗಳು ಹಾಗೂ ಕೊರೊನಾ ನಿಯಮಾವಳಿಗಳನ್ನು ದೀರ್ಘಕಾಲದ ತನಕ ಕಠಿಣವಾಗಿ ಪಾಲಿಸಬೇಕಾಗುತ್ತದೆ. ಕೊರೊನಾ ಲಸಿಕೆ ವಿತರಣೆಗೆ ಆದ್ಯತೆ ನೀಡುವುದು ಕೂಡಾ ಒಂದು ಮುಖ್ಯ ವಿಧಾನ.

WHO on Delta Variant: ಜಗತ್ತಿನಲ್ಲಿ ಪಾರುಪತ್ಯ ಸಾಧಿಸಲಿದೆ ಡೆಲ್ಟಾ ತಳಿ; ಕೊರೊನಾ ಮಾದರಿಗಳ ಪೈಕಿ ಎಲ್ಲಕ್ಕಿಂತ ತೀವ್ರವಾಗಿ ಬಾಧಿಸಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on: Jul 02, 2021 | 8:20 AM

ಭಾರತ ಸೇರಿದಂತೆ ಕೆಲ ರಾಷ್ಟ್ರಗಳ ನಿದ್ದೆಗೆಡಿಸಿದ ಕೊರೊನಾ ವೈರಾಣುವಿನ ಡೆಲ್ಟಾ ತಳಿ ಇದೀಗ ವಿಶ್ವದ ಸುಮಾರು 100 ದೇಶಗಳನ್ನು ವ್ಯಾಪಿಸಿದೆ. ಅಲ್ಲದೇ, ಮುಂಬರುವ ತಿಂಗಳಲ್ಲಿ ಇದು ಅತ್ಯಂತ ವೇಗವಾಗಿ ಹಬ್ಬಲಿದ್ದು, ಜಗತ್ತಿನಲ್ಲಿ ಡೆಲ್ಟಾ ತಳಿ ಪಾರುಪತ್ಯ ಸಾಧಿಸಲಿದೆ ಎಂದು ವಿಶ್ವ ಆರೋಗ್ಯ ಎಚ್ಚರಿಕೆ ನೀಡಿದೆ. ಕೊರೊನಾ ವೈರಾಣುವಿನ ಎಲ್ಲಾ ರೂಪಾಂತರಿಗಳಿಗಿಂತ ಡೆಲ್ಟಾ ಅತಿ ಹೆಚ್ಚು ವೇಗವಾಗಿ ಹರಡುವ ಸಾಧ್ಯತೆ ಕಾಣಿಸುತ್ತಿದ್ದು, ಜಗತ್ತಿನ ಹಲವು ರಾಷ್ಟ್ರಗಳನ್ನು ಬಾಧಿಸಲಿದೆ ಎನ್ನುವುದು ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿದೆ ಎನ್ನಲಾಗಿದೆ.

ಈ ಬಗ್ಗೆ ಜೂನ್​ 29ರಂದು ಅಧಿಕೃತ ವಿವರಣೆ ಪ್ರಕಟಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ವೈರಾಣುವಿನ ಡೆಲ್ಟಾ ತಳಿ ಪ್ರಸ್ತುತ 96 ದೇಶಗಳಲ್ಲಿ ವರದಿಯಾಗಿದೆ. ಒಟ್ಟಾರೆಯಾಗಿ ಈ ಲೆಕ್ಕಾಚಾರಕ್ಕೆ ಬೇಕಾದ ಮಾದರಿಗಳ ಸಂಖ್ಯೆ ಕಡಿಮೆ ಇತ್ತೆನ್ನುವುದು ಹೌದಾದರೂ, ಡೆಲ್ಟಾ ಪತ್ತೆಯಾದ 96 ದೇಶಗಳಲ್ಲೂ ಅದರ ಪ್ರಭಾವ ತೀವ್ರವಾಗಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹಾಗೂ ಸೋಂಕಿಗೆ ತುತ್ತಾಗುವವರ ಸಂಖ್ಯೆ ಏಕಾಏಕಿ ಏರಿರುವುದು ಎಚ್ಚರಿಕೆಯ ಸಂದೇಶ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಡೆಲ್ಟಾ ತಳಿ ಬಲಿಷ್ಠವಾಗುತ್ತಾ ಹೋಗಲಿದ್ದು, ಕೊರೊನಾ ವೈರಾಣುವಿನ ಬೇರೆ ಮಾದರಿಗಳಿಗಿಂತ ಹೆಚ್ಚು ವೇಗವಾಗಿ ಹರಡುವ ಮೂಲಕ ಎಲ್ಲೆಡೆ ವ್ಯಾಪಿಸುವ ಲಕ್ಷಣಗಳು ಕಂಡುಬರುತ್ತಿವೆ. ಆದರೆ, ಸಮಾಧಾನಕರ ಸಂಗತಿಯೆಂದರೆ ಈ ಹಿಂದಿನ ಕೊರೊನಾ ವೈರಾಣು ಮಾದರಿಗಳ ವಿರುದ್ಧ ಬಳಕೆಯಾಗುತ್ತಿದ್ದ ಎಲ್ಲಾ ಚಿಕಿತ್ಸಾ ವಿಧಾನಗಳು, ಮುಂಜಾಗ್ರತಾ ಕ್ರಮಗಳು ಡೆಲ್ಟಾ ತಳಿಯ ವಿಚಾರದಲ್ಲೂ ಕೆಲಸ ಮಾಡುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಡೆಲ್ಟಾ ಮಾದರಿಯಂತಹ ವೈರಾಣುಗಳನ್ನು ತಡೆಗಟ್ಟಬೇಕೆಂದರೆ ಮುಂಜಾಗ್ರತಾ ಕ್ರಮಗಳು ಹಾಗೂ ಕೊರೊನಾ ನಿಯಮಾವಳಿಗಳನ್ನು ದೀರ್ಘಕಾಲದ ತನಕ ಕಠಿಣವಾಗಿ ಪಾಲಿಸಬೇಕಾಗುತ್ತದೆ. ಕೊರೊನಾ ಲಸಿಕೆ ವಿತರಣೆಗೆ ಆದ್ಯತೆ ನೀಡುವುದು ಕೂಡಾ ಒಂದು ಮುಖ್ಯ ವಿಧಾನ. ಹೀಗಾಗಿ ಎಲ್ಲಾ ರಾಷ್ಟ್ರಗಳೂ ವೈರಾಣು ತಡೆಗಟ್ಟುವ ಸಲುವಾಗಿ ನಿರಂತರ ಶ್ರಮಿಸಬೇಕು. ಈ ಹಂತದಲ್ಲಿ ಹೆಚ್ಚು ಎಚ್ಚರಿಕೆಯಿಂದ ವ್ಯವಸ್ಥೆಯನ್ನು ನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

ಡೆಲ್ಟಾ ಹಾಗೂ ಅದರ ಇನ್ನಿತರ ರೂಪಾಂತರಿ ತಳಿಗಳನ್ನು ಚಿಂತನೀಯ ಮಾದರಿಗಳೆಂದು ಪರಿಗಣಿಸಲಾಗಿದೆ. ಕೊರೊನಾ ಲಸಿಕೆ ತೆಗೆದುಕೊಳ್ಳದ ಸಮೂಹವನ್ನು ಗುರಿಯಾಗಿಸಿಕೊಂಡು ಇದು ವೇಗವಾಗಿ ಹಬ್ಬುತ್ತಿರುವುದು ಕೂಡಾ ಕಂಡುಬಂದಿದೆ. ಹೀಗಾಗಿ ಲಸಿಕೆಯನ್ನು ಡೆಲ್ಟಾ ವಿರುದ್ಧ ಪರಿಣಾಮಕಾರಿ ಅಸ್ತ್ರವಾಗಿ ಬಳಸಿಕೊಳ್ಳಬೇಕು. ಕೆಲವು ಕಡೆಗಳಲ್ಲಿ ನಿಯಮಾವಳಿಗಳನ್ನು ಸಡಿಲಿಸುವ ಮೂಲಕ ಜನ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಡೆಲ್ಟಾ ಮಾದರಿ ಹಬ್ಬುವಿಕೆ ಕೂಡಾ ಹೆಚ್ಚಾಗಿದೆ ಎನ್ನುವುದನ್ನು ಗಮನಿಸಬೇಕು ಎಂದು ತಿಳಿಸಿದೆ.

ಸದ್ಯದ ವರದಿಗಳ ಪ್ರಕಾರ ಆಲ್ಫಾ ಮಾದರಿ 172 ದೇಶಗಳಲ್ಲಿ, ಬೀಟಾ ಮಾದರಿ 120 ದೇಶಗಳಲ್ಲಿ, ಗಾಮಾ ಮಾದರಿ 72 ದೇಶಗಳಲ್ಲಿ ಹಾಗೂ ಡೆಲ್ಟಾ ಮಾದರಿ 96 ದೇಶಗಳಲ್ಲಿ ಕಾಣಿಸಿಕೊಂಡಿದೆ. ಈ ಪೈಕಿ ಬೀಟಾ ಮತ್ತು ಗಾಮಾ ಮಾದರಿಗಳು ತಲಾ ಒಂದೊಂದು ದೇಶಗಳಲ್ಲಿ ಹೊಸದಾಗಿ ಪತ್ತೆಯಾಗಿದ್ದರೆ ಡೆಲ್ಟಾ ಮಾತ್ರ 11 ದೇಶಗಳಲ್ಲಿ ಹೊಸದಾಗಿ ಕಾಣಿಸಿಕೊಂಡಿದೆ ಎನ್ನುವುದು ಗಮನಾರ್ಹ. ಬಹುಮುಖ್ಯವಾಗಿ ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಪ್ರಕರಣದಲ್ಲಿ ಇಳಿಮುಖ ಕಂಡರೂ ಕೆಲವಷ್ಟು ಕಡೆ ಭಾರೀ ಇಳಿಕೆಯಾದರೆ ಇನ್ನು ಕೆಲವು ಕಡೆ ನಿಧಾನವಾಗಿ ಏರುಗತಿಯಲ್ಲಿ ಸಾಗಲಾರಂಭಿಸಿದೆ. ಹೀಗಾಗಿ ಎಚ್ಚರಿಕೆ ಅತ್ಯಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಶ್ವಾಸಕೋಶದ ಮೇಲೆ ಡೆಲ್ಟಾ ಪ್ಲಸ್​ ಪರಿಣಾಮ ಹೀಗಿದೆ; ಕೊರೊನಾ ಲಸಿಕೆ ಪಡೆದವರಿಗೆ ಹೆಚ್ಚು ಸಮಸ್ಯೆ ಇಲ್ಲ: ಡಾ.ಎನ್​.ಕೆ.ಅರೋರಾ 

ಕೊರೊನಾ ವೈರಾಣು ರೂಪಾಂತರ ಡೆಲ್ಟಾಕ್ಕೆ ನಿಲ್ಲುವುದಿಲ್ಲ; ಲ್ಯಾಂಬ್ಡಾ, ಕಪ್ಪಾ ಸೇರಿದಂತೆ ಒಟ್ಟು 4 ಮಾದರಿಗಳು ಈಗಾಗಲೇ ಪತ್ತೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್