ಶ್ವಾಸಕೋಶದ ಮೇಲೆ ಡೆಲ್ಟಾ ಪ್ಲಸ್​ ಪರಿಣಾಮ ಹೀಗಿದೆ; ಕೊರೊನಾ ಲಸಿಕೆ ಪಡೆದವರಿಗೆ ಹೆಚ್ಚು ಸಮಸ್ಯೆ ಇಲ್ಲ: ಡಾ.ಎನ್​.ಕೆ.ಅರೋರಾ

Delta Plus Variant: ಯಾವ ವ್ಯಕ್ತಿ ಕೊರೊನಾ ಲಸಿಕೆಯ ಎರಡು ಅಥವಾ ಒಂದು ಡೋಸ್‌ ಪಡೆದಿರುತ್ತಾರೋ ಅವರ ಮೇಲೆ ಡೆಲ್ಟಾ ಪ್ಲಸ್ ತಳಿಯು ಕನಿಷ್ಠ ಪರಿಣಾಮ ಬೀರಲಿದೆ ಎನ್ನುವುದಂತೂ ಈವರೆಗಿನ ಅಧ್ಯಯನದಿಂದ ತಿಳಿದುಬಂದಿದೆ ಎಂದು ಡಾ. ಅರೋರಾ ಸುದ್ದಿ ಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಶ್ವಾಸಕೋಶದ ಮೇಲೆ ಡೆಲ್ಟಾ ಪ್ಲಸ್​ ಪರಿಣಾಮ ಹೀಗಿದೆ; ಕೊರೊನಾ ಲಸಿಕೆ ಪಡೆದವರಿಗೆ ಹೆಚ್ಚು ಸಮಸ್ಯೆ ಇಲ್ಲ: ಡಾ.ಎನ್​.ಕೆ.ಅರೋರಾ
ಶ್ವಾಸಕೋಶ (ಸಾಂಕೇತಿಕ ಚಿತ್ರ)
Follow us
TV9 Web
| Updated By: Skanda

Updated on: Jun 28, 2021 | 8:16 AM

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ದುರ್ಬಲವಾಗುತ್ತಿದೆ ಎಂದು ಭಾವಿಸುವಷ್ಟರಲ್ಲಿ ಡೆಲ್ಟಾ ಪ್ಲಸ್​ ಮಾದರಿಯ ವೈರಾಣು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಎರಡನೇ ಅಲೆಯ ತೀವ್ರತೆಗೆ ಕಾರಣವಾದ ಡೆಲ್ಟಾ ವೈರಾಣುವಿನ ರೂಪಾಂತರಿಯಾಗಿರುವ ಡೆಲ್ಟಾ ಪ್ಲಸ್​, ಇನ್ನೂ ಅಧಿಕ ಮಟ್ಟದ ಅಪಾಯ ಸೃಷ್ಟಿಸಬಹುದು ಎಂಬ ಆತಂಕವನ್ನು ಈಗಾಗಲೇ ತಜ್ಞರ ಕೆಲ ವರದಿಗಳಲ್ಲಿ ವ್ಯಕ್ತಪಡಿಸಲಾಗಿದೆ. ಆದರೆ, ಇದೇ ವಿಚಾರದ ಬಗ್ಗೆ ಮಾತನಾಡಿರುವ ರಾಷ್ಟ್ರೀಯ ತಾಂತ್ರಿಕ ಸಲಾಹಾ ಸಮಿತಿ (ಎನ್​ಟಿಎಜಿಐ) ಮುಖ್ಯಸ್ಥ ಡಾ.ಎನ್​.ಕೆ.ಅರೋರಾ, ಈ ಹಿಂದೆ ಇದ್ದ ಕೊರೊನಾ ವೈರಾಣು ಮಾದರಿಗಳಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್​ ಶ್ವಾಸಕೋಶದ ಅಂಗಾಂಶಗಳತ್ತ ಹೆಚ್ಚು ಆಕರ್ಷಿತವಾಗುವ ಗುಣ ಹೊಂದಿದೆ ಎಂದ ಮಾತ್ರಕ್ಕೆ ಅತ್ಯಂತ ಗಂಭೀರ ಪ್ರಮಾಣದ ಹಾನಿ ಉಂಟುಮಾಡಬಹುದು ಅಥವಾ ಇನ್ನೂ ವೇಗವಾಗಿ ಪಸರಿಸಬಹುದು ಎಂದು ಹೇಳಲಾಗುವುದಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇಲ್ಲಿಯ ತನಕ ಕಂಡುಬಂದ ಬೇರೆ ತಳಿಗಳಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್​ ರೂಪಾಂತರಿಯು ಶ್ವಾಸಕೋಶದತ್ತ ಬಲುಬೇಗನೇ ಆಕರ್ಷಿತವಾಗಬಹುದು. ಆದರೆ ಅದು ಹೆಚ್ಚು ಹಾನಿ ಉಂಟುಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈಗಲೇ ಹೇಳಲು ಸ್ಪಷ್ಟತೆ ಸಿಕ್ಕಿಲ್ಲ. ಹೆಚ್ಚು ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದರೆ ಈ ತಳಿಯ ಪರಿಣಾಮ ಏನೆಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬಹುದು. ಆದರೆ, ಯಾವ ವ್ಯಕ್ತಿ ಕೊರೊನಾ ಲಸಿಕೆಯ ಎರಡು ಅಥವಾ ಒಂದು ಡೋಸ್‌ ಪಡೆದಿರುತ್ತಾರೋ ಅವರ ಮೇಲೆ ಡೆಲ್ಟಾ ಪ್ಲಸ್ ತಳಿಯು ಕನಿಷ್ಠ ಪರಿಣಾಮ ಬೀರಲಿದೆ ಎನ್ನುವುದಂತೂ ಈವರೆಗಿನ ಅಧ್ಯಯನದಿಂದ ತಿಳಿದುಬಂದಿದೆ ಎಂದು ಡಾ. ಅರೋರಾ ಸುದ್ದಿ ಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಡೆಲ್ಟಾ ಪ್ಲಸ್ ತಳಿಯ ಪ್ರಸರಣದ ವೇಗ ಯಾವ ಪ್ರಮಾಣದಲ್ಲಿ ಇದೆ ಎನ್ನುವುದನ್ನು ತಿಳಿಯಬೇಕಾದರೆ ಅದರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಡೆಲ್ಟಾ ಪ್ಲಸ್‌ ಸೋಂಕಿತರ ಪೈಕಿ ಹೆಚ್ಚಿನವರಲ್ಲಿ ರೋಗಲಕ್ಷಣಗಳು ಕಾಣಿಸುವುದಿಲ್ಲ. ಆದ್ದರಿಂದ ಈಗ ಪತ್ತೆಯಾಗಿರುವುದಕ್ಕಿಂತಲೂ ಅಧಿಕ ಮಂದಿ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ. ಇಂಥವರು ವೈರಾಣುವಿನ ಪ್ರಮುಖ ವಾಹಕರಾಗುವ ಸಾಧ್ಯತೆ ಇದೆ. ನಮ್ಮ ವಿಜ್ಞಾನಿಗಳು ಈ ತಳಿಯನ್ನು ಬೇಗನೆ ಪತ್ತೆ ಹಚ್ಚಿದ್ದಾರೆ. ಈಗ ಇದರ ಮೇಲೆ ನಿಗಾ ವಹಿಸಬೇಕು, ಪ್ರಸರಣ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಗಳಿಗೆ ಸೂಚನೆಯನ್ನೂ ನೀಡಲಾಗಿದೆ. ಸೂಕ್ತ ಕ್ರಮ ಕೈಗೊಂಡರೆ ಈ ತಳಿಯ ಪ್ರಸರಣ ನಿಯಂತ್ರಿಸುವುದು ಸುಲಭವಾಗಬಹುದು. ಇದರ ಜತೆಗೆ, ಲಸಿಕೆ ನೀಡಿಕೆಯ ವೇಗವನ್ನು ಹೆಚ್ಚಿಸುವತ್ತಲೂ ಗಮನ ಹರಿಸುವುದು ಅವಶ್ಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡೆಲ್ಟಾ ಪ್ಲಸ್‌ ಮಾದರಿಯಿಂದಾಗಿ ದೇಶದಲ್ಲಿ ಕೊರೊನಾ ಮೂರನೇ ಅಲೆ ಏಳಬಹುದೇ ಎಂಬುದನ್ನು ಈಗಲೇ ಹೇಳುವುದು ಕಷ್ಟ. ರೂಪಾಂತರಿ ತಳಿಗಳೇ ಹೊಸ ಅಲೆಗೆ ಕಾರಣವಾಗಿರುತ್ತವೆ ಎನ್ನುವುದು ನಿಜ. ಹೀಗಾಗಿ ಡೆಲ್ಟಾ ಪ್ಲಸ್‌ ರೂಪಾಂತರಗೊಂಡ ತಳಿಯಾಗಿರುವುದರಿಂದ ಮೂರನೇ ಅಲೆ ಸೃಷ್ಟಿಸುವ ಸಾಧ್ಯತೆಯನ್ನು ಖಡಾಖಂಡಿತವಾಗಿ ಅಲ್ಲಗಳೆಯಲಾಗದು. ಆದರೆ ಮೂರನೇ ಅಲೆಯು ಇದರ ಜತೆಗೆ ಇನ್ನೂ ಕೆಲವು ವಿಚಾರಗಳನ್ನು ಅವಲಂಬಿಸಿರುತ್ತದೆ ಎನ್ನುವುದನ್ನು ಗಮನಿಸಬೇಕು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಡೆಲ್ಟಾ ಪ್ಲಸ್ ರೂಪಾಂತರಿ ಕೊವಿಡ್ ಮೂರನೇ ಅಲೆಗೆ ಕಾರಣವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ: ಡಾ.ಎನ್‌.ಕೆ.ಅರೋರಾ 

Delta Plus Variant: ಡೆಲ್ಟಾ ಪ್ಲಸ್​ ಮಾದರಿಯ ಪ್ರಾಥಮಿಕ ಹಂತದ ಗುಣಲಕ್ಷಣಗಳೇನು?

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್