ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈಕಮಿಷನ್ ಮೇಲೆ ಡ್ರೋನ್ ಹಾರಾಟ; ಪ್ರತಿಭಟಿಸಿದ ಭಾರತ

ಹೈಕಮಿಷನಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿರುವ ಸಮಯದಲ್ಲಿ ಡ್ರೋನ್ ಹಾರಾಡಿದ್ದು ಕಾಣಿಸಿತ್ತು ಎಂದು ಈ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈಕಮಿಷನ್ ಮೇಲೆ ಡ್ರೋನ್ ಹಾರಾಟ; ಪ್ರತಿಭಟಿಸಿದ ಭಾರತ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Rashmi Kallakatta

Jul 02, 2021 | 4:48 PM

ದೆಹಲಿ:  ಪಾಕಿಸ್ತಾನದ ರಾಜಧಾನಿಯಲ್ಲಿರುವ ಭಾರತೀಯ ಹೈಕಮಿಷನ್ ಸಂಕೀರ್ಣದ ಮೇಲೆ ಡ್ರೋನ್ ಪತ್ತೆಯಾಗಿದ್ದು, ಇದುಭದ್ರತಾ ಉಲ್ಲಂಘನೆ ಎಂದು ಭಾರತ ಪ್ರತಿಭಟಿಸಿದೆ. ಹೈಕಮಿಷನಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿರುವ ಸಮಯದಲ್ಲಿ ಡ್ರೋನ್ ಹಾರಾಡಿದ್ದು ಕಾಣಿಸಿತ್ತು ಎಂದು ಈ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಜನರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮಾತಿನ ಮೂಲಕ ಅಥವಾ ಸಹಿ ಮಾಡದ ರಾಜತಾಂತ್ರಿಕ ಪತ್ರವ್ಯವಹಾರದ ಮೂಲಕ ಭಾರತ ಘಟನೆಯ ಬಗ್ಗೆ ಔಪಚಾರಿಕ ಪ್ರತಿಭಟನೆ ನಡೆಸಿದೆ ಎಂದು ಮೇಲೆ ಅಲ್ಲಿನ ಜನರು ಹೇಳಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಕಚೇರಿಯ ಮುಂಭಾಗದಲ್ಲಿ ಚಲಿಸುವ ಪ್ರಮುಖ ರಸ್ತೆಯ ಉದ್ದಕ್ಕೂ ಇಸ್ಲಾಮಾಬಾದ್‌ನ ಕೋಟೆಯ ರಾಜತಾಂತ್ರಿಕ ಜಾಗದಲ್ಲಿ ಭಾರತೀಯ ಹೈಕಮಿಷನ್ ಇದೆ. ಹೈಕಮಿಷನ್‌ನ ಸಿಬ್ಬಂದಿಗಳ ವಸತಿ ಸಂಕೀರ್ಣವು ಹೈಕಮಿಷನ್‌ನಿಂದ ಸ್ವಲ್ಪ ದೂರದಲ್ಲಿದೆ.

ಇಡೀ ರಾಜತಾಂತ್ರಿಕ ಎನ್​​​ಕ್ಲೇವ್ ಅನ್ನು ಪಾಕಿಸ್ತಾನದ ಭದ್ರತಾ ಪಡೆಗಳು ಕಾವಲು ನಿಂತಿದ್ದು, ಭಾರತೀಯ ಮಿಷನ್ ಬಳಿ ಮತ್ತೊಂದು ಭದ್ರತೆಯ ಪದರವಿದೆ. ಜೂನ್ 27 ರಂದು ಜಮ್ಮುವಿನಲ್ಲಿರುವ ಭಾರತೀಯ ವಾಯುಪಡೆಯ ನೆಲೆಯ ಮೇಲೆ ಡ್ರೋನ್ ದಾಳಿ ನಡೆದ ಬೆನ್ನಲ್ಲೇ ಇಸ್ಲಾಮಾಬಾದ್‌ನಲ್ಲಿ ಈ ಘಟನೆ ನಡೆದಿದೆ.

ಜಮ್ಮು ವಿಮಾನನಿಲ್ದಾಣದಲ್ಲಿರುವ ಏರ್​ಫೋರ್ಸ್​ ಸ್ಟೇಶನ್​ ಒಳಗೆ  ಅವಳಿ ಸ್ಫೋಟ ಉಂಟಾಗಿದ್ದು, ಒಂದು ಬಾಂಬ್​ ಕಟ್ಟಡದ ಮೇಲ್ಛಾವಣಿಯಿಂದ ಸ್ಫೋಟಗೊಂಡಿದ್ದರೆ, ಇನ್ನೊಂದು ನೆಲದಲ್ಲಿ ಸ್ಫೋಟವಾಗಿದೆ. 5 ನಿಮಿಷಗಳ ಅಂತರದಲ್ಲಿ ನಡೆದ ಈ ಎರಡು ಸ್ಫೋಟಗಳ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಏರ್​ಫೋರ್ಸ್​​ ​ಸ್ಟೇಶನ್​​ನ್ನು ಸ್ಫೋಟಿಸಲು ಡ್ರೋನ್​ ಬಳಸಿದ್ದಾಗಿ ಪ್ರಾಥಮಿಕ ಹಂತದ ತನಿಖೆಯಲ್ಲೇ ಗೊತ್ತಾಗಿದೆ. ಹೀಗೆ ಸ್ಫೋಟಕವನ್ನು ಎಸೆಯಲು ಎದುರಾಳಿ ಪಡೆಯ ಸೈನಿಕರು ಡ್ರೋನ್​ ಬಳಕೆ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.

ಜಮ್ಮು ಏರ್​ಪೋರ್ಟ್​​ನ ತಾಂತ್ರಿಕ ವಲಯದಲ್ಲಿರುವ ಹೆಲಿಪ್ಯಾಡ್​ ಸಮೀಪದಲ್ಲಿ ಈ ಅವಳಿ ಸ್ಫೋಟಗಳು ನಡೆದಿದೆ. ಇದು ಕಡಿಮೆ ಸಾಂದ್ರತೆಯ ಸ್ಫೋಟವಾಗಿದ್ದು ಯಾರದ್ದೂ ಪ್ರಾಣ ಹಾನಿಯಾಗಿಲ್ಲ. ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಏರ್​ಪೋರ್ಟ್ ಹೊರಗೆ ನಿಲ್ಲಿಸಲಾಗಿದ್ದ ಯುದ್ಧ ವಿಮಾನವನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ.

ಈ ಏರ್​ಫೋರ್ಸ್​ ಸ್ಟೇಶನ್​​ನಿಂದ ಭಾರತ-ಪಾಕಿಸ್ತಾನ ಗಡಿ 14 ಕಿಮೀ ದೂರ ಇದೆ. ಈ ಹಿಂದೆ ಡ್ರೋಣ್​​ಗಳನ್ನು ಬಳಸಿ ಭಾರತೀಯ ಭೂಪ್ರದೇಶದ 12 ಕಿಮೀ ಒಳಗೆ ಶಸ್ತ್ರಾಸ್ತ್ರಗಳನ್ನು ಬಿಸಾಡಿದ ಉದಾಹರಣೆಗಳು ಇವೆ. ಅಂದರೆ ಪಾಕಿಸ್ತಾನ ಇಲ್ಲಿ ಜಮ್ಮು-ಕಾಶ್ಮೀರ, ಪಂಜಾಬ್​ಗಳಲ್ಲಿರುವ ಉಗ್ರರಿಗೆ ಡ್ರೋನ್​ ಮೂಲಕ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ. ಹೀಗೆ ಶಸ್ತ್ರಾಸ್ತ್ರ ಪೂರೈಕೆ ಡ್ರೋನ್​ಗಳನ್ನು ಭಾರತೀಯ ಸೇನಾ ಪಡೆಗಳು ಹೊಡೆದು ಉರುಳಿಸಿದ್ದೂ ಇದೆ. ಆದರೆ ಡ್ರೋನ್​ಗಳ ಮೂಲಕ ಸ್ಫೋಟಿಸಿದ್ದು ಇದೇ ಮೊದಲು ಎಂದೂ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಏರ್​ಫೋರ್ಸ್ ಸ್ಟೇಶನ್​​ನಲ್ಲಿ ಅವಳಿ ಸ್ಫೋಟ ನಡೆಸಲು ಡ್ರೋನ್​ ಬಳಕೆ; ಇಂಥ ಪ್ರಯೋಗ ಇದೇ ಮೊದಲು

ಇದನ್ನೂ ಓದಿ:  ಜಮ್ಮು ಗಡಿ ಬಳಿ ಪತ್ತೆಯಾದ ಪಾಕಿಸ್ತಾನಿ ಡ್ರೋನ್ ಮೇಲೆ ಬಿಎಸ್ಎಫ್ ಗುಂಡು ಹಾರಾಟ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada