Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲೆಡೆ ಸುದ್ದಿ ಆಗುತ್ತಿದೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಟೆಸ್ಲಾ ಕಾರು; ಬೆಂಕಿ ಆರಿಸಲು 1 ಲಕ್ಷ ಲೀಟರ್​ಗೂ ಹೆಚ್ಚು ನೀರು

ಟೆಸ್ಲಾ ಕಂಪೆನಿಯ ಆಟೋ ಪೈಲಟ್ ಕಾರು ಶನಿವಾರ ಅಪಘಾತವಾಗಿ, ಹೊತ್ತಿ ಉರಿದಿದೆ. ಅದರೊಳಗಿದ್ದವರು ದಹನವಾಗಿ ಹೋಗಿದ್ದಾರೆ. ಕಾರಿನ ಬೆಂಕಿ ಆರಿಸಲು 1.20 ಲಕ್ಷ ಲೀಟರ್ ನೀರು ಬಳಸಲಾಗಿದೆ.

ಎಲ್ಲೆಡೆ ಸುದ್ದಿ ಆಗುತ್ತಿದೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಟೆಸ್ಲಾ ಕಾರು; ಬೆಂಕಿ ಆರಿಸಲು 1 ಲಕ್ಷ ಲೀಟರ್​ಗೂ ಹೆಚ್ಚು ನೀರು
ಟೆಸ್ಲಾ (ಪ್ರಾತಿನಿಧಿಕ ಚಿತ್ರ)
Follow us
Srinivas Mata
|

Updated on: Apr 20, 2021 | 11:55 PM

ಟೆಸ್ಲಾ ಕಂಪೆನಿಯ ಕಾರುಗಳಲ್ಲಿನ ಸುರಕ್ಷತೆ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ. ಟೆಕ್ಸಾಸ್​ನಲ್ಲಿ ಶನಿವಾರ ಟೆಸ್ಲಾ ಕಾರು ಆಟೋ ಪೈಲಟ್ ಮೋಡ್​ನಲ್ಲಿ ಮರಕ್ಕೆ ಡಿಕ್ಕಿ ಹೊಡೆದು, ಹೊತ್ತು ಉರಿದಿದೆ. ಈ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಮೃತರ ಹೆಸರು ತಿಳಿದುಬಂದಿಲ್ಲ. ಆದರೆ ಮೃತರ ಸಂಬಂಧಿಕರ ಹೇಳಿಕೆಯನ್ನು ಆಧರಿಸಿ, ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ. ಟೆಸ್ಲಾ ಮಾಡೆಲ್ ಎಸ್ ಮಾಲೀಕರು ತಮ್ಮ ಚಾಲಕ ಸೀಟ್​ನಿಂದ ಹಾರಿ ಹಿಂಬದಿಯಲ್ಲಿದ್ದರು, ಅಲ್ಲಿ ಶವವಾಗಿ ಕಂಡುಬಂದಿದ್ದಾರೆ. ಮತ್ತೊಬ್ಬ ವ್ಯಕ್ತಿ ಪ್ರಯಾಣಿಕರ ಸೀಟಿನಲ್ಲಿ ಶವವಾಗಿದ್ದಾರೆ.

ಕೆಲವು ನೂರು ಮೀಟರ್​ಗಳು ಸಾಗಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನ ಸ್ಟೀರಿಂಗ್ ವ್ಯವಸ್ಥೆ ಆ ಮರವನ್ನು ಗುರುತಿಸಲು ವಿಫಲವಾಗಿದೆ. ಆದರೆ ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್ ಮಾತನಾಡಿ, ಕಾರು ಆಟೋಪೈಲಟ್ ಮೋಡ್​ನಲ್ಲಿ ಇರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇನ್ನೂ ಮುಂದುವರಿದು, ಕಾರಿನ ಮಾಲೀಕರು ಫುಲ್ಲಿ ಸೆಲ್ಫ್ ಡ್ರೈವಿಂಗ್ (ಎಫ್​ಎಸ್​ಡಿ) ಆಯ್ಕೆಯದನ್ನು ಖರೀದಿಸಿರಲಿಲ್ಲ ಎಂದಿದ್ದಾರೆ.

ಸ್ಥಳೀಯ ಪೊಲೀಸರು, ಕಾರಿನ ವ್ಹೀಲ್ ಹಿಂಭಾಗ ಶೇ 99.9ರಷ್ಟು ಯಾರೂ ಇರಲಿಲ್ಲ ಎನ್ನುತ್ತಿದ್ದಾರೆ. ಅಂದಹಾಗೆ ಟೆಸ್ಲಾದ ಆಟೋಪೈಲಟ್ ಸಂಬಂಧಿತ ಘಟನೆಗಳಲ್ಲಿ ಇತರ ಮೂವರು ಸಹ ಮೃತಪಟ್ಟಿದ್ದಾರೆ. ಟೆಕ್ಸಾಸ್​ನ ಹ್ಯಾಮಕ್ ಡ್ಯೂನ್ಸ್​ನಲ್ಲಿ ಕೇವಲ 1000 ಅಡಿ ಉದ್ದದ ರಸ್ತೆ ಅದು. ಗೇಟೆಡ್ ಕಮ್ಯೂನಿಟಿ ಆಗಿತ್ತು. ಅಲ್ಲಿನ ಮನೆಗಳ ಸರಾಸರಿ ಬೆಲೆ 20 ಲಕ್ಷ ಅಮೆರಿಕನ್ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ 15 ಕೋಟಿಯಷ್ಟು. ಯಾರು ಟೆಸ್ಲಾ ಕಾರಿನಪ್ರಿಯರಿದ್ದರೋ ಅವರು ಬೇಸರಗೊಂಡಿದ್ದಾರೆ. 80,000 ಅಮೆರಿಕನ್ ಡಾಲರ್ ಮೌಲ್ಯದ ಕಾರು ಸ್ಪಷ್ಟವಾದ ರಸ್ತೆ ಗುರುತುಗಳನ್ನು ಗುರುತಿಸಬೇಕು (ಈ ಬಡಾವಣೆಯಲ್ಲಿ ಅದಿರಲಿಲ್ಲ). ಇನ್ನು ಮೃತಪಟ್ಟವರು ರಾತ್ರಿ 11.25ರ ಹೊತ್ತಿನಲ್ಲಿ ಕಾರು ಚಲಾಯಿಸಲು ಹೊರಟಿದ್ದರು.

ಮನೆಯನ್ನು ಬಿಟ್ಟು ಕೆಲವೇ ಮೀಟರ್​ನಷ್ಟು ಸಾಗಿದ ಮೇಲೆ, ಮರಕ್ಕೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಸುಮಾರು 4 ಗಂಟೆಗಳ ಕಾಲ ಆ ಬೆಂಕಿಯನ್ನು ಆರಿಸಲು ಹರಸಾಹಸ ಪಡಲಾಗಿದೆ. ಈ ಮಧ್ಯೆ ಮೃತರ ಸಂಬಂಧಿಕರು ಈ ಭಯಾನಕ ದೃಶ್ಯವನ್ನು ಅಸಹಾಯಕರಾಗಿ ನೋಡುತ್ತಾ ನಿಂತಿದ್ದಾರೆ. ಕೊನೆಗೆ ಕಾರು ತಯಾರಕರನ್ನೇ ಸ್ಥಳಕ್ಕೆ ಕರೆಸಲಾಗಿದೆ. ಮತ್ತೆ ಮತ್ತೆ ಹೊತ್ತಿ ಉರಿಯುವ ಬ್ಯಾಟರಿಯನ್ನು ನಿಲ್ಲಿಸುವುದು ಹೇಗೆ ಎಂದು ಕೇಳಲಾಗಿದೆ. 32,000 ಗ್ಯಾಲನ್ ನೀರು (1,21,133.18 ಲೀಟರ್ ನೀರು) ಬಳಸಿ ಕೊನೆಗೆ ಬೆಂಕಿ ಆರಿಸಲಾಗಿದೆ. ಅಷ್ಟರಲ್ಲಿ ಕಾರಿನೊಳಗಿದ್ದವರು ದಹನವೇ ಆಗಿಹೋಗಿದ್ದರು.

ಶನಿವಾರದಂದು ಈ ಘಟನೆ ನಡೆಯುವ ಕೆಲ ಗಂಟೆಗಳ ಮುಂಚೆ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು: ಸರಾಸರಿ ವಾಹನಗಳಿಗಿಂತ ಟೆಸ್ಲಾ ಆಟೋಪೈಲಟ್ ಅಪಘಾತ ಆಗುವ ಸಾಧ್ಯತೆ 10 ಪಟ್ಟು ಕಡಿಮೆ ಎಂದಿದ್ದರು. ಆದರೆ ಜನಾಭಿಪ್ರಾಯ ಈಗ ಬೇರೆಯದೇ ಇದೆ.

ಇದನ್ನೂ ಓದಿ: TV9 Facebook live: ವಿದ್ಯುತ್ ಚಾಲಿತ ಟೆಸ್ಲಾ ಕಾರ್​ನ ಸಾಧಕ, ಬಾಧಕಗಳ ಬಗ್ಗೆ ಚರ್ಚೆ

()

(Elon Musk’s Tesla company self drive electric car took two lives in Texas on last Saturday in a deadly accident)

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ