TV9 Facebook live: ವಿದ್ಯುತ್ ಚಾಲಿತ ಟೆಸ್ಲಾ ಕಾರ್​ನ ಸಾಧಕ, ಬಾಧಕಗಳ ಬಗ್ಗೆ ಚರ್ಚೆ

ಟೆಸ್ಲಾ ವಿದ್ಯುತ್ ಕಾರು ಮಾರುಕಟ್ಟೆಗೆ ಬರಲಿದೆ ಎಂಬ ಸುದ್ದಿ ಇದೆ. ಹಾಗಾದರೆ, ವಿದ್ಯುತ್ ಕಾರು ಕೊಳ್ಳಲು ನಾವು ತಯಾರಿದ್ದೇವಾ? ಪೆಟ್ರೋಲ್ ಡೀಸೆಲ್ ವಾಹನಗಳ ಹೊರತಾಗಿ ವಿದ್ಯುತ್ ಕಾರು ಬಳಸುತ್ತೇವಾ? ವಿದ್ಯುತ್ ಕಾರು ಇಂಧನ ಬಳಸುವ ವಾಹನಗಳಿಗಿಂತ ಉತ್ತಮವೇ? ಯಾವುದು ಕೈಗೆಟಕುವ ದರಕ್ಕೆ ಸಿಗುತ್ತದೆ? ಅದರಿಂದ ಪರಿಸರಕ್ಕೆ ಹಾನಿ ಇಲ್ಲವೇ?

TV9 Facebook live: ವಿದ್ಯುತ್ ಚಾಲಿತ ಟೆಸ್ಲಾ ಕಾರ್​ನ ಸಾಧಕ, ಬಾಧಕಗಳ ಬಗ್ಗೆ ಚರ್ಚೆ
ಭಾರ್ಗವಿ, ಸೌಮ್ಯಾ ಹೆಗಡೆ ಹಾಗೂ ವಿಜಯ್ ನಿಶಾಂತ್
Follow us
TV9 Web
| Updated By: ganapathi bhat

Updated on:Apr 06, 2022 | 8:55 PM

ಬೆಂಗಳೂರು: ವಿಶ್ವದ ಅತಿದೊಡ್ಡ ಶ್ರೀಮಂತ ಎಲಾನ್ ಮಸ್ಕ್ ಅವರ ಕಂಪೆನಿ, ಟೆಸ್ಲಾ ಸಂಸ್ಥೆ ತನ್ನ ವಿದ್ಯುತ್ ಕಾರನ್ನು ಭಾರತದಲ್ಲಿ ಪರಿಚಯಿಸುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದೆ. ಮೊದಲ ಹಂತದಲ್ಲಿ ಟೆಸ್ಲಾ ಕಂಪೆನಿಯು ಇದಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ (Research & Development) ಕೇಂದ್ರವನ್ನು ಬೆಂಗಳೂರಿನಲ್ಲಿ ತೆರೆಯಲು ಯೋಚನೆ ಮಾಡಿದೆ. ಭಾರತಕ್ಕೆ ಎಲೆಕ್ರ್ಟಿಕ್​ ಕಾರ್ ತರಬೇಕು. ಅದರ ನಿರ್ಮಾಣ ಭಾರತದಲ್ಲೇ ಆಗಬೇಕು ಎಂದು ಪದೇ ಪದೇ ಪ್ರಸ್ತಾಪವಾಗುತ್ತಿದ್ದವು.

ಈಗಾಗಲೇ ಮಹೀಂದ್ರಾ ಮತ್ತು ಟಾಟಾ ಕಂಪೆನಿಗಳು ವಿದ್ಯುತ್ ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಇನ್ನು ಟೆಸ್ಲಾ ವಿದ್ಯುತ್ ಕಾರು ಮಾರುಕಟ್ಟೆಗೆ ಬರಲಿದೆ ಎಂಬ ಸುದ್ದಿ ಸಹ ಇದೆ. ಹಾಗಾದರೆ, ವಿದ್ಯುತ್ ಕಾರು ಕೊಳ್ಳಲು ನಾವು ತಯಾರಿದ್ದೇವಾ? ಪೆಟ್ರೋಲ್ , ಡೀಸೆಲ್ ವಾಹನಗಳ ಹೊರತಾಗಿ ವಿದ್ಯುತ್ ಕಾರು ಬಳಸುತ್ತೇವಾ? ವಿದ್ಯುತ್ ಕಾರು ಇಂಧನ ಬಳಸುವ ವಾಹನಗಳಿಗಿಂತ ಉತ್ತಮವೇ? ಯಾವುದು ಕೈಗೆಟಕುವ ದರಕ್ಕೆ ಸಿಗುತ್ತದೆ? ಅದರಿಂದ ಪರಿಸರಕ್ಕೆ ಹಾನಿ ಇಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನೆಲೆಯಲ್ಲಿ ಟಿವಿ9 ಕನ್ನಡ ಡಿಜಿಟಲ್ ತಂಡ ಇಂದು ಫೇಸ್​ಬುಕ್ ಲೈವ್ ಕಾರ್ಯಕ್ರಮ ನಡೆಸಿಕೊಟ್ಟಿತು. ನಗರೀಕೃತ ಅರಣ್ಯ ತಜ್ಞ ಹಾಗೂ ವೃಕ್ಷ ವೈದ್ಯ ವಿಜಯ್ ನಿಶಾಂತ್ ಮತ್ತು ಸೆಂಟರ್ ಫಾರ್ ಫೈನಾನ್ಶಿಯಲ್ ಅಕೌಂಟೇಬಲಿಟಿ ಉಪ ನಿರ್ದೇಶಕರಾದ ಭಾರ್ಗವಿ ಚರ್ಚೆಯಲ್ಲಿ ಭಾಗವಹಿಸಿದರು. ನಿರೂಪಕಿ ಸೌಮ್ಯಾ ಹೆಗಡೆ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಬಗ್ಗೆ ಭಾರ್ಗವಿ ಮಾತನಾಡಿದರು. ವಿದ್ಯುತ್ ಕಾರಿನ ಬ್ಯಾಟರಿಗೆ ಸಂಬಂಧಪಟ್ಟ ಲೀಥಿಯಂ, ಕೋಬಾಲ್ಟ್ ಇತ್ಯಾದಿಗಳನ್ನು ರೇರ್ ಅರ್ಥ್ ಎಲಿಮೆಂಟ್ಸ್ ಎನ್ನುತ್ತಾರೆ. ಇದನ್ನು ಭೂಮಿಯಿಂದ ಪಡೆಯುವಾಗ ಪರಿಸರಕ್ಕೆ ಬಹಳಷ್ಟು ಹಾನಿ ಉಂಟಾಗುತ್ತದೆ. ಮೈನಿಂಗ್​ನಿಂದಲೇ ತೊಂದರೆ ಆರಂಭವಾಗುತ್ತದೆ. ಅವುಗಳ ಗಣಿಗಾರಿಕೆಯಲ್ಲಿ ಅಧಿಕ ನೀರು ಬಳಕೆಯಾಗುತ್ತದೆ. ಹಾಗಾಗಿ, ವಿದ್ಯುತ್ ಕಾರಿನಿಂದ ಪರಿಸರಕ್ಕೆ ಹಾನಿ, ದುಷ್ಪರಿಣಾಮ ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಾವು ದೀರ್ಘ ಕಾಲದ ದೃಷ್ಟಿಕೋನದಲ್ಲಿ ಯೋಚಿಸಬೇಕು. ವಿಷಯ ವಿಶ್ಲೇಷಣೆ, ಸಂಶೋಧನೆ ಮಾಡಬೇಕು ಎಂದು ವಿವರಿಸಿದರು.

ದೇಶದಲ್ಲಿ ವಿದ್ಯುತ್ ಉತ್ಪಾದನೆ ಉಷ್ಣ ವಿದ್ಯುತ್ ಸ್ಥಾವರಗಳ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಮಾಲಿನ್ಯ ಕಡಿಮೆ ಆಗುತ್ತದೆ ಎಂಬುದು ಭ್ರಮೆಯಷ್ಟೆ. ವಿದ್ಯುತ್ ಕಾರು, ಪರಿಸರ ಸಂರಕ್ಷಣೆ ಎಂದು ಒಂದು ಬಾರಿಗೆ ಖುಷಿ ಅನಿಸಬಹುದು. ಆದರೆ ಅದರಿಂದ ಮತ್ತೆಲ್ಲೋ ಪರಿಸರ ಹಾನಿ‌ ಆಗುತ್ತಿರುತ್ತದೆ ಎಂದು ತಿಳಿಸಿದರು. ಕಾರು ತಯಾರಿಕೆಯ ಸಂಶೋಧನೆ ಹಾಗೂ ಅಭಿವೃದ್ಧಿಗೆ ಬೆಂಗಳೂರನ್ನು ಆಯ್ಕೆ ಮಾಡಿಕೊಂಡದ್ದು ಇಲ್ಲಿ ಸೈಂಟಿಫಿಕ್‌ ಕಮ್ಯುನಿಟಿ ಇದೆ ಎಂಬ ಕಾರಣಕ್ಕೆ. ಸಂಶೋಧನೆಗೆ ಸೂಕ್ತ ಜನರು ಸಿಗುತ್ತಾರೆ ಎಂಬಿತ್ಯಾದಿ ಕಾರಣ ಇರಬಹುದು ಎಂದು ಅಭಿಪ್ರಾಯಪಟ್ಟರು. ಇದೊಂದು ದೊಡ್ಡ ಯೋಜನೆ. ಯೋಚನೆ ಮಾಡದೆ, ಕೇವಲ ವಿಷಯ ವಿಜೃಂಭಣೆಯಿಂದ ತೊಂದರೆಯಾಗಬಹುದು. ವಿದ್ಯುತ್ ಪರ್ಯಾಯ ಶಕ್ತಿ ಎಂದಮಾತ್ರಕ್ಕೆ ಅದರ ಹಿಂದೆ ಓಡುತ್ತಿದ್ದೇವೆ. ಸೂಕ್ಷ್ಮವಾಗಿ ಯೋಚಿಸುತ್ತಿಲ್ಲ ಎಂದು ಹೇಳಿದರು.

ನಮ್ಮ ನೈಸರ್ಗಿಕ ಸಂಪನ್ಮೂಲ ನಮಗೆ ಮಾತ್ರವಲ್ಲ. ಮುಂದಿನ ತಲೆಮಾರಿಗೂ ಬೇಕು. ಜೊತೆಗೆ, ಟೆಸ್ಲಾದಂಥ ಕಾರಿನಿಂದ ಒಂದು ವರ್ಗದ ಜನರಿಗೆ ಮಾತ್ರ ಯೋಜನೆಗಳು, ಉಪಯೋಗಗಳು ಉಂಟಾಗಬಹುದು. ಸಾಮಾನ್ಯ ಜನರಿಗೆ ನಡೆಯಲು ಫುಟ್​ಪಾಥ್, ಸೈಕಲ್ ಓಡಿಸಲು ಹಾದಿಯ ಸುರಕ್ಷತೆ ಇಲ್ಲ. ಸಾರ್ವಜನಿಕ ಸಾರಿಗೆ, ಅದರ ಸೇವೆ ಲಭ್ಯವಾಗುವಂತೆ ವ್ಯವಸ್ಥೆಗಳಿಗೆ ಕೊರತೆ ಇದೆ. ಹಾಗಾಗಿ, ಅಂತಹಾ ಸೇವೆಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಕಾರು ತಯಾರಿಯ ಹಿಂದಿನ ವಿಜ್ಞಾನ ಚೆನ್ನಾಗಿದೆ.‌ ಆದರೆ, ಕಾರ್ ಇಟ್ಟುಕೊಳ್ಳುವುದನ್ನೇ ಯಾಕೆ ಮುನ್ನೆಲೆಗೆ ತರುತ್ತಿದ್ದೇವೆ? ವಿದೇಶಿ ಹೋಲಿಕೆಗೆ ಕಾರ್​ನ್ನೇ ಯಾಕೆ ಮಾದರಿಯಾಗಿ ಬಳಸುತ್ತೇವೆ? ಅಲ್ಲಿನ ನಾಯಕರು ಸಾರ್ವಜನಿಕ ಸಾರಿಗೆ, ಸೈಕಲ್ ಬಳಸುತ್ತಾರಲ್ವಾ. ನಮಗೆ ಅದು ಮಾದರಿ ಆಗಬಹುದಲ್ವಾ? ಎಂದು ಪ್ರಶ್ನಿಸಿದರು. ನಾವು ನಮ್ಮ ದೇಶದ ನೆಲೆಯಲ್ಲಿ, ನಮ್ಮ ರಸ್ತೆ ಇತ್ಯಾದಿಗಳನ್ನು ನೋಡಿ ಅಭಿವೃದ್ಧಿಯತ್ತ ಹೆಚ್ಚು ಗಮನ ಕೊಡಬೇಕು ಎಂದು ಮಾತನಾಡಿದರು.

ನಗರೀಕೃತ ಅರಣ್ಯ ತಜ್ಞ, ವೃಕ್ಷ ವೈದ್ಯ ವಿಜಯ್ ನಿಶಾಂತ್ ಮಾತನಾಡಿದರು. ಈ ಯೋಜನೆ ನೈತಿಕವಾಗಿ ಸರಿಯಾಗಿದೆಯಾ ಎಂದು ಯೋಚಿಸಬೇಕು. ಅಭಿವೃದ್ಧಿ ಹೆಸರಲ್ಲಿ ಹಾನಿಯಾಗಬಾರದು ಎಂದು ಹೇಳಿದರು. ಕರ್ನಾಟಕವನ್ನು ಕೇವಲ ಬೆಂಗಳೂರೆಂದು ಪರಿಗಣಿಸುವುದು ಒಳ್ಳೆಯದಲ್ಲ. ಅಭಿವೃದ್ಧಿ ಎಂಬಾಗ, ಬೆಂಗಳೂರಿನ ಜೊತೆ ಬೇರೆ ನಗರಗಳನ್ನು ಕೂಡ ಪರಿಗಣಿಸಬೇಕು ಎಂದು ತಿಳಿಸಿದರು.

ಮಧ್ಯಮ ವರ್ಗದ ಜನರು ಮೆಟ್ರೋ ಬಳಸುತ್ತಾರೆ. ಹೀಗೆ ಮೆಟ್ರೋ, ಬಸ್ ಮೊದಲಾದ ಸಾರ್ವಜನಿಕ ಸಾರಿಗೆಗಳನ್ನು ಅಭಿವೃದ್ಧಿಗೆ ಪರಿಗಣಿಸಿದರೆ ಸಮೂಹವಾಗಿ ಬಹಳಷ್ಟು ಮಂದಿಗೆ ಒಳಿತಾಗುತ್ತದೆ. ಆದ್ದರಿಂದ, ಕಾರ್ ಬದಲು, ಜನಸ್ನೇಹಿ ಸಂಚಾರ, ಸಾರಿಗೆ ಕಡೆ ಗಮನ ಕೊಡಬಹುದು ಎಂದು ಹೇಳಿದರು. ಒಂದು ವೇಳೆ, ವಿದ್ಯುತ್ ಚಾಲಿತ ಕಾರ್ ಯೋಜನೆಯಿಂದ ಉದ್ಯೋಗ ಆವಿಷ್ಕಾರಗಳು ಆಗುತ್ತವೆ ಅಂತಾದರೆ, ಪರಿಸರ ಹಾನಿ ಇಲ್ಲ ಅಂತಾದರೆ ನಾವು ಖಂಡಿತವಾಗಿ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು. ಈಗಾಗಲೇ ವಿದ್ಯುತ್ ಚಾಲಿತ ಸ್ಕೂಟರ್​ಗಳು ಬಂದಿವೆ. ಹಾಗೆಯೇ ಜನರು ಕಾರ್​ನ್ನು ಕೂಡ ಸ್ವಾಗತಿಸಬಹುದು ಎಂದು ಹೇಳಿದರು. ಕಾರ್​ನಲ್ಲೂ ಹೈಬ್ರಿಡ್ ಅಂದರೆ ಪೆಟ್ರೋಲ್/ಇಂಧನ ಹಾಗೂ ವಿದ್ಯುತ್ ಮೂಲಕ ಚಲಿಸುವ ಎರಡೂ ಅವಕಾಶ ಇರುವ ವಾಹನ ಬರಲಿದೆ ಎಂಬ ವಿಷಯಗಳಿವೆ. ಹಾಗಾಗಿ, ನಾವು ಸದ್ಯಕ್ಕೆ ಮನಸನ್ನು ತೆರೆದಿಡೋಣ. ಪರಿಸರಕ್ಕೆ ಹಾನಿ ಆಗದೆ ಇದ್ದು ಕಾರ್ ತಯಾರಾದರೆ ಒಳ್ಳೆಯದೇ ಎಂದು ಹೇಳಿದರು.

Tv9 Facebook Live | ವಾಟ್ಸಾಪ್​ ಹೊಸ ಪ್ರೈವೆಸಿ ಪಾಲಿಸಿ; ಸಾಧಕ-ಬಾಧಕ

Published On - 11:25 pm, Thu, 14 January 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ