ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿ ಕುಳಿತ ವೃದ್ಧೆ!
ಮ್ಯಾಜಿಸ್ಟ್ರೇಟ್ ತನ್ನ ಕೇಸಿಗೆ ಸಂಬಂಧಿಸಿದಂತೆ ಲಂಚ ಕೇಳುತ್ತಿದ್ದಾರೆ. ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ವೃದ್ಧ ಮಹಿಳೆ ಆರೋಪಿಸಿದ್ದಾರೆ. ನೀರಾವರಿ ಇಲಾಖೆಯ ಚರಂಡಿಗೆ ಸಂಬಂಧಿಸಿದಂತೆ ಈ ವಿಷಯವು 11 ವರ್ಷಗಳ ಹಿಂದಿನ ವಿವಾದವಾಗಿದೆ. ಈ ಪ್ರಕರಣ ನೀರಾವರಿ ಇಲಾಖೆಯ ನ್ಯಾಯಾಲಯದಲ್ಲಿ ಬಾಕಿ ಇದೆ. ವೃದ್ಧೆ ಜಮೀನಿನಲ್ಲಿ ಸರ್ಕಾರಿ ನೀರಾವರಿ ಚರಂಡಿ ಇದೆ ಎಂದು ಆರೋಪಿಸಿ ಆಕೆಯ ಮೇಲೆ ಪ್ರಕರಣ ದಾಖಲಿಸಿತ್ತು. ಆದರೆ ಇಲ್ಲಿಯವರೆಗೆ ಅದರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಮಥುರಾ, ಏಪ್ರಿಲ್ 16: ಮಥುರಾದ ಸಿವಿಲ್ ಲೈನ್ ಪ್ರದೇಶದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಛಾಟಾ ತಹಸಿಲ್‌ನ ಸುಜಾವಲಿ ಗ್ರಾಮದ ನಿವಾಸಿ ಸೋನಾ ಎಂಬ ವೃದ್ಧೆ ಮರ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದರು. ನ್ಯಾಯ ಒದಗಿಸಲು ವಿಶೇಷ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅತುಲ್ ಕುಮಾರ್ ಸಿಂಗ್ ಚೌಹಾಣ್ ಅವರು 50 ಸಾವಿರ ರೂ. ಲಂಚ ಕೇಳಿದ್ದಾರೆ ಎಂದು ಆ ವೃದ್ಧ ಮಹಿಳೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕೆ ಮರ ಹತ್ತಿ ಕುಳಿತಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಕೂಡಲೆ ಅಗ್ನಿಶಾಮಕ ದಳದವರು ಆಕೆಯನ್ನು ರಕ್ಷಿಸಿ ಕೆಳಗೆ ಕರೆತಂದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ