ನಮ್ಮ ಸರ್ಕಾರ ರಚನೆಯಾದ ದಿನದಿಂದಲೇ ಅದನ್ನು ಉರುಳಿಸುವ ಪ್ರಯತ್ನಗಳು ನಡೆದಿವೆ: ಸತೀಶ್ ಜಾರಕಿಹೊಳಿ
ಜಾರಿ ನಿರ್ದೇಶನಾಲಯವು ಸೋನಿಯ ಗಾಂಧಿ ಮತ್ತು ರಾಹುಲ್ ಗಾಂಧಿಯವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿರುವ ಬಗ್ಗೆ ಕೇಳಿದಾಗ ಸತೀಶ್ ಜಾರಕಿಹೊಳಿ, ಕೋರ್ಟ್ ಒಂದೇ ಕಾಂಗ್ರೆಸ್ ಮುಂದಿರುವ ದಾರಿ ಎಂದು ಹೇಳಿದರು. ಸಂಪುಟ ಪುನಾರಚನೆ ಮತ್ತು ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕೇವಲ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವ ಜಾರಕಿಹೊಳಿ ಪುನರುಚ್ಛಿಸಿದರು .
ಹುಬ್ಬಳ್ಳಿ, ಏಪ್ರಿಲ್ 16: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು (Siddaramaiah government) ಉರುಳಿಸುವ ಪ್ರಯತ್ನಗಳು ನಡೆಯುತ್ತಿವೆ, ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಏನೇ ಭಿನ್ನಭಿಪ್ರಾಯಳಿದ್ದರು ಪಕ್ಷದ ಚೌಕಟ್ಟಿನೊಳಗೆ ಮಾತ್ರ ಪ್ರಸ್ತಾಪಿಸಬೇಕು, ಎಲ್ಲ ನಾಯಕರು ಎಚ್ಚರದಿಂದಿರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿರವುದನ್ನು ಸಚಿವ ಸತೀಶ್ ಜಾರಕಿಹೊಳಿ ಮುಂದೆ ಪ್ರಸ್ತಾಪಿಸಿದಾಗ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಉರುಳಿಸುವ ಪ್ರಯತ್ನಗಳು ನಡೆದಿವೆ ಎಂದರು. ಅದರೆ, ಕಾಂಗ್ರೆಸ್ ಬುಟ್ಟಿಯಲ್ಲಿ 140 ಸೀಟುಗಳಿರುವುದರಿಂದ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ ಬದಲಾವಣೆಗೆ ಆಗ್ರಹಿಸಿಲ್ಲ: ಸತೀಶ್ ಜಾರಕಿಹೊಳಿ ದಿಢೀರ್ ಯೂಟರ್ನ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos