ಲಾರಿ ಮುಷ್ಕರ: ಮೈಸೂರಿನ ಗೂಡ್ಸ್ ಶೆಡ್ನಲ್ಲಿ 400ಕ್ಕೂ ಹೆಚ್ಚು ಲಾರಿಗಳು ನಿಶ್ಚಲ ಸ್ಥಿತಿಯಲ್ಲಿ
ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಲಾರಿ ಮಾಲೀಕರೊಬ್ಬರು ಡೀಸೆಲ್ ಬೆಲೆ ಇಳಿಸದ ಹೊರತು ಲಾರಿ ಮುಷ್ಕರ ನಿಲ್ಲುವ ಚಾನ್ಸೇ ಇಲ್ಲ ಎನ್ನುತ್ತಾರೆ. ಡೀಸೆಲ್ ಬೆಲೆ ಹೆಚ್ಚಾದರೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತದೆ ಅನ್ನೋದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರ್ಥಮಾಡಿಕೊಳ್ಳಬೇಕು, ನಮಗ್ಯಾವ ಸರ್ಕಾರವೂ ಬೇಡ, ನಮ್ಮದು ಲಾರಿ ಸರ್ಕಾರ; ಕಾರ್ಮಿಕರು ಮತ್ತು ನಾಳೆಯಿಂದ ಆಟೋದವರೂ ತಮ್ಮೊಂದಿಗೆ ಧರಣಿಗೆ ಇಳಿಯುತ್ತಿದ್ದಾರೆ ಎಂದು ಅವರು ಹೇಳಿದರು.
ಮೈಸೂರು, ಏಪ್ರಿಲ್ 16: ನಿನ್ನೆಯಿಂದ ಆರಂಭವಾಗಿರುವ ಲಾರಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಅದು ಮುಗಿಯುವ ಲಕ್ಷಣ ಸದ್ಯಕ್ಕಂತೂ ಕಾಣುತ್ತಿಲ್ಲ. ನಮ್ಮ ಮೈಸೂರು ಪ್ರತಿನಿಧಿ ಹೇಳುವ ಪ್ರಕಾರ ಮೈಸೂರಲ್ಲಿ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಮತ್ತು ನಗರದ ಗೂಡ್ಸ್ಶೆಡ್ನಲ್ಲಿ (Mysuru goods shed) ಸುಮಾರು 400 ಲಾರಿಗಳು ನಿನ್ನೆಯಿಂದ ನಿಶ್ಚಲ ಸ್ಥಿತಿಯಲ್ಲಿವೆ. ಎರಡು ರೇಲ್ವೇ ಗೂಡ್ಸ್ ಟ್ರೈನುಗಳಲ್ಲಿ ರಸಗೊಬ್ಬರ ಮತ್ತು ಸಿಮೆಂಟ್ ದಾಸ್ತಾನು ಬಂದಿದೆಯಾದರೂ ಅನ್ಲೋಡ್ ಮಾಡಿ ಲಾರಿಗಳಿಗೆ ತುಂಬುವ ಕೆಲಸ ನಡೆಯುತ್ತಿಲ್ಲ, ಯಾಕೆಂದರೆ ರೇಲ್ವೇ ಕಾರ್ಮಿಕರು ಸಹ ಲಾರಿ ಚಾಲಕರ ಜೊತೆ ಮುಷ್ಕರದಲ್ಲಿ ಜೈ ಜೋಡಿಸಿದ್ದಾರೆ. ನಿನ್ನೆಯಿಂದ ಮೈಸೂರಿಂದ ಹೊರಗೆ ಮತ್ತು ಮೈಸೂರಿನೊಳಗೆ ಯಾವುದೇ ದಾಸ್ತಾನು ಬಂದಿಲ್ಲ ಮತ್ತು ಹೋಗಿಲ್ಲ.
ಇದನ್ನೂ ಓದಿ: Karnataka Lorry Strike: ಕರ್ನಾಟಕ ಲಾರಿ ಮುಷ್ಕರ ಶುರು; ಲಾರಿ, ಟ್ರಕ್ ಸಂಚಾರ ಸ್ಥಗಿತ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ