ಟಿವಿ9 ಇಂಪ್ಯಾಕ್ಟ್: ಮೊದಲನೇ ತರಗತಿ ಪ್ರವೇಶಕ್ಕೆ ಮಗು 6 ವರ್ಷ ಪೂರ್ತಿಗೊಳಿಸಿರಬೇಕೆಂಬ ನಿಯಮ ಸಡಲಿಸಿದ ಸರ್ಕಾರ
ಇದು ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ಅನ್ನೋದು ಸುಳ್ಳಲ್ಲ, ಟಿವಿ9 ಕನ್ನಡ ವಾಹಿನಿಯು ಸರ್ಕಾರದ 6 ವರ್ಷ ಕಡ್ಡಾಯ ನಿಯಮದ ಬಗ್ಗೆ ವಿರೋಧ ವ್ಯಕ್ತಪಡಿಸಿ ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಬಿತ್ತರಿಸಿತ್ತು. ಪ್ರಾಯಶಃ ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಸಹ ಅಧ್ಯಯನ ನಡೆಸಿ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷ ಪೂರ್ತಿಗೊಳಿಸಿರುವ ಅಗತ್ಯವಿಲ್ಲವೆಂಬ ಅಂಶವನ್ನು ಮನಗಂಡಿರಬೇಕು.
ಬೆಂಗಳೂರು, ಏಪ್ರಿಲ್ 16: ಮೊದಲನೇ ತರಗತಿಗೆ ದಾಖಲಾತಿ ಪಡೆಯಬೇಕಾದರೆ ಮಗುವಿಗೆ 6 ವರ್ಷ ತುಂಬಿರಲೇಬೇಕೆಂಬ ನಿಯಮವನ್ನು ರಾಜ್ಯ ಸರ್ಕಾರ 2025-26ಸಾಲಿನ ಶೈಕ್ಷಣಿಕ ವರ್ಷಕ್ಕೆ (2025-26 academic year) ಸಡಲಿಸಿ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಟಿವಿ9 ಕನ್ನಡ ವಾಹಿನಿ ಮತ್ತು ಪೋಷಕರ ಆಗ್ರಹ, ಎಸ್ಇಪಿ ಶಿಫಾರಸ್ಸು ಹಾಗೂ ವ್ಯಾಪಕ ಸಾರ್ವಜನಿಕ ಟೀಕೆ ಕಾರಣವಾಗಿದೆ. ಹೊಸ ನಿಯಮದ ಅಥವಾ ಹಿಂದೆ ಅಸ್ತಿತ್ವದಲ್ಲಿದ್ದ ನಿಯಮದ ಪ್ರಕಾರ ಮಗುವಿಗೆ ಐದೂವರೆ ವರ್ಷ ಪೂರ್ಣಗೊಂಡಿದ್ದರೆ ಇಲ್ಲವೇ ಯುಕೆಜಿ ಅಥವಾ ತತ್ಸಮಾನ ಹಂತವನ್ನು ಪೂರ್ತಿಗೊಳಿಸಿದ್ದರೆ ಮೊದಲ ತರಗತಿಗೆ ಪ್ರವೇಶ ಪಡೆಯಬಹುದು.
ಇದನ್ನೂ ಓದಿ: ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 16, 2025 05:40 PM