ಪುಣೆ ಆಸ್ಪತ್ರೆಯಲ್ಲಿ ವೀಲ್‌ಚೇರ್ ಇಲ್ಲದೆ ಅಂಗವಿಕಲ ನೆಲದಲ್ಲಿ ತೆವಳಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್
ಮಾಹಿತಿಯ ಪ್ರಕಾರ, ಈ ರೋಗಿಯು ಅಪಘಾತದಲ್ಲಿ ಕಾಲು ಕಳೆದುಕೊಂಡ ನಂತರ ನಾಗ್ಪುರದಿಂದ ಚಿಕಿತ್ಸೆಗಾಗಿ ಬಂದಿದ್ದರು. ಅವರಿಗೆ ಚಿಕಿತ್ಸೆ ನೀಡಲಾಯಿತು. ಆದರೆ, ರೋಗಿಯನ್ನು ಬಿಡಲು ವೀಲ್‌ಚೇರ್ ಲಭ್ಯವಿರಲಿಲ್ಲ. ಪುಣೆಯ ಪ್ರಸಿದ್ಧ ಸಾಸೂನ್ ಆಸ್ಪತ್ರೆಯಲ್ಲಿ ಇದು ಆಘಾತಕಾರಿ ಘಟನೆಯಾಗಿದೆ. ರೋಗಿಯನ್ನು ವಾರ್ಡ್‌ನಿಂದ ಹೊರಗೆ ಕರೆದೊಯ್ಯಲು ಆಸ್ಪತ್ರೆಯಲ್ಲಿ ವೀಲ್‌ಚೇರ್ ಇಲ್ಲ ಎಂಬುದು ಬೆಳಕಿಗೆ ಬಂದಿದೆ.
ಪುಣೆ, ಏಪ್ರಿಲ್ 16: ಪುಣೆಯ (Pune) ಸರ್ಕಾರಿ ಸ್ವಾಮ್ಯದ ಸಾಸೂನ್ ಆಸ್ಪತ್ರೆ ಶಸ್ತ್ರಚಿಕಿತ್ಸೆಯ ನಂತರ ಅಂಗವಿಕಲನೊಬ್ಬ ವೀಲ್‌ಚೇರ್ ಇಲ್ಲದೆ ನೆಲದಲ್ಲಿ ತೆವಳುತ್ತಾ ಹೋಗುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ. ಅಂತರ್ಜಾಲದಲ್ಲಿ ವೈರಲ್ (Viral Video) ಆಗಿರುವ ವೀಡಿಯೊದಲ್ಲಿ, ವೀಲ್‌ಚೇರ್ ಇಲ್ಲದ ಕಾರಣ ಅಂಗವಿಕಲನೊಬ್ಬ ಬಾಗಿಲಿನಿಂದ ಹೊರಗೆ ಕಾಲು ಎಳೆದುಕೊಂಡು ತೆವಳುತ್ತಿರುವುದನ್ನು ನೋಡಬಹುದು. ಈ ರೋಗಿಯು ಅಪಘಾತದಲ್ಲಿ ಕಾಲು ಕಳೆದುಕೊಂಡ ನಂತರ ಚಿಕಿತ್ಸೆಗಾಗಿ ಬಂದಿದ್ದರು. ಅವರಿಗೆ ಚಿಕಿತ್ಸೆ ನೀಡಲಾಯಿತು. ಆದರೆ, ಆಸ್ಪತ್ರೆಯಲ್ಲಿ ವೀಲ್‌ಚೇರ್ ಲಭ್ಯವಿರದ ಕಾರಣದಿಂದ ಆತ ಪರದಾಡಬೇಕಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ