ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಜಾಮೀನು ಪಡೆದು ಹೊರಬಂದಿದ್ದ ರಜತ್ ಅವರನ್ನು ಮತ್ತೆ ಜೈಲಿಗೆ ಕಳಿಸಲಾಗಿದೆ. ಆದರೆ ವಿನಯ್ ಗೌಡ ಅವರು ಸದ್ಯಕ್ಕೆ ಜೈಲು ವಾಸದಿಂದ ಬಚಾವ್ ಆಗಿದ್ದಾರೆ.
ನಿಷೇಧಿತ ಮಾರಕಾಸ್ತ್ರವಾದ ಮಚ್ಚು ಹಿಡಿದು ರೀಲ್ಸ್ ಮಾಡಿದ ಕೇಸ್ನಲ್ಲಿ ಬಿಗ್ ಬಾಸ್ (Bigg Boss Kannada) ಖ್ಯಾತಿಯ ರಜತ್ ಕಿಶನ್ ಅವರಿಗೆ ಪುನಃ ಸಂಕಷ್ಟ ಶುರುವಾಗಿದೆ. ಜಾಮೀನು ಪಡೆದು ಹೊರಗೆ ಬಂದಿದ್ದ ರಜತ್ (Rajath Kishan) ಅವರನ್ನು ಈಗ ಮತ್ತೆ ಜೈಲಿಗೆ ಕಳಿಸಲಾಗಿದೆ. ಆದರೆ ಅವರು ಜೊತೆ ರೀಲ್ಸ್ ಮಾಡಿದ್ದ ವಿನಯ್ ಗೌಡ (Vinay Gowda) ಅವರು ಸದ್ಯಕ್ಕೆ ಜೈಲು ವಾಸದಿಂದ ಬಚಾವ್ ಆಗಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಕೇಸ್ ಇರುವುದರಿಂದ ರಜತ್ ಬಗ್ಗೆ ನಾನು ಏನೂ ಕಮೆಂಟ್ ಮಾಡಲು ಸಾಧ್ಯವಿಲ್ಲ. ಏನೂ ಮಾತನಾಡುವುದು ಬೇಡ ಅಂತ ಸೂಚಿಸಿದ್ದಾರೆ. ರೀಲ್ಸ್ ಮಾಡಿ ನಮ್ಮಿಂದ ತಪ್ಪಾಗಿದೆ’ ಎಂದು ವಿನಯ್ ಗೌಡ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.