ಮಚ್ಚು ಹಿಡಿದು ರೀಲ್ಸ್ ಪ್ರಕರಣ, ರಜತ್ ಮತ್ತೆ ಜೈಲಿಗೆ
Bigg Boss Kannada: ಕೆಲ ದಿನಗಳ ಹಿಂದಷ್ಟೆ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಗೌಡ ಜೊತೆಗೆ ಕೆಲ ದಿನ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ ರಜತ್, ಜಾಮೀನಿನ ಷರತ್ತುಗಳನ್ನು ಪೂರೈಸದ ಕಾರಣ ಇಂದು (ಏಪ್ರಿಲ್ 16) ಪೊಲೀಸರು ಮತ್ತೆ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ರಜತ್ಗೆ ಏಪ್ರಿಲ್ 29ರ ವರೆಗೆ ನ್ಯಾಯಾಲಯ ಬಂಧನ ವಿಧಿಸಿದೆ.

ಬಿಗ್ಬಾಸ್ (Bigg Boss) ಮಾಜಿ ಸ್ಪರ್ಧಿ ರಜತ್ಗೆ ಗ್ರಹಚಾರವೇ ಸರಿ ಇದ್ದಂತಿಲ್ಲ. ಕೆಲ ದಿನಗಳ ಹಿಂದಷ್ಟೆ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಗೌಡ ಜೊತೆಗೆ ಕೆಲ ದಿನ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ ರಜತ್, ಜಾಮೀನಿನ ಷರತ್ತುಗಳನ್ನು ಪೂರೈಸದ ಕಾರಣ ಇಂದು (ಏಪ್ರಿಲ್ 16) ಪೊಲೀಸರು ಮತ್ತೆ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ರಜತ್ಗೆ ಏಪ್ರಿಲ್ 29ರ ವರೆಗೆ ನ್ಯಾಯಾಲಯ ಬಂಧನ ವಿಧಿಸಿದೆ.
ಮಾಜಿ ಬಿಗ್ಬಾಸ್ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಅವರು ಇತ್ತೀಚೆಗೆ ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿದ್ದರು. ವಿಡಿಯೋ ಗಮನಿಸಿದ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಅಡಿ ದೂರು ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಿದ್ದರು. ಕೆಲ ದಿನ ನ್ಯಾಯಾಂಗ ಬಂಧನದಲ್ಲಿದ್ದ ವಿನಯ್ ಹಾಗೂ ರಜತ್, ಜಾಮೀನಿನ ಮೇಲೆ ಹೊರಬಂದಿದ್ದರು. ಜಾಮೀನು ನೀಡಿದ್ದ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವುದು ಸೇರಿದಂತೆ ಇನ್ನೂ ಕೆಲ ಷರತ್ತುಗಳನ್ನು ವಿಧಿಸಿತ್ತು. ಆದರೆ ರಜತ್, ವಿಚಾರಣೆಗೆ ಹಾಜರಾಗದ ಕಾರಣ ಅವರನ್ನು ಇಂದು (ಏಪ್ರಿಲ್ 16) ಪೊಲೀಸರು ಬಂಧಿಸಿ ಬೆಂಗಳೂರಿನ 24ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯವು ಏಪ್ರಿಲ್ 29ರ ವರೆಗೆ ರಜತ್ಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಮುಂದಿನ ಎಂಟು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯಬೇಕಿದೆ ರಜತ್.
ನ್ಯಾಯಾಲಯದಲ್ಲಿ ಪೊಲೀಸರ ಪರ ವಾದ ಮಂಡಿಸಿದ ಪಿಪಿ ಅವರು, ಆರೋಪಿ ಮೊದಲ ಡೇಟ್ನಲ್ಲಿಯೇ ಜಾಮೀನಿನ ನಿಯಮ ಉಲ್ಲಂಘನೆ ಮಾಡಿದ್ದಾರೆ, ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತೇವೆ ಎಂದು ಷರತ್ತಿನಲ್ಲಿ ಹೇಳಿದ್ದರು. ಆದರೆ ಮೊದಲ ಡೇಟ್ನಲ್ಲಿಯೇ ಷರತ್ತಿನ ಉಲ್ಲಂಘನೆ ಮಾಡಿದ್ದು ನೀಡಿರುವ ಜಾಮೀನು ರದ್ದು ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಆರೋಪಿ ಪರ ವಾದ ಮಂಡಿಸಿದ ವಕೀಲರು, ಆರೋಪಿ, ವಿಚಾರಣೆ ದಿನ ನ್ಯಾಯಾಲಯಕ್ಕೆ ಬಂದಿದ್ದಾಗಿ ಹೇಳಿದ್ದಾರೆ. ಆದರೆ ಜನ ಹೆಚ್ಚು ಇದ್ದಿದ್ದರಿಂದ ಕಲಾಪಕ್ಕೆ ಹಾಜರಾಗಲು ಆಗಲಿಲ್ಲ, ನ್ಯಾಯಾಲಯದ ಮೆಟ್ಟಿಲು ಏರುವಷ್ಟರಲ್ಲಿ ಕಲಾಪ ಮುಗಿದಿದೆ ಎಂಬ ಸುದ್ದಿ ಬಂತು ಹಾಗಾಗಿ ವಿಚಾರಣೆಗೆ ಹಾಜರಾಗಲಿಲ್ಲ ಎಂದಿದ್ದಾರೆ. ಆದರೆ ಸರ್ಕಾರಿ ವಕೀಲರ ವಾದಕ್ಕೆ ಮನ್ನಣೆ ನೀಡಿದ ನ್ಯಾಯಾಧೀಶರು ರಜತ್ಗೆ ಏಪ್ರಿಲ್ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದರು. ಪ್ರಸ್ತುತ ರಜತ್ರ ಜಾಮೀನು ಮಾತ್ರವೇ ರದ್ದಾಗಿದೆ. ವಿನಯ್ ವಿಚಾರಣೆಗೆ ಹಾಜರಾಗಿದ್ದ ಕಾರಣ ಅವರ ಜಾಮೀನು ರದ್ದಾಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Wed, 16 April 25