AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಲಿಸುವ ರೈಲಿಗೆ ಸೆಡ್ಡು ಹೊಡೆದು ಓಟಕ್ಕೆ ಇಳಿದ ಫಿಟ್ ನೆಸ್ ಇನ್ಫ್ಲುಯೆನ್ಸರ್, ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳು ನೋಡಿದಾಗ ಕೆಲವೊಮ್ಮೆ ಎದೆ ಝಲ್ ಎನ್ನುವಂತೆ ಮಾಡುತ್ತದೆ. ರೀಲ್ಸ್ ಹುಚ್ಚಿಗೆ ಕೆಲವರು ತಮ್ಮ ಪ್ರಾಣವನ್ನೇ ಪಣಕಿಡುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಫಿಟ್ ನೆಸ್ ಇನ್ಫ್ಲುಯೆನ್ಸರ್ ಒಬ್ಬರು ವೇಗವಾಗಿ ಚಲಿಸುವ ರೈಲಿನ ಪಕ್ಕದಲ್ಲಿ ಓಡುತ್ತಿದ್ದಾರೆ. ಹೌದು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದು ಜೀವದ ಜೊತೆಗೆ ಆಟವಾಡಬೇಡಿ ಎಂದಿದ್ದಾರೆ.

ಚಲಿಸುವ ರೈಲಿಗೆ ಸೆಡ್ಡು ಹೊಡೆದು ಓಟಕ್ಕೆ ಇಳಿದ ಫಿಟ್ ನೆಸ್ ಇನ್ಫ್ಲುಯೆನ್ಸರ್, ವಿಡಿಯೋ ವೈರಲ್
ವೈರಲ್​​ ವಿಡಿಯೋ Image Credit source: instagram
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 16, 2025 | 4:16 PM

Share

ಇತ್ತೀಚೆಗಿನ ದಿನಗಳಲ್ಲಿ ಬಹುತೇಕರು ಸೋಶಿಯಲ್ ಮೀಡಿಯಾ (social media) ಸಿಕ್ಕಾಪಟ್ಟೆ ಆಕ್ಟಿವ್. ಹೀಗಾಗಿ ಲೈಕ್ಸ್, ವೀವ್ಸ್‌ ಗಿಟ್ಟಿಸಿಕೊಳ್ಳಲು ಮತ್ತು ಫೇಮಸ್‌ (famous) ಆಗಲು ಕೆಲವರು ಯಾವ ಮಟ್ಟಕ್ಕೂ ಬೇಕಾದ್ರೂ ಇಳಿಯುತ್ತಾರೆ. ಕೆಲವರು ತಮ್ಮ ಪ್ರಾಣದ ಜೊತೆಗೆ ಆಟವಾಡುವ ಮೂಲಕ ರೀಲ್ಸ್ (reels) ಮಾಡುತ್ತಾರೆ. ಇಂತಹ ಸಾಕಷ್ಟು ವಿಡಿಯೋ (video) ಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ದೆಹಲಿ (dehli) ಮೂಲದ ಫಿಟ್ ನೆಸ್ ಇನ್ಫ್ಲುಯೆನ್ಸರ್ (fitness influencer) ರೊಬ್ಬರು ಚಲಿಸುವ ರೈಲಿ (train)ಗೆ ಸೆಡ್ಡು ಹೊಡೆದು ಓಟಕ್ಕೆ ಇಳಿದಿದ್ದಾರೆ. ಈ ವಿಡಿಯೋವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ.

ದೆಹಲಿ ಮೂಲದ ಫಿಟ್‌ನೆಸ್ ಇನ್ಫ್ಲುಯೆನ್ಸರ್​​ ರೈಲಿನ ಜೊತೆ ಓಡುವ ವಿಡಿಯೋವನ್ನು ಮಾಡಿದ್ದಾರೆ. piku singh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಇದಕ್ಕೆ ‘ರೈಲಿನ ಜೊತೆ ಓಡುತ್ತಿದ್ದೇನೆ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ರೈಲು ವೇಗವಾಗಿ ಬರುತ್ತಿರುವುದು ನೋಡಬಹುದು. ಫಿಟ್ ನೆಸ್ ಇನ್ಫ್ಲುಯೆನ್ಸರ್ ರಾದ ಪಿಕು ಸಿಂಗ್ ಈ ರೈಲಿನ ಪಕ್ಕದಲ್ಲಿರುವ ಹಳಿಯ ಮೇಲೆ ಓಡುತ್ತಿದ್ದಾರೆ.

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಇದನ್ನೂ ಓದಿ : ಪ್ರವಾಸಿ ತಾಣದಲ್ಲಿ ಯುವಕ ಯುವತಿಯರ ನಡುವೆ ಬಿಗ್ ಫೈಟ್, ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

View this post on Instagram

A post shared by Piku Singh (@runfitpiku)

ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹದಿನಾರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಸಾಹಸವನ್ನು ಟೀಕಿಸಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ ಟ್ರ್ಯಾಕ್‌ನಲ್ಲಿ ಓಡಿ, ನೀವು ವೇಗವಾಗಿ ಓಡಲು ಸಾಧ್ಯವಾಗುತ್ತದೆ’ ಎಂದಿದ್ದಾರೆ. ಮತ್ತೊಬ್ಬರು, ‘ರೈಲಿನ ಮುಂದೆ ಓಡಿ ನಿಮ್ಮ ಓಟದ ವೇಗ ಎಷ್ಟಿದೆ’ ಎಂದು ತಿಳಿಯುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ನಿಜಕ್ಕೂ ಉತ್ತಮವಾದ ಪ್ರಯತ್ನ, ದಯವಿಟ್ಟು ಮತ್ತೊಮ್ಮೆ ಈ ರೀತಿ ಪ್ರಯತ್ನಿಸಬೇಡಿ’ ಎಂದಿದ್ದಾರೆ. ಕೆಲವರು ‘ಈ ರೀತಿ ಸಾಹಸಕ್ಕೆ ಕೈ ಹಾಕಿ ಅಮೂಲ್ಯ ಜೀವವನ್ನು ಕಳೆದುಕೊಳ್ಳಬೇಡಿ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ