Viral: ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್ ಮಹೀಂದ್ರಾ
ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಅವರು ಜೀವನ ಪಾಠ, ಹಾಸ್ಯಮಯ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ.

ಭಾರತದ ಹೆಸರಾಂತ ಕೈಗಾರಿಕೋದ್ಯಮಿ, ಮಹೀಂದ್ರಾ ಗ್ರೂಪ್‌ನ (Mahindra Group) ಅಧ್ಯಕ್ಷರಾದ ಆನಂದ್ ಮಹೀಂದ್ರಾ (Anand Mahindra) ಉದ್ಯಮದ ಜೊತೆ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ (Social Media) ಸಖತ್ ಆಕ್ಟಿವ್ ಆಗಿದ್ದಾರೆ. ಹೊಸ ಹೊಸ ವಿಚಾರಗಳನ್ನು, ಜೀವನ ಪಾಠ, ಹಾಸ್ಯಮಯ, ಸಾಧಕರ ವಿಡಿಯೋ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಜೊತೆಗೆ ಇದೀಗ ಪ್ರತಿ ಭಾನುವಾರ ಭಾರತದ ಹಿಡನ್ ಜೆಮ್ (hidden gem) ತಾಣಗಳ (spots) ಬಗ್ಗೆಯೂ ಜನರಿಗೆ ತಿಳಿಸಿಕೊಡುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಭಾನುವಾರ ಅವರು ಭಾರತದ ಮೊದಲ ಕಾಫಿ ತೋಟ ತಾಣದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹೌದು ದೇಶದಲ್ಲೇ ಮೊದಲ ಬಾರಿಗೆ ಕಾಫಿ ಬೆಳೆ ಬೆಳೆದ ನಮ್ಮ ಚಿಕ್ಕಮಗಳೂರಿನ (Chikkamagaluru) ಅತ್ಯಾಕರ್ಷಕ ಪ್ರವಾಸಿ ತಾಣದ (tourist Spot) ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಈ ಪೋಸ್ಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಭಾನುವಾರ (ಮಾ.30) ಭಾರತದಲ್ಲಿ ಮೊದಲ ಬಾರಿಗೆ ಕಾಫಿ ಬೆಳೆ ಬೆಳೆದ ನಮ್ಮ ಕರ್ನಾಟಕದ ಚಿಕ್ಕಮಗಳೂರಿನ ಬಗ್ಗೆ ಆನಂದ್ ಮಹೀಂದ್ರಾ ತಿಳಿಸಿಕೊಟ್ಟಿದ್ದಾರೆ. 1670 ನೇ ಇಸವಿಯಲ್ಲಿ ಬಾಬಾ ಬುಡಾನ್ ಅವರು ಯೆಮೆನ್‌ನಿಂದ ತಂದ ಕಾಫಿ ಬೀಜಗಳನ್ನು ನಮ್ಮ ಕರ್ನಾಟಕದ ಚಿಕ್ಕಮಗಳೂರಿನ ಹಚ್ಚ ಹಸಿರಿನ ಬೆಟ್ಟಗಳಲ್ಲಿ ಬಿತ್ತುವ ಮೂಲಕ ಕಾಫಿ ಬೆಳೆಯನ್ನು ಭಾರತಕ್ಕೆ ಪರಿಚಯಿಸಿದರು. ನಮ್ಮ ಕರ್ನಾಟಕದ ಈ ಹಚ್ಚ ಹಸಿರಿನ ಆಕರ್ಷಕ ಪ್ರವಾಸಿ ತಾಣದ ಬಗ್ಗೆ ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ತಿಳಿಸಿಕೊಟ್ಟಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
Chikkamagaluru, Karnataka
Finding mystery in unexpected places.
This is also where the first coffee bushes in India were planted around 1670, by Baba Budan, who brought in coffee beans from Yemen. #SundayWanderer
(Courtesy: @TAdventurousoul ) pic.twitter.com/N52QyNUy4U
— anand mahindra (@anandmahindra) March 30, 2025
ಕರ್ನಾಟಕದ ಕಾಫಿ ತಾಣದ ಈ ಕುತೂಹಲಕಾರಿ ಕಥೆಯನ್ನು ಆನಂದ್ ಮಹೀಂದ್ರಾ (anandmahindra) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಚಿಕ್ಕಮಗಳೂರು ಕರ್ನಾಟಕ; ಅನಿರೀಕ್ಷಿತ ಸ್ಥಳಗಳಲ್ಲಿ ನಿಗೂಢತೆಯನ್ನು ಕಂಡುಹಿಡಿಯುವುದು, 1670 ರ ಸುಮಾರಿಗೆ ಯೆಮೆನ್‌ನಿಂದ ಕಾಫಿ ಬೀಜಗಳನ್ನು ತಂದ ಬಾಬಾ ಬುಡಾನ್ ಅವರು ಈ ಸ್ಥಳದಲ್ಲಿ ನೆಟ್ಟರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಾಲೇಜು ಪ್ರೊಫೆಸರ್ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಮಾರ್ಚ್ 30 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.7 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಚೆನ್ನಾಗಿದೆ ಸರ್. ಆದ್ರೆ ಪ್ರವರ್ಧಮಾನಕ್ಕೆ ಬರುತ್ತಿರುವ ಕಾಫಿ ಉದ್ಯಮವು ಪಶ್ಚಿಮ ಘಟ್ಟಗಳಲ್ಲಿ ಅರಣ್ಯನಾಶ ಮತ್ತು ಜೈವಿಕ ವೈವಿಧ್ಯತೆಯ ನಷ್ಟಕ್ಕೆ ಕಾರಣವಾಗಿದೆ. ಇದು ಪರಿಸರ ಸುಸ್ಥಿರತೆಯ ಬಗ್ಗೆ ಕಳವಳವನ್ನು ಉಂಟು ಮಾಡುತ್ತಿದ್ದೆ” ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ನಮ್ಮ ಚಿಕ್ಕಮಗಳೂರು ಸ್ವರ್ಗʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕಾಫಿ ಎಸ್ಟೇಟ್ ಹೊರತಾಗಿ ಚಿಕ್ಕಮಗಳೂರಿನಲ್ಲಿ ಸುಂದರ ಬೆಟ್ಟಗಳು, ಜಲಪಾತ, ನದಿ-ತೊರೆಗಳಿವೆ. ಇದು ಸಾಹಸ ಚಟುವಟಿಕೆ ಮತ್ತು ಪಿಕ್ನಿಕ್‌ಗೆ ಸೂಕ್ತ ಸ್ಥಳವಾಗಿದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ