ಪ್ರವಾಸಿ ತಾಣದಲ್ಲಿ ಯುವಕ ಯುವತಿಯರ ನಡುವೆ ಬಿಗ್ ಫೈಟ್, ವಿಡಿಯೋ ವೈರಲ್
ಟ್ರಿಪ್ ಎಂದ ಕೂಡಲೇ ಎಂಜಾಯ್ ಮೆಂಟ್ ನೆನಪಾಗುತ್ತದೆ. ಆದರೆ ಕೆಲವೊಮ್ಮೆ ಪ್ರವಾಸಿಗರ ನಡುವೆ ಮಾತಿಗೆ ಮಾತಿಗೆ ಬೆಳೆದು ಜಗಳಗಳು ನಡೆಯುವುದು ಇದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಡೆಹ್ರಾಡೂನ್ ಸಹಸ್ರಧಾರ ಪ್ರವಾಸಿ ತಾಣದಲ್ಲಿ ಯುವಕ ಯುವತಿಯರ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಉತ್ತರಾಖಂಡ, ಏಪ್ರಿಲ್ 16: ಕೆಲವರಿಗೆ ಸಣ್ಣ ಪುಟ್ಟ ವಿಷಯಕ್ಕೆ ಬಾರಿ ಬೇಗನೇ ಕೋಪ (angry) ಬಂದು ಬಿಡುತ್ತದೆ. ಹೀಗಾಗಿ ಈ ಕೋಪದ ಕೈಗೆ ಬುದ್ಧಿ ಕೊಟ್ಟು ಎಡವಟ್ಟುಗಳನ್ನು ಮಾಡಿಕೊಂಡವರು ಇದ್ದಾರೆ. ಕೆಲವರಂತೂ ಸಿಟ್ಟಿನ ಭರದಲ್ಲಿ ಮೈ ಮೇಲೆ ಕೈ ಹಾಕಿ ಹೊಡೆದಾಡಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾ (social media) ದಲ್ಲಿ ಜಗಳಕ್ಕೆ ಸಂಬಂಧಪಟ್ಟ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ಇಬ್ಬರೂ ಯುವತಿಯರು ಹಾಗೂ ಮೂವರು ಯುವಕರ ನಡುವೆ ಜಗಳ (fight) ವು ಶುರುವಾಗಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆಯೂ ಉತ್ತರಾಖಂಡ (uttarakhand) ದ ಡೆಹ್ರಾಡೂನ್ (dehradun) ನ ಸಹಸ್ರಧಾರ (sahastradhara)ದಲ್ಲಿ ನಡೆದಿದೆ ಎನ್ನಲಾಗಿದೆ.
Ghar Ke Kalesh ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರೂ ಯುವತಿಯರು ಹಾಗೂ ಮೂವರು ಯುವಕರ ನಡುವೆ ಜಗಳ ನಡೆಯುತ್ತಿರುವುದನ್ನು ನೋಡಬಹುದು. ಈ ವಿಡಿಯೋ ಪ್ರಾರಂಭದಲ್ಲಿ ಯುವತಿಗೆ ಯುವಕನು ಹೊಡೆಯುವುದನ್ನು ನೋಡಬಹುದು. ಆ ಬಳಿಕ ಯುವತಿಯೂ ಯುವಕನಿಗೆ ಕಲ್ಲನ್ನು ಎಸೆಯುತ್ತಿದ್ದಾಳೆ. ಒಬ್ಬರು ಇನ್ನೊಬ್ಬರನ್ನು ಎಳೆದಾಡಿಕೊಳ್ಳುತ್ತಿದ್ದು, ಈ ವಿಡಿಯೋದಲ್ಲಿ ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Kalesh b/w Tourists with each other at Sahastradhara in Dehradun. pic.twitter.com/NTw9dd1tD2
— Ghar Ke Kalesh (@gharkekalesh) April 15, 2025
ಈ ವಿಡಿಯೋ ಈಗಾಗಲೇ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ಪ್ರವಾಸನ್ನು ಎಂಜಾಯ್ ಮಾಡಿ, ಈ ರೀತಿ ಜಗಳ ಯಾಕೆ ಆಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ, ಇದು ರಜೆಯ ಸಮಯ, ಟ್ರಿಪ್ ಎಂಜಾಯ್ ಮಾಡಿ ನೀವೇ ಬಾಸ್ ಆಗಿ ಎಂದಿದ್ದಾರೆ. ಮತ್ತೊಬ್ಬರು, ‘ಇದನ್ನು ನೋಡಲು ತುಂಬಾ ಅಸಹ್ಯ ಎನಿಸುತ್ತದೆ. ಇಬ್ಬರೂ ಯುವತಿಯರು ಯುವಕನನ್ನು ಹೊಡೆಯುತ್ತಿದ್ದಾರೆ. ಇದಕ್ಕೆ ಅಲ್ಲೇ ಇರುವ ಯುವಕರ ಸಂಪೂರ್ಣ ಬೆಂಬಲಯಿದೆ’ ಎಂದಿದ್ದಾರೆ.
ಇದನ್ನೂ ಓದಿ : ನಡುರಸ್ತೆಯಲ್ಲೇ ಪತಿಯ ಎದೆ ಮೇಲೆ ಕುಳಿತು ಹಿಗ್ಗಾಮುಗ್ಗ ಥಳಿಸಿದ ಪತ್ನಿ, ವಿಡಿಯೋ ವೈರಲ್
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೈಕ್ ಸಂಖ್ಯೆಗಳನ್ನು ಆಧರಿಸಿ ಈ ಘಟನೆಯಲ್ಲಿ ಭಾಗಿಯಾದ ರಾಜ್ ಪ್ರದೇಶದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಅದಲ್ಲದೇ, ಈ ಮೂವರು ಯುವಕರು ಪೌರಿ ಗರ್ವಾಲ್ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಬಂಧಿತರನ್ನು ಪ್ರಮೋದ್ ಸಿಂಗ್, ಆಕಾಶ್ ಸಿಂಗ್ ಹಾಗೂ ಗೌರವ್ ರಾವತ್ ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ