ಅಬ್ಬಬ್ಬಾ ಸೈಬರ್ ವಂಚಕನನ್ನೇ ಯಾಮಾರಿಸಿಯೇ ಬಿಟ್ಲು ಈ ಯುವತಿ, ವಿಡಿಯೋ ವೈರಲ್
ಇತ್ತೀಚೆಗಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಏನಾದರೂ ಹೇಳಿದರೆ ಸಾಕು ಅದನ್ನು ಕಣ್ಣು ಮುಚ್ಚಿ ನಂಬುವ ಅದೆಷ್ಟೋ ಜನರಿದ್ದಾರೆ. ಈ ಸೈಬರ್ ವಂಚಕರು ಸುಳ್ಳು ಹೇಳಿ ಹಣ ಪಡೆಯುವ ಮೂಲಕ ಈಗಾಗಲೇ ಜನರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದ್ದಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಸೈಬರ್ ವಂಚಕರನ್ನೇ ಯಾಮಾರಿಸಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈಕೆಯ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾವಿಂದು ತಂತ್ರಜ್ಞಾನ (technology) ದ ಯುಗದಲ್ಲಿದ್ದು, ಆದರೆ ಈ ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದಂತೆ ಮೋಸ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರಲ್ಲಿ ಸೈಬರ್ ವಂಚನೆ (cyber fraud) ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೌದು, ಕೆಲಸ ಕೊಡಿಸುವುದಾಗಿ, ಆಧಾರ್ ಕಾರ್ಡ್ (aadhar card) ಅಪ್‌ಡೇಟ್ ಮಾಡಿಕೊಡುವುದಾಗಿ ಹಾಗೂ ಬ್ಯಾಂಕ್ (bank) ನಿಂದ ಕರೆ ಮಾಡಿರುವುದಾಗಿ ಹೀಗೆ ನಾನಾ ರೀತಿಯ ನೆಪ ಹೇಳಿಕೊಂಡು ಕರೆ ಮಾಡುವ ಸೈಬರ್ ವಂಚಕರ ಜಾಲಕ್ಕೆ ಕೆಲವರು ಅರಿವಿಲ್ಲದೇನೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ವೈರಲ್ (viral ) ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳಿಗೆ ತಂದೆಯ ಸ್ನೇಹಿತ ಎಂದು ಹೇಳಿಕೊಂಡು ಬಂದ ಸೈಬರ್ ವಂಚಕನನ್ನು ಹೇಗೆ ಯಾಮಾರಿಸಿದ್ದಾಳೆ ಎಂದು ನೋಡಬಹುದು.
ಈ ವಿಡಿಯೋವನ್ನು Ghar Ke Kalesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಯುವತಿಗೆ ಕರೆಯೊಂದು ಬಂದಿದೆ. ಹೌದು, ಸೈಬರ್ ವಂಚಕನು ಯುವತಿಗೆ, ನಾನು ನಿನ್ನ ತಂದೆಯ ಸ್ನೇಹಿತ, ನಿನ್ನ ತಂದೆ ನನಗೆ ಹಣ ಬೇಕೆಂದು ಕೇಳಿದ್ದರು, ನಿನ್ನ ಮೊಬೈಲ್ ಗೆ ಹಣ ಹಾಕುತ್ತೇನೆ ಎಂದು ಹೇಳುವುದನ್ನು ನೋಡಬಹುದು. ಆ ವೇಳೆಯಲ್ಲಿ ಈತನು ಸೈಬರ್ ವಂಚಕ ಎಂದು ಅರಿವಿಗೆ ಬರುತ್ತಿದ್ದಂತೆ ಯುವತಿ ಕೂಡ ತನ್ನ ತಲೆ ಉಪಯೋಗಿಸಿದ್ದಾಳೆ. ಹೌದು, ಈ ಯುವತಿಯೂ ಆತನಿಗೆ ಹಣ ಹಾಕಿ ಎಂದು ಹೇಳಿದ್ದಾಳೆ. ಆ ವ್ಯಕ್ತಿಯೂ ಯುವತಿ ಖಾತೆಗೆ ಹತ್ತು ರೂಪಾಯಿ ಹಾಕಿದ್ದು,ಹಣ ಬಂದಿದೆಯೇ ಎಂದು ನೋಡಲು ಹೇಳಿದ್ದಾನೆ. ಯುವತಿ ಕೂಡ ಈ ಸ್ಕ್ಯಾಮರ್ ಹೇಳಿದ್ದಂತೆ ಹಣ ಬಂದಿದೆ ಎಂದು ಹೇಳುತ್ತಿದ್ದಂತೆ ಆಕೆಯ ಖಾತೆಗೆ ಹತ್ತು ಸಾವಿರ ರೂಪಾಯಿ ಹಣವನ್ನು ವರ್ಗಾಯಿಸಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Kalesh prevented by girl while talking to Scammer pic.twitter.com/d8sNRwjASy
— Ghar Ke Kalesh (@gharkekalesh) April 13, 2025
ಹಣ ಬಂದಿದ್ಯಾ ಎಂದು ಕೇಳಿದ್ದು ಯುವತಿಯೂ ಕೂಡ ಹೌದು ಎಂದಿದ್ದಾಳೆ. ಆ ಬಳಿಕ ಪುನಃ 2 ಸಾವಿರ ಹಾಕುವುದಾಗಿ ಸೈಬರ್ ವಂಚಕ ಹೇಳುವುದನ್ನು ನೋಡಬಹುದು. ಯುವತಿಯೂ ಓಕೆ ಎನ್ನುತ್ತಿದ್ದಂತೆ ಎರಡು ರೂಪಾಯಿ ಬದಲು ಇಪ್ಪತ್ತು ಸಾವಿರ ರೂಪಾಯಿ ಖಾತೆಗೆ ವರ್ಗಾಯಿಸಿದ್ದಾನೆ. ಈ ವಂಚಕನು ಪ್ಲ್ಯಾನ್ ಮಾಡಿ, ತಾನು ಮಿಸ್ ಆಗಿ ಇಪ್ಪತ್ತು ಸಾವಿರ ಹಣ ಹಾಕುವುದಾಗಿ ಹೇಳಿದ್ದಾನೆ. ಹೆಚ್ಚುವರಿ ಹಣವನ್ನು ಫೋನ್ ಪೇ ಮೂಲಕ ವಾಪಾಸ್ ಹಾಕುವುದಾಗಿ ಈ ವಂಚಕನು ಯುವತಿಗೆ ಹೇಳಿದ್ದಾನೆ. ಈ ವೇಳೆ ಚಾಲಾಕಿ ಯುವತಿಯೂ ತಾನು ಫೋನ್ ಪೇ ಓಪನ್ ಮಾಡಿರುವಂತೆ ನಾಟಕ ಮಾಡಿದ್ದು, ಕೊನೆಗೆ ಆತ ಈ ಹಿಂದೆ ಕಳುಹಿಸಿದ್ದ ನಕಲಿ ಸಂದೇಶವನ್ನೇ ಆಕೆಗೆ ಕಳುಹಿಸಿದ್ದಾಳೆ. ಆತನು ಹಣ ಬಂದಿಲ್ಲ ಎನ್ನುತ್ತಿದ್ದಂತೆ ಯುವತಿ ಕ್ಲಾಸ್ ತೆಗೆದುಕೊಂಡಿದ್ದಾಳೆ. ಕೊನೆಗೆ ತಾನು ಸೈಬರ್ ವಂಚಕನು ಎಂದು ಹೇಳಿ ಕೊನೆಗೆ ಕರೆ ಕಟ್ ಮಾಡಿದ್ದಾನೆ.
ಇದನ್ನೂ ಓದಿ : ತಂದೆಯ ಹಳೆಯ ಪಾಸ್ ಬುಕ್ನಿಂದಲೇ ಖುಲಾಯಿಸಿತು ಮಗನ ಅದೃಷ್ಟ, ಕೋಟಿಗಟ್ಟಲೇ ಹಣವು ಕೈ ಸೇರಿದ್ದು ಹೇಗೆ? ಇಲ್ಲಿದೆ ಮಾಹಿತಿ
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈಗಾಗಲೇ ಮೂವತ್ತು ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಕೊಂಡಿದ್ದು, ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಸೈಬರ್ ವಂಚಕರ ಜಾಲಗಳು ಹೆಚ್ಚಾಗುತ್ತಿದೆ. ಈಗಾಗಲೇ ಅದೆಷ್ಟೋ ಜನರು ಲಕ್ಷಾನುಗಟ್ಟಲೆ ವಂಚನೆ ಮಾಡುತ್ತಿದ್ದಾರೆ’ ಎಂದಿದ್ದಾರೆ. ಇನ್ನೊಬ್ಬರು, ‘ನಿಮ್ಮ ತಂದೆ 25000 ರೂಪಾಯಿ ಹಣ ಕೇಳಿದ್ದಾರೆ ಎಂದು ಹೇಳಿ ಕಳೆದ ವರ್ಷ ನನಗೆ ಕೂಡ ಕರೆ ಬಂದಿತ್ತು’ ಎಂದಿದ್ದಾರೆ. ಮತ್ತೊರ್ವ ಬಳಕೆದಾರರು, ‘ಈ ಯುವತಿ ಬಳಸಿದ ಟ್ರಿಕ್ಸ್ ನೋಡಿ ನಿಜಕ್ಕೂ ಖುಷಿಯಾಯಿತು’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ