AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆಯ ಹಳೆಯ ಪಾಸ್ ಬುಕ್​​​ನಿಂದಲೇ ಖುಲಾಯಿಸಿತು ಮಗನ ಅದೃಷ್ಟ, ಕೋಟಿಗಟ್ಟಲೇ ಹಣವು ಕೈ ಸೇರಿದ್ದು ಹೇಗೆ? ಇಲ್ಲಿದೆ ಮಾಹಿತಿ

ಅದೃಷ್ಟ ಯಾವಾಗ ಹೇಗೆ ಬದಲಾಗುತ್ತದೆ ಎಂದು ಹೇಳಲು ಅಸಾಧ್ಯ. ಕೆಲವರು ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧಿಪತಿಗಳಾಗಿರುವ ಘಟನೆಗಳನ್ನು ಕೇಳಿರಬಹುದು. ಆದರೆ, ವ್ಯಕ್ತಿಯೊಬ್ಬನಿಗೆ ಕಸದ ತೊಟ್ಟಿಯಲ್ಲಿ ತನ್ನ ತಂದೆಯ 62 ವರ್ಷದ ಹಳೆಯ ಪಾಸ್‌ಬುಕ್ ಸಿಕ್ಕಿದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ತಂದೆ ಮರಣ ಹೊಂದಿದ ಹತ್ತು ವರ್ಷಗಳ ಬಳಿಕ ಆತನ ಅದೃಷ್ಟವೇ ಬದಲಾಗಿದೆ. ಅದೇಗೆ ಅಂತೀರಾ ಈ ಕುರಿತಾದ ಕುತೂಹಕಾರಿಯಾದ ಮಾಹಿತಿ ಇಲ್ಲಿದೆ.

ತಂದೆಯ ಹಳೆಯ ಪಾಸ್ ಬುಕ್​​​ನಿಂದಲೇ ಖುಲಾಯಿಸಿತು ಮಗನ ಅದೃಷ್ಟ, ಕೋಟಿಗಟ್ಟಲೇ ಹಣವು ಕೈ ಸೇರಿದ್ದು ಹೇಗೆ? ಇಲ್ಲಿದೆ ಮಾಹಿತಿ
ವೈರಲ್​​ ಫೋಟೋ
ಸಾಯಿನಂದಾ
| Edited By: |

Updated on: Apr 15, 2025 | 6:15 PM

Share

ಪ್ರತಿಯೊಬ್ಬರ ಬಳಿ ಬ್ಯಾಂಕ್ ಪಾಸ್ ಬುಕ್ (bank pass book) ಇದ್ದೆ ಇರುತ್ತದೆ. ಕೆಲವರ ಪಾಸ್ ಬುಕ್ ನಲ್ಲಿ ಒಂದೇ ಒಂದು ರೂಪಾಯಿ ಹಣವು ಇರುವುದಿಲ್ಲ, ಇನ್ನು ಕೆಲವರು ತಮ್ಮ ದುಡಿಮೆಯ ಹಣವನ್ನು ಮಕ್ಕಳ ಭವಿಷ್ಯ (future) ಕ್ಕಾಗಿ ಉಳಿಸುತ್ತಾರೆ. ಮಕ್ಕಳ ಹೆಸರಿನಲ್ಲಿ ಠೇವಣಿ (deposit) ಇಟ್ಟಿರುತ್ತಾರೆ. ಪೋಷಕರ ಮರಣದ ನಂತರ ಆ ಹಣವು ಮಕ್ಕಳಿಗೆ ಸೇರುತ್ತಾರೆ. ಅದಲ್ಲದೇ ಪೋಷಕರು ಕೂಡಿಟ್ಟ ಹಣದಲ್ಲಿ ಐಷಾರಾಮಿ ಜೀವನ ನಡೆಯುತ್ತಿರುವವರು ಅದೆಷ್ಟೋ ಜನರಿದ್ದಾರೆ. ಆದರೆ ಇಲ್ಲೊಬ್ಬನಿಗೆ ತನ್ನ ತಂದೆಯ ಹಳೆಯ ಪಾಸ್ ಬುಕ್ (old passbook) ನಿಂದಲೇ ಅದೃಷ್ಟ ಖುಲಾಯಿಸಿದೆ. ಚಿಲಿ (chile) ಯ ಎಕ್ಸೆಕ್ವಿಯಲ್ ಹಿನೊಜೋಸಾ (exequiel hinojosa) ತನ್ನ ತಂದೆಯ ಹಳೆಯ ಪಾಸ್ ಬುಕ್ ನಿಂದಲೇ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.

ತಂದೆ ಮರಣ ಹೊಂದಿದ ಹತ್ತು ವರ್ಷದ ಬಳಿಕ ಹಿನೊಜೋಸಾ ನಿಗೆ ತನ್ನ ತಂದೆಯ ಪಾಸ್ ಬುಕ್ ವೊಂದು ಸಿಕ್ಕಿದೆ. ಈ ಪಾಸ್‌ಬುಕ್ ಅನ್ನು 1960-70ರ ದಶಕದ್ದಾಗಿತ್ತು. ಹೌದು, ಮನೆ ಸ್ವಚ್ಛಗೊಳಿಸುತ್ತಿದ್ದಾಗ ಈ ಪಾಸ್ ಬುಕ್ ಸಿಕ್ಕಿದ್ದು, ವೇಸ್ಟ್ ಕಾಗದ ಎಂದುಕೊಂಡು ಅದರ ಬಗ್ಗೆ ಅಷ್ಟೇನು ತಲೆ ಕೆಡಿಸಿಕೊಳ್ಳಲಿಲ್ಲ. ಆಮೇಲೆ ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಂದೆಯ ಪಾಸ್ ಬುಕ್ ಎಂದು ತಿಳಿಯಿತು. ಮಗನಿಗೆ ಗೊತ್ತಿಲ್ಲದ್ದಂತೆ ಆತನ ಹೆಸರಿನಲ್ಲಿ 1.40 ಲಕ್ಷ (ಚಿಲಿಯ ಪೈಸೆಗಳಲ್ಲಿ) ಠೇವಣಿ ಇಟ್ಟಿದ್ದರು ಎನ್ನುವುದು ತಿಳಿಯಿತು.

ಇದನ್ನೂ ಓದಿ : ಬಡಗುತಿಟ್ಟು ಯಕ್ಷರಂಗದ ಮದ್ದಳೆಯಲ್ಲಿ ಹೊಸ ಪ್ರಯೋಗ, ಅದುವೇ ಈ ಸಿಂಥೆಟಿಕ್ ಮದ್ದಳೆ, ವಿಡಿಯೋ ವೈರಲ್

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಹೀಗಾಗಿ ಈ ಬಗ್ಗೆ ಬ್ಯಾಂಕ್ ಗೆ ತೆರಳಿ ಈ ಬಗ್ಗೆ ವಿಚಾರಿಸಿದ ಮೇಲೆ ತಂದೆ ಮರಣ ಹೊಂದಿ ಹತ್ತು ವರ್ಷವಾಗಿದ್ದ ಕಾರಣ ಅವರ ಬ್ಯಾಂಕ್ ಖಾತೆಯೂ ಕ್ಲೋಸ್ ಆಗಿದೆ ಎನ್ನುವುದು ತಿಳಿಯಿತು. ಕೊನೆಗೆ ತನ್ನ ಹೆಸರಿನಲ್ಲಿ ಇಟ್ಟಿದ್ದ ಹಣವು ತನ್ನ ಕೈ ಸೇರುವುದು ಕನಸು ಎಂದುಕೊಂಡೆ ಸುಮ್ಮನೆಯಾದರು. ಆದರೆ ಈ ಹಳೆಯ ಪಾಸ್ ಬುಕ್ ನಲ್ಲಿ ಸ್ಟೇಟ್ ಗ್ಯಾರಂಟಿಡ್ ಎಂದು ಬರೆದಿತ್ತು. ಈ ಹೇಳಿಕೆಯಂತೆ ಬ್ಯಾಂಕ್ ಹಣವನ್ನು ನೀಡದಿದ್ದರೆ, ಸರ್ಕಾರವು ಆ ಹಣವನ್ನು ನಿಡುತ್ತದೆ ಎನ್ನುವುದಗಿತ್ತು. ಹೀಗಾಗಿ ಎಕ್ಸೆಕ್ವಿಯಲ್ ಹಿನೊಜೋಸಾ ಹಣವನ್ನು ಮರಳಿ ಪಡೆಯಲು ಸಾಕಷ್ಟು ಪ್ರಯತ್ನ ಪಟ್ಟರೂ ಸರ್ಕಾರವು ತಂದೆಯು ತನ್ನ ಹೆಸರಿನಲ್ಲಿಟ್ಟ ಠೇವಣಿ ಹಣವನ್ನು ನೀಡಲು ಮುಂದಾಗಿರಲಿಲ್ಲ. ಕೊನೆಗೆ ತನ್ನ ತಂದೆ ಠೇವಣಿ ಇಟ್ಟಿದ್ದ ಹಣವನ್ನು ಮರಳಿ ಪಡೆಯುವ ಸಲುವಾಗಿ ಕಾನೂನಿನ ಮೊರೆ ಹೋಗಿದ್ದು ಆತನ ಅದೃಷ್ಟವೇ ಬದಲಾಗಿದೆ.

ನ್ಯಾಯಾಲಯದ ಮೊರೆ ಹೋದ ಎಕ್ಸೆಕ್ವಿಯಲ್ ಹಿನೊಜೋಸಾ ಪರವಾಗಿಯೇ ನ್ಯಾಯಾಲಯವು ತೀರ್ಪು ನೀಡಿದೆ. ತಂದೆ ಇಟ್ಟಿದ್ದ ಠೇವಣಿಯ ಹಣವು 1.40 ಲಕ್ಷ ಚಿಲಿಯ ಪೈಸೆಗಳಾಗಿದ್ದರೂ ಕೂಡ ಮಗನ ಕೈಗೆ ಬರೋಬ್ಬರಿ 1.2 ಮಿಲಿಯನ್ ಡಾಲರ್‌ (ಭಾರತೀಯ ಕರೆನ್ಸಿಯಲ್ಲಿ 10 ಕೋಟಿ ರೂ.) ಕೈ ಸೇರಿತು. ಹೌದು, ನ್ಯಾಯಾಲಯವು ಹಿನೊಜೋಸಾಗೆ ಬಡ್ಡಿ ಸಮೇತವಾಗಿ ಒಂದು ಬಿಲಿಯನ್ ಚಿಲಿಯ ಪೈಸೆಗಳನ್ನು ಪಾವತಿಸಬೇಕೆಂದು ಸರ್ಕಾರಕ್ಕೆ ಆದೇಶಿಸಿತು. ತಂದೆ ಮರಣ ಹೊಂದಿ ಹತ್ತು ವರ್ಷ ಕಳೆದ ಬಳಿಕ ಹಳೆಯ ಪಾಸ್ ಬುಕ್ ಮಗನ ಅದೃಷ್ಟವನ್ನೇ ಬದಲಾಯಿಸಿತು ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

ವೈರಲ್ ಸುದ್ದಿ ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ