ಅಣ್ಣನ ಫಸ್ಟ್ನೈಟ್ ನೋಡಲು ರೂಮಿನಲ್ಲೇ ಅಡಗಿ ಕುಳಿತ ತಮ್ಮ
ಅಣ್ಣನ ಫಸ್ಟ್ ನೈಟ್ ವೀಕ್ಷಿಸಲು ರೂಮಿನಲ್ಲಿ ಕ್ಯಾಮರಾ ಹಿಡಿದು ಕುಳಿತಿದ್ದ ತಮ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲೇ ಕ್ಯಾಮರಾಗಳನ್ನು ಇಟ್ಟು, ಕೋಣೆಯ ಅಟ್ಟದಲ್ಲಿ ಅಡಗಿ ಕುಳಿತು ಎಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳಲು ಬಯಸಿದ್ದ. ಆದರೆ ದಂಪತಿ ರೂಮಿಗೆ ಬಂದಾಗಲೇ ತಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎಂದು ಇಬ್ಬರಿಗೂ ಭಾಸವಾಗಿತ್ತು. ಅಲ್ಲೇ ಅಟ್ಟದಲ್ಲಿ ತಮ್ಮ ಕುಳಿತಿರುವುದನ್ನು ಗಮನಿಸಿದರು. ತಕ್ಷಣ ಹೊರಗೆ ಬರುವಂತೆ ಎಚ್ಚರಿಸಿದರು. ಅವುಗಳನ್ನು ರೆಕಾರ್ಡ್ ಮಾಡುವ ಮೊದಲೇ ಪತ್ತೆ ಮಾಡಲಾಯಿತು, ಇಬ್ಬರ ಮಾನವೂ ಉಳಿಯಿತು.

ಅಂದೇ ಇಬ್ಬರ ವಿವಾಹ(Marriage) ಸಂಪನ್ನಗೊಂಡಿತ್ತು, ನೂರಾರು ಕನಸುಗಳನ್ನು ಹೊತ್ತು ಒಟ್ಟಾಗಿ ಜೀವನದಲ್ಲಿ ಹೆಜ್ಜೆ ಇಡಲು ಮುಂದಾಗಿದ್ದರು. ಸಾಮಾನ್ಯವಾಗಿ ಮದುವೆಯ ದಿನ ಸಂಬಂಧಿಕರು, ಸಣ್ಣ ತಮ್ಮಂದಿರು, ಅಕ್ಕ ತಂಗಿಯಂದಿರು ನವ ದಂಪತಿಯನ್ನು ಕೋಣೆಗೆ ಕಳುಹಿಸುವಾಗ ತಮಾಷೆ ಮಾಡುವುದು, ಹಣ ಕೇಳುವುದು ಸಾಮಾನ್ಯ. ಇನ್ನೂ ಕೆಲವರು ರೂಮಿನಲ್ಲಿ ಅವರಿಗೆ ತೊಂದರೆಯಾಗುವಂತೆ ಅಲಾರಂ ಇಡುವುದು, ಮಂಚ ಮುರಿಯುವಂತೆ ಮಾಡುವುದು ಹೀಗೆ ನಾನಾ ತೊಂದರೆಗಳನ್ನು ಕೊಡುತ್ತಾರೆ ಆದರೆ ಅದೊಂದು ದಿನ ದಂಪತಿ ಕೋಪ ಮಾಡಿಕೊಳ್ಳದೆ ಇವೆಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ.
ಆದರೆ ಇಲ್ಲೊಬ್ಬ ವ್ಯಕ್ತಿ ವರನ ತಮ್ಮನಾಗಿದ್ದು, ಅಣ್ಣನ ಫಸ್ಟ್ ನೈಟ್ ಲೈವ್ ಆಗಿ ನೋಡಲು ರೂಮಿನಲ್ಲೇ ಬಂದು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲೇ ಕ್ಯಾಮರಾಗಳನ್ನು ಇಟ್ಟು, ಕೋಣೆಯ ಅಟ್ಟದಲ್ಲಿ ಅಡಗಿ ಕುಳಿತು ಎಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳಲು ಬಯಸಿದ್ದ. ಆದರೆ ದಂಪತಿ ರೂಮಿಗೆ ಬಂದಾಗಲೇ ತಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎಂದು ಇಬ್ಬರಿಗೂ ಭಾಸವಾಗಿತ್ತು. ಅಲ್ಲೇ ಅಟ್ಟದಲ್ಲಿ ತಮ್ಮ ಕುಳಿತಿರುವುದನ್ನು ಗಮನಿಸಿದರು.
ತಕ್ಷಣ ಹೊರಗೆ ಬರುವಂತೆ ಎಚ್ಚರಿಸಿದರು. ರೆಕಾರ್ಡ್ ಮಾಡುವ ಮೊದಲೇ ಕ್ಯಾಮರಾ ಪತ್ತೆ ಮಾಡಲಾಯಿತು, ಇಬ್ಬರ ಮಾನವೂ ಉಳಿಯಿತು. ವರನ ತಮ್ಮ ಕ್ಯಾಮರಾ ಹಿಡಿದು ಅಟ್ಟದ ಮೇಲೆ ಕುಳಿತಿರುವುದನ್ನು ಕಂಡು ಸಂಬಂಧಿಕರೆಲ್ಲರೂ ಕೋಪಗೊಂಡರು. ಆತನನ್ನು ತೀವ್ರವಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಲಾಯಿತು.
ಮತ್ತಷ್ಟು ಓದಿ: ಮಗಳನ್ನೇ ದೇವದಾಸಿ ಮಾಡಲು ಹೋದ ತಾಯಿ: ರಕ್ಷಿಸಿ ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿದ ಪೊಲೀಸ್
ಮಹಿಳೆಯ ಚಿತ್ರಗಳನ್ನು ಒಪ್ಪಿಗೆಯಿಲ್ಲದೆ ವೀಕ್ಷಿಸುವುದು ಅಥವಾ ಸೆರೆಹಿಡಿಯುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354C ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಮೊದಲ ಬಾರಿಗೆ ಅಪರಾಧಿಗಳಿಗೆ 1 ರಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
तीसरी आँख …🫣😝😜😅
हे पार्थ कब प्रोग्राम चालू होगा?..😃🤣 pic.twitter.com/luOcVV4zvJ
— हँसते रहो 🥰 (@Haste__Raho) April 12, 2025
ಅಲ್ಲದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಅಡಿಯಲ್ಲಿ, ಡಿಜಿಟಲ್ ವಿಧಾನಗಳ ಮೂಲಕ ಗೌಪ್ಯತೆಯ ಉಲ್ಲಂಘನೆಯ ಪ್ರಕರಣವನ್ನು ಸಹ ದಾಖಲಿಸಬಹುದು. ಕಾಯಿದೆಯ ಸೆಕ್ಷನ್ 66E ಪ್ರಕಾರ, ಒಪ್ಪಿಗೆಯಿಲ್ಲದೆ ವ್ಯಕ್ತಿಯ ಖಾಸಗಿ ಚಿತ್ರಗಳನ್ನು ತೆಗೆದುಕೊಂಡು ವಿತರಿಸುವುದು ಅಪರಾಧ.
ಎಲ್ಲರಿಗೂ ರೀಲ್ ಮಾಡುವ ಹುಚ್ಚು ಹೆಚ್ಚಿದೆ, ಕೆಲವರು ಮೊದಲ ರಾತ್ರಿಯ ಕೋಣೆ, ಬೆಡ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇಂತಹ ಹುಚ್ಚುತನವು ಈಗ ಕೆಲವು ಜನರನ್ನು ಕುಟುಂಬ ಸದಸ್ಯರ ವೀಡಿಯೊಗಳನ್ನು ವೈರಲ್ ಮಾಡುವ ಮಟ್ಟಕ್ಕೂ ಹೋಗುವಂತೆ ಮಾಡುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:35 am, Wed, 16 April 25