AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಕೆ ಸೊಳ್ಳೆ ಕಂಡ್ರೆ ಬಿಡೋದೇ ಇಲ್ಲ, ಕೊಂದು ಏನ್ ಮಾಡ್ತಾಳೆ ನೋಡಿ

ಕೆಲವರು ವಿಚಿತ್ರವಾದ ಹವ್ಯಾಸವನ್ನು ಹೊಂದಿರುತ್ತಾರೆ. ಈ ರೀತಿಯ ಜನರು ಕಂಡಾಗ ಅಚ್ಚರಿಯಾಗೋದು ಸಹಜ. ಸಾಮಾನ್ಯವಾಗಿ ನಾವೆಲ್ಲರೂ ಸೊಳ್ಳೆಗಳು ಕಚ್ಚಿದರೆ ಅದನ್ನು ಸಾಯಿಸಿ ಬಿಸಾಡುತ್ತೇವೆ. ಆದರೆ ಈ ಯುವತಿ ಮಾತ್ರ ಸೊಳ್ಳೆ ಯನ್ನು ಸಾಯಿಸಿ, ಅದರ ಹೆಸರು, ಸತ್ತ ಸಮಯ ಹಾಗೂ ಸಮಯವನ್ನು ಬರೆದು ಸಂಗ್ರಹಿಸಿಡುತ್ತಾಳೆ. ಈ ಯುವತಿಯ ವಿಚಿತ್ರ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಶಾಕ್ ಆಗಿದ್ದಾರೆ.

ಈಕೆ ಸೊಳ್ಳೆ ಕಂಡ್ರೆ ಬಿಡೋದೇ ಇಲ್ಲ, ಕೊಂದು ಏನ್ ಮಾಡ್ತಾಳೆ ನೋಡಿ
ವೈರಲ್​​ ವಿಡಿಯೋ
ಸಾಯಿನಂದಾ
| Edited By: |

Updated on: Apr 15, 2025 | 2:07 PM

Share

ಈ ಜಗತ್ತಿನಲ್ಲಿ ಎಂತೆಂಹ ಜನರು ಇರ್ತಾರೆ. ಪ್ರತಿಯೊಬ್ಬರ ಅಭಿರುಚಿ ಹಾಗೂ ಹವ್ಯಾಸ (hobby) ಗಳು ಭಿನ್ನವಾಗಿರುತ್ತದೆ. ಕೆಲವರು ತಮ್ಮ ಬಿಡುವಿನ ಸಮಯ (free time) ದಲ್ಲಿ ಪುಸ್ತಕ (books) ಓದುವುದು, ರೀಲ್ಸ್ (reels) ಮಾಡುವುದು, ಸಿನಿಮಾ (cinima) ನೋಡುವುದು ಹೀಗೆ ಒಂದಲ್ಲ ಒಂದು ಹವ್ಯಾಸವನ್ನು ಮೈಗೂಡಿಸಿಕೊಂಡಿರುತ್ತಾರೆ. ಇನ್ನು ಕೆಲವರಿಗೆ ಹಳೆಯ ನಾಣ್ಯ (coins) ಗಳನ್ನು ಸಂಗ್ರಹಿಸಿಡುವ ಹವ್ಯಾಸವಿರುತ್ತದೆ. ಆದರೆ ಈ ಯುವತಿಯ ಹವ್ಯಾಸ ಕಂಡರೆ ಒಂದು ಕ್ಷಣ ಬಾಯಿಯ ಮೇಲೆ ಬೆರಳು ಇಡುವುದು ಪಕ್ಕಾ. ಈ ಯುವತಿಯೂ ಸೊಳ್ಳೆ (mosquitoes) ಗಳನ್ನು ಅದನ್ನು ಸಂಗ್ರಹಿಸಿಡುವ ವಿಚಿತ್ರವಾದ ಹವ್ಯಾಸವನ್ನು ಹೊಂದಿದ್ದಾಳೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರ ಗಮನ ಸೆಳೆದಿದೆ.

ಈ ವಿಡಿಯೋವನ್ನು akansha rawat ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಯುವತಿಯೂ ಸೊಳ್ಳೆಯನ್ನು ಕೊಂದು ಅದನ್ನು ಬಿಳಿ ಹಾಳೆಯ ಮೇಲೆ ಅಂಟಿಸಿ ಅದರ ಹೆಸರು, ಸಮಯ ಮತ್ತು ಸಾವಿನ ಸ್ಥಳವನ್ನು ನಮೂದಿಸುತ್ತಾಳಂತೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು, ಜನರಿಗೆ ವಿಚಿತ್ರವಾದ ಹವ್ಯಾಸಗಳಿರುವುದನ್ನು ನೀವು ನೋಡಿರಬಹುದು. ಆದರೆ, ಈ ಯುವತಿಯೂ ವಿಚಿತ್ರವಾದದ್ದನ್ನು ಮಾಡಿದ್ದು, ಇದನ್ನು ನಾನು ನಿಮಗೆ ತೋರಿಸುತ್ತೇನೆ ಎನ್ನುವುದರೊಂದಿಗೆ ವಿಡಿಯೋ ಆರಂಭವಾಗಿದೆ.

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಆ ಬಳಿಕ ಈ ವಿಡಿಯೋದಲ್ಲಿ ಯುವತಿಯೂ ಸತ್ತ ಸೊಳ್ಳೆಗಳು ಇದ್ದ ಕಾಗದದ ಹಾಳೆಯನ್ನು ತೋರಿಸಿದ್ದಾಳೆ. ಈ ಹಾಳೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸತ್ತ ಸೊಳ್ಳೆಯನ್ನು ಅಂಟಿಸಿರುವುದನ್ನು ಕಾಣಬಹುದು. ಅದಲ್ಲದೇ ಈ ಸೊಳ್ಳೆಗಳಿಗೆ ಸಿಗ್ಮಾ ಬೋಯಿ, ರಮೇಶ್, ಬಿಟ್ಟು, ಚೋಟು, ಸುರೇಶ್‌, ಟಿಂಕು ಹೀಗೆ ನಾನಾ ಹೆಸರನ್ನು ಬರೆದಿದ್ದಾಳೆ. ಅಷ್ಟೇ ಅಲ್ಲದೇ ಸೊಳ್ಳೆ ಸತ್ತ ಸಮಯ ಹಾಗೂ ಸ್ಥಳವನ್ನು ಉಲ್ಲೇಖಿಸಿರುವುದನ್ನು ನೋಡಬಹುದು.

ಇದನ್ನೂ ಓದಿ : ಲಿವ್​-ಇನ್ ಸಂಗಾತಿಗಳಿರುವ ಬೆಡ್​ರೂಮಿನ ಕಿಟಕಿಯಲ್ಲಿ ಇಣುಕಿ ನೋಡಿ, ಪತ್ರವಿಟ್ಟು ಹೋದ ಅಪರಿಚಿತ

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬರು, ‘ಈಕೆಗೇನು ಹುಚ್ಚಾ’ ಎಂದು ಕೇಳಿದ್ದಾರೆ. ಮತ್ತೊಬ್ಬರು, ‘ಇದು ನಿಜಕ್ಕೂ ವಿಚಿತ್ರವಾದ ಹವ್ಯಾಸ’ ಎಂದಿದ್ದಾರೆ. ಇನ್ನೊಬ್ಬರು, ‘ನನ್ನ ಪ್ರಕಾರ ಈಕೆ ಈ ಸೊಳ್ಳೆಗಳಿಗೆ ತನ್ನ ಮಾಜಿ ಪ್ರಿಯಕರರ ಹೆಸರನ್ನು ಇಟ್ಟಿರಬೇಕು’ ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್ನೊರ್ವ ಬಳಕೆದಾರ, ನಾವು ಕೂಡ ನಮ್ಮ ನೋಟ್ ಬುಕ್ಕಿನ ಹಿಂಭಾಗದಲ್ಲಿ ಈ ರೀತಿ ಮಾಡುತ್ತಿದ್ದೆವು ಎಂದು ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿಕೊಂಡಿದ್ದಾರೆ.

ವೈರಲ್ ಸುದ್ದಿ ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ