RCB ಪರ ಮೋದಿ, CSK ಪರ ಅಮಿತ್ ಶಾ, ರಾಹುಲ್ ಗಾಂಧಿ ಯಾರ ಪರ? ಹೇಗಿದೆ ನೋಡಿ ರಾಜಕಾರಣಿಗಳ ಐಪಿಎಲ್ ತಂಡ
ಐಪಿಎಲ್ ಹಬ್ಬ ಆರಂಭವಾಗಿದೆ. ಎಲ್ಲ ಕಡೆ ಕ್ರಿಕೆಟ್ ಹುಚ್ಚು ಹೆಚ್ಚಿದೆ. ತಮ್ಮ ತಮ್ಮ ತಂಡಗಳ ಪರ ಗೆಲುವಿನ ಲೆಕ್ಕಚಾರ ಶುರುವಾಗಿದೆ. ಇದರ ಮಧ್ಯೆ ರಾಜಕಾರಣಿಗಳು ಒಂದು ವೇಳೆ ಐಪಿಎಲ್ಗೆ ಬಂದರೆ ಹೇಗಿರುತ್ತದೆ. ರಾಜಕೀಯ ಬಿಟ್ಟು ಯಾರು ಕ್ರಿಕೆಟ್ ಆಡಲು ಬರುತ್ತಾರೆ ಎಂಬ ಪ್ರಶ್ನೆಗಳು ಮೂಡಬಹುದು. ಆದರೆ ಎಐ ತಂತ್ರಜ್ಞಾನ ಅದನ್ನು ಮಾಡಿದೆ ನೋಡಿ. ಯಾವುದು ಅಸಾಧ್ಯವೋ ಅದನ್ನೇ ಈ ಕೃತಕ ಬುದ್ಧಿಮತ್ತೆ ಮಾಡಿ ತೋರಿಸುತ್ತದೆ. ಪ್ರಧಾನಿ ಮೋದಿ, ಅಮಿತ್ ಶಾ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಇನ್ನು ಅನೇಕ ನಾಯಕರು ಐಪಿಎಲ್ನಲ್ಲಿ ಆಡಲು ಬಂದಿದ್ದಾರೆ ನೋಡಿ.

ಭಾರತದಲ್ಲಿ ಎಐ (Artificial intelligence) ಎಷ್ಟು ಮುಂದುವರಿದೆ ಎಂದರೆ, ಅದೊಂದು ಅದ್ಭುತವೇ ಸರಿ ನೋಡಿ. ಇಡೀ ಜಗತ್ತು ಎಐ ಹಿಂದೆ ಓಡುತ್ತಿದೆ. ಈಗ ಎಲ್ಲ ಕಡೆ ಎಐ, ಸೋಶಿಯಲ್ ಮೀಡಿಯಾದಲ್ಲಿ ಇದರ ಹವಾ ಇನ್ನು ಜಾಸ್ತಿಯೇ. ಭಾರತದಲ್ಲಿ ತಂತ್ರಜ್ಞಾನದ ಬದಲಾವಣೆ ಹಾಗೂ ಅದನ್ನು ಇಲ್ಲಿನ ಜನ ಉಪಯೋಗಿಸುವ ರೀತಿ ಎಲ್ಲವೂ ಬದಲಾಗಿದೆ. ದೇಶವು ಆಧುನಿಕ ತಂತ್ರಜ್ಞಾನಕ್ಕೆ ಬದಲಾಗುತ್ತಿದೆ. ಈ ಬದಲಾಗುತ್ತಿರುವ ತಂತ್ರಜ್ಞಾನದಲ್ಲಿ (Technology) ಪ್ರಸ್ತುತವಾಗಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ. ಕೃತಕ ಬುದ್ಧಿಮತ್ತೆ ಎಲ್ಲ ವೇದಿಕೆಯಲ್ಲೂ ಗಾಢವಾದ ಪರಿಣಾಮ ಬೀರುತ್ತಿದೆ. ವಾಟ್ಸಾಪ್, ಇನ್ಸ್ಟಾ, ಫೇಸ್ ಬುಕ್, ಚಾಟ್ ಬಿಟ್ ಇನ್ನು ಅನೇಕ ಸೋಶಿಯಲ್ ಮೀಡಿಯಾಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬದಲಾವಣೆಯನ್ನು ತಂದಿದೆ. ಇದರ ಜತೆಗೆ ಕೃತಕ ಬುದ್ಧಿಮತ್ತೆಯಿಂದ ಕೆಲವೊಂದು ಸಮಸ್ಯೆಗಳು ಆಗಿದೆ. ಅದರಲ್ಲೂ ನಟ ನಟಿಯರ ಫೋಟೋ ಎಡಿಟ್ ಮಾಡಿ ಅದನ್ನು ಕೆಟ್ಟಾಗಿ ಬಳಸಿಕೊಂಡಿರುವ ಘಟನೆಗಳು ಇದೆ. ಇನ್ನು ದೇಶದ ಪ್ರಧಾನಿಯನ್ನು ಕೂಡ ಈ ಎಐ ಬಿಟ್ಟಿಲ್ಲ. ಈಗ ಐಪಿಎಲ್ಗೂ ಮೋದಿಯನ್ನು ಬರುವ ರೀತಿ ಮಾಡಿದ್ದಾರೆ. ಹೌದು ಈಗ ಐಪಿಎಲ್ ನಡೆಯುತ್ತಿದೆ. ಯುವಕರಿಂದ ಹಿಡಿದು, ಮುದುಕರವರೆಗೂ ಐಪಿಎಲ್ ಹುಚ್ಚು ಇದೆ. ಒಂದು ವೇಳೆ ದೇಶದ ಪ್ರಧಾನಿ ಸೇರಿದಂತೆ ದೇಶದ ನಾಯಕರು ಐಪಿಎಲ್ ಆಡಲು ಬಂದರೆ ಹೇಗಿರಬಹುದು. ಹೀಗಿರುತ್ತದೆ ನೋಡಿ.
ಐಪಿಎಲ್‌ನ 18 ನೇ ಸೀಸನ್ ಶುರುವಾಗಿದೆ. ಐಪಿಎಲ್ ಹಬ್ಬ ಹೆಚ್ಚಾಗಿದೆ, ಎಲ್ಲ ಕಡೆ ತಮ್ಮ ತಮ್ಮ ಟೀಮ್ಗಳ ಪರ ನಿಂತು ಸೋಲು – ಗೆಲುವಿನ ಲೆಕ್ಕಚಾರ ಹಾಕುತ್ತಿದ್ದಾರೆ. ಇದರ ಮಧ್ಯೆ ಪ್ರಧಾನಿ ಮೋದಿ ಸೇರಿದಂತೆ ದೇಶದ ನಾಯಕರು ಐಪಿಎಲ್ ಆಡಲು ಬಂದರೆ ಇನ್ನು ಮಜಾ ನೀಡುತ್ತದೆ. ಕ್ರಿಕೆಟ್ ಹುಚ್ಚು ಯಾರನ್ನು ಬಿಟ್ಟಲ್ಲ, ಹಾಗೂ ರಾಜಕೀಯ ಹುಚ್ಚು ಕೂಡ ಯಾರನ್ನೂ ಬಿಡುವುದಿಲ್ಲ. ಕ್ರಿಕೆಟ್ನಲ್ಲಿ ನೆಚ್ಚಿನ ನಾಯಕರು ಹೇಗಿರುತ್ತಾರೆ. ರಾಜಕೀಯದಲ್ಲೂ ಮೆಚ್ಚಿನ ನಾಯಕರು ಇರುತ್ತದೆ. ಕ್ರಿಕೆಟ್ನಲ್ಲಿ ತಂಡ, ರಾಜಕೀಯದಲ್ಲಿ ಪಕ್ಷ ಎಲ್ಲವೂ ಒಂದೇ, ಆದರೆ ವೃತ್ತಿ ಮಾತ್ರ ಬೇರೆ ಬೇರೆ. ಇದೀಗ ಎಐ ಮೂಲಕ ದೇಶ ರಾಜಕಾರಣಿಗಳು ಐಪಿಎಲ್ ಆಡಲು ಬಂದಿದ್ದಾರೆ. ಈ ಬಗ್ಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಈಕೆ ಸೊಳ್ಳೆ ಕಂಡ್ರೆ ಬಿಡೋದೇ ಇಲ್ಲ, ಕೊಂದು ಏನ್ ಮಾಡ್ತಾಳೆ ನೋಡಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ, ಇನ್ನು ಅನೇಕರು ಐಪಿಎಲ್ಗೆ ಬಂದ್ರೆ ಹೇಗಿರುತ್ತದೆ ಎಂಬದನ್ನು ಎಐ ತೋರಿಸಿದೆ. ಪ್ರಧಾನಿ ಮೋದಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣದಲ್ಲಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ. ಸೋನಿಯಾ ಗಾಂಧಿ ಲಕ್ನೋ ಸೂಪರ್ ಜೈಂಟ್ಸ್ ಜರ್ಸಿ ಧರಿಸಿ ಎಂಟ್ರಿ ಕೊಟ್ಟಿದ್ದಾರೆ. ಅಮಿತ್ ಶಾ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಲಿದ್ದು, ಗುಜರಾತ್ ಟೈಟಾನ್ಸ್ ಪರ ರಾಜನಾಥ್ ಸಿಂಗ್ ಬಂದಿದ್ದಾರೆ. ಇನ್ನು ಹಣಕಾಸು ಸಚಿವೆ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಪರ ಜೈಶಂಕರ್ , ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮಮತಾ ಬ್ಯಾನರ್ಜಿ, ದೆಹಲಿ ಕ್ಯಾಪಿಟಲ್ಸ್ ಪರ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಹಾಗೂ ಮುಂಬೈ ಇಂಡಿಯನ್ಸ್ ಪರ ದೇವೇಂದ್ರ ಫಡ್ನವಿಸ್ ಬಂದಿದ್ದಾರೆ. ಇದೆಲ್ಲವೂ ಎಐ ಕ್ರಿಯೇಟಿವ್ ಆಗಿದ್ದು, ಜನರ ಕಲ್ಪನೆಗೂ ಈ ಮೀರಿದ ಎಐ ಎಡಿಟ್ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ವೇಳೆ ರಾಜಕಾರಣಿಗಳು ಐಪಿಎಲ್ ಆಡಲು ಬಂದರೆ ಹೇಗಿರಬಹುದು ಎಂಬ ಅದ್ಭುತ ಕಲ್ಪನೆಯನ್ನು ನೀಡಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ