ಲಿವ್-ಇನ್ ಸಂಗಾತಿಗಳಿರುವ ಬೆಡ್ರೂಮಿನ ಕಿಟಕಿಯಲ್ಲಿ ಇಣುಕಿ ನೋಡಿ, ಪತ್ರವಿಟ್ಟು ಹೋದ ಅಪರಿಚಿತ
ಲಿವ್ ಇನ್ ಸಂಗಾತಿಗಳಿರುವ ಕೋಣೆಯಲ್ಲಿ ಇಣುಕಿ ನೋಡಿದ ವ್ಯಕ್ತಿಯೊಬ್ಬ ಕಿಟಕಿಯಲ್ಲಿ ಒಂದು ಪತ್ರವಿಟ್ಟು ಓಡಿ ಹೋಗಿರುವ ಘಟನೆ ನಡೆದಿದೆ. ಒಂದು ದಿನ ರಾತ್ರಿ ಅವರು ಗಾಢ ನಿದ್ರೆಯಲ್ಲಿರುವ ಸಮಯದಲ್ಲಿ ಪೇಪರ್ ಹರಿದಂಥಾ ಶಬ್ದ ಕೇಳಿ ಇಬ್ಬರೂ ಬೆಚ್ಚಿಬಿದ್ದಿದ್ದರು. ಕೂಡಲೇ ಕಿಟಕಿ ಕಡೆ ನೋಡಿದಾಗ ಅಲ್ಲೊಬ್ಬ ವ್ಯಕ್ತಿಇಣುಕಿ ನೋಡಿ ಕಿಟಕಿ ಬಳಿ ಒಂದು ಪತ್ರವಿಟ್ಟು ಓಡಿ ಹೋಗಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಲಿವ್-ಇನ್ ಸಂಬಂಧ(Live in Relationship) ದಲ್ಲಿರುವುದು ನಗರಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಹೀಗೆಯೇ 20 ವರ್ಷದ ಯುವತಿ ಹಾಗೂ 22 ವರ್ಷದ ಯುವಕ ಕೂಡ ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸುತ್ತಿದ್ದರು, ಒಂದೇ ಮನೆಯಲ್ಲಿದ್ದರು. ಒಂದು ದಿನ ರಾತ್ರಿ ಅವರು ಗಾಢ ನಿದ್ರೆಯಲ್ಲಿರುವ ಸಮಯದಲ್ಲಿ ಪೇಪರ್ ಹರಿದಂಥಾ ಶಬ್ದ ಕೇಳಿ ಇಬ್ಬರೂ ಬೆಚ್ಚಿಬಿದ್ದಿದ್ದರು. ಕೂಡಲೇ ಕಿಟಕಿ ಕಡೆ ನೋಡಿದಾಗ ಅಲ್ಲೊಬ್ಬ ವ್ಯಕ್ತಿಇಣುಕಿ ನೋಡಿ ಕಿಟಕಿ ಬಳಿ ಒಂದು ಪತ್ರವಿಟ್ಟು ಓಡಿ ಹೋಗಿದ್ದಾನೆ.
ಈ ಕುರಿತು ರೆಡ್ಇಟ್ನಲ್ಲಿ ಯುವತಿ ಮಾಹಿತಿ ಹಂಚಿಕೊಂಡಿದ್ದಾಳೆ. ಆದರೆ ಆ ಪತ್ರದಲ್ಲಿ ಕೇವಲ ಮೊಬೈಲ್ ನಂಬರ್ ಮಾತ್ರವಿತ್ತು. ಆ ನಂಬರ್ಕೆ ಕರೆ ಮಾಡಿ ಎಂದು ಹೇಳಿರಬಹುದು ಎಂದು ಆಕೆ ಹೇಳಿದ್ದಾರೆ. ಈ ಕುರಿತು ಮನೆಯ ಮಾಲೀಕರಿಗೆ ಇಬ್ಬರು ಮಾಹಿತಿ ನೀಡಿದ್ದರು. ಬಳಿಕ ಆ ನಂಬರ್ಗೆ ಯಾವುದೇ ಕಾರಣಕ್ಕೂ ಕಾಲ್ ಮಾಡಬಾರದು ಎನ್ನುವ ನಿರ್ಧಾರ ಮಾಡಿದ್ದರು. ಬಳಿಕ ಅವರು ಸೆಪ್ಟೆಂಬರ್ನಿಂದ ಅಪಾರ್ಟ್ಮೆಂಟ್ನ ಗ್ರೌಂಡ್ ಫ್ಲೋರ್ನಲ್ಲಿ ಉಳಿದುಕೊಳ್ಳಲು ಶುರು ಮಾಡಿದರು.
ಆ ವ್ಯಕ್ತಿ ಅದೇ ಅಪಾರ್ಟ್ಮೆಂಟ್ನ ಬೇರೆ ಯಾವುದೋ ಫ್ಲ್ಯಾಟ್ನವನು ಆಗಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ನಾನ್ ಎಮರ್ಜೆನ್ಸಿ ಲೈನ್ಗೆ ಮರುದಿನ ಕರೆ ಮಾಡಲಾಗಿತ್ತು, ಆದರೆ ಇದೇ ರೀತಿಯ ಘಟನೆ ಮರುಕಳಿಸದ ಕಾರಣ ಅಧಿಕಾರಿಗಳು ಹೋಗಿದ್ದಾರೆ.ಇದನ್ನು ಟೈಮ್ಸ್ ನೌ ವರದಿ ಮಾಡಿದ್ದು, ಈ ಘಟನೆ ನಡೆದಿರುವ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನೆಟ್ಟಿಗರು ಮತ್ತೊಂದೆಡೆ ನೀವ್ಯಾಕೆ ಪೊಲೀಸರಿಗೆ ಕರೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ಓದಿ: 16 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರೆ ಮಹಿಳೆ ಅತ್ಯಾಚಾರ ಆರೋಪ ಹೊರಿಸುವಂತಿಲ್ಲ
ಆದರೆ ನೀವು ಪೊಲೀಸರಿಗೆ ಕರೆ ಮಾಡುವುದೇ ಸೂಕ್ತ, ಇಲ್ಲವಾದಲ್ಲಿ ಈ ರೀತಿಯ ಘಟನೆಗಳು ಮುಂದುವರೆಯುತ್ತವೆ. ಆ ನಂಬರ್ಗೆ ಮಾತ್ರ ಕರೆ ಮಾಡಬೇಡಿ, ಮೇಲ್ ಬಾಕ್ಸ್, ಮನೆಯ ಬಾಗಿಲ ಬಳಿ ಅಥವಾ ಕಾರಿನ ಮೇಲೆ ಬರೆದರೆ ಅದನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ.
ಆದರೆ ಯಾರೋ ಒಬ್ಬ ಬಂದು ನಿಮ್ಮ ಬೆಡ್ರೂಮಿನ ಕಿಟಕಿಯಲ್ಲಿ ಪತ್ರವಿಟ್ಟಿದ್ದಾನೆಂದರೆ ಇದು ಸಾಮಾನ್ಯ ಸಂಗತಿಯಲ್ಲ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಸೆಕ್ಯೂರಿಟಿ ಕ್ಯಾಮರಾ ಅಳವಡಿಸುವಂತೆ ಓನರ್ಗೆ ಹೇಳಿ, ನಿಮ್ಮ ಕಿಟಕಿಗಳನ್ನು ಸದಾ ಮುಚ್ಚಿಡಿ ಎಂದು ಸಲಹೆ ನೀಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ