16 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರೆ ಮಹಿಳೆ ಅತ್ಯಾಚಾರ ಆರೋಪ ಹೊರಿಸುವಂತಿಲ್ಲ
ತುಂಬಾ ವರ್ಷಗಳ ಕಾಲ ಒಟ್ಟಿಗಿದ್ದು, ಬಳಿಕ ವ್ಯಕ್ತಿ ಮೇಲೆ ಅತ್ಯಾಚಾರ ಆರೋಪ ಹೊರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ಆರೋಪಿಯು ಸಂಬಂಧದ ಆರಂಭದಿಂದಲೂ ಮಹಿಳೆಯನ್ನು ಮದುವೆಯಾಗಲು ಉದ್ದೇಶಿಸಿರಲಿಲ್ಲ ಎಂದು ಸಾಬೀತಾಗದ ಹೊರತು ವಿವಾಹದ ಭರವಸೆಯನ್ನು ಉಲ್ಲಂಘಿಸುವುದು ಅತ್ಯಾಚಾರ ಎಂದರ್ಥವಲ್ಲ ಎಂದು ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ.

ನವದೆಹಲಿ, ಮಾರ್ಚ್ 06: 16 ವರ್ಷಗಳ ಕಾಲ ಲಿವ್-ಇನ್ ಸಂಬಂಧ(Live-in-Relationship)ದಲ್ಲಿದ್ದರೆ ಮಹಿಳೆ ಅತ್ಯಾಚಾರದ ಆರೋಪ ಹೊರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. 16 ವರ್ಷಗಳ ಕಾಲ ಸಬಂಧದಲ್ಲಿದ್ದ ಮಹಿಳೆಯ ಮೇಲೆ ಮದುವೆಯಾಗುವುದಾಗಿ ಸುಳ್ಳು ನೆಪವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ಆರೋಪಿಯು ಸಂಬಂಧದ ಆರಂಭದಿಂದಲೂ ಮಹಿಳೆಯನ್ನು ಮದುವೆಯಾಗಲು ಉದ್ದೇಶಿಸಿರಲಿಲ್ಲ ಎಂದು ಸಾಬೀತಾಗದ ಹೊರತು ವಿವಾಹದ ಭರವಸೆಯನ್ನು ಉಲ್ಲಂಘಿಸುವುದು ಅತ್ಯಾಚಾರ ಎಂದರ್ಥವಲ್ಲ ಎಂದು ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಇಬ್ಬರ ಸಮ್ಮತಿಯಿಂದ ಲೈಂಗಿಕ ಸಂಬಂಧಗಳು ಮುಂದುವರೆದಿದ್ದು ಸಂಬಂಧದಲ್ಲಿ ಎಂದಿಗೂ ಬಲವಂತ ಅಥವಾ ವಂಚನೆಯ ಅಂಶ ಇರಲಿಲ್ಲ ಎಂದು ತೀರ್ಮಾನಿಸಲು ಸಾಕು16 ವರ್ಷಗಳ ಸಂಬಂಧವೇ ಸಾಕು ಎಂದು ನ್ಯಾಯಪೀಠ ಹೇಳಿದೆ.
ದೂರುದಾರರು, ಯಾವುದೇ ಅನುಮಾನವಿಲ್ಲದೆ ದಶಕಗಳ ಕಾಲ ನಡೆದ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಂಡಿದ್ದಾರೆ ಮತ್ತು ಆರೋಪಿಯು ಇನ್ನೊಬ್ಬ ಮಹಿಳೆಯನ್ನು ಮದುವೆಯಾದ ನಂತರವೇ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.
ಮತ್ತಷ್ಟು ಓದಿ: ಹುಡ್ಗಿ ಸಲುವಾಗಿ ಯುವಕನ ಮೇಲೆ ಕ್ರೌರ್ಯ: ಫೇಸ್ಬುಕ್ ಲೈವ್ನಲ್ಲೇ ಮನಸ್ಸೋ ಇಚ್ಛೆ ಹಲ್ಲೆ
ಮಹಿಳೆಯು ಕಳೆದ 16 ವರ್ಷಗಳಿಂದ ವ್ಯಕ್ತಿಯ ಸುಳ್ಳುಭರವಸೆಯನ್ನು ಸತ್ಯ ಎಂದು ನಂಬಿಯೇ ಇದ್ದರು. ಆದರೆ ಸುಳ್ಳು ಭರವಸೆ ನೀಡಿ ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಹೇಳಿದ್ದಾರೆ. ಆರೋಪಿಯು ಸಲ್ಲಿಸಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ನಂತರ, ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಅತ್ಯಾಚಾರಕ್ಕಾಗಿ 2022 ರಲ್ಲಿ ಎಫ್‌ಐಆರ್ ದಾಖಲಿಸಲಾಯಿತು ಮತ್ತು ಅದೇ ವರ್ಷ ಪೊಲೀಸರು ಆರೋಪಪಟ್ಟಿ ಸಲ್ಲಿಸಿದರು ಎಂದು ಲೈವ್ ಲಾ ವರದಿ ಮಾಡಿದೆ.
2006 ರಲ್ಲಿ ಆರೋಪಿಯು ಒಂದು ರಾತ್ರಿ ತನ್ನ ಮನೆಗೆ ನುಸುಳಿ ಬಲವಂತವಾಗಿ ತನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಎಂದು ಮಹಿಳೆ ಹೇಳಿದ್ದಾಳೆ. ತನ್ನ ಅರ್ಜಿಯಲ್ಲಿ, ಆ ಮಹಿಳೆ ಸ್ವಇಚ್ಛೆಯಿಂದ ಮತ್ತು ಒಪ್ಪಿಗೆಯಿಂದ ತನ್ನೊಂದಿಗೆ ದೀರ್ಘಕಾಲೀನ ಸಂಬಂಧ ಹೊಂದಿದ್ದಳು ಮತ್ತು ಅವರ ಸಂಬಂಧ ಹಳಸಿದ ಕಾರಣ ಆಕೆಯ ಅತ್ಯಾಚಾರದ ಆರೋಪಗಳನ್ನು ಕಟ್ಟುಕಥೆ ಎಂದು ವ್ಯಕ್ತಿ ವಾದಿಸಿದ್ದಾನೆ.
ಹೈಕೋರ್ಟ್ ತೀರ್ಪನ್ನು ಬದಿಗಿಟ್ಟ ಸುಪ್ರೀಂ ಕೋರ್ಟ್, ಆ ವ್ಯಕ್ತಿ ದೂರುದಾರರೊಂದಿಗೆ 16 ವರ್ಷಗಳ ಕಾಲ ಸಮ್ಮತಿಯ ಸಂಬಂಧ ಹೊಂದಿದ್ದರಿಂದ, ವಿವಾಹ ಮಾಡಿಕೊಂಡಿಲ್ಲ ಎನ್ನುವ ಕಾರಣಕ್ಕೆ ಅತ್ಯಾಚಾರ ಎಂದು ಪರಿಗಣಿಸಲಾಗದು, ಈ ಅವಧಿಯಲ್ಲಿ ಅವರು ಒಟ್ಟಿಗೆ ವಾಸಿಸುತ್ತಿದ್ದರು.
ಆ ವ್ಯಕ್ತಿಗೆ ದುರುದ್ದೇಶಪೂರಿತ ಉದ್ದೇಶಗಳಿದ್ದವು ಅಥವಾ ಅವರ ಆರಂಭದಲ್ಲಿ ಮದುವೆಯ ಸುಳ್ಳು ಭರವಸೆ ನೀಡಿದ್ದ ಎಂಬುದಕ್ಕೆ ಸುಪ್ರೀಂ ಕೋರ್ಟ್‌ಗೆ ಯಾವುದೇ ಪುರಾವೆಗಳು ಸಿಗಲಿಲ್ಲ. 16 ವರ್ಷಗಳ ಸುದೀರ್ಘ ಅವಧಿಯಲ್ಲಿ, ಮೇಲ್ಮನವಿದಾರರು ತನಗೆ ಮಾಡಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ದೂರುದಾರರು ಸಂಪೂರ್ಣವಾಗಿ ಮೌನವಾಗಿದ್ದರು. ಮೇಲ್ಮನವಿದಾರರು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆಂದು ಅವರಿಗೆ ತಿಳಿಯುವವರೆಗೂ ಅವರು ಮೌನವಾಗಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ








